Narasimha in Shri HKS

Composer : Shri Jagannatha dasaru
From the Critical edition of Shri Kesava Rao Tadipatri

English Script

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

೧. ಶ್ರೀರ-ಮಣಿ ಕರ — ಕಮಲ- ಪೂಜಿತ |
ಚಾರು- ಚರಣ ಸ — ರೋಜ- ಬ್ರಹ್ಮ ಸ- |
ಮೀರ- ವಾಣಿ ಫ — ಣೀಂದ್ರ- ವೀಂದ್ರ ಭ — ವೇಂದ್ರ- ಮುಖ ವಿನು-ತ ||
ನೀರ-ಜ ಭವಾಂ — ಡೋದ-ಯ ಸ್ಥಿತಿ |
ಕಾರ-ಣನೆ ಕೈ — ವಲ್ಯ-ದಾಯಕ |
ನಾರ-ಸಿಂಹನೆ — ನಮಿಪೆ-ಕರುಣಿಪು — ದೆಮಗೆ-ಮಂಗಳ-ವ || ೧-೧ ||

೨. ಮಲಗಿ- ಪರಮಾ — ದರದಿ- ಪಾಡಲು |
ಕುಳಿತು- ಕೇಳುವ — ಕುಳಿತು- ಪಾಡಲು |
ನಿಲುವ- ನಿಂತರೆ — ನಲಿವ- ನಲಿದರೆ — ಒಲಿವೆ- ನಿಮಗೆಂ-ಬ ||
ಸುಲಭ-ನೋ ಹರಿ — ತನ್ನ-ವರ ನರ- |
ಘಳಿಗೆ- ಬಿಟ್ಟಗ — ಲನು ರ-ಮಾಧವ- |
ನೊಲಿಸ-ಲರಿಯದೆ — ಪಾಮ-ರರು ಬಳ — ಲುವರು- ಭವದೊಳ-ಗೆ || ೨-೫ ||

೩. ಪರಮ- ಸತ್ಪುರು — ಷಾರ್ಥ- ರೂಪನು |
ಹರಿಯು- ಲೋಕಕೆ — ಎಂದು- ಪರಮಾ- |
ದರದಿ- ಸದುಪಾ — ಸನೆಯ- ಗೈವರಿ — ಗಿತ್ತ-ಪನು ತ-ನ್ನ ||
ಮರೆದು- ಧರ್ಮಾ — ರ್ಥಗಳ- ಕಾಮಿಸು- |
ವರಿಗೆ- ನಗುತತಿ — ಶೀಘ್ರ-ದಿಂದಲಿ |
ಸುರಪ- ತನಯ ಸು — ಯೋಧ-ನರಿಗಿ — ತ್ತಂತೆ- ಕೊಡುತಿ-ಪ್ಪ || ೨-೭ ||

೪. ಏನು- ಕರುಣಾ — ನಿಧಿಯೊ- ಹರಿ ಮ- |
ತ್ತೇನು- ಭಕ್ತಾ — ಧೀನ-ನೋ ಇ- |
ನ್ನೇನು- ಈತನ — ಲೀಲೆ- ಇಚ್ಛಾ — ಮಾತ್ರ-ದಲಿ ಜಗ-ವ ||
ತಾನೆ- ಸೃಜಿಸುವ — ಪಾಲಿ-ಸುವ ನಿ- |
ರ್ವಾಣ- ಮೊದಲಾ — ದಖಿಲ- ಲೋಕ- |
ಸ್ಥಾನ-ದಲಿ ಮ — ತ್ತವರ-ನಿಟ್ಟಾ — ನಂದ- ಬಡಿಸುವ-ನು || ೨-೧೬ ||

೫. ಒಡಲ- ನೆಳಲಂ — ದದಲಿ- ಹರಿ ನ- |
ಮ್ಮೊಡನೆ- ತಿರುಗುವ — ನೊಂದ-ರೆಕ್ಷಣ |
ಬಿಡದೆ- ಬೆಂಬಲ — ವಾಗಿ- ಭಕ್ತಾ — ಧೀನ-ನೆಂದೆನಿ-ಸಿ ||
ತಡೆವ- ದುರಿತೌ — ಘಗಳ- ಕಾಮದ |
ಕೊಡುವ- ಸಕಲೇ — ಷ್ಟಗಳ- ಸಂತತ |
ನಡೆವ- ನಮ್ಮಂ — ದದಲಿ- ನವ ಸುವಿ — ಶೇಷ- ಸನ್ಮಹಿ-ಮ || ೨-೨೫ ||

೬. ಕೊಟ್ಟು-ದನು ಕೈ — ಕೊಂಬ-ರಕ್ಷಣ |
ಬಿಟ್ಟ-ಗಲ ತ — ನ್ನವರ- ದುರಿತಗ- |
ಳಟ್ಟು-ವನು ದೂ — ರದಲಿ- ದುರಿತಾ — ರಣ್ಯ- ಪಾವಕ-ನು ||
ಬೆಟ್ಟ- ಬೆನ್ನಿಲಿ — ಹೊರಿಸಿ-ದವರೊಳು |
ಸಿಟ್ಟು- ಮಾಡಿದ — ನೇನೊ- ಹರಿ ಕಂ- |
ಗೆಟ್ಟ-ಸುರರಿಗೆ — ಸುಧೆಯ-ನುಣಿಸಿದ — ಮುರಿದ- ನಹಿತರ-ನು || ೨-೨೮ ||

೭. ಮೀನ- ಕೂರ್ಮ ವ — ರಾಹ- ನರ ಪಂ- |
ಚಾನ-ನಾತುಳ — ಶೌರ್ಯ- ವಾಮನ |
ರೇಣು-ಕಾತ್ಮಜ — ರಾವ-ಣಾದಿ ನಿ — ಶಾಚ-ರ ಧ್ವಂ-ಸಿ ||
ಧೇನು-ಕಾಸುರ — ಮಥನ- ತ್ರಿಪುರವ |
ಹಾನಿ-ಗೈಸಿದ — ನಿಪುಣ- ಕಲಿಮುಖ- |
ದಾನ-ವರ ಸಂ — ಹರಿಸಿ-ಧರ್ಮದಿ — ಕಾಯ್ದ- ಸುಜನರ-ನು || ೨-೩೦ ||

೮. ವನಜ- ಜಾಂಡದೊ — ಳುಳ್ಳ-ಖಿಲ ಚೇ- |
ತನರು- ಭುಂಜಿಪ — ಚತುರ-ವಿಧ ಭೋ- |
ಜನ ಪ-ದಾರ್ಥದಿ — ಚತುರ- ವಿಧ ರಸ — ರೂಪ- ತಾನಾ-ಗಿ ||
ಮನಕೆ- ಬಂದದ — ನುಂಡು-ಣಿಸಿ ಸಂ- |
ಹನನ- ಕುಪಚಯ — ಕರಣ- ಕಾನಂ- |
ದ ನಿಮಿ- ಷರಿ ಗಾ — ತ್ಮ ಪ್ರ-ದರ್ಶನ– ಸುಖವ- ನೀವ ಹ-ರಿ ||೪-೧||

೯. ಕಪಿಲ- ನರಹರಿ — ಭಾರ್ಗವ ತ್ರಯ |
ವಪುಷ- ನೇತ್ರದಿ — ನಾಸಿ-ಕಾಸ್ಯದಿ |
ಶಫರ- ನಾಮಕ — ಜಿಹ್ವೆ-ಯಲಿ ದಂ — ತದಲಿ-ಹಂಸಾ-ಖ್ಯ ||
ತ್ರಿಪದಿ- ಪಾದ್ಯ ಹ — ಯಾಸ್ಯ- ವಾಚ್ಯ ದೊ -|
ಳಪರಿ-ಮಿತ ಸುಖ — ಪೂರ್ಣ- ಸಂತತ |
ಕೃಪಣ-ರೊಳಗಿ — ದ್ದವರ-ವರ ರಸ — ಸ್ವೀಕ- ರಿಸಿ ಕೊಡು-ವ || ೪-೭ ||

೧೦. ನಿರುಪ-ಮಾನಂ — ದಾತ್ಮ-ಹರಿ ಸಂ- |
ಕರುಷ-ಣ ಪ್ರ — ದ್ಯುಮ್ನ- ರೂಪದಿ |
ಇರುತಿ-ಹನು ಭೋ — ಕ್ತೃಗಳೊ-ಳಗೆ ತ — ಚ್ಛಕ್ತಿ-ದನು ಎನಿ-ಸಿ ||
ಕರೆಸು-ವನು ನಾ — ರಾಯ-ಣನಿರು- |
ದ್ಧೆರಡು- ನಾಮದಿ — ಭೋಜ್ಯ- ವಸ್ತುಗ |
ನಿರುತ- ತರ್ಪಕ — ನಾಗಿ- ತೃಪ್ತಿಯ — ನೀವ- ಚೇತನ-ಕೆ || ೪-೮ ||

೧೧. ಜೀವ- ಕೃತ ಕ — ರ್ಮಗಳ- ಬಿಡದೆ ರ- |
ಮಾವ-ರನು ಸ್ವೀ — ಕರಿಸಿ- ಫಲಗಳ- |
ನೀವ-ನಧಿಕಾ — ರಾನು- ಸಾರದ — ಲವರಿ-ಗನವರ-ತ ||
ಪಾವ-ಕನು ಸ — ರ್ವಸ್ವ- ಭುಂಜಿಸಿ |
ತಾ ವಿ-ಕಾರವ — ನೈದ-ನೊಮ್ಮೆಗು |
ಪಾವ-ನಕೆ ಪಾ — ವನನೆ- ನಿಪ ಹರಿ — ಉಂಬು-ದೇನರಿ-ದು || ೪-೨೬ ||

೧೨. ಇನಶ-ಶಾಂಕಾ — ದಿಗಳು- ಲಕ್ಷ್ಮೀ- |
ವನಿತೆ-ಯರಸನ — ದ್ವಾರ-ಪಾಲಕ – |
ರೆನಿಸು-ತಿಪ್ಪರು — ಮನದ- ವೃತ್ತಿಗ — ಳೇ ಪ-ದಾತಿಗ-ಳು ||
ಅನುಭ-ವಿಪ ವಿಷ — ಯಂಗ-ಳೇ ಪ- |
ಟ್ಟಣಕೆ- ಬಪ್ಪ ಪ — ಸಾರ-ಗಳು ಜೀ- |
ವನೆ ಸು-ವರ್ತಕ –ಕಪ್ಪ-ಗಳ ಕೈ — ಕೊಂಬ- ಹರಿ ತಾ-ನು || ೫-೨೧ ||

೧೩. ಬಿಂಬ-ರೆನಿಪರು — ಸ್ವೋತ್ತ-ಮರು ಪ್ರತಿ- |
ಬಿಂಬ-ರೆನಿಪರು — ಸ್ವಾವ-ರರು ಪ್ರತಿ- |
ಬಿಂಬ- ಬಿಂಬಗ — ಳೊಳಗೆ- ಕೇವಲ — ಬಿಂಬ- ಹರಿಯೆಂ-ದು ||
ಸಂಭ್ರ-ಮದಿ ಪಾ — ಡುತಲಿ- ನೋಡುತ |
ಉಂಬು-ಡುವುದಿಡು — ವುದು ಕೊ-ಡುವುದೆ- |
ಲ್ಲಂಬು-ಜಾಂಬಕ — ನಂಘ್ರಿ-ಪೂಜೆಗ — ಳೆಂದು- ನಲಿದಾ-ಡು || ೫-೩೫ ||

೧೪. ಧರಣಿ-ಯೆಂಬುದೆ — ಅಗ್ನಿ- ಸಂವ- |
ತ್ಸರವೆ- ಸಮಿಧೆ ವಿ — ಹಾಯ-ಸವೆ ಪೊಗೆ |
ಇರುಳು-ರಿ ದಿಶಾಂ — ಗಾರ-ವಾಂತರ — ದಿಗ್ವ-ಲಯ ಕಿಡಿ-ಯು ||
ವರುಷ-ವೆಂಬಾ — ಹುತಿಗ-ಳಿಂದಲಿ |
ಹರಿಯ- ಮೆಚ್ಚಿಸಿ — ಸಕಲ-ರೊಳಗ |
ಧ್ವರಿಯ-ನಾಗಿರು — ಸರ್ವ- ರೂಪಾ — ತ್ಮಕನ- ಚಿಂತಿಸು-ತ || ೬-೪ ||

೧೫. ಮನದೊ-ಳಿಹ ಗೋ — ವಿಂದ- ಮಾಧವ |
ಧನಪ-ಸಖ ತ — ತ್ವದೊಳು- ನಾರಾ- |
ಯಣ ಮ-ಹತ್ತ — ತ್ವದೊಳು- ಅವ್ಯ — ಕ್ತದೊಳು- ಕೇಶವ-ನು ||
ಇನಿತು- ರೂಪವ — ದೇಹ-ದೊಳು ಚಿಂ- |
ತನೆಯ- ಗೈವ ಮ — ಹಾತ್ಮ-ರಿಳೆಯೊಳು |
ಮನುಜ- ರವರ — ಲ್ಲಮರ-ರೇ ಸರಿ — ಹರಿ ಕೃ-ಪಾಬಲ-ದಿ || ೬-೧೯ ||

೧೬. ನೆಲದೊ-ಳಿಪ್ಪನು — ಕೃಷ್ಣ-ರೂಪದಿ |
ಜಲದೊ-ಳಿಪ್ಪನು — ಹರಿಯೆ-ನಿಸಿ ಶಿಖಿ- |
ಯೊಳಗೆ- ಇಪ್ಪನು –ಪರಶು-ರಾಮ ಉ –ಪೇಂದ್ರ-ನೆಂದೆನಿ-ಸಿ ||
ಯಲರೊ-ಳಿಪ್ಪಜ — ನಾರ್ದ-ನನು ಬಾಂ- |
ದಳದೊ-ಳಚ್ಯುತ — ಗಂಧ- ನರಹರಿ |
ಪೊಳೆವ-ಧೋಕ್ಷಜ — ರಸಗ- ಳೊಳು ರಸ — ರೂಪ-ತಾನಾ-ಗಿ || ೬-೨೦ ||

೧೭. ಮೂಲ- ರೂಪನು — ಮನದೊ-ಳಿಹ ಶ್ರವ- |
ಣಾಲಿ-ಯೊಳಗಿಹ — ಮತ್ಸ್ಯ- ಕೂರ್ಮನು |
ಕೋಲ-ರೂಪನು — ತ್ವಗ್ರ-ಸನದೊಳ — ಗಿಪ್ಪ- ನರಸಿಂ-ಹ ||
ಬಾಲ-ವಟು ವಾ — ಮನನು- ನಾಸಿಕ- |
ನಾಳ-ದೊಳು ವದ — ನದಲಿ- ಭಾರ್ಗವ |
ವಾಲಿ-ಭಂಜನ — ಹಸ್ತ-ದಲಿ ಪಾ — ದದಲಿ- ಶ್ರೀಕೃ-ಷ್ಣ || ೬-೩೪ ||

೧೮. ಪ್ರಣವ- ಪ್ರತಿಪಾ — ದ್ಯ ತ್ರಿ-ನಾಮದಿ |
ತನುವಿ-ನೊಳು ತ್ರಿ — ಸ್ಥಾನ-ಗನಿರು- |
ದ್ಧನು -ತ್ರಿ-ಪಂಚಕ — ಏಕ-ವಿಂಶತಿ — ಚತುರ-ವಿಂಶತಿ-ಗ ||
ಎನಿಸಿ- ಎಪ್ಪ — ತ್ತೆರಡು-ಸಾವಿರ |
ಇನಿತು- ನಾಡಿಗ — ಳೊಳು ನಿ-ಯಾಮಿಸು- |
ತಿನಗ- ಭಸ್ತಿಗ — ಲೋಕ-ದೊಳು ಸ — ರ್ವತ್ರ- ಬೆಳಗುವ-ನು || ೭-೨ ||

೧೯. ಮತ್ತೆ- ಚಿದ್ದೇ — ಹದ ಒ-ಳಗೆ ಎಂ- |
ಭತ್ತು- ಸಾವಿರ– ದೇಳು- ನೂರಿ- |
ಪ್ಪತ್ತು-ಐದು ನೃ–ಸಿಂಹ-ರೂಪದ –ಲಿದ್ದು-ಜೀವರಿ-ಗೆ ||
ನಿತ್ಯ-ದಲಿ ಹಗ — ಲಿರುಳು- ಬಪ್ಪಪ- |
ಮೃತ್ಯು-ವಿಗೆ ತಾ — ಮೃತ್ಯು-ವೆನಿಸುವ |
ಭೃತ್ಯ-ವತ್ಸಲ — ಭಯ ವಿ-ನಾಶನ — ಭಾಗ್ಯ-ಸಂಪ-ನ್ನ ||೭-೧೫||

೨೦. ಜ್ವರನೊ-ಳಿಪ್ಪ — ತ್ತೇಳು- ಹರನೊಳ- |
ಗಿರುವ-ನಿಪ್ಪ — ತ್ತೆಂಟು- ರೂಪದಿ |
ಎರಡು- ಸಾವಿರ — ದೆಂಟು-ನೂರಿ — ಪ್ಪತ್ತ- ರೇಳಧಿ-ಕ ||
ಜ್ವರ- ಹ-ರಾಹ್ವಯ — ನಾರ-ಸಿಂಹನ |
ಸ್ಮರಣೆ- ಮಾತ್ರದಿ — ದುರಿತ- ರಾಶಿಗ- |
ಳಿರದೆ- ಪೋಪವು — ತರಣಿ- ಬಿಂಬವ — ಕಂಡ- ಹಿಮದಂ-ತೆ || ೭-೧೬ ||

೨೧. ಮಾಸ- ಪರಿಯಂ — ತರವು- ಬಿಡದೆ ನೃ- |
ಕೇಸ-ರಿಯ ಶುಭ — ನಾಮ- ಮಂತ್ರ ಜಿ- |
ತಾಸ-ನದಲೇ–ಕಾಗ್ರ-ಚಿತ್ತದಿ –ನಿಷ್ಕ-ಪಟದಿಂ-ದ ||
ಬೇಸ-ರದೆ ಜಪಿ — ಸಲು ವೃ-ಜನಗಳ- |
ನಾಶ-ಗೈಸಿ ಮ — ನೋರ-ಥಗಳ ಪ- |
ರೇಶ-ಪೂರ್ತಿಯ — ಮಾಡಿ-ಕೊಡುವನು– ಕಡೆಗೆ- ಪರಗತಿ-ಯ || ೭-೧೭ ||

೨೨. ನೂರು- ವರುಷಕೆ — ದಿವಸ- ಮೂವ- |
ತ್ತಾರು- ಸಾವಿರ — ವಹವು- ನಾಡಿ ಶ- |
ರೀರ-ದೊಳಗಿನಿ–ತಿಹವು-ಸ್ತ್ರೀ ಪುಂ–ಭೇದ-ದಲಿ ಹರಿ-ಯ ||
ಈರ-ಧಿಕ ಎ — ಪ್ಪತ್ತು- ಸಾವಿರ |
ಮೂರು-ತಿಗಳನು — ನೆನೆದು- ಸರ್ವಾ- |
ಧಾರ-ಕನ ಸ — ರ್ವತ್ರ- ಪೂಜಿಸು — ಪೂರ್ಣ- ನೆಂದರಿ-ದು || ೭-೧೯ ||

೨೩. ಆವ- ದೇಹವ — ಕೊಡಲಿ- ಹರಿ ಮ- |
ತ್ತಾವ- ಲೋಕದೊ — ಳಿಡಲಿ- ತಾ ಮ- |
ತ್ತಾವ- ದೇಶದೊ –ಳಿರಲಿ-ಆವಾ–ವಸ್ಥೆ-ಗಳು ಬರ-ಲಿ ||
ಈ- ವಿ-ಧದಿ ಜಡ — ಚೇತ-ನದೊಳು ಪ- |
ರಾವ-ರೇಶನ — ರೂಪ-ಗುಣಗಳ – |
ಭಾವಿ-ಸುತ ಸು — ಜ್ಞಾನ- ಭಕುತಿಯ — ಬೇಡು-ಕೊಂಡಾ-ಡು || ೭-೨೨ ||

೨೪. ವಾರಿ-ಜ ಭವಾಂ — ಡದೊಳು- ಲಕ್ಷ್ಮೀ- |
ನಾರ-ಸಿಂಹನ — ರೂಪ- ಗುಣಗಳು |
ವಾರಿ-ಧಿಯೊಳಿಹ — ತೆರೆಗ-ಳಂದದಿ — ಸಂದ-ಣಿಸಿ ಇಹ-ವು ||
ಕಾರ-ಣಾಂಶಾ — ವೇಶ- ವ್ಯಾಪ್ತವ- |
ತಾರ- ಕಾರ್ಯಾ — ವ್ಯಕ್ತ- ವ್ಯಕ್ತವು |
ಈರ-ಯಿದು ವೀ — ಭೂತಿ- ಅಂತ –ರ್ಯಾಮಿ- ರೂಪಗ-ಳು || ೭-೨೭ ||

೨೫. ಮಣಿಗ-ಳೊಳಗಿಹ — ಸೂತ್ರ-ದಂದದಿ |
ಪ್ರಣವ- ಪಾದ್ಯನು — ಚೇತ-ನಾ ಚೇ- |
ತನ- ಜ-ಗತ್ತಿನೊ — ಳನುದಿ-ನದಿ ಆ — ಡುವನು- ಸುಖಪೂ-ರ್ಣ ||
ದಣುವಿ-ಕೆಯು ಇವ-ಗಿಲ್ಲ- ಬಹು ಕಾ- |
ರುಣಿಕ-ನಂತಾ — ನಂತ- ಜೀವರ |
ಗಣದೊ-ಳಗೆ ಏ — ಕಾಂಶ- ರೂಪದಿ — ನಿಂತು- ನೇಮಿಸು-ವ || ೭-೨೮ ||

೨೬. ಆದಿ-ತೇಯರು — ತಿಳಿಯ-ದಿಹ ಗುಣ |
ವೇದ-ಮಾನಿಗ — ಳೆಂದೆ-ನಿಪ ವಾ- |
ಣ್ಯಾದಿ-ಗಳು ಬ — ಲ್ಲರವ-ರರಿಯದ — ಗುಣಗ-ಣಂಗಳ-ನು ||
ವೇಧ- ಬಲ್ಲನು — ಬೊಮ್ಮ-ನರಿಯದ- |
ಗಾಧ- ಗುಣಗಳ — ಲಕುಮಿ- ಬಲ್ಲಳು |
ಶ್ರೀಧ-ರೊಬ್ಬನು — ಪಾಸ್ಯ- ಸದ್ಗುಣ — ಪೂರ್ಣ- ಹರಿಯೆಂ-ದು ||೭-೩೦||

೨೭. ಜ್ಯೋತಿ-ಯೊಳಗಿ — ಪ್ಪನು ಕ-ಪಿಲ ಪುರು- |
ಹೂತ- ಮುಖ ದಿ — ಕ್ಪತಿಗ-ಳಿಂದ ಸ- |
ಮೇತ-ನಾಗೀ — ದಕ್ಷಿ-ಣಾಕ್ಷಿಯ — ಮುಖದೊ-ಳಿಹ ವಿ-ಶ್ವ ||
ಶ್ವೇತ-ವರ್ಣ ಚ — ತುರ್ಭು-ಜನು ಸಂ- |
ಪ್ರೀತಿ-ಯಿಂದಲಿ — ಸ್ಥೂಲ- ವಿಷಯವ |
ಚೇತ-ನರಿಗುಂ — ಡುಣಿಪ-ಜಾಗ್ರತೆ — ಯಿತ್ತು-ನೃಗ ಜಾ-ಸ್ಯ || ೮-೧೧ ||

೨೮. ರೋಮ-ಗಳಲಿ ವ — ಸಂತ- ತ್ರಿಕಕು- |
ದ್ಧಾಮ- ಮುಖದೊಳ — ಗಗ್ನಿ- ಭಾರ್ಗವ |
ತಾಮ-ರಸ ಭವ — ವಾಸು-ದೇವರು — ಮಸ್ತ-ಕದೊಳಿಹ-ರು ||
ಈಮ-ನದೊಳಿಹ — ವಿಷ್ಣು- ಶಿಖದೊಳು- |
ಮಾಮ-ಹೇಶ್ವರ — ನಾರ-ಸಿಂಹ |
ಸ್ವಾಮಿ-ತನ್ನನು — ದಿನದಿ-ನೆನೆವರ — ಮೃತ್ಯು-ಪರಿಹರಿ – ಪ || ೮-೧೬ ||

೨೯. ಎರಡ-ಧಿಕ ಎ — ಪ್ಪತ್ತೆ-ನಿಪ ಸಾ- |
ವಿರದ- ನಾಡಿಗೆ — ಮುಖ್ಯ- ಏಕೋ- |
ತ್ತರಶ-ತಗಳ –ಲ್ಲಿಹವು- ನೂರಾ –ವೊಂದು- ಮೂರ್ತಿಗ-ಳು ||
ಅರಿತು- ದೇಹದಿ — ಕಲಶ- ನಾಮಕ – |
ಹರಿಗೆ- ಕಳೆಗಳಿ — ವೆಂದು- ನೈರಂ- |
ತರದಿ-ಪೂಜಿಸು — ತಿಹರು-ಪರಮಾ — ದರದಿ-ಭೂಸುರ-ರು || ೮-೧೮ ||

೩೦. ತನುವೆ- ರಥ ವಾ — ಗಾಭಿ-ಮಾನಿಯೆ |
ಗುಣವೆ-ನಿಸುವಳು — ಶ್ರೋತ್ರ-ದೊಳು ರೋ- |
ಹಿಣಿ ಶ-ಶಾಂಕರು — ಪಾಶ- ಪಾಣಿಗ — ಳಶ್ವ-ವೆಂದೆನಿ-ಸಿ ||
ಇನನು- ಸಂಜ್ಞಾ — ದೇವಿ-ಯರು ಇಹ- |
ರನಲ- ಲೋಚನ — ಸೂತ-ನೆನಿಸುವ |
ಪ್ರಣವ- ಪಾದ್ಯ — ಪ್ರಾಣ- ನಾಮಕ — ರಥಿಕ- ನೆನಿಸುವ-ನು || ೮-೨೯ ||

೩೧. ವಿತ್ತ- ದೇಹಾ — ಗಾರ- ದಾರಾ- |
ಪತ್ಯ- ಮಿತ್ರಾ — ದಿಗಳೊ-ಳಗೆ ಹರಿ |
ಪ್ರತ್ಯ-ಗಾತ್ಮನು — ಎಂದೆ-ನಿಸಿ ನೆಲೆ — ಸಿಪ್ಪ-ನೆಂದರಿ-ದು ||
ನಿತ್ಯ-ದಲಿ ಸಂ — ತೃಪ್ತಿ- ಬಡಿಸುತ |
ಉತ್ತ-ಮಾಧಮ — ಮಧ್ಯ-ಮರ ಕೃತ- |
ಕೃತ್ಯ-ನಾಗು — ನ್ಮತ್ತ-ನಾಗದೆ — ಭೃತ್ಯ- ನಾನೆಂ-ದು || ೮-೩೧ ||

೩೨. ಹರಿಯೆ- ಪಂಚಾ — ಶದ್ವ-ರಣ ಸು- |
ಸ್ವರ ಉ-ದಾತ್ತನು — ದಾತ್ತ- ಪ್ರಚಯ |
ಸ್ವರಿತ- ಸಂಧಿ ವಿ — ಸರ್ಗ- ಬಿಂದುಗ — ಳೊಳಗೆ- ತದ್ವಾ-ಚ್ಯ ||
ಇರುವ- ತತ್ತ — ನ್ನಾಮ- ರೂಪಗ- |
ಳರಿತು-ಪಾಸನೆ — ಗೈವ-ರಿಳೆಯೊಳು |
ಸುರರೆ-ಸರಿ ನರ — ರಲ್ಲ-ಅವರಾ — ಡುವದೆ- ವೇದಾ-ರ್ಥ || ೯-೧ ||

೩೩. ವಾಸ-ವಾನುಜ — ರೇಣು-ಕಾತ್ಮಜ |
ದಾಶ-ರಥಿ ವೃಜಿ — ನಾರ್ದ-ನಮಲ ಜ- |
ಲಾಶ-ಯಾಲಯ — ಹಯವ-ದನ ಶ್ರೀ — ಕಪಿಲ- ನರಸಿಂ-ಹ ||
ಈಸು- ರೂಪದ — ಲವರ-ವರ ಸಂ- |
ತೋಷ-ಬಡಿಸುತ — ನಿತ್ಯ- ಸುಖಮಯ |
ವಾಸ-ವಾಗಿಹ — ಹೃತ್ಕ-ಮಲದೊಳು — ಬಿಂಬ-ನೆಂದೆನಿ-ಸಿ || ೯-೨೧ ||

೩೪. ನಾರ-ಸಿಂಹ ಸ್ವ — ರೂಪ-ದೊಳಗೆ ಶ- |
ರೀರ- ನಾಮದಿ — ಕರೆಸು-ವನು ಹದಿ- |
ನಾರು- ಕಳೆಗಳು — ಉಳ್ಳ- ಲಿಂಗದಿ — ಪುರುಷ- ನಾಮಕ-ನು ||
ತೋರು-ವನು ಅನಿ — ರುದ್ಧ-ದೊಳು ಶಾಂ- |
ತೀರ-ಮಣ ಅನಿ — ರುದ್ಧ- ರೂಪದಿ |
ಪ್ರೇರಿ-ಸುವ ಪ್ರ — ದ್ಯುಮ್ನ- ಸ್ಥೂಲ ಕ — ಳೇವ-ರದೊಳಿ-ದ್ದು || ೯-೨೬ ||

೩೫. ಆವ- ಪರಬೊ — ಮ್ಮನತಿ- ವಿಮಲಾಂ- |
ಗಾವ- ಬದ್ಧರು — ಎಂದೆ-ನಿಪ ರಾ- |
ಜೀವ- ಭವ ಮೊದ — ಲಾದ-ಮರರನು — ದಿನದಿ- ಹರಿಪದ-ವ ||
ಸೇವಿ-ಪರಿಗನು — ಕೂಲ-ರಲ್ಲದೆ |
ತಾವು- ಇವರನ — ಕೆಡಿಸ-ಬಲ್ಲರೆ |
ಶ್ರೀವಿ-ಲಾಸಾ — ಸ್ಪದನ- ದಾಸರಿ — ಗುಂಟೆ- ಅಪಜಯ-ವು || ೧೦-೧ ||

೩೬. ಕಲಿಯೆ- ಮೊದಲಾ — ದಖಿಲ- ದಾನವ |
ರೊಳಗೆ- ಬ್ರಹ್ಮ ಭ — ವಾದಿ-ದೇವ- |
ರ್ಕಳು ನಿ-ಯಾಮಕ — ರಾಗಿ- ಹರಿಯಾ — ಜ್ಞೆಯಲಿ- ಅವರವ-ರ ||
ಕಲುಷ- ಕರ್ಮವ — ಮಾಡಿ- ಮಾಡಿಸಿ |
ಜಲರು-ಹೇಕ್ಷಣ — ಗರ್ಪಿ-ಸುತ ನಿ- |
ಶ್ಚಲ ಸು-ಭಕ್ತಿ — ಜ್ಞಾನ- ಪೂರ್ಣರು– ಸುಖಿಪ- ರವರೊಳ-ಗೆ ||೧೦-೯||

೩೭. ಸೂಸಿ-ಬಹ ನದಿ — ಯೊಳಗೆ- ತನ್ನ ಸ- |
ಹಾಸ- ತೋರುವೆ — ನೆಂದು- ಜಲಕಿದಿ- |
ರೀಸಿ-ದರೆ ಕೈ — ಸೋತು- ಮುಳುಗುವ — ಹರಿಯ- ಬಿಟ್ಟವ-ನು ||
ಕ್ಲೇಶ-ವೈದುವ — ನಾದಿ-ಯಲಿ ಸ- |
ರ್ವೇಶ- ಕ್ಲೃಪ್ತಿಯ — ಮಾಡಿ-ದುದ ಬಿ- |
ಟ್ಟಾಶೆ-ಯಿಂದಲಿ — ಅನ್ಯ- ರಾರಾ — ಧಿಸುವ- ಮಾನವ-ನು || ೧೦-೧೨ ||

೩೮. ಧಾತ್ರಿ-ಯೊಳಗು — ಳ್ಳಖಿಲ- ತೀರ್ಥ- |
ಕ್ಷೇತ್ರ- ಚರಿಸಿದ — ರೇನು- ಪಾತ್ರಾ- |
ಪಾತ್ರ-ವರಿತ — ನ್ನಾದಿ- ದಾನವ — ಮಾಡಿ- ಫಲವೇ-ನು ||
ಗಾತ್ರ- ನಿರ್ಮಲ — ನಾಗಿ- ಮಂತ್ರ- |
ಸ್ತೋತ್ರ- ಪಠಿಸಿದ — ರೇನು- ಹರಿ ಸ- |
ರ್ವತ್ರ- ಗತನೆಂ — ದರಿಯ-ದಲೆ ತಾ — ಕರ್ತೃ- ಯೆಂಬುವ-ನು ||೧೦-೧೪||

೩೯. ಅಸ್ವ-ತಂತ್ರನು — ಜೀವ- ಹರಿ ಸ |
ರ್ವ ಸ್ವ-ತಂತ್ರನು — ನಿತ್ಯ- ಸುಖಮಯ |
ನಿಃಸ್ವ-ಬದ್ಧಾ — ಲ್ಪಜ್ಞ- ಶಕ್ತ ಸ — ದುಃಖ- ನಿರ್ವಿ-ಣ್ಣ ||
ಹ್ರಸ್ವ-ದೇಹಿ ಸ — ನಾಥ- ಜೀವನು |
ವಿಶ್ವ-ವ್ಯಾಪಕ — ಕರ್ತೃ- ಬ್ರಹ್ಮ ಸ |
ರಸ್ವ-ತೀಶಾ — ದ್ಯಮರ-ನುತ ಹರಿ– ಯೆಂದು- ಕೊಂಡಾ-ಡು || ೧೧-೩ ||

೪೦. ಪ್ರೇರ-ಕ ಪ್ರೇ — ರ್ಯರೊಳು- ಪ್ರೇರ್ಯ- |
ಪ್ರೇರ-ಕನು ತಾ — ನಾಗಿ- ಹರಿ ನಿ- |
ರ್ವೈರ-ದಿಂದ ಪ್ರ — ವರ್ತಿ-ಸುವ ತ — ನ್ನಾಮ- ರೂಪದ-ಲಿ ||
ತೋರಿ-ಕೊಳ್ಳದೆ — ಸರ್ವ-ರೊಳು ಭಾ- |
ಗೀರ-ಥೀ ಜನ — ಕನು ಸ-ಕಲ ವ್ಯಾ- |
ಪಾರ-ಗಳ ತಾ — ಮಾಡಿ-ಮಾಡಿಸಿ– ನೋಡಿ- ನಗುತಿ-ಪ್ಪ || ೧೧-೧೩ ||

೪೧. ಹರಿಯೆ- ಮುಖ್ಯ ನಿ — ಯಾಮ-ಕನು ಎಂ- |
ದರಿದು- ಪುಣ್ಯಾ — ಪುಣ್ಯ- ಹರ್ಷಾ- |
ಮರುಷ- ಲಾಭಾ –ಲಾಭ- ಸುಖ ದುಃ –ಖಾದಿ- ದ್ವಂದ್ವಗ-ಳ ||
ನಿರುತ- ಅವನಂ — ಘ್ರಿಗೆ ಸ-ಮರ್ಪಿಸಿ |
ನರಕ- ಭೂ ಸ್ವ — ರ್ಗಾಪ- ವರ್ಗದಿ |
ಕರಣ- ನೀಯಾ — ಮಕನ-ಸರ್ವ– ತ್ರದಲಿ-ನೆನೆವುತಿ-ರು || ೧೧-೧೪ ||

೪೨. ಭೋಗ್ಯ- ವಸ್ತುಗ — ಳೊಳಗೆ- ಯೋಗ್ಯಾ- |
ಯೋಗ್ಯ- ರಸಗಳ — ನರಿತು- ಯೋಗ್ಯಾ- |
ಯೋಗ್ಯ-ರಲಿ ನೆಲೆ — ಸಿಪ್ಪ- ಹರಿಗೆ ಸ — ಮರ್ಪಿ-ಸನುದಿನ-ದಿ ||
ಭಾಗ್ಯ- ಬಡತನ — ಬರಲು- ಹಿಗ್ಗದೆ |
ಕುಗ್ಗಿ- ಸೊರಗದೆ — ಸದ್ಭ-ಕುತಿ ವೈ- |
ರಾಗ್ಯ-ಗಳ ನೇ — ಮಾಡು ನೀ ನಿ– ರ್ಭಾಗ್ಯ- ನೆನಿಸದ-ಲೆ || ೧೧-೨೩ ||

೪೩. ಈ ತ-ನುವಿನೊಳ — ಗಿಹವು- ಓತ- |
ಪ್ರೋತ- ರೂಪದಿ — ನಾಡಿ-ಗಳು ಪುರು- |
ಹೂತ- ಮುಖರ — ಲ್ಲಿಹರು- ತಮ್ಮಿಂ — ದಧಿಕ- ರೊಡಗೂ-ಡಿ ||
ಭೀತಿ-ಗೊಳಿಸುತ — ದಾನ-ವರ ಸಂ- |
ಘಾತ- ನಾಮಕ — ಹರಿಯ- ಗುಣ ಸಂ- |
ಪ್ರೀತಿ-ಯಲಿ ಸದು — ಪಾಸ-ನವ ಗೈ — ವುತಲೆ- ಮೋದಿಪ-ರು ||೧೨-೧೬||

೪೪. ಭೋಗ್ಯ- ಭೋಕ್ತೃಗ — ಳೊಳಗೆ- ಹರಿ ತಾ- |
ಭೋಗ್ಯ- ಭೋಕ್ತನು — ಎನಿಸಿ- ಯೋಗ್ಯಾ- |
ಯೋಗ್ಯ- ರಸಗಳ — ದೇವ- ದಾನವ — ಗಣಕೆ- ಉಣಿಸುವ-ನು ||
ಭಾಗ್ಯ-ನಿಧಿ ಭ — ಕ್ತರಿಗೆ- ಸದ್ವೈ- |
ರಾಗ್ಯ- ಭಕ್ತಿ — ಜ್ಞಾನ-ವೀವಾ- |
ಯೋಗ್ಯ-ರಿಗೆ ದ್ವೇ — ಷಾದಿ-ಗಳ ತ — ನ್ನಲ್ಲಿ- ಕೊಡುತಿ-ಪ್ಪ || ೧೨-೨೨ ||

೪೫. ಮಾಸ-ವೊಂದಕೆ — ಪ್ರತಿ ದಿ-ವಸದಲಿ |
ಶ್ವಾಸ-ಗಳು ಅಹ — ವಷ್ಟ- ಚತ್ವಾ- |
ರಿಂಶ-ತಿ ಸಹ — ಸ್ರಾಧಿ-ಕಾರು ಸು — ಲಕ್ಷ- ಸಂಖ್ಯೆಯ-ಲಿ ||
ಹಂಸ- ನಾಮಕ — ಹರಿಯ- ಷೋಡಶ |
ಈ ಶ-ತಾಬ್ದದಿ — ಭಜಿಸೆ- ಒಲಿವ ದ- |
ಯಾ ಸ-ಮುದ್ರ ಕು — ಚೇಲ-ಗೊಲಿದಂ — ದದಲಿ- ದಿನದಿನ-ದಿ ||೧೨-೪೨||

೪೬. ಹಲವು- ಬಗೆಯಲಿ — ಹರಿಯ- ಮನದೊಳ |
ಗೊಲಿಸಿ- ನಿಲ್ಲಿಸಿ — ಏನು- ಮಾಡುವ |
ಕೆಲಸ-ಗಳು ಅವ — ನಂಘ್ರಿ- ಪೂಜೆಗ — ಳೆಂದು- ನೆನೆಯುತಿ-ರು ||
ಹಲಧ-ರಾನುಜ — ತಾನೆ- ಸರ್ವ- |
ಸ್ಥಳಗ-ಳಲಿ ನೆಲೆ — ಸಿದ್ದು- ನಿಶ್ಚಂ- |
ಚಲ ಭ-ಕುತಿ ಸು — ಜ್ಞಾನ-ಭಾಗ್ಯವ — ಕೊಟ್ಟು- ಸಂತೈ-ಪ || ೧೨-೨೮ ||

೪೭. ಸರಿತು- ಪ್ರವಹಗ — ಳಲ್ಲಿ- ದಿವ್ಯಾಂ- |
ಬರದಿ- ಪತ್ರಾ — ದಿಯಲಿ- ಹರ್ಷಾ- |
ಮರ್ಷ- ವಿಸ್ಮೃತಿ — ಯಿಂದ-ಲಾಗಲಿ — ಒಮ್ಮೆ- ಬಾಯ್ದೆರೆ-ದು ||
ಹರಿ ಹ-ರೀ ಹರಿ — ಯೆಂಬ- ಎರಡ- |
ಕ್ಷರ ನು-ಡಿದ ಮಾ — ತ್ರದಲಿ- ದುರಿತ ಗ- |
ಳಿರದೆ- ಪೋಪವು — ತೂಲ-ರಾಶಿಯೊ — ಳನಲ- ಪೊಕ್ಕಂ-ತೆ || ೧೩-೨ ||

೪೮. ಈ ನ-ಳಿನಜಾಂ — ಡದೊಳು- ಸರ್ವ- |
ಪ್ರಾಣಿ-ಗಳೊಳಿ — ದ್ದನವ-ರತ ವಿ- |
ಜ್ಞಾನ-ಮಯ ವ್ಯಾ –ಪಾರ-ಗಳ ಮಾ –ಡುವನು- ತಿಳಿಸದ-ಲೆ ||
ಏನು- ಕಾಣದೆ — ಸಕಲ- ಕರ್ಮಗ- |
ಳಾನೆ- ಮಾಡುವೆ — ನೆಂಬ- ನರನು ಕು- |
ಯೋನಿ-ಯೈದುವ — ಕರ್ತೃ-ಹರಿ ಎಂ — ದವನೆ- ಮುಕ್ತನ-ಹ ||೧೩-೧೪||

೪೯. ಕಲಿಮ-ಲಾಪಹ — ಳೆನಿಸು-ತಿಹ ಬಾಂ- |
ಬೊಳೆಯೊ-ಳಗೆ ಸಂ — ಚರಿಸಿ- ಬದುಕುವ |
ಜಲಚ-ರ ಪ್ರಾ — ಣಿಗಳು- ಬಲ್ಲವೆ — ತೀರ್ಥ- ಮಹಿಮೆಯ-ನು ||
ಹಲವು- ಬಗೆಯಲಿ — ಹರಿಯ- ಕರುಣಾ- |
ಬಲದಿ- ಬಲ್ಲಿದ — ರಾದ- ಬ್ರಹ್ಮಾ- |
ನಿಲ ವಿ-ಪೇಶಾ — ದ್ಯಮರ-ರರಿಯರ — ನಂತ- ನಮಲ ಗು-ಣ ||೧೩-೧೫||

೫೦. ಆ ನಿ-ಮಿತ್ತ ನಿ — ರಂತ-ರ ಸ್ವಾ- |
ಧೀನ- ಕರ್ತೃ — ತ್ವವನು- ಮರೆದೇ- |
ನೇನು- ಮಾಡುವು — ದೆಲ್ಲ- ಹರಿ ಒಳ — ಹೊರಗೆ- ನೆಲೆಸಿ-ದ್ದು ||
ತಾನೆ- ಮಾಡುವ — ನೆಂದ-ರಿದು ಮ- |
ದ್ದಾನೆ-ಯಂದದಿ — ಸಂಚ-ರಿಸು ಪವ- |
ಮಾನ- ವಂದಿತ — ಒಂದ-ರೆಕ್ಷಣ — ಬಿಟ್ಟ-ಗಲ ನಿ-ನ್ನ || ೧೩-೨೦ ||

೫೧. ಹಲವು- ಕರ್ಮವ — ಮಾಡಿ- ದೇಹವ |
ಬಳಲಿ-ಸದೆ ದಿನ — ದಿನದಿ- ಹೃದಯಾ- |
ಮಲಸ-ದನದಿ ವಿ — ರಾಜಿ-ಸುವ ಹರಿ — ಮೂರ್ತಿ-ಯನೆ ಭಜಿ-ಸು ||
ತಿಳಿಯ-ದೀ ಪೂ — ಜಾ ಪ್ರ-ಕರಣವ |
ಫಲ ಸು-ಪುಷ್ಪಾ — ಗ್ರ್ಯೋದ-ಕ ಶ್ರೀ- |
ತುಳಸಿಗಳನ — ರ್ಪಿಸಲು-ಒಪ್ಪನು — ವಾಸು- ದೇವ ಸ-ದಾ || ೧೩-೨೧ ||

೫೨. ಅಪರಿ-ಮಿತ ಸ — ನ್ಮಹಿಮ- ನರಹರಿ |
ವಿಪಿನ-ದೊಳು ಸಂ — ತೈಸು-ವನು ಕಾ- |
ಶ್ಯಪಿಯ-ನಳೆದವ — ಸ್ಥಳಗ-ಳಲಿ ಸ — ರ್ವತ್ರ- ಕೇಶವ-ನು ||
ಖಪತಿ- ಗಗನದಿ — ಜಲಗ-ಳಲಿ ಮಹ- |
ಶಫರ- ನಾಮಕ — ಭಕ್ತ-ರನು ನಿ- |
ಷ್ಕಪಟ-ದಿಂದಲಿ — ಸಲಹು-ವನು ಕರು– ಣಾಳು- ದಿನದಿನ-ದಿ ||೧೩-೨೬||

೫೩. ಜಯ ಜ-ಯ ಜಯಾ — ಕಾಂತ- ದತ್ತಾ- |
ತ್ರಯ ಕ-ಪಿಲ ಮಹಿ — ದಾಸ- ಭಕ್ತ- |
ಪ್ರಿಯ ಪು-ರಾತನ — ಪುರುಷ-ಪೂರ್ಣಾ –ನಂದ- ಜ್ಞಾನ ಘ-ನ ||
ಹಯವ-ದನ ಹರಿ — ಹಂಸ- ಲೋಕ- |
ತ್ರಯ ವಿ-ಲಕ್ಷಣ — ನಿಖಿಳ- ಜಗದಾ- |
ಶ್ರಯ ನಿ-ರಾಮಯ — ದಯದಿ-ಸಂತೈ– ಸೆಂದು- ಪ್ರಾರ್ಥಿಪು-ದು ||೧೪-೮||

೫೪. ಮೂರು- ಯುಗದಲಿ — ಮೂಲ- ರೂಪನು |
ಸೂರು-ಗಳ ಸಂ — ತೈಸಿ- ದಿತಿಯ ಕು- |
ಮಾರ-ಕರ ಸಂ — ಹರಿಸಿ- ಧರ್ಮವ — ನುಳುಹ-ಬೇಕೆಂ-ದು ||
ಕಾರು-ಣಿಕ ಭೂ — ಮಿಯೊಳು- ನಿಜಪರಿ- |
ವಾರ- ಸಹಿತವ — ತರಿಸಿ- ಬಹುವಿಧ |
ತೋರಿ-ದನು ನರ– ವತ್ಪ್ರ-ವೃತ್ತಿಯ– ಸಕಲ- ಚೇತನ-ಕೆ || ೧೪-೧೯ ||

೫೫. ಎರಡು- ವಿಧದಲಿ — ಲೋಕ-ದೊಳು ಜೀ- |
ವರುಗ-ಳಿಪ್ಪರು — ಸಂತ-ತ ಕ್ಷರಾ- |
ಕ್ಷರ ವಿ-ಲಿಂಗ ಸ — ಲಿಂಗ- ಸೃಜ್ಯಾ — ಸೃಜ್ಯ- ಭೇದದ-ಲಿ ||
ಕರೆಸು-ವುದು ಜಡ — ಪ್ರಕೃತಿ- ಪ್ರಣವಾ- |
ಕ್ಷರ ಮ-ಹಾದಣು — ಕಾಲ- ನಾಮದಿ |
ಹರಿ ಸ-ಹಿತ ಭೇ — ದಗಳ-ಪಂಚಕ — ಸ್ಮರಿಸು- ಸರ್ವ -ತ್ರ || ೧೪-೨೩ ||

೫೬. ನಳಿನ- ಮಿತ್ರಗೆ — ಇಂದ್ರ-ಧನು ಪ್ರತಿ- |
ಫಲಿಸು-ವಂತೆ ಜ — ಗತ್ರ-ಯವು ಕಂ- |
ಗೊಳಿಪ-ದನುಪಾ — ಧಿಯಲಿ- ಪ್ರತಿಬಿಂ — ಬಾಹ್ವ-ಯದಿ ಹರಿ-ಗೆ ||
ತಿಳಿಯೆ- ತ್ರಿಕಕುದ್ — ಧಾಮ-ನತಿ ಮಂ- |
ಗಳ ಸು-ರೂಪವ — ಸರ್ವ- ಠಾವಿಲಿ |
ಪೊಳೆವ-ಹೃದಯಕೆ– ಪ್ರತಿ ದಿ-ವಸ ಪ್ರ– ಹ್ಲಾದ- ಪೋಷಕ-ನು ||೧೪-೨೭||

೫೭. ವಾರಿ-ನಿಧಿಯೊಳ — ಗಖಿಲ- ನದಿಗಳು |
ಬೇರೆ- ಬೇರೆ ನಿ — ರಂತ-ರದಲಿ ವಿ- |
ಹಾರ- ಗೈಯ್ಯುತ — ಪರಮ- ಮೋದದ — ಲಿಪ್ಪ- ತೆರದಂ-ತೆ ||
ಮೂರು- ಗುಣಗಳ — ಮಾನಿ- ಎನಿಸುವ |
ಶ್ರೀರ-ಮಾ ರೂ — ಪಗಳು- ಹರಿಯಲಿ |
ತೋರು-ತಿಪ್ಪವು — ಸರ್ವ-ಕಾಲದಿ — ಸಮರ- ಹಿತವೆನಿ-ಸಿ || ೧೪-೨೯ ||

೫೮. ದೀಪ- ಕರದಲಿ — ಪಿಡಿದು- ಕಾಣದೆ |
ಕೂಪ-ದೊಳು ಬಿ — ದ್ದಂತೆ- ವೇದ ಮ- |
ಹೋಪ-ನಿಷದ –ರ್ಥಗಳ-ನಿತ್ಯದಿ–ಪೇಳು-ವವರೆ-ಲ್ಲ ||
ಶ್ರೀಪ-ವನಮುಖ — ವಿನುತ-ನಮಲ ಸು- |
ರೂಪ-ಗಳ ವ್ಯಾ — ಪಾರ- ತಿಳಿಯದೆ |
ಪಾಪ- ಪುಣ್ಯಕೆ — ಜೀವ-ಕರ್ತೃ ಅ — ಕರ್ತೃ- ಹರಿಯೆಂ-ಬ || ೧೫-೧೨ ||

೫೯. ಪಾದ-ವೆನಿಪವು — ವಾಙ್ಮ-ನೋಮಯ- |
ಪಾದ-ರೂಪ — ದ್ವಯಗ-ಳೊಳು ಪ್ರ- |
ಹ್ಲಾದ- ಪೋಷಕ — ಸಂಕ-ರುಷಣಾ –ಹ್ವಯದಿ- ನೆಲೆಸಿ-ದ್ದು ||
ವೇದ- ಶಾಸ್ತ್ರ ಪು — ರಾಣ-ಗಳ ಸಂ- |
ವಾದ- ರೂಪದಿ — ಮನನ-ಗೈವುತ |
ಮೋದ-ಮಯ ಸುಖ — ವಿತ್ತು-ಸಲಹುವ — ಸರ್ವ-ಸಜ್ಜನ-ರ ||೧೫-೧೪||

೬೦. ಉದಧಿ-ಯೊಳಗೂ — ರ್ಮಿಗಳು- ತೋರ್ಪಂ- |
ದದಲಿ- ಹಂಸೋ — ದ್ಗೀಥ- ಹರಿ ಹಯ- |
ವದನ- ಕೃಷ್ಣಾ –ದ್ಯಮಿತ-ನವತಾ –ರಗಳು- ನಿತ್ಯದ-ಲಿ ||
ಪದುಮ-ನಾಭನೊ — ಳಿರುತಿ-ಹವು ಸ- |
ರ್ವದ ಸ-ಮಸ್ತ — ಪ್ರಾಣಿ-ಗಳ ಚಿ- |
ದ್ಹೃದಯ-ಗತ ರೂ– ಪಂಗ-ಳವ್ಯವ– ಧಾನ-ದಲಿ ಬಿಡ-ದೆ||೧೫-೨೩||

೬೧. ಶರಧಿ-ಯೊಳು ಮಕ — ರಾದಿ- ಜೀವರು |
ಇರುಳು- ಹಗಲೇ — ಕ ಪ್ರ-ಕಾರದಿ |
ಚರಿಸು-ತನುಮೋ –ದಿಸುತ-ಲಿಪ್ಪಂ –ದದಿ ಜ-ಗತ್ರಯ-ವು ||
ಇರುತಿ-ಹವು ಜಗ — ದೀಶ-ನುದರದಿ |
ಕರೆಸು-ವುದು ಪ್ರತಿ — ಬಿಂಬ- ನಾಮದಿ |
ಧರಿಸಿ-ಹುದು ಹರಿ — ನಾಮ-ರೂಪಂ — ಗಳನು- ಅನವರ-ತ || ೧೫-೨೪ ||

೬೨. ಕಾರು-ಣಿಕ ಹರಿ — ತನ್ನೊ-ಳಿಪ್ಪಾ |
ಪಾರ- ಸ್ವಾತಂ — ತ್ರಿಯ ಗು-ಣದಿ ನಾ |
ನೂರು- ತೆಗೆದು ಸ –ಪಾದ-ಆರೊಂ –ದಧಿಕ – ಅರವ- ತ್ತು ||
ನಾರಿ-ಗಿತ್ತ ದ್ವಿ — ಷೋಡ-ಶಾಧಿಕ |
ನೂರು- ಪಾದ — ತ್ರಯವ- ತನ್ನ ಶ- |
ರೀರ-ದೊಳಗೀ — ಪರಿ ವಿ-ಭಾಗವ — ಮಾಡ್ದ- ತ್ರಿಪದಾ- ಹ್ವ || ೧೬-೧ ||

೬೩. ಎರಡು- ದೀಕ್ಷೆಗ — ಳಿಹವು- ಬಾಹ್ಯಾಂ- |
ತರವೆ-ನಿಪ ನಾ — ಮದಲಿ- ಬುಧರಿಂ- |
ದರಿತು- ದೀಕ್ಷಿತ — ನಾಗು- ದೀರ್ಘ — ದ್ವೇಷ-ಗಳ ಬಿ-ಟ್ಟು ||
ಹರಿಯೆ- ಸರ್ವೋ — ತ್ತಮ ಕ್ಷ-ರಾಕ್ಷರ- |
ಪುರುಷ- ಪೂಜಿತ — ಪಾದ- ಜನ್ಮಾ- |
ದ್ಯರ ವಿ-ದೂರ ಸು — ಖಾತ್ಮ-ಸರ್ವಗ — ನೆಂದು- ಸ್ಮರಿಸುತಿ-ರು ||೧೬-೧೮||

೬೪. ದೀಪ- ದಿವದಲಿ — ಕಂಡ-ರಾದಡೆ |
ಲೋಪ- ಗೈಸುವ — ರಾಕ್ಷ-ಣ ಹರಿ ಸ- |
ಮೀಪ- ದಲ್ಲಿರೆ — ನಂದ- ನಾಮ ಸು- ನಂದ- ವೆನಿಸುವ-ವು ||
ಔಪ- ಚಾರಿಕ — ವಲ್ಲ- ಸುಜನರ | ಪಾಪ- ಕರ್ಮವು — ಪುಣ್ಯ-ವೆನಿಪವು |
ಪಾಪಿ-ಗಳ ಸ– ತ್ಪುಣ್ಯ- ಕರ್ಮವು — ಪಾಪ-ವೆನಿಸುವ-ವು || ೧೬-೨೭ ||

೬೫. ಆಲ-ಯಗಳೊಳ — ಗಿಪ್ಪ- ದೀಪ- |
ಜ್ವಾಲೆ- ವರ್ತಿಗ — ಳನುಸ-ರಿಸಿ ಜನ- |
ರಾಲಿ-ಗೊಪ್ಪುವ — ತೆರದಿ- ಹರಿ ತಾ — ತೋರ್ಪ- ಸರ್ವ-ತ್ರ ||
ಕಾಲ- ಕಾಲದಿ — ಶ್ರೀಧ-ರಾ ದು- |
ರ್ಗಾ ಲ-ಲನೆಯರ — ಕೂಡಿ- ಸುಖಮಯ |
ಲೀಲೆ-ಗೈಯಲು — ತ್ರಿಗುಣ- ಕಾರ್ಯಗ — ಳಹವು- ಜೀವರಿ-ಗೆ || ೧೭-೭ ||

೬೬. ಮೋದ- ಶಿರ ದ — ಕ್ಷಿಣ ಸು-ಪಕ್ಷ ಪ್ರ- |
ಮೋದ- ಉತ್ತರ — ಪಕ್ಷ-ವೆಂದು ಋ- |
ಗಾದಿ- ಶ್ರುತಿಗಳು –ಪೇಳು-ವವು ಆ –ನಂದ-ಮಯ ಹರಿ-ಗೆ ||
ಮೋದ- ವೈಷಿಕ — ಸುಖ ವಿ-ಷೇಶ ಪ್ರ- |
ಮೋದ- ಪಾರ — ತ್ರಿಕ ಸು-ಖಪ್ರದ- |
ನಾದ-ಕಾರಣ — ದಿಂದ-ಮೋದ ಪ್ರ — ಮೋದ- ನೆನಿಸಿದ-ನು || ೧೮-೨೫ ||

೬೭. ದ್ಯುಮಣಿ- ಕಿರಣವ — ಕಂಡ- ಮಾತ್ರ-ದಿ |
ತಿಮಿರ-ವೋಡುವ — ತೆರದಿ- ಲಕ್ಷ್ಮೀ- |
ರಮಣ- ನೋಡಿದ — ಮಾತ್ರ-ದಿಂದಘ — ನಾಶ-ವೈದುವು-ದು ||
ಕಮಲ- ಸಂಭವ — ಮುಖ್ಯ- ರೆಲ್ಲಾ |
ಸುಮನ-ಸರೊಳಿಹ — ಪಾಪ- ರಾಶಿಯ |
ಅಮರ- ಮುಖನಂ– ದದಲಿ-ಭಸ್ಮವ– ಮಾಳ್ಪ-ಹರಿ ತಾ-ನು ||೧೮-೨೮||

೬೮. ಪೇಳ-ಲೊಶವ — ಲ್ಲದ ಮ-ಹಾ ಪಾ- |
ಪಾಳಿ-ಗಳನೊಂ — ದೇ ಕ್ಷ-ಣದಿ ನಿ- |
ರ್ಮೂಲ-ಗೈಸಲಿ–ಬೇಕು- ಎಂಬವ–ಗೊಂದೆ-ಹರಿನಾ-ಮ ||
ನಾಲಿ-ಗೆಯೊಳು — ಳ್ಳವಗೆ- ಪರಮ ಕೃ- |
ಪಾಳು- ಕೃಷ್ಣನು — ಕೈವಿ-ಡಿದು ತ- |
ನ್ನಾಲ-ಯದೊಳಿ — ಟ್ಟನುದಿ-ನದಲಾ — ನಂದ- ಬಡಿಸುವ-ನ್ ||೧೮-೩೯||

೬೯. ಸಿ-ರಿ ವಿರಿಂ — ಚೀರ- ಭಾರತಿ |
ಗರುಡ- ಫಣಿಪತಿ — ಷಣ್ಮ-ಹಿಷಿಯರು |
ಗಿರಿಜ- ನಾಕೇ — ಶ ಸ್ಮ-ರ ಪ್ರಾ — ಣಾನಿ-ರುದ್ಧ ಶ-ಚೀ ||
ಗುರು ರ-ತೀ ಮನು — ದಕ್ಷ- ಪ್ರವಹಾ- |
ಮರುತ- ಮಾನವಿ — ಯಮ ಶ-ಶಿ ದಿವಾ- |
ಕರ ವ-ರುಣ ನಾ– ರದ ಸು-ರಾಸ್ಯ ಪ್ರ– ಸೂತಿ- ಭೃಗು ಮುನಿ-ಪ ||೨೦-೨೪||

೭೦. ಮತ್ಸ್ಯ- ಕೇತನ — ಜನಕ- ಹರಿ ಶ್ರೀ- |
ವತ್ಸ-ಲಾಂಛನ — ನಿಜ ಶ-ರಣ ಜನ- |
ವತ್ಸ-ಲ ವರಾ — ರೋಹ- ವೈಕುಂ — ಠಾಲ-ಯ ನಿವಾ-ಸಿ ||
ಚಿತ್ಸು-ಖ ಪ್ರದ — ಸಲಹೆ-ನಲು ಗೋ- |
ವತ್ಸ- ಧ್ವನಿಗೊದ — ಗುವ ತೆ-ರದಿ ಪರ- |
ಮೋತ್ಸ-ಹದಿ ಬಂ– ದೊದಗು-ವನು ನಿ– ರ್ಮತ್ಸ- ರರ ಬಳಿ-ಗೆ ||೨೧-೨೮||

೭೧. ಶಕ್ತ-ರೆನಿಸುವ — ರಿಲ್ಲ- ಹರಿ ವ್ಯತಿ- |
ರಿಕ್ತ- ಸುರಗಣ — ದೊಳಗೆ- ಸರ್ವೋ- |
ದ್ರಿಕ್ತ-ನೆನಿಸುವ — ಸರ್ವ-ರಿಂದಲಿ — ಸರ್ವ-ಕಾಲದ-ಲಿ ||
ಭಕ್ತಿ-ಪೂರ್ವಕ — ವಾಗಿ- ಅನ್ಯಪ್ರ- |
ಸಕ್ತಿ-ಗಳನೀ — ಡ್ಯಾಡಿ- ಪರಮಾ- |
ಸಕ್ತ-ನಾಗಿರು– ಹರಿಕ-ಥಾಮೃತ– ಪಾನ-ವಿಷಯದ-ಲಿ || ೨೧-೩೧ ||

೭೨. ಶ್ರೀ ಲ-ಕುಮಿವ — ಲ್ಲಭಗೆ- ಸಮ ಕರು- |
ಣಾಳು-ಗಳ ನಾ — ಕಾಣೆ-ನೆಲ್ಲಿ ಕು- |
ಚೇಲ-ನವಲಿಗೆ — ಮೆಚ್ಚಿ- ಕೊಟ್ಟನು — ಸಕಲ- ಸಂಪದ-ವ ||
ಕೇಳಿ-ದಾಕ್ಷಣ — ವಸ್ತ್ರ-ಗಳ ಪಾಂ- |
ಚಾಲಿ-ಗಿತ್ತನು — ದೈತ್ಯ-ನುದರವ |
ಸೀಳಿ- ಸಂತೈ — ಸಿದನು- ಪ್ರಹ್ಲಾ — ದನ ಕೃ- ಪಾಸಾಂ-ದ್ರ || ೨೨-೧ ||

೭೩. ಬಿಟ್ಟಿ-ಗಳ ನೆವ — ದಿಂದ-ಡಾಗಲಿ |
ಪೊಟ್ಟೆ-ಗೋಸುಗ — ವಾದ-ಡಾಗಲಿ |
ಕೆಟ್ಟ-ರೋಗ ಪ್ರ — ಯುಕ್ತ-ವಾಗಲಿ — ಅಣಕ-ದಿಂದೊ-ಮ್ಮೆ ||
ನಿಟ್ಟು-ಸಿರಿನಿಂ — ಬಾಯ್ದೆ-ರೆದು ಹರಿ |
ವಿಠ್ಠ-ಲಾ ಸಲ — ಹೆಂದೆ-ನಲು ಕೈ- |
ಗೊಟ್ಟು-ಕಾವ ಕೃ — ಪಾಳು-ಸಂತತ — ತನ್ನ- ಭಕುತರ-ನು || ೨೨-೧೪ ||

೭೪. ಝಲ್ಲ-ಡಿಯ ನೆಳ — ಲಂತೆ- ತೋರ್ಪುದು |
ಎಲ್ಲ- ಕಾಲದಿ — ಭವದ- ಸೌಖ್ಯವು |
ಎಲ್ಲಿ- ಪೊಕ್ಕರು — ಬಿಡದೆ- ಬೆಂಬ — ತ್ತಿಹುದು- ಜೀವರಿ-ಗೆ- ||
ಒಲ್ಲೆ-ನೆಂದರೆ — ಬಿಡದು- ಹರಿ ನಿ- |
ರ್ಮಾಲ್ಯ- ನೈವೇ — ದ್ಯವನು- ಭುಂಜಿಸಿ |
ಬಲ್ಲ-ವರ ಕೂ — ಡಾಡು- ಭವದುಃ — ಖಗಳ-ನೀಡಾ-ಡು || ೨೨-೨೮ ||

೭೫. ಮೀನ- ಕೂರ್ಮ — ಕ್ರೋಡ- ನರಹರಿ |
ಮಾಣ-ವಕ ಭೃಗು — ರಾಮ- ದಶರಥ |
ಸೂನು- ಯಾದವ — ಬುದ್ಧ- ಕಲ್ಕೀ — ಕಪಿಲ- ವೈಕುಂ-ಠ ||
ಶ್ರೀನಿ-ವಾಸ — ವ್ಯಾಸ- ಋಷಭ ಹ- |
ಯಾನ-ನಾ ನಾ — ರಾಯ-ಣೀ ಹಂ- |
ಸಾನಿ-ರುದ್ಧ ತ್ರಿ — ವಿಕ್ರ-ಮ ಶ್ರೀ — ಧರ ಹೃ-ಷೀಕೇ-ಶ || ೨೩-೧ ||

೭೬. ಹರಿಯು- ನಾರಾ — ಯಣನು- ಕೃಷ್ಣಾ- |
ಸುರಕು-ಲಾಂತಕ — ಸೂರ್ಯ- ಸಪ್ರಭ |
ಕರೆಸು-ವನು ನಿ — ರ್ದುಷ್ಟ- ಸುಖ ಪರಿ –ಪೂರ್ಣ- ತಾನೆಂ-ದು ||
ಸರುವ- ದೇವೋ — ತ್ತಮನು- ಸರ್ವಗ |
ಪರಮ- ಪುರುಷ ಪು — ರಾತ-ನ ಜರಾ- |
ಮರಣ-ವರ್ಜಿತ — ವಾಸು-ದೇವಾ — ದ್ಯಮಿತ- ರೂಪಾ-ತ್ಮಾ || ೨೩-೨ ||

೭೭. ಈ ನ-ಳಿನ ಭವ — ಜನನಿ- ಲಕ್ಷ್ಮೀ- |
ಜ್ಞಾನ- ಬಲ ಭ — ಕ್ತ್ಯಾದಿ- ಗುಣ ಸಂ |
ಪೂರ್ಣ-ಳೆನಿಪಳು –ಸರ್ವ-ಕಾಲದಿ –ಹರಿ ಕೃ-ಪಾಬಲ-ದಿ ||
ಹೀನ-ಳೆನಿಪಳ — ನಂತ- ಗುಣದಿ ಪು- |
ರಾಣ- ಪುರುಷಗೆ — ಪ್ರಕೃತಿ-ಗಿನ್ನು ಸ- |
ಮಾನ-ರೆನಿಸುವ– ರಿಲ್ಲ-ಮುಕ್ತಾ– ಮುಕ್ತ-ಸುರರೊಳ-ಗೆ || ೨೩-೩ ||

೭೮. ಏಕ-ವಿಂಶತಿ — ಮತ ಪ್ರ-ವರ್ತಕ |
ಕಾಕು- ಮಾಯ್ಗಳ — ಕುಹಕ- ಯುಕ್ತಿ ನಿ- |
ರಾಕ-ರಿಸಿ ಸ — ರ್ವೋತ್ತ-ಮನು ಹರಿ — ಯೆಂದು- ಸ್ಥಾಪಿಸಿ-ದ ||
ಶ್ರೀಕ-ಳತ್ರನ — ಸದನ- ದ್ವಿಜಪ ಪಿ- |
ನಾಕಿ-ಸನ್ನುತ — ಮಹಿಮ- ಪರಮ ಕೃ- |
ಪಾಕ-ಟಾಕ್ಷದಿ — ನೋಡು- ಮಧ್ವಾ — ಚಾರ್ಯ-ಗುರುವ-ರ್ಯ || ೨೪-೧||

೭೯. ಹತ್ತು- ಜನ್ಮಗ — ಳಲ್ಲಿ- ಹರಿ ಸ- |
ರ್ವೋತ್ತ-ಮ ಸುರಾ — ಸುರ ಗ-ಣಾರ್ಚಿತ |
ಚಿತ್ರ-ಕರ್ಮ ವಿ — ಶೋಕ-ನಂತಾ — ನಂತ- ರೂಪಾ-ತ್ಮ ||
ಸತ್ಯ-ಸತ್ಸಂ — ಕಲ್ಪ- ಜಗದು- |
ತ್ಪತ್ತಿ- ಸ್ಥಿತಿ ಲಯ — ಕಾರ-ಣ ಜರಾ- |
ಮೃತ್ಯು- ವರ್ಜಿತ — ನೆಂದು-ಪಾಸನೆ — ಗೈದ- ತರುವಾ-ಯ || ೨೪-೬ ||

೮೦. ಅಪಚ-ಯಗಳಿ — ಲ್ಲುಂಡ-ದದರಿಂ- |
ದುಪಚ-ಯಗಳಿ — ಲ್ಲಮರ-ಗಣದೊಳ- |
ಗುಪಮ-ರೆನಿಸುವ — ರಿಲ್ಲ- ಜನ್ಮಾ — ದಿಗಳು- ಮೊದಲಿ-ಲ್ಲ ||
ಅಪರಿ-ಮಿತ ಸ — ನ್ಮಹಿಮ- ನರಹರಿ |
ಅಪುನ-ರಾವ — ರ್ತರನು- ಮಾಡುವ |
ಕೃಪಣ-ವತ್ಸಲ– ಸ್ವಪದ-ಸೌಖ್ಯವ– ನಿತ್ತು- ಶರಣರಿ-ಗೆ ||೨೪-೫೨||

೮೧. ತಾರ-ತಮ್ಯಾ — ರೋಹ-ಣವ ಬರೆ- |
ದಾರು- ಪಠಿಸುವ — ರವರ- ಲಕ್ಷ್ಮೀ- |
ನಾರ-ಸಿಂಹ ಸ –ಮಸ್ತ- ದೇವಗ –ಣಾಂತ-ರಾತ್ಮಕ-ನು ||
ಪೂರ-ಯಿಸುವ ಮ — ನೋರ-ಥಂಗಳ |
ಕಾರು-ಣಿಕ ಕೈ — ವಲ್ಯ-ದಾಯಕ |
ದೂರ-ಗೈವ ಸ –ಮಸ್ತ- ದುರಿತವ– ವಿಗತ-ಭಯಶೋ-ಕ || ೨೫-೧೬ ||

೮೨. ಗಾಳಿ- ನಡೆವಂ — ದದಲಿ- ನೀಲಘ- |
ನಾಳಿ- ವರ್ತಿಸು — ವಂತೆ- ಬ್ರಹ್ಮ ತ್ರಿ- |
ಶೂಲ-ಧರ ಶ — ಕ್ರಾರ್ಕ- ಮೊದಲಾ — ದಖಿಳ- ದೇವಗ-ಣ ||
ಕಾಲ-ಕರ್ಮ ಗು — ಣಾಭಿ-ಮಾನಿ ಮ- |
ಹಾಲ-ಕುಮಿಯನು — ಸರಿಸಿ- ನಡೆವರು |
ಮೂಲ-ಕಾರಣ — ಮುಕ್ತಿ-ದಾಯಕ — ಹರಿಯೆ- ನಿಸಿಕೊಂ-ಬ || ೩೧-೧೦ ||

೮೩. ನಾಲಿ-ಗಿಂದಲಿ — ಸ್ವೀಕ-ರಿಪ ರಸ |
ಪಾಲು- ಮೊದಲಾ — ದುದರೊ-ಳಗೆ ಘೃತ |
ತೈಲ- ಪಕ್ವ ಪ — ದಾರ್ಥ-ದೊಳಗಿಹ — ಚಂದ್ರ-ನಂದನ-ನ ||
ಪಾಲಿ-ಸುವಧೋ — ಕ್ಷಜನ- ಚಿಂತಿಸು |
ಸ್ಥೂಲ- ಕೂಷ್ಮಾಂ — ಡತಿಲ-ಮಾಷಜ |
ಈ ಲ-ಲಿತ ಭ — ಕ್ಷ್ಯದೊಳು-ದಕ್ಷನು — ಲಕ್ಷ್ಮಿ- ನರಸಿಂ-ಹ ||೩೧-೧೯||

೮೪. ಮನುವು- ಮಾಷ ಸು — ಭಕ್ಷ್ಯ-ದೊಳು ಚಿಂ- |
ತನೆಯ- ಮಾಡ — ಚ್ಯುತನ- ನಿಋತಿ- |
ಮನೆಯೆ-ನಿಪ ಲವ — ಣದೊಳು- ಮರೆಯದೆ — ಶ್ರೀಜ-ನಾರ್ದನ-ನ ||
ನೆನೆಯು-ತಿರು ಫಲ — ರಸಗ-ಳೊಳು ಪ್ರಾ- |
ಣನ ಉ-ಪೆಂದ್ರನ — ವೀಳ್ಯ-ದೆಲೆಯೊಳು |
ದ್ಯುನದಿ-ಹರಿರೂ — ಪವನೆ-ಕೊಂಡಾ — ಡುತಲೆ- ಸುಖಿಸುತಿ-ರು ||೩೧-೨೦||

೮೫. ಶ್ರೀರ-ಮಣ ಸ — ರ್ವೇಶ- ಸರ್ವಗ |
ಸಾರ-ಭೋಕ್ತ ಸ್ವ — ತಂತ್ರ- ದೋಷ ವಿ- |
ದೂರ- ಜ್ಞಾನಾ — ನಂದ- ಬಲ ಐ — ಶ್ವರ್ಯ- ಗುಣಪೂ-ರ್ಣ ||
ಮೂರು- ಗುಣವ — ರ್ಜಿತ ಸ-ಗುಣ ಸಾ- |
ಕಾರ- ವಿಶ್ವ — ಸ್ಥಿತಿ ಲ-ಯೋದಯ- |
ಕಾರ- ಣ ಕೃಪಾ– ಸಾಂದ್ರ-ನರಹರೆ– ಸಲಹೊ- ಸಜ್ಜನ-ರ ||೩೨-೧||

೮೬. ಜಯ ಜ-ಯತು ತ್ರಿಜ — ಗದ್ವಿ-ಲಕ್ಷಣ |
ಜಯ ಜ-ಯತು ಜಗ — ದೇಕ- ಕಾರಣ |
ಜಯ ಜ-ಯತು ಜಾ — ನಕಿರ-ಮಣ ನಿ — ರ್ಗತ ಜ-ರಾಮರ-ಣ ||
ಜಯ ಜ-ಯತು ಜಾ — ಹ್ನವಿ ಜ-ನಕ ಜಯ- |
ಜಯತು- ದೈತ್ಯ ಕು — ಲಾಂತಕ- ಭವಾ- |
ಮಯಹ-ರ ಜಗ– ನ್ನಾಥ-ವಿಠ್ಠಲ — ಪಾಹಿ- ಮಾಂ ಸತ-ತ ||೩೨-೫೬||


harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

shreera-maNi kara — kamala- poojita |
caaru- caraNa sa — rOja- brahma sa- |
meera- vaaNi pha — NeeMdra- veeMdra bha — vEMdra- mukha vinu-ta ||
neera-ja bhavaaM — DOda-ya sthiti |
kaara-Nane kai — valya-daayaka |
naara-siMhane — namipe-karuNipu — demage-maMgaLa-va || 1-1 ||

malagi- paramaa — daradi- paaDalu |
kuLitu- kELuva — kuLitu- paaDalu |
niluva- niMtare — naliva- nalidare — olive- nimageM-ba ||
sulabha-nO hari — tanna-vara nara- |
ghaLige- biTTaga — lanu ra-maadhava- |
nolisa-lariyade — paama-raru baLa — luvaru- bhavadoLa-ge || 2-5 ||

parama- satpuru — Shaartha- roopanu |
hariyu- lOkake — eMdu- paramaa- |
daradi- sadupaa — saneya- gaivari — gitta-panu ta-nna ||
maredu- dharmaa — rthagaLa- kaamisu- |
varige- nagutati — sheeghra-diMdali |
surapa- tanaya su — yOdha-narigi — ttaMte- koDuti-ppa || 2-7 ||

Enu- karuNaa — nidhiyo- hari ma- |
ttEnu- bhaktaa — dheena-nO i- |
nnEnu- eetana — leele- icChaa — maatra-dali jaga-va ||
taane- sRujisuva — paali-suva ni- |
rvaaNa- modalaa — dakhila- lOka- |
sthaana-dali ma — ttavara-niTTaa — naMda- baDisuva-nu || 2-16 ||

oDala- neLalaM — dadali- hari na- |
mmoDane- tiruguva — noMda-rekShaNa |
biDade- beMbala — vaagi- bhaktaa — dheena-neMdeni-si ||
taDeva- duritou — ghagaLa- kaamada |
koDuva- sakalE — ShTagaLa- saMtata |
naDeva- nammaM — dadali- nava suvi — shESha- sanmahi-ma || 2-25 ||

koTTu-danu kai — koMba-rakShaNa |
biTTa-gala ta — nnavara- duritaga- |
LaTTu-vanu doo — radali- duritaa — raNya- paavaka-nu ||
beTTa- bennili — horisi-davaroLu |
siTTu- maaDida — nEno- hari kaM- |
geTTa-surarige — sudheya-nuNisida — murida- nahitara-nu || 2-28 ||

meena- koorma va — raaha- nara paM- |
caana-naatuLa — shourya- vaamana |
rENu-kaatmaja — raava-Naadi ni — shaaca-ra dhwaM-si ||
dhEnu-kaasura — mathana- tripurava |
haani-gaisida — nipuNa- kalimukha- |
daana-vara saM — harisi-dharmadi — kaayda- sujanara-nu || 2-30 ||

vanaja- jaaMDado — LuLLa-khila cE- |
tanaru- bhuMjipa — catura-vidha bhO- |
jana pa-daarthadi — catura- vidha rasa — roopa- taanaa-gi ||
manake- baMdada — nuMDu-Nisi saM- |
hanana- kupacaya — karaNa- kaanaM- |
da nimi- Shari gaa — tma pra-darshana– sukhava- neeva ha-ri ||4-1||

kapila- narahari — bhaargava traya |
vapuSha- nEtradi — naasi-kaasyadi |
shaphara- naamaka — jihwe-yali daM — tadali-haMsaa-khya ||
tripadi- paadya ha — yaasya- vaacya do -|
Lapari-mita sukha — poorNa- saMtata |
kRupaNa-roLagi — ddavara-vara rasa — sweeka- risi koDu-va || 4-7 ||

nirupa-maanaM — daatma-hari saM- |
karuSha-Na pra — dyumna- roopadi |
iruti-hanu bhO — ktRugaLo-Lage ta — cCakti-danu eni-si ||
karesu-vanu naa — raaya-Naniru- |
ddheraDu- naamadi — bhOjya- vastuga |
niruta- tarpaka — naagi- tRuptiya — neeva- cEtana-ke || 4-8 ||

jeeva- kRuta ka — rmagaLa- biDade ra- |
maava-ranu swee — karisi- phalagaLa- |
neeva-nadhikaa — raanu- saarada — lavari-ganavara-ta ||
paava-kanu sa — rvaswa- bhuMjisi |
taa vi-kaarava — naida-nommegu |
paava-nake paa — vanane- nipa hari — uMbu-dEnari-du || 4-26 ||

inasha-shaaMkaa — digaLu- lakShmI- |
vanite-yarasana — dwaara-paalaka – |
renisu-tipparu — manada- vRuttiga — LE pa-daatiga-Lu ||
anubha-vipa viSha — yaMga-LE pa- |
TTaNake- bappa pa — saara-gaLu jee- |
vane su-vartaka –kappa-gaLa kai — koMba- hari taa-nu || 5-21 ||

biMba-reniparu — swOtta-maru prati- |
biMba-reniparu — swaawa-raru prati- |
biMba- biMbaga — LoLage- kEvala — biMba- hariyeM-du ||
saMbhra-madi paa — Dutali- nODuta |
uMbu-DuvudiDu — vudu ko-Duvude- |
llaMbu-jaaMbaka — naMghri-poojega — LeMdu- nalidaa-Du || 5-35 ||

dharaNi-yeMbude — agni- saMva- |
tsarave- samidhe vi — haaya-save poge |
iruLu-ri dishaaM — gaara-vaaMtara — digva-laya kiDi-yu ||
varuSha-veMbaa — hutiga-LiMdali |
hariya- meccisi — sakala-roLaga |
dhwariya-naagiru — sarva- roopaa — tmakana- ciMtisu-ta || 6-4 ||

manado-Liha gO — viMda- maadhava |
dhanapa-sakha ta — twadoLu- naaraa- |
yaNa ma-hatta — twadoLu- avya — ktadoLu- kEshava-nu ||
initu- roopava — dEha-doLu ciM- |
taneya- gaiva ma — haatma-riLeyoLu |
manuja- ravara — llamara-rE sari — hari kRu-paabala-di || 6-19 ||

nelado-Lippanu — kRuShNa-roopadi |
jalado-Lippanu — hariye-nisi shikhi- |
yoLage- ippanu –parashu-raama u –pEMdra-neMdeni-si ||
yalaro-Lippaja — naarda-nanu baaM- |
daLado-Lachyuta — gaMdha- narahari |
poLeva-dhOkShaja — rasaga- LoLu rasa — roopa-taanaa-gi || 6-20 ||

moola- roopanu — manado-Liha shrava- |
Naali-yoLagiha — matsya- koormanu |
kOla-roopanu — twagra-sanadoLa — gippa- narasiM-ha ||
baala-vaTu vaa — mananu- naasika- |
naaLa-doLu vada — nadali- bhaargava |
vaali-bhaMjana — hasta-dali paa — dadali- shreekRu-ShNa || 6-34 ||

praNava- pratipaa — dya tri-naamadi |
tanuvi-noLu tri — sthaana-ganiru- |
ddhanu -tri-paMcaka — Eka-viMshati — catura-viMshati-ga ||
enisi- eppa — tteraDu-saavira |
initu- naaDiga — LoLu ni-yaamisu- |
tinaga- bhastiga — lOka-doLu sa — rvatra- beLaguva-nu || 7-2 ||

matte- ciddE — hada o-Lage eM- |
bhattu- saavira– dELu- noori- |
ppattu-aidu nRu–siMha-roopada –liddu-jeevari-ge ||
nitya-dali haga — liruLu- bappapa- |
mRutyu-vige taa — mRutyu-venisuva |
bhRutya-vatsala — bhaya vi-naashana — bhaagya-saMpa-nna ||7-15||

jwarano-Lippa — ttELu- haranoLa- |
giruva-nippa — tteMTu- roopadi |
eraDu- saavira — deMTu-noori — ppatta- rELadhi-ka ||
jwara- ha-raahwaya — naara-siMhana |
smaraNe- maatradi — durita- raashiga- |
Lirade- pOpavu — taraNi- biMbava — kaMDa- himadaM-te || 7-16 ||

maasa- pariyaM — taravu- biDade nRu- |
kEsa-riya shubha — naama- maMtra ji- |
taasa-nadalE–kaagra-cittadi –niShka-paTadiM-da ||
bEsa-rade japi — salu vRu-janagaLa- |
naasha-gaisi ma — nOra-thagaLa pa- |
rEsha-poortiya — maaDi-koDuvanu– kaDege- paragati-ya || 7-17 ||

nooru- varuShake — divasa- moova- |
ttaaru- saavira — vahavu- naaDi sha- |
reera-doLagini–tihavu-strI puM–bhEda-dali hari-ya ||
eera-dhika e — ppattu- saavira |
mooru-tigaLanu — nenedu- sarvaa- |
dhaara-kana sa — rvatra- poojisu — poorNa- neMdari-du || 7-19 ||

aava- dEhava — koDali- hari ma- |
ttaava- lOkado — LiDali- taa ma- |
ttaava- dEshado –Lirali-aavaa–vasthe-gaLu bara-li ||
ee- vi-dhadi jaDa — cEta-nadoLu pa- |
raava-rEshana — roopa-guNagaLa – |
bhaavi-suta su — j~jaana- bhakutiya — bEDu-koMDaa-Du || 7-22 ||

vaari-ja bhavaaM — DadoLu- lakShmI- |
naara-siMhana — roopa- guNagaLu |
vaari-dhiyoLiha — terega-LaMdadi — saMda-Nisi iha-vu ||
kaara-NaaMshaa — vEsha- vyaaptava- |
taara- kaaryaa — vyakta- vyaktavu |
eera-yidu vI — bhooti- aMta –ryaami- roopaga-Lu || 7-27 ||

maNiga-LoLagiha — sootra-daMdadi |
praNava- paadyanu — cEta-naa cE- |
tana- ja-gattino — Lanudi-nadi aa — Duvanu- sukhapoo-rNa ||
daNuvi-keyu iva-gilla- bahu kaa- |
ruNika-naMtaa — naMta- jeevara |
gaNado-Lage E — kaaMsha- roopadi — niMtu- nEmisu-va || 7-28 ||

aadi-tEyaru — tiLiya-diha guNa |
vEda-maaniga — LeMde-nipa vaa- |
Nyaadi-gaLu ba — llarava-rariyada — guNaga-NaMgaLa-nu ||
vEdha- ballanu — bomma-nariyada- |
gaadha- guNagaLa — lakumi- ballaLu |
shreedha-robbanu — paasya- sadguNa — poorNa- hariyeM-du ||7-30||

jyOti-yoLagi — ppanu ka-pila puru- |
hoota- mukha di — kpatiga-LiMda sa- |
mEta-naagI — dakShi-NaakShiya — mukhado-Liha vi-shwa ||
shwEta-varNa ca — turbhu-janu saM- |
preeti-yiMdali — sthoola- viShayava |
cEta-nariguM — DuNipa-jaagrate — yittu-nRuga jaa-sya || 8-11 ||

rOma-gaLali va — saMta- trikaku- |
ddhaama- mukhadoLa — gagni- bhaargava |
taama-rasa bhava — vaasu-dEvaru — masta-kadoLiha-ru ||
Ima-nadoLiha — viShNu- shikhadoLu- |
maama-hEshwara — naara-siMha |
swaami-tannanu — dinadi-nenevara — mRutyu-parihari – pa || 8-16 ||

eraDa-dhika e — ppatte-nipa saa- |
virada- naaDige — mukhya- EkO- |
ttarasha-tagaLa –llihavu- nooraa –voMdu- moortiga-Lu ||
aritu- dEhadi — kalasha- naamaka – |
harige- kaLegaLi — veMdu- nairaM- |
taradi-poojisu — tiharu-paramaa — daradi-bhoosura-ru || 8-18 ||

tanuve- ratha vaa — gaabhi-maaniye |
guNave-nisuvaLu — shrOtra-doLu rO- |
hiNi sha-shaaMkaru — paasha- paaNiga — Lashwa-veMdeni-si ||
inanu- saMj~jaa — dEvi-yaru iha- |
ranala- lOcana — soota-nenisuva |
praNava- paadya — praaNa- naamaka — rathika- nenisuva-nu || 8-29 ||

vitta- dEhaa — gaara- daaraa- |
patya- mitraa — digaLo-Lage hari |
pratya-gaatmanu — eMde-nisi nele — sippa-neMdari-du ||
nitya-dali saM — tRupti- baDisuta |
utta-maadhama — madhya-mara kRuta- |
kRutya-naagu — nmatta-naagade — bhRutya- naaneM-du || 8-31 ||

hariye- paMcaa — shadwa-raNa su- |
swara u-daattanu — daatta- pracaya |
swarita- saMdhi vi — sarga- biMduga — LoLage- tadwaa-cya ||
iruva- tatta — nnaama- roopaga- |
Laritu-paasane — gaiva-riLeyoLu |
surare-sari nara — ralla-avaraa — Duvade- vEdaa-rtha || 9-1 ||

vaasa-vaanuja — rENu-kaatmaja |
daasha-rathi vRuji — naarda-namala ja- |
laasha-yaalaya — hayava-dana shree — kapila- narasiM-ha ||
eesu- roopada — lavara-vara saM- |
tOSha-baDisuta — nitya- sukhamaya |
vaasa-vaagiha — hRutka-maladoLu — biMba-neMdeni-si || 9-21 ||

naara-siMha swa — roopa-doLage sha- |
reera- naamadi — karesu-vanu hadi- |
naaru- kaLegaLu — uLLa- liMgadi — puruSha- naamaka-nu ||
tOru-vanu ani — ruddha-doLu shaaM- |
teera-maNa ani — ruddha- roopadi |
prEri-suva pra — dyumna- sthoola ka — LEva-radoLi-ddu || 9-26 ||

aava- parabo — mmanati- vimalaaM- |
gaava- baddharu — eMde-nipa raa- |
jeeva- bhava moda — laada-mararanu — dinadi- haripada-va ||
sEvi-pariganu — koola-rallade |
taavu- ivarana — keDisa-ballare |
shreevi-laasaa — spadana- daasari — guMTe- apajaya-vu || 10-1 ||

kaliye- modalaa — dakhila- daanava |
roLage- brahma bha — vaadi-dEva- |
rkaLu ni-yaamaka — raagi- hariyaa — jjeyali- avarava-ra ||
kaluSha- karmava — maaDi- maaDisi |
jalaru-hEkShaNa — garpi-suta ni- |
shcala su-bhakti — j
jaana- poorNaru– sukhipa- ravaroLa-ge ||10-9||

soosi-baha nadi — yoLage- tanna sa- |
haasa- tOruve — neMdu- jalakidi- |
rIsi-dare kai — sOtu- muLuguva — hariya- biTTava-nu ||
klEsha-vaiduva — naadi-yali sa- |
rvEsha- klRuptiya — maaDi-duda bi- |
TTaashe-yiMdali — anya- raaraa — dhisuva- maanava-nu || 10-12 ||

dhaatri-yoLagu — LLakhila- teertha- |
kShEtra- carisida — rEnu- paatraa- |
paatra-varita — nnaadi- daanava — maaDi- phalavE-nu ||
gaatra- nirmala — naagi- maMtra- |
stOtra- paThisida — rEnu- hari sa- |
rvatra- gataneM — dariya-dale taa — kartRu- yeMbuva-nu ||10-14||

aswa-taMtranu — jeeva- hari sa |
rva swa-taMtranu — nitya- sukhamaya |
niHswa-baddhaa — lpaj~ja- shakta sa — duHkha- nirvi-NNa ||
hraswa-dEhi sa — naatha- jeevanu |
vishwa-vyaapaka — kartRu- brahma sa |
raswa-teeshaa — dyamara-nuta hari– yeMdu- koMDaa-Du || 11-3 ||

prEra-ka prE — ryaroLu- prErya- |
prEra-kanu taa — naagi- hari ni- |
rvaira-diMda pra — varti-suva ta — nnaama- roopada-li ||
tOri-koLLade — sarva-roLu bhaa- |
geera-thI jana — kanu sa-kala vyaa- |
paara-gaLa taa — maaDi-maaDisi– nODi- naguti-ppa || 11-13 ||

hariye- mukhya ni — yaama-kanu eM- |
daridu- puNyaa — puNya- harShaa- |
maruSha- laabhaa –laabha- sukha duH –khaadi- dwaMdwaga-La ||
niruta- avanaM — Grige sa-marpisi |
naraka- bhoo swa — rgaapa- vargadi |
karaNa- nIyaa — makana-sarva– tradali-nenevuti-ru || 11-14 ||

bhOgya- vastuga — LoLage- yOgyaa- |
yOgya- rasagaLa — naritu- yOgyaa- |
yOgya-rali nele — sippa- harige sa — marpi-sanudina-di ||
bhaagya- baDatana — baralu- higgade |
kuggi- soragade — sadbha-kuti vai- |
raagya-gaLa nE — maaDu nee ni– rbhaagya- nenisada-le || 11-23 ||

ee ta-nuvinoLa — gihavu- Ota- |
prOta- roopadi — naaDi-gaLu puru- |
hoota- mukhara — lliharu- tammiM — dadhika- roDagoo-Di ||
bheeti-goLisuta — daana-vara saM- |
ghaata- naamaka — hariya- guNa saM- |
preeti-yali sadu — paasa-nava gai — vutale- mOdipa-ru ||12-16||

bhOgya- bhOktRuga — LoLage- hari taa- |
bhOgya- bhOktanu — enisi- yOgyaa- |
yOgya- rasagaLa — dEva- daanava — gaNake- uNisuva-nu ||
bhaagya-nidhi bha — ktarige- sadwai- |
raagya- bhakti — j~jaana-veevaa- |
yOgya-rige dwE — Shaadi-gaLa ta — nnalli- koDuti-ppa || 12-22 ||

maasa-voMdake — prati di-vasadali |
shwaasa-gaLu aha — vaShTa- catwaa- |
riMsha-ti saha — sraadhi-kaaru su — lakSha- saMkhyeya-li ||
haMsa- naamaka — hariya- ShODasha |
ee sha-taabdadi — bhajise- oliva da- |
yaa sa-mudra ku — cEla-golidaM — dadali- dinadina-di ||12-42||

halavu- bageyali — hariya- manadoLa |
golisi- nillisi — Enu- maaDuva |
kelasa-gaLu ava — naMghri- poojega — LeMdu- neneyuti-ru ||
haladha-raanuja — taane- sarva- |
sthaLaga-Lali nele — siddu- nishcaM- |
cala bha-kuti su — j~jaana-bhaagyava — koTTu- saMtai-pa || 12-28 ||

saritu- pravahaga — Lalli- divyaaM- |
baradi- patraa — diyali- harShaa- |
marSha- vismRuti — yiMda-laagali — omme- baaydere-du ||
hari ha-rI hari — yeMba- eraDa- |
kShara nu-Dida maa — tradali- durita ga- |
Lirade- pOpavu — toola-raashiyo — Lanala- pokkaM-te || 13-2 ||

ee na-LinajaaM — DadoLu- sarva- |
praaNi-gaLoLi — ddanava-rata vi- |
j~jaana-maya vyaa –paara-gaLa maa –Duvanu- tiLisada-le ||
Enu- kaaNade — sakala- karmaga- |
Laane- maaDuve — neMba- naranu ku- |
yOni-yaiduva — kartRu-hari eM — davane- muktana-ha ||13-14||

kalima-laapaha — Lenisu-tiha baaM- |
boLeyo-Lage saM — carisi- badukuva |
jalaca-ra praa — NigaLu- ballave — teertha- mahimeya-nu ||
halavu- bageyali — hariya- karuNaa- |
baladi- ballida — raada- brahmaa- |
nila vi-pESaa — dyamara-rariyara — naMta- namala gu-Na ||13-15||

aa ni-mitta ni — raMta-ra swaa- |
dheena- kartRu — twavanu- maredE- |
nEnu- maaDuvu — della- hari oLa — horage- nelesi-ddu ||
taane- maaDuva — neMda-ridu ma- |
ddaane-yaMdadi — saMca-risu pava- |
maana- vaMdita — oMda-rekShaNa — biTTa-gala ni-nna || 13-20 ||

halavu- karmava — maaDi- dEhava |
baLali-sade dina — dinadi- hRudayaa- |
malasa-danadi vi — raaji-suva hari — moorti-yane bhaji-su ||
tiLiya-dee poo — jaa pra-karaNava |
phala su-puShpaa — gryOda-ka shree- |
tuLasigaLana — rpisalu-oppanu — vaasu- dEva sa-daa || 13-21 ||

apari-mita sa — nmahima- narahari |
vipina-doLu saM — taisu-vanu kaa- |
shyapiya-naLedava — sthaLaga-Lali sa — rvatra- kEshava-nu ||
khapati- gaganadi — jalaga-Lali maha- |
shaphara- naamaka — bhakta-ranu ni- |
ShkapaTa-diMdali — salahu-vanu karu– NaaLu- dinadina-di ||13-26||

jaya ja-ya jayaa — kaaMta- dattaa- |
traya ka-pila mahi — daasa- bhakta- |
priya pu-raatana — puruSha-poorNaa –naMda- j~jaana gha-na ||
hayava-dana hari — haMsa- lOka- |
traya vi-lakShaNa — nikhiLa- jagadaa- |
shraya ni-raamaya — dayadi-saMtai– seMdu- praarthipu-du ||14-8||

mooru- yugadali — moola- roopanu |
sooru-gaLa saM — taisi- ditiya ku- |
maara-kara saM — harisi- dharmava — nuLuha-bEkeM-du ||
kaaru-Nika bhoo — miyoLu- nijapari- |
vaara- sahitava — tarisi- bahuvidha |
tOri-danu nara– vatpra-vRuttiya– sakala- cEtana-ke || 14-19 ||

eraDu- vidhadali — lOka-doLu jee- |
varuga-Lipparu — saMta-ta kSharaa- |
kShara vi-liMga sa — liMga- sRujyaa — sRujya- bhEdada-li ||
karesu-vudu jaDa — prakRuti- praNavaa- |
kShara ma-hAdaNu — kaala- naamadi |
hari sa-hita bhE — dagaLa-paMcaka — smarisu- sarva -tra || 14-23 ||

naLina- mitrage — iMdra-dhanu prati- |
phalisu-vaMte ja — gatra-yavu kaM- |
goLipa-danupaa — dhiyali- pratibiM — baahwa-yadi hari-ge ||
tiLiye- trikakud — dhaama-nati maM- |
gaLa su-roopava — sarva- Thaavili |
poLeva-hRudayake– prati di-vasa pra– hlaada- pOShaka-nu ||14-27||

vaari-nidhiyoLa — gakhila- nadigaLu |
bEre- bEre ni — raMta-radali vi- |
haara- gaiyyuta — parama- mOdada — lippa- teradaM-te ||
mooru- guNagaLa — maani- enisuva |
shreera-maa roo — pagaLu- hariyali |
tOru-tippavu — sarva-kaaladi — samara- hitaveni-si || 14-29 ||

deepa- karadali — piDidu- kaaNade |
koopa-doLu bi — ddaMte- vEda ma- |
hOpa-niShada –rthagaLa-nityadi–pELu-vavare-lla ||
shreepa-vanamukha — vinuta-namala su- |
roopa-gaLa vyaa — paara- tiLiyade |
paapa- puNyake — jeeva-kartRu a — kartRu- hariyeM-ba || 15-12 ||

paada-venipavu — vaa~gma-nOmaya- |
paada-roopa — dwayaga-LoLu pra- |
hlaada- pOShaka — saMka-ruShaNaa –hwayadi- nelesi-ddu ||
vEda- shaastra pu — raaNa-gaLa saM- |
vaada- roopadi — manana-gaivuta |
mOda-maya sukha — vittu-salahuva — sarva-sajjana-ra ||15-14||

udadhi-yoLagoo — rmigaLu- tOrpaM- |
dadali- haMsO — dgeetha- hari haya- |
vadana- kRuShNaa –dyamita-navataa –ragaLu- nityada-li ||
paduma-naabhano — Liruti-havu sa- |
rvada sa-masta — praaNi-gaLa ci- |
d~hRudaya-gata roo– paMga-Lavyava– dhaana-dali biDa-de||15-23||

sharadhi-yoLu maka — raadi- jeevaru |
iruLu- hagalE — ka pra-kaaradi |
carisu-tanumO –disuta-lippaM –dadi ja-gatraya-vu ||
iruti-havu jaga — deesha-nudaradi |
karesu-vudu prati — biMba- naamadi |
dharisi-hudu hari — naama-roopaM — gaLanu- anavara-ta || 15-24 ||

kaaru-Nika hari — tanno-Lippaa |
paara- swaataM — triya gu-Nadi naa |
nooru- tegedu sa –paada-aaroM –dadhika – arava- ttu ||
naari-gitta dwi — ShODa-shaadhika |
nooru- paada — trayava- tanna sha- |
reera-doLagee — pari vi-bhaagava — maaDda- tripadaa- hwa || 16-1 ||

eraDu- deekShega — Lihavu- baahyaaM- |
tarave-nipa naa — madali- budhariM- |
daritu- deekShita — naagu- deergha — dwESha-gaLa bi-TTu ||
hariye- sarvO — ttama kSha-raakShara- |
puruSha- poojita — paada- janmaa- |
dyara vi-doora su — khaatma-sarvaga — neMdu- smarisuti-ru ||16-18||

deepa- divadali — kaMDa-raadaDe |
lOpa- gaisuva — raakSha-Na hari sa- |
meepa- dallire — naMda- naama su- naMda- venisuva-vu ||
oupa- caarika — valla- sujanara | paapa- karmavu — puNya-venipavu |
paapi-gaLa sa– tpuNya- karmavu — paapa-venisuva-vu || 16-27 ||

aala-yagaLoLa — gippa- deepa- |
jwaale- vartiga — Lanusa-risi jana- |
raali-goppuva — teradi- hari taa — tOrpa- sarva-tra ||
kaala- kaaladi — shreedha-raa du- |
rgaa la-laneyara — kooDi- sukhamaya |
leele-gaiyalu — triguNa- kaaryaga — Lahavu- jeevari-ge || 17-7 ||

mOda- shira da — kShiNa su-pakSha pra- |
mOda- uttara — pakSha-veMdu Ru- |
gaadi- shrutigaLu –pELu-vavu aa –naMda-maya hari-ge ||
mOda- vaiShika — sukha vi-ShEsha pra- |
mOda- paara — trika su-khaprada- |
naada-kaaraNa — diMda-mOda pra — mOda- nenisida-nu || 18-25 ||

dyumaNi- kiraNava — kaMDa- maatra-di |
timira-vODuva — teradi- lakShmI- |
ramaNa- nODida — maatra-diMdagha — naasha-vaiduvu-du ||
kamala- saMbhava — mukhya- rellaa |
sumana-saroLiha — paapa- raashiya |
amara- mukhanaM– dadali-bhasmava– maaLpa-hari taa-nu ||18-28||

pELa-loshava — llada ma-haa paa- |
paaLi-gaLanoM — dE kSha-Nadi ni- |
rmoola-gaisali–bEku- eMbava–goMde-harinaa-ma ||
naali-geyoLu — LLavage- parama kRu- |
paaLu- kRuShNanu — kaivi-Didu ta- |
nnaala-yadoLi — TTanudi-nadalaa — naMda- baDisuva-n ||18-39||

si-ri viriM — ceera- bhaarati |
garuDa- phaNipati — ShaNma-hiShiyaru |
girija- naakE — sha sma-ra praa — Naani-ruddha sha-cee ||
guru ra-tee manu — dakSha- pravahaa- |
maruta- maanavi — yama sha-shi divaa- |
kara va-ruNa naa– rada su-raasya pra– sooti- bhRugu muni-pa ||20-24||

matsya- kEtana — janaka- hari shree- |
vatsa-laaMChana — nija sha-raNa jana- |
vatsa-la varaa — rOha- vaikuM — Thaala-ya nivaa-si ||
citsu-kha prada — salahe-nalu gO- |
vatsa- dhwanigoda — guva te-radi para- |
mOtsa-hadi baM– dodagu-vanu ni– rmatsa- rara baLi-ge ||21-28||

shakta-renisuva — rilla- hari vyati- |
rikta- suragaNa — doLage- sarvO- |
drikta-nenisuva — sarva-riMdali — sarva-kaalada-li ||
bhakti-poorvaka — vaagi- anyapra- |
sakti-gaLanee — DyaaDi- paramaa- |
sakta-naagiru– harika-thaamRuta– paana-viShayada-li || 21-31 ||

shree la-kumiva — llabhage- sama karu- |
NaaLu-gaLa naa — kaaNe-nelli ku- |
cEla-navalige — mecci- koTTanu — sakala- saMpada-va ||
kELi-daakShaNa — vastra-gaLa paaM- |
caali-gittanu — daitya-nudarava |
seeLi- saMtai — sidanu- prahlaa — dana kRu- paasaaM-dra || 22-1 ||

biTTi-gaLa neva — diMda-Daagali |
poTTe-gOsuga — vaada-Daagali |
keTTa-rOga pra — yukta-vaagali — aNaka-diMdo-mme ||
niTTu-siriniM — baayde-redu hari |
viThTha-laa sala — heMde-nalu kai- |
goTTu-kaava kRu — paaLu-saMtata — tanna- bhakutara-nu || 22-14 ||

Jalla-Diya neLa — laMte- tOrpudu |
ella- kaaladi — bhavada- soukhyavu |
elli- pokkaru — biDade- beMba — ttihudu- jeevari-ge- ||
olle-neMdare — biDadu- hari ni- |
rmaalya- naivE — dyavanu- bhuMjisi |
balla-vara koo — DaaDu- bhavaduH — khagaLa-neeDaa-Du || 22-28 ||

meena- koorma — krODa- narahari |
maaNa-vaka bhRugu — raama- dasharatha |
soonu- yaadava — buddha- kalkI — kapila- vaikuM-Tha ||
shreeni-vaasa — vyaasa- RuShabha ha- |
yaana-naa naa — raaya-NI haM- |
saani-ruddha tri — vikra-ma shree — dhara hRu-ShIkE-sha || 23-1 ||

hariyu- naaraa — yaNanu- kRuShNaa- |
suraku-laaMtaka — soorya- saprabha |
karesu-vanu ni — rduShTa- sukha pari –poorNa- taaneM-du ||
saruva- dEvO — ttamanu- sarvaga |
parama- puruSha pu — raata-na jaraa- |
maraNa-varjita — vaasu-dEvaa — dyamita- roopaa-tmaa || 23-2 ||

ee na-Lina bhava — janani- lakShmI- |
j~jaana- bala bha — ktyaadi- guNa saM |
poorNa-LenipaLu –sarva-kaaladi –hari kRu-paabala-di ||
heena-LenipaLa — naMta- guNadi pu- |
raaNa- puruShage — prakRuti-ginnu sa- |
maana-renisuva– rilla-muktaa– mukta-suraroLa-ge || 23-3 ||

Eka-viMshati — mata pra-vartaka |
kaaku- maaygaLa — kuhaka- yukti ni- |
raaka-risi sa — rvOtta-manu hari — yeMdu- sthaapisi-da ||
shreeka-Latrana — sadana- dwijapa pi- |
naaki-sannuta — mahima- parama kRu- |
paaka-TaakShadi — nODu- madhwaa — caarya-guruva-rya || 24-1||

hattu- janmaga — Lalli- hari sa- |
rvOtta-ma suraa — sura ga-Naarcita |
citra-karma vi — shOka-naMtaa — naMta- roopaa-tma ||
satya-satsaM — kalpa- jagadu- |
tpatti- sthiti laya — kaara-Na jaraa- |
mRutyu- varjita — neMdu-paasane — gaida- taruvaa-ya || 24-6 ||

apaca-yagaLi — lluMDa-dadariM- |
dupaca-yagaLi — llamara-gaNadoLa- |
gupama-renisuva — rilla- janmaa — digaLu- modali-lla ||
apari-mita sa — nmahima- narahari |
apuna-raava — rtaranu- maaDuva |
kRupaNa-vatsala– swapada-soukhyava– nittu- sharaNari-ge ||24-52||

taara-tamyaa — rOha-Nava bare- |
daaru- paThisuva — ravara- lakShmI- |
naara-siMha sa –masta- dEvaga –NaaMta-raatmaka-nu ||
poora-yisuva ma — nOra-thaMgaLa |
kaaru-Nika kai — valya-daayaka |
doora-gaiva sa –masta- duritava– vigata-bhayashO-ka || 25-16 ||

gaaLi- naDevaM — dadali- neelagha- |
naaLi- vartisu — vaMte- brahma tri- |
shoola-dhara sha — kraarka- modalaa — dakhiLa- dEvaga-Na ||
kaala-karma gu — Naabhi-maani ma- |
haala-kumiyanu — sarisi- naDevaru |
moola-kaaraNa — mukti-daayaka — hariye- nisikoM-ba || 31-10 ||

naali-giMdali — sweeka-ripa rasa |
paalu- modalaa — dudaro-Lage ghRuta |
taila- pakwa pa — daartha-doLagiha — caMdra-naMdana-na ||
paali-suvadhO — kShajana- ciMtisu |
sthoola- kooShmaaM — Datila-maaShaja |
ee la-lita bha — kShyadoLu-dakShanu — lakShmi- narasiM-ha ||31-19||

manuvu- maaSha su — bhakShya-doLu ciM- |
taneya- maaDa — cyutana- niRuti- |
maneye-nipa lava — NadoLu- mareyade — shreeja-naardana-na ||
neneyu-tiru phala — rasaga-LoLu praa- |
Nana u-peMdrana — veeLya-deleyoLu |
dyunadi-hariroo — pavane-koMDaa — Dutale- sukhisuti-ru ||31-20||

shreera-maNa sa — rvEsha- sarvaga |
saara-bhOkta swa — taMtra- dOSha vi- |
doora- j~jaanaa — naMda- bala ai — shwarya- guNapoo-rNa ||
mooru- guNava — rjita sa-guNa saa- |
kaara- vishwa — sthiti la-yOdaya- |
kaara- Na kRupaa– saaMdra-narahare– salaho- sajjana-ra ||32-1||

jaya ja-yatu trija — gadwi-lakShaNa |
jaya ja-yatu jaga — dEka- kaaraNa |
jaya ja-yatu jaa — nakira-maNa ni — rgata ja-raamara-Na ||
jaya ja-yatu jaa — hnavi ja-naka jaya- |
jayatu- daitya ku — laaMtaka- bhavaa- |
mayaha-ra jaga– nnaatha-viThThala — paahi- maaM sata-ta ||32-56||

Leave a Reply

You might also like

error: Content is protected !!