Composer : Shri Purandara dasaru
ನಿನ್ನನೆ ನಂಬಿದೆನು ನೀ ಎನ್ನ ಸಲಹಯ್ಯ
ಎನ್ನ ಗುಣ ದೋಷಗಳ ಎಣಿಸ ಬೇಡಯ್ಯ ||ಪ||
ಬಾಲ್ಯದಲಿ ಹಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಯೌವನ ಮದದಿ ಒಂದರಿಯದಿದ್ದೆ |
ಜಾಲ ಸಂಸಾರದಲಿ ತೊಳಲಿ ಬಳಲಿದೆನಯ್ಯ,
ಪಾಲಿಸೋ ಪರಮಾತ್ಮ ಭಕ್ತಿಯನೆ ಕೊಟ್ಟು |೧|
ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆ
ಬೇಸರದೆ ಸ್ತ್ರೀಯರೊಳು ಬುದ್ಧಿಯೆನಗೆ |
ವಾಸುದೇವನೆ ಸ್ಮರನೆ ಒಮ್ಮೆ ಮಾಡಿದವನಲ್ಲ
ಕೇಶವನೆ ಕ್ಲೇಶಗಳ ಪರಿಹರಿಸಿ ಕಾಯೊ |೨|
ಈ ಪರಿಯ ಕಾಲವನು ಇಂದಿರೇಶನೆ ಕಳೆದೆ
ಭೀತಿಯಿಲ್ಲದೆ ಜ್ಞಾನ ರಹಿತನಾದೆ |
ಮಾತೆ ತನ್ನಯ ಶಿಶುವ ಮನ್ನಿಸುವ ತೆರದಂತೆ
ದಾತ ಪುರಂದರವಿಠಲ ದಯಮಾಡಿ ಸಲಹಯ್ಯ |೩|
ninnane naMbidenu nI enna salahayya
enna guNa dOShagaLa eNisa bEDayya ||pa||
bAlyadali halavu dina baride hOyitu hottu
mEle yauvana madadi oMdariyadidde |
jAla saMsAradali toLali baLalidenayya,
pAlisO paramAtma Baktiyane koTTu |1|
AseyeMbudu ajana lOkakke muTTutide
bEsarade strIyaroLu buddhiyenage |
vAsudEvane smarane omme mADidavanalla
kESavane klESagaLa pariharisi kAyo |2|
I pariya kAlavanu iMdirESane kaLede
BItiyillade j~jAna rahitanAde |
mAte tannaya SiSuva mannisuva teradaMte
dAta puraMdaraviThala dayamADi salahayya |3|
