Composer : Shri Vadirajaru
ಹೊತ್ತಾರೆ ಎದ್ದು ನಾ ಶ್ರೀ ಕೃಷ್ಣನ ನೆನೆವೆನು
ಭಕ್ತವತ್ಸಲ ನಿನ್ನ ಅರಮನೆ ಕೆಲಸವ
ಭಕ್ತಿಯಿಂದಲಿ ಮಾಡತೊಡಗುವೆ || ೧ ||
ಉದಯಕಾಲದಲೆದ್ದು ಪದುಮನಾಭನ ನೆನೆದು
ಗರುಡವಾಹನ ನಿಮ್ಮ ಅರಮನೆ ಕೆಲಸವ
ಮುದದಿಂದ ಮಾಡತೊಡಗುವೆ || ೨ ||
ಸಂಕರ್ಷಣ ವಾಸುದೇವ ಪ್ರದ್ಯುಮ್ನ ಅನಿರುದ್ಧ
ಇವರು ವಾಸಗಿರುವ ಅರಮನೆ ಕೆಲಸವ
ದಾಸಿಯಾಗಿ ಬಾಳಿದು ಸುಖದಲಿಪ್ಪೆ || ೩ ||
ಉಪ್ಪರಿಗೆ ಸಾರಿಸಿ ಮತ್ತೆ ಕರಣಿಗೊಂದು
ಅಚ್ಚಮುತ್ತಿನ ರಂಗವಲ್ಲಿಯನೇ ಹಾಕಿ ನಾ
ಅಚ್ಚುತನ ಚರಣಕೆ ಎರಗುವೆ || ೪ ||
ಪಂಕಜನಾಭನ ಮನೆಬಿಂಕ ಬೃಂದಾವನಕೆ
ಶಂಖಚಕ್ರಗದಾ ಪದ್ಮವನೇ ಇಟ್ಟು ನಾ
ಪಂಚವರ್ಣದ ಗಿಳಿಯ ರಚಿಸುವೆ || ೫ ||
ನೂರೆಂಟು ಕೋಟಿ ಅರಮನೆ ಉಪಕರಣೆಯ
ತೊಳೆದು ಮನೆವಾರ್ತೆಯ ಮಾಡಿ ನಾ
ನರಹರಿಯ ಚರಣಕೆ ಎರಗುವೆ || ೬ ||
ಕಂಚು ಕಾಲಾಯದ ಪಾತ್ರೆ ಪಂಚಲೋಹದ ಪಾತ್ರೆ
ಸಂಕರ್ಷಣಮೂರ್ತಿ ಸವಿಪಾಕದ ಪಾತ್ರೆಯ
ಸಂತೋಷದಿಂದ ತೊಳೆದು ಒಳಗಿಡುವೆ || ೭ ||
ಗೋಕುಲದೊಳಗ್-ಹುಟ್ಟಿ ಗೋವರ್ಧನ ಗಿರಿನೆತ್ತಿದ
ಗೋಪಾಲಕೃಷ್ಣನಿಗೆ ಶರಣೆಂದು ನಾನೀಗ
ಆಕಳ ಕರೆಯುವೆನು ಹರುಷದಲಿ || ೮ ||
ಯಾದವರಾಯರ ಮನೆ ಹಾಲು ಕಾಸಿಡುವೆನೆ
ಮಾಧವರಾಯರಿಗೆ ಆರೋಗ್ಯನೆಯ ಮಾಡುವೆ
ಬೇಡಿದಿಷ್ಟಾರ್ಥವ ಕೊಡುವೊನೆ || ೯ ||
ದಧಿಯ ಮುದ್ರನ್ನ ಹೃದಯದೊಳಗಿಟ್ಟು
ದಧಿಯ ವಾಮನ್ನ ಮನದೊಳಗೆ ಪಾಡುತ್ತ
ದಧಿಯ ಕಡೆಯುವೆನೆ ಹರುಷದಲಿ || ೧೦ ||
ಆದ ಬೆಣ್ಣೆಯ ಕಾಸಿ ಧೃತವ ಪಾತ್ರೆಗೆ ಹಾಕಿ
ದೇವರ ನೈವೇದ್ಯಕ್ಕಿಟ್ಟು ಮಿಕ್ಕದ್ದು ನಾನೀಗ
ದೀವಿಗೆ ಹಚ್ಚುವೆ ನರಹರಿಗೆ || ೧೧ ||
ಗಂಗೆ ಉದಕವ ಕಾಸಿ ಕಂಚಿಣ್ಣೆಗಳನ್ನೊತ್ತಿ
ಕಂದರಿಗೆ ನೀರೆರೆದು ಮೊಲೆ ಕೊಟ್ಟು ನಾನೀಗ
ಇಂದಿರಾಪತಿಗೆ ಎರಗುವೆ || ೧೨ ||
ಉಂಡ ಕಂದರಿಗೆ ಎಂಜಲ ಕೈ ತೊಳೆದು
ಮುಂಜೆರಗ ತಕ್ಕೊಂಡು ಮೈ ಒರೆಸಿ ನಾನೀಗ
ಅಂಗಳಕೆ ಆಡ ಕಲುಹುವೆ || ೧೩ ||
ಗಂಗೆ ಗೋದಾವರಿ ಸಿಂಧು ಕಾವೇರಿಯಲಿ
ಮಿಂದು ಮೈತೊಳೆದು ಹಣೆಗಿಟ್ಟು ನಾನೀಗ
ಇಂದಿರಾಪತಿಗೆ ಎರಗುವೆ || ೧೪ ||
ಪೊಲಿವ ಅರಿಶಿನ ಹಚ್ಚಿ ನದಿಯೊಳಗೆ ಮೈತೊಳೆದು
ಚಲುವ ಊರ್ಧ್ವಪುಂಡ್ರ ಗಂಧ ಕುಂಕುಮ ಹಚ್ಚಿ
ನರಹರಿಯ ಚರಣಕೆ ಎರಗುವೆ || ೧೫ ||
ಗುರುಗಳು ಕೊಟ್ಟಂಥ ಪರಮ ಮಂತ್ರವ ಜಪಿಸಿ
ಒಡನೆ ಪ್ರದಕ್ಷಿಣೆ ನಮಸ್ಕಾರವನೆ ಮಾಡಿ
ನರಹರಿಯ ಚರಣಕ್ಕೆ ಎರಗುವೆ || ೧೬ ||
ಮಂಗಳ ಮಹಿಮನ ಉಂಗುಷ್ಠದಲಿ ಜನಿಸಿದ
ಗಂಗೆಯ ತಂದು ಹರಿಯ ನೈವೇದ್ಯಕ್ಕೆ
ಹಂಡೆ ಹಂಡೆಗಳಲ್ಲಿ ಇರಿಸುವೆ || ೧೭ ||
ಆರತಿ ಕರ್ಪೂರ ನೀರಾಜನಗಳ ತುಂಬಿ
ಪರಿಪರಿ ಪುಷ್ಪದ ಮಾಲಿಕೆಗಳನೇ ಕಟ್ಟಿ
ನರಹರಿಯ ಪೂಜೆಗೆ ಇರಿಸುವೆ || ೧೮ ||
ಹಗಲ್-ಹಿರೀ ಕಾಯಿ ಬೇಗ ಬೆಂಡೆಕಾಯಿ
ಸಾಗರಶಯನನ ನೈವೇದ್ಯಕ್ಕಣಿ ಮಾಡಿ
ಶಾಕಗಳ ಹೆಚ್ಚಿ ಇರಿಸುವೆ || ೧೯ ||
ಪಾಯಸ ಭಕ್ಷವು ಸೂಪ ಶಾಕಾನ್ನವು
ಆಯತವಾಗಿದ್ದ ಲವಣ ಶಾರನ್ನವು
ದೇವರ ನೈವೇದ್ಯಕ್ಕಿಡುವೆನೆ || ೨೦ ||
ದೇವರ ನೈವೇದ್ಯಕ್ಕಿಟ್ಟು ಬೇಗ ವೈಶ್ವ-
ದೇವಕ್ಕೆ ತೆಗೆದು ಗೋಗ್ರಾಸಕ್ಕೆ ತೆಗೆದು
ನಾನೀಗ ಹಸ್ತೋದಕಕೆ ಇಡುವೆನು || ೨೧ ||
ಅಚ್ಚುತ ಶ್ರೀ ತುಲಸಿಗೆ ಭಕ್ತಿಯಿಂದೆರಗಿ ಪೂಜಿಸಿ
ಅಚ್ಚ ಶ್ರೀ ಗಂಧವನು ಕೊರಳಿಗೆ ಲೇಪಿಸಿ
ಮುತ್ತಿನಾರತಿಯ ಬೆಳಗುವೆ || ೨೨ ||
ಅಚ್ಚುತ ಶ್ರೀ ತುಲಸಿ ಕೊಟ್ಟ ಪ್ರಸಾದವನು
ಮುಡಿಯಲ್ಲಿ ಮುಡಿಕೊಂಡು ನಾನೀಗ
ಅಚ್ಚುತ ಶ್ರೀ ತುಲಸಿಗೆ ಎರಗುವೆ || ೨೩ ||
ಹಿರಿಯರು ಗುರುಗಳು ನೆರೆದು ನಾರಾಯಣನ
ಪೊಗಳುವ ಪುರಾಣವನ್ನು ಕೇಳುವೆನು
ಶ್ರೀ ಹರಿಯ ಕೃಪೆಯಿಂದ ನಾನು || ೨೪ ||
ಗೌರಿ ಮೊಸರನ್ನವನು ಹರಿವಾಣದೊಳಗಿಟ್ಟು
ಹರಿದಾಸರಿಗೆ ಉಣಲಿಟ್ಟು ನಾನೀಗ
ನರಹರಿಯ ಚರಣಕೆ ಎರಗುವೆ || ೨೫ ||
ಅತ್ತೆ ಮಾವಂದಿರಿಗೆ ಪುತ್ರರಿಗೆ ಮಿತ್ರರಿಗೆ
ವಿಷ್ಣು ದಾಸರಿಗೆ ಸುಗುಣಿ ಬಾಂಧವರಿಗೆ
ಆರ್ತಿಯಿಂದ ಉಣಲು ಬಡಿಸುವೆ || ೨೬ ||
ಉಂಡು ಕೈ ತೊಳೆದವರಿಗೆ ತಾಂಬೂಲಗಳ ಕೊಟ್ಟು
ಎಂಜಲ ಬಳಿದು ಪತಿ ಉಂಡ ಶೇಷವನು
ಭುಂಜಿಪೆನು ಶ್ರೀ ಹರಿಯ ಕೃಪೆಯಿಂದ || ೨೭ ||
ಸಂಜೆಯ ಹೊತ್ತಿನಲ್ಲಿ ದೀಪವನೇ ಹಚ್ಚಿರಿಸುವೆನು
ಗೋವುಗಳನೇ ಕರೆದು ಕ್ಷೀರವನೇ ಕಾಸಿ ನಾ
ದೇವರ ನೈವೇದ್ಯಕ್ಕಿಡುವೆನೆ || ೨೮ ||
ಸಂಜೆಯ ಕಸಬಳಿದು ಉಂಬುವರಿಗುಣಲಿಟ್ಟು
ಸಂಭ್ರಮದಿಂದ ಪಡಿಹಾಸಿ ಮಂಚವನು
ಇಂದಿರಾಪತಿಗೆ ಎರಗುವೆ || ೨೯ ||
ಪತಿ ಅಂತರ್ಯಾಮಿ ಶ್ರೀಪತಿಯೇ ಗತಿಯೆಂದು
ಪತಿಯ ಪದವನ್ನು ಒತ್ತಿ ಹರುಷದಲಿ
ಕರ್ಪೂರ ವಿಲ್ಯಗಳ ಕೊಡುವೆನು || ೩೦ ||
ಕ್ಷೀರಸಾಗರದಲ್ಲಿ ಶೇಷನ್-ಹಾಸಿಗೆಯಲ್ಲಿ
ಶ್ರೀಲಕ್ಷ್ಮಿ ಸಹಿತಾಗಿ ಮಲಗಿರ್ಪ್ಪ ಹರಿಯನ್ನು
ಧ್ಯಾನಿಸುತೆ ಪತಿಯ ಹಾಸಿಗೆಲಿ ಮಲಗುವೆ || ೩೧ ||
ಯೋಗೀಂದ್ರರಾಯರ ಪಾದಕೆ ಶರಣೆಂಬೆ
ಈ ಧರೆಯೊಳಗೆ ಸಾಧು ಸಜ್ಜನರಿಗೆ
ಬೇಡಿದಿಷ್ಟಾರ್ಥವ ಕೊಡುವೊನೆ || ೩೨ ||
ನಿತ್ಯದಲಿ ಈ ಹಾಡು ತಪ್ಪದೆ ಹೇಳಿದವರಿಗೆ
ಮುತ್ತೈದೆ ತನವನ್ನು ಕೊಟ್ಟು
ರಕ್ಷಿಸುವ ನಮ್ಮ ಹಯವದನ || ೩೩ ||
ಯಾವಾಗ ಈ ಹಾಡು ಪ್ರೇಮದಿ ಹೇಳಿ ಕೇಳಿದರೆ
ಸಾವಿತ್ರಿತನವನ್ನು ಸಾಯುಜ್ಯ ಪದವಿಯನು
ಕೊಟ್ಟು ರಕ್ಷಿಸುವ ನಮ್ಮ ಹಯವದನ || ೩೪ ||
hottAre eddu nA SrI kRuShNana nenevenu
Baktavatsala ninna aramane kelasava
BaktiyiMdali mADatoDaguve || 1 ||
udayakAladaleddu padumanABana nenedu
garuDavAhana nimma aramane kelasava
mudadiMda mADatoDaguve || 2 ||
saMkarShaNa vAsudEva pradyumna aniruddha
ivaru vAsagiruva aramane kelasava
dAsiyAgi bALidu suKadalippe || 3 ||
upparige sArisi matte karaNigoMdu
accamuttina raMgavalliyanE hAki nA
accutana caraNake eraguve || 4 ||
paMkajanABana manebiMka bRuMdAvanake
SaMKacakragadA padmavanE iTTu nA
paMcavarNada giLiya racisuve || 5 ||
nUreMTu kOTi aramane upakaraNeya
toLedu manevArteya mADi nA
narahariya caraNake eraguve || 6 ||
kaMcu kAlAyada pAtre paMcalOhada pAtre
saMkarShaNamUrti savipAkada pAtreya
saMtOShadiMda toLedu oLagiDuve || 7 ||
gOkuladoLag-huTTi gOvardhana girinettida
gOpAlakRuShNanige SaraNeMdu nAnIga
AkaLa kareyuvenu haruShadali || 8 ||
yAdavarAyara mane hAlu kAsiDuvene
mAdhavarAyarige ArOgyaneya mADuve
bEDidiShTArthava koDuvone || 9 ||
dadhiya mudranna hRudayadoLagiTTu
dadhiya vAmanna manadoLage pADutta
dadhiya kaDeyuvene haruShadali || 10 ||
Ada beNNeya kAsi dhRutava pAtrege hAki
dEvara naivEdyakkiTTu mikkaddu nAnIga
deevige haccuve naraharige || 11 ||
gaMge udakava kAsi kaMciNNegaLannotti
kaMdarige nIreredu mole koTTu nAnIga
iMdirApatige eraguve || 12 ||
uMDa kaMdarige eMjala kai toLedu
muMjeraga takkoMDu mai oresi nAnIga
aMgaLake ADa kaluhuve || 13 ||
gaMge gOdAvari siMdhu kAvEriyali
miMdu maitoLedu haNegiTTu nAnIga
iMdirApatige eraguve || 14 ||
poliva ariSina hacci nadiyoLage maitoLedu
caluva UrdhvapuMDra gaMdha kuMkuma hacci
narahariya caraNake eraguve || 15 ||
gurugaLu koTTaMtha parama maMtrava japisi
oDane pradakShiNe namaskAravane mADi
narahariya caraNakke eraguve || 16 ||
maMgaLa mahimana uMguShThadali janisida
gaMgeya taMdu hariya naivEdyakke
haMDe haMDegaLalli irisuve || 17 ||
Arati karpUra nIrAjanagaLa tuMbi
paripari puShpada mAlikegaLanE kaTTi
narahariya pUjege irisuve || 18 ||
hagal-hirI kAyi bEga beMDekAyi
sAgaraSayanana naivEdyakkaNi mADi
SAkagaLa hecci irisuve || 19 ||
pAyasa BakShavu sUpa SAkAnnavu
AyatavAgidda lavaNa SArannavu
dEvara naivEdyakkiDuvene || 20 ||
dEvara naivEdyakkiTTu bEga vaiSva-
dEvakke tegedu gOgrAsakke tegedu
nAnIga hastOdakake iDuvenu || 21 ||
accuta SrI tulasige BaktiyiMderagi pUjisi
acca SrI gaMdhavanu koraLige lEpisi
muttinAratiya beLaguve || 22 ||
accuta SrI tulasi koTTa prasAdavanu
muDiyalli muDikoMDu nAnIga
accuta SrI tulasige eraguve || 23 ||
hiriyaru gurugaLu neredu nArAyaNana
pogaLuva purANavannu kELuvenu
SrI hariya kRupeyiMda nAnu || 24 ||
gauri mosarannavanu harivANadoLagiTTu
haridAsarige uNaliTTu nAnIga
narahariya caraNake eraguve || 25 ||
atte mAvaMdirige putrarige mitrarige
viShNu dAsarige suguNi bAMdhavarige
ArtiyiMda uNalu baDisuve || 26 ||
uMDu kai toLedavarige tAMbUlagaLa koTTu
eMjala baLidu pati uMDa SEShavanu
BuMjipenu SrI hariya kRupeyiMda || 27 ||
saMjeya hottinalli dIpavanE haccirisuvenu
gOvugaLanE karedu kShIravanE kAsi nA
dEvara naivEdyakkiDuvene || 28 ||
saMjeya kasabaLidu uMbuvariguNaliTTu
saMBramadiMda paDihAsi maMcavanu
iMdirApatige eraguve || 29 ||
pati aMtaryAmi SrIpatiyE gatiyeMdu
patiya padavannu otti haruShadali
karpUra vilyagaLa koDuvenu || 30 ||
kShIrasAgaradalli SEShan-hAsigeyalli
SrIlakShmi sahitAgi malagirppa hariyannu
dhyAnisute patiya hAsigeli malaguve || 31 ||
yOgIMdrarAyara pAdake SaraNeMbe
ee dhareyoLage sAdhu sajjanarige
bEDidiShTArthava koDuvone || 32 ||
nityadali ee hADu tappade hELidavarige
muttaide tanavannu koTTu
rakShisuva namma hayavadana || 33 ||
yAvAga ee hADu prEmadi hELi kELidare
sAvitritanavannu sAyujya padaviyanu
koTTu rakShisuva namma hayavadana || 34 ||
