Isha ninna – Keshava nama

Composer : Shri Kanakadasaru

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ || ೧ ||

ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || ೨ ||

ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ ||
ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ || ೩ ||

ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || ೪ ||

ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||
ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || ೫ ||

ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || ೬ ||

ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ||
ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ || ೭ ||

ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || ೮ ||

ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ||
ಹೃದಯದೊಳಗೆ ಸದನ ಮಾಡೊ ಮುದದಿ ಶ್ರೀಧರ || ೯ ||

ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || ೧೦ ||

ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || ೧೧ ||

ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ||
ಶ್ರೀಮಹಾನುಭಾವನಾದ ದಾಮೋದರ || ೧೨ ||

ಪಂಕಜಾಕ್ಷ ನೀನೆ ಎನ್ನ | ಮಂಕು ಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೋ ಸಂಕರುಷಣ || ೧೩ ||

ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||
ಘಾಸಿ ಮಾಡದಿರು ಎನ್ನ ವಾಸುದೇವನೇ || ೧೪ ||

ಬುದ್ಧಿ ಶೂನ್ಯನಾಗಿ ಎನ್ನ | ಪದ್ಧ ಕಾರ್ಯ ಕುಹಕ ಮನವ ||
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || ೧೫ ||

ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || ೧೬ ||

ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ನೇಮ ||
ವಿರಿಸು ಚರಣ ದಲ್ಲಿ ಪುರುಷೋತ್ತಮ || ೧೭ ||

ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||
ಭೇದಮಾಡಿ ನೋಡದಿರೊ ಶ್ರೀ ಅಧೋಕ್ಷಜ || ೧೮ ||

ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||
ಭಾರ ಹಾಕುತಿರುವೆ ನಿನಗೆ ನಾರಸಿಂಹನೇ || ೧೯ ||

ಸಂಚಿತಾದಿ ಪಾಪಗಳನುಉ | ಕಿಂಚಿತಾದ ಪೀಡೆಗಳನು ||
ಮುಂಚಿತವಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ || ೨೦ ||

ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ || ೨೧ ||

ಜಪತಪಾನುಷ್ಠಾನವಿಲ್ಲದೆ | ಕುಪಿತಗಾಮಿಯಾದ ಎನ್ನ ||
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || ೨೨ ||

ಮೊರೆಯ ಇಡುವೆನಯ್ಯ ನಿನಗೆ | ಶರಧಿ ಶಯನ ಶುಭಮತಿಯ ||
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || ೨೩ ||

ಪುಟ್ಟಿಸಲೇ ಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು ||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ೨೪ ||

ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವವರ ||
ಅರ್ಥಿಯಿಂದ ಸಲಹುವನು ಕರ್ತೃ ಕೇಶವ || ೨೫ ||

ಮರೆಯದಲೆ ಹರಿಯ ನಾಮ | ಬರೆದು ಓದಿ ಕೇಳ್ದವರಿಗೆ ||
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || ೨೬ ||


ISa ninna caraNa Bajane | ASeyiMda mADuvenu
dOSarASi nASamADu SrISa kESava || 1 ||

SaraNu hokkenayya enna | maraNa samayadalli ninna |
caraNa smaraNe karuNisayya nArAyaNa || 2 ||

SOdhisenna Bavada kaluSa | BOdhisayya j~jAnavenage ||
bAdhisuva yamana bAdhe | biDisu mAdhava || 3 ||

hiMdanEka yOnigaLali | baMdu baMdu noMdenayya ||
iMdu Bavada baMdha biDisO taMde gOviMda || 4 ||

BraShTanenisabEDa kRuShNa | iShTu mAtra bEDikoMbe ||
SiShTaroDane iTTu kaShTa | biDisu viShNuvE || 5 ||

madananayya ninna mahime | vadanadalli nuDiyuvaMte ||
hRudayadalli hudugisayya madhusUdana || 6 ||

kavidukoMDu iruva pApa | savedu pOguvaMte mADi ||
javana bAdheyannu biDisO | SrItrivikrama || 7 ||

kAmajanaka ninna nAma | prEmadiMda pADuvaMtha ||
nEmavenage pAlisayya svAmi vAmana || 8 ||

modalu ninna pAdapUje | odaguvaMte mADO enna ||
hRudayadoLage sadana mADo mudadi SrIdhara || 9 ||

husiyanADi hoTTe horeva | viShayadalli rasikaneMdu ||
husige hAkadirO enna hRuShIkESanE || 10 ||

biddu BavadanEka januma | baddanAgi kaluShadiMda ||
geddu pOpa budhdhi tOro padmanABane || 11 ||

kAmakrOdha biDisi ninna | nAma jihveyoLage nuDisu ||
SrImahAnuBAvanAda dAmOdara || 12 ||

paMkajAkSha nIne enna | maMku buddhiyannu biDisi |
kiMkaranna mADikoLLO saMkaruShaNa || 13 ||

Esu janma baMdarEnu | dAsanallavEnu nAnu ||
GAsi mADadiru enna vAsudEvanE || 14 ||

buddhi SUnyanAgi enna | paddha kArya kuhaka manava ||
tiddi hRudaya Suddha mADO pradyumnanE || 15 ||

janani janaka nIneyeMdu | nenevenayya dInabaMdhu ||
enage mukti pAlisinnu aniruddhanE || 16 ||

haruSadiMda ninna nAma | smarisuvaMte mADu nEma ||
virisu caraNa dalli puruShOttama || 17 ||

sAdhusaMga koTTu ninna | pAdaBajane ittu enna ||
BEdamADi nODadiro shrI adhOkShaja || 18 ||

cArucaraNa tOri enage | pArugANisayya konege ||
BAra hAkutiruve ninage nArasiMhanE || 19 ||

saMcitAdi pApagaLanuu | kiMcitAda pIDegaLanu ||
muMcitavAgi kaLedu poreyo svAmi acyuta || 20 ||

j~jAna Bakuti koTTu ninna | dhyAnadalli iTTu sadA ||
hIna buddhi biDiso munna SrI janArdana || 21 ||

japatapAnuShThAnavillade | kupitagAmiyAda enna ||
kRupeya mADi kShamisabEku hE upEMdranE || 22 ||

moreya iDuvenayya ninage | Saradhi Sayana SuBamatiya ||
irisO BaktaroLage paramapuruSha SrIharE || 23 ||

puTTisalE bEDa innu | puTTisidake pAlisinnu ||
iShTu mAtra bEDikoMbe SrI kRuShNanE || 24 ||

satyavAda nAmagalanu | nityadalli paThisuvavara ||
arthiyiMda salahuvanu kartRu kESava || 25 ||

mareyadale hariya nAma | baredu Odi kELdavarige ||
karedu mukti koDuva neleyAdikESava || 26 ||

You might also like

error: Content is protected !!