24. Kalpa sadhana Sandhi – HKS

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Shri Kesava Rao Tadipatri

English Script

೨೪. ಶ್ರೀ ಕಲ್ಪಸಾಧನ ಸಂಧಿ
|| ( ಶ್ರೀ ಅಪರೋಕ್ಷ ತಾರತಮ್ಯ ಸಂಧಿ ) ||

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

ಏಕ-ವಿಂಶತಿ — ಮತ ಪ್ರ-ವರ್ತಕ |
ಕಾಕು- ಮಾಯ್ಗಳ — ಕುಹಕ- ಯುಕ್ತಿ ನಿ- |
ರಾಕ-ರಿಸಿ ಸ — ರ್ವೋತ್ತ-ಮನು ಹರಿ — ಯೆಂದು- ಸ್ಥಾಪಿಸಿ-ದ ||
ಶ್ರೀಕ-ಳತ್ರನ — ಸದನ- ದ್ವಿಜಪ ಪಿ- |
ನಾಕಿ-ಸನ್ನುತ — ಮಹಿಮ- ಪರಮ ಕೃ- |
ಪಾಕ-ಟಾಕ್ಷದಿ — ನೋಡು- ಮಧ್ವಾ — ಚಾರ್ಯ- ಗುರುವ-ರ್ಯ || ೨೪-೧ ||

ವೇಧ- ಮೊದಲಾ — ಗಿಪ್ಪ-ಮಲ ಮೋ- |
ಕ್ಷಾಧಿ-ಕಾರಿಗ — ಳಾದ- ಜೀವರ |
ಸಾಧ-ನಗಳಪ — ರೋಕ್ಷ- ನಂತರ — ಲಿಂಗ- ಭಂಗವ-ನು ||
ಸಾಧು-ಗಳು ಚಿ — ತ್ತಯಿಪು-ದೆನ್ನಪ- |
ರಾಧ-ಗಳ ನೋ — ಡದಲೆ- ಚಕ್ರ ಗ |
ದಾಧ-ರನು ಪೇ — ಳಿಸಿದ- ತೆರದಂ — ದದಲಿ- ಪೇಳುವೆ-ನು || ೨೪-೨ ||

ತೃಣ ಕೃ-ಮಿ ದ್ವಿಜ — ಪಶು ನ-ರೋತ್ತಮ |
ಜನಪ- ನರ ಗಂ — ಧರ್ವ- ಗಣರಿವ- |
ರೆನಿಪ-ರಂಶ ವಿ — ಹೀನ- ಕರ್ಮ ಸು — ಯೋಗಿ-ಗಳು ಎಂ-ದು ||
ತನು ಪ್ರ-ತೀಕದಿ — ಬಿಂಬ-ನನುಪಾ- |
ಸನವ- ಗೈಯುತ — ಲಿಂದ್ರಿ-ಯಜ ಕ- |
ರ್ಮನವ-ರತ ಹರಿ — ಗರ್ಪಿ-ಸುತ ನಿ — ರ್ಮಮರು- ಎನಿಸುವ-ರು || ೨೪-೩ ||

ಏಳು- ವಿಧ ಜೀ — ವ ಗಣ- ಬಹಳ ಸು- |
ರಾಳಿ- ಸಂಖ್ಯಾ — ನೇಮ-ವುಳ್ಳದು |
ತಾಳಿ- ನರದೇ — ಹವನು- ಬ್ರಾಹ್ಮಣ — ಕುಲದ-ಲವತರಿ-ಸಿ ||
ಸ್ಥೂಲ- ಕರ್ಮವ — ತೊರೆದು- ಗುರುಗಳು |
ಪೇಳಿ-ದರ್ಥವ — ತಿಳಿದು- ತತ್ತ- |
ತ್ಕಾಲ- ಧರ್ಮ ಸ — ಮರ್ಪಿ-ಸುತಿಹರು — ಕರ್ಮ-ಯೋಗಿಗ-ಳು || ೨೪-೪ ||

ಹೀನ- ಕರ್ಮಗ — ಳಿಂದ- ಬಹು ವಿಧ- |
ಯೋನಿ-ಯಲಿ ಸಂ — ಚರಿಸಿ- ಪ್ರಾಂತಕೆ |
ಮಾನು-ಷತ್ವವ — ನೈದಿ- ಸರ್ವೋ — ತ್ತಮನು- ಹರಿಯೆಂ-ಬ |
ಜ್ಞಾನ- ಭಕ್ತಿಗ — ಳಿಂದ- ವೇದೋ- |
ಕ್ತಾನು-ಸಾರ ಸ — ಹಸ್ರ- ಜನುಮಾ- |
ನ್ಯೂನ- ಕರ್ಮವ — ಮಾಡಿ- ಹರಿಗ — ರ್ಪಿಸಿದ- ನಂತರ-ದಿ || ೨೪-೫ ||

ಹತ್ತು- ಜನ್ಮಗ — ಳಲ್ಲಿ- ಹರಿ ಸ- |
ರ್ವೋತ್ತ-ಮ ಸುರಾ — ಸುರ ಗ-ಣಾರ್ಚಿತ |
ಚಿತ್ರ-ಕರ್ಮ ವಿ — ಶೋಕ-ನಂತಾ — ನಂತ- ರೂಪಾ-ತ್ಮ ||
ಸತ್ಯ-ಸತ್ಸಂ — ಕಲ್ಪ- ಜಗದು- |
ತ್ಪತ್ತಿ- ಸ್ಥಿತಿ ಲಯ — ಕಾರ-ಣ ಜರಾ- |
ಮೃತ್ಯು- ವರ್ಜಿತ — ನೆಂದು-ಪಾಸನೆ — ಗೈದ- ತರುವಾ-ಯ || ೨೪-೬ ||

ಮೂರು- ಜನ್ಮಗ — ಳಲ್ಲಿ- ದೇಹಾ |
ಗಾರ- ಪಶು ಧನ — ಪತ್ನಿ- ಮಿತ್ರ ಕು- |
ಮಾರ- ಮಾತಾ — ಪಿತೃಗ-ಳಲ್ಲಿಹ — ಸ್ನೇಹ-ಕಿಂತಧಿ-ಕ ||
ಮಾರ-ಮಣನಲಿ — ಬಿಡದೆ- ಮಾಡುವ |
ಸೂರಿ-ಗಳು ಈ — ಉಕ್ತ- ಜನುಮವ |
ಮೀರಿ- ಪರಮಾ — ತ್ಮನ ಸ್ವ-ದೇಹದಿ — ನೋಡಿ- ಸುಖಿಸುವ-ರು || ೨೪-೭ ||

ದೇವ-ಗಾಯಕ — ಜಾನ- ಚಿರಪಿತೃ- |
ದೇವ-ರೆಲ್ಲರು — ಜ್ಞಾನ-ಯೋಗಿಗ- |
ಳಾವ- ಕಾಲಕು — ಪುಷ್ಕ-ರ ಶನೈ — ಶ್ಚರ ಉ-ಷಾ ಸ್ವಾ-ಹಾ- |
ದೇವಿ- ಬುಧ ಸನ — ಕಾದಿ-ಗಳು ಮೇ- |
ಘಾವ-ಳೀ ಪ — ರ್ಜನ್ಯ-ಸಾಂಶರು |
ಈ ವು-ಭಯ ಗಣ — ದೊಳಗಿ-ವರು ವಿ — ಜ್ಞಾನ- ಯೋಗಿಗ-ಳು || ೨೪-೮ ||

ಭರತ- ಖಂಡದಿ — ನೂರು- ಜನುಮವ |
ಧರಿಸಿ- ನಿಷ್ಕಾ — ಮಕ ಸು-ಕರ್ಮಾ- |
ಚರಿಸಿ-ದಾನಂ — ತರದಿ- ದಶಸಾ — ಹಸ್ರ- ಜನ್ಮದ-ಲಿ ||
ಉರುತ-ರ ಜ್ಞಾ — ನವನು- ಪಡೆದೈ |
ದೆರಡು- ದಶ ದೇ — ಹದಲಿ- ಭಕುತಿಯ |
ನಿರವ-ಧಿಕನಲಿ — ಮಾಡಿ- ಕಾಂಬರು — ಬಿಂಬ-ರೂಪವ-ನು || ೨೪-೯ ||

ಸಾಧ-ನಾತ್ಪೂ — ರ್ವದಲಿ- ಇವರಿ ಗ- |
ನಾದಿ- ಕಾಲಪ — ರೋಕ್ಷ-ವಿಲ್ಲ ನಿ- |
ಷೇಧ- ಕರ್ಮಗ — ಳಿಲ್ಲ- ನರಕ — ಪ್ರಾಪ್ತಿ- ಮೊದಲಿ-ಲ್ಲ ||
ವೇದ- ಶಾಸ್ತ್ರಗ — ಳಲ್ಲಿ- ಇಪ್ಪ ವಿ- |
ರೋಧ- ವಾಕ್ಯವ — ಪರಿಹ-ರಿಸಿ ಮಧು |
ಸೂದ-ನನೆ ಸ — ರ್ವೋತ್ತ-ಮೋತ್ತಮ — ನೆಂದು- ಸುಖಿಸುವ-ರು || ೨೪-೧೦ ||

ಸತ್ಯ-ಲೋಕಾ — ಧಿಪನ- ಹಿಡಿದು ಶ- |
ತಸ್ಥ- ದೇವಗ — ಣಾಂತ- ಎಲ್ಲರು |
ಭಕ್ತಿ- ಯೋಗಿಗ — ಳೆಂದು- ಕರೆಸುವ — ರಾವ-ಕಾಲದ-ಲಿ ||
ಭಕ್ತಿ- ಯೋಗ್ಯರ — ಮಧ್ಯ-ದಲಿ ಸ- |
ದ್ಭಕ್ತಿ- ವಿಜ್ಞಾ — ನಾದಿ- ಗುಣದಿಂ- |
ದುತ್ತ-ಮೋತ್ತಮ — ಬ್ರಹ್ಮ-ವಾಯೂ — ವಾಣಿ- ವಾಗ್ದೇ-ವಿ || ೨೪-೧೧ ||

ಋಜುಗ-ಣಕೆ ಭ — ಕ್ತ್ಯಾದಿ- ಗುಣ ಸ- |
ಹಜವೆ-ನಿಸುವವು — ಕ್ರಮದಿ ವೃದ್ಧ್ಯಾ |
ಬ್ಜಜ ಪ-ದವಿ ಪರಿ — ಯಂತ- ಬಿಂಬೋ — ಪಾಸ-ನವು ಅಧಿ-ಕ ||
ವೃಜಿನ- ವರ್ಜಿತ — ರಿವರೊ-ಳಗೆ ತ್ರಿಗು- |
ಣಜ ವಿ-ಕಾರಗ — ಳಿಲ್ಲ-ವೆಂದಿಗು |
ದ್ವಿಜ ಫ-ಣಿಪ ಮೃಡ — ಶಕ್ರ- ಮೊದಲಾ — ದವರೊ-ಳಿರುತಿಹ-ವು || ೨೪-೧೨ ||

ಸಾಧ-ನಾತ್ಪೂ — ರ್ವದಲಿ- ಈ ಋ- |
ಜ್ವಾದಿ- ತಾತ್ವಿಕ — ರೆನಿಪ- ಸುರಗಣ- |
ನಾದಿ- ಸಾಮಾ — ನ್ಯಾಪ-ರೋಕ್ಷಿಗ — ಳೆಂದು- ಕರೆಸುವ-ರು ||
ಸಾಧ-ನೋತ್ತರ — ಸ್ವಸ್ವ-ಬಿಂಬ ಉ- |
ಪಾಧಿ-ರಹಿತಾ — ದಿತ್ಯ- ನಂದದಿ |
ಸಾದ-ರದಿ ನೋ — ಡುವರು- ಅಧಿಕಾ — ರಾನು-ಸಾರದ-ಲಿ || ೨೪-೧೩ ||

ಛಿನ್ನ- ಭಕ್ತರು — ಎನಿಸು-ತಿಹರು ಸು- |
ಪರ್ಣ- ಶೇಷಾ — ದ್ಯಮರ-ರೆಲ್ಲಾ- |
ಚ್ಛಿನ್ನ- ಭಕ್ತರು — ನಾಲ್ವ-ರೆನಿಪರು — ಭಾರ-ತೀ ಪ್ರಾ-ಣ ||
ಸೊನ್ನೊ-ಡಲ ವಾ — ಗ್ದೇವಿ-ಯರು ಪಣೆ |
ಗಣ್ಣ- ಮೊದಲಾ — ದವರೊ-ಳಗೆ ತ- |
ತ್ತನ್ನಿ-ಯಾಮಕ — ರಾಗಿ- ವ್ಯಾಪಾ — ರವನೆ- ಮಾಡುವ-ರು || ೨೪-೧೪ ||

ಹೀನ- ಸತ್ಕ — ರ್ಮಗಳೆ-ರಡು ಪವ- |
ಮಾನ-ದೇವನು — ಮಾಳ್ಪ-ನಿದಕನು- |
ಮಾನ-ವಿಲ್ಲೆಂ — ದೆನುತ- ದೃಢ ಭ — ಕ್ತಿಯಲಿ- ಭಜಿಪ-ರ್ಗೆ ||
ಪ್ರಾಣ-ಪತಿ ಸಂ — ಪ್ರೀತ-ನಾಗಿ ಕು- |
ಯೋನಿ-ಗಳ ಕೊಡ — ನೆಲ್ಲ- ಕರ್ಮಗ- |
ಳಾನೆ- ಮಾಡುವೆ — ನೆಂಬ- ಮನುಜರ — ನರಕ-ವೈದಿಸು-ವ || ೨೪-೧೫ ||

ದೇವ- ಋಷಿ ಪಿತೃ — ನೃಪನ-ರೆನಿಸುವ |
ಐವ-ರೊಳು ನೆಲೆ — ಸಿದ್ದು- ಅವರ ಸ್ವ- |
ಭಾವ- ಕರ್ಮವ — ಮಾಡಿ- ಮಾಡಿಪ — ನೊಂದು- ರೂಪದ-ಲಿ ||
ಭಾವಿ- ಬ್ರಹ್ಮನು — ಕೂರ್ಮ- ರೂಪದ |
ಲೀ ವಿ-ರಿಂಚಾಂ — ಡವನು- ಬೆನ್ನೊಳು |
ತಾ ವ-ಹಿಸಿ ಲೋ — ಕಗಳ- ಪೊರೆವನು — ದ್ವಿತಿಯ- ರೂಪದ-ಲಿ || ೨೪-೧೬ ||

ಗುಪ್ತ-ನಾಗಿ — ದ್ದನಿಲ-ದೇವ ದ್ವಿ- |
ಸಪ್ತ- ಲೋಕದ — ಜೀವ-ರೊಳಗೆ ತ್ರಿ- |
ಸಪ್ತ- ಸಾವಿರ — ದಾರು-ನೂರು — ಶ್ವಾಸ- ಜಪಗಳ-ನು ||
ಸುಪ್ತಿ- ಸ್ವಪ್ನದಿ — ಜಾಗ್ರ-ತೆಗಳಲಿ |
ಆಪ್ತ-ನಂದದಿ — ಮಾಡಿ- ಮಾಡಿಸಿ |
ಕ್ಲೃಪ್ತ-ಭೋಗಗ — ಳೀವ- ಪ್ರಾಂತಕೆ — ತೃತಿಯ- ರೂಪದ-ಲಿ || ೨೪-೧೭ ||

ಶುದ್ಧ- ಸತ್ವಾ — ತ್ಮಕ ಶ-ರೀರದೊ- |
ಳಿದ್ದ- ಕಾಲಕು — ಲಿಂಗ- ದೇಹವು |
ಬದ್ಧ-ವಾಗದು — ದಗ್ಧ- ಪಟದೋ — ಪಾದಿ- ಇರುತಿಹು-ದು ||
ಸಿದ್ಧ- ಸಾಧನ — ಸರ್ವ-ರೊಳಗನ- |
ವದ್ಯ-ನೆನಿಸುವ — ಗರುಡ- ಶೇಷ ಕ- |
ಪರ್ದಿ- ಮೊದಲಾ — ದಮರ-ರೆಲ್ಲರು — ದಾಸ-ರೆನಿಸುವ-ರು || ೨೪-೧೮ ||

ಗಣದೊ-ಳಗೆ ತಾ — ನಿದ್ದು- ಋಜುಯೆಂ- |
ದೆನಿಸಿ-ಕೊಂಬನು — ಕಲ್ಪ-ಶತ ಸಾ- |
ಧನವ-ಗೈದಾ — ನಂತ-ರದಿ ತಾ — ಕಲ್ಕಿ- ಎನಿಸುವ-ನು ||
ದ್ವಿನವ-ಶೀತಿ — ಪ್ರಾಂತ- ಭಾಗದ |
ಅನಿಲ- ಹನುಮ — ದ್ಭೀಮ- ರೂಪದಿ |
ದನುಜ-ರೆಲ್ಲರ — ಸದೆದು- ಮಧ್ವಾ — ಚಾರ್ಯ-ರೆನಿಸಿದ-ನು || ೨೪-೧೯ ||

ವಿಶ್ವ- ವ್ಯಾಪಕ — ಹರಿಗೆ- ತಾ ಸಾ- |
ದೃಶ್ಯ- ರೂಪವ — ಧರಿಸಿ- ಬ್ರಹ್ಮ ಸ- |
ರಸ್ವ-ತೀ ಭಾ — ರತಿಗ-ಳಿಂದೊಡ — ಗೂಡಿ- ಪವಮಾ-ನ ||
ಶಾಶ್ವ-ತ ಸುಭ — ಕ್ತಿಯಲಿ- ಸುಜ್ಞಾ- |
ನ ಸ್ವ-ರೂಪನ — ರೂಪ- ಗುಣಗಳ- |
ನಶ್ವ-ರವು ಎಂ — ದೆನುತ- ಪೊಗಳುವ — ಶೃತಿಗ-ಳೊಳಗಿ-ದ್ದು || ೨೪-೨೦ ||

ಖೇಟ- ಕುಕ್ಕುಟ — ಜಲಟ-ವೆಂಬ ತ್ರಿ- |
ಕೋಟಿ- ರೂಪವ — ಧರಿಸಿ- ಸತತ ನಿ- |
ಶಾಟ-ರನು ಸಂ — ಹರಿಸಿ- ಸಲಹುವ — ಸರ್ವ- ಸಜ್ಜನ-ರ ||
ಕೈಟ-ಭಾರಿಯ — ಪುರದ- ಪ್ರಥಮ ಕ- |
ವಾಟ-ನೆನಿಸುವ — ಗರುಡ- ಶೇಷ ಲ- |
ಲಾಟ- ಲೋಚನ — ಮುಖ್ಯ- ಸುರರಿಗೆ — ಆವ-ಕಾಲದ-ಲಿ || ೨೪-೨೧ ||

ಈ ಋ-ಜುಗಳೊಳ — ಗೊಬ್ಬ- ಸಾಧನ |
ನೂರು- ಕಲ್ಪದಿ — ಮಾಡಿ- ಕರೆಸುವ |
ಜಾರು-ತರ ಮಂ — ಗಳ ಸು-ನಾಮದಿ — ಕಲ್ಪ- ಕಲ್ಪದ-ಲಿ ||
ಸೂರಿ-ಗಳು ಸಂ — ತುತಿಸಿ- ವಂದಿಸೆ |
ಘೋರ-ದುರಿತಗ — ಳಳಿದು- ಪೋಪುವು |
ಮಾರ-ಮಣ ಸಂ — ಪ್ರೀತ-ನಾಗುವ — ಸರ್ವ- ಕಾಲದ-ಲಿ || ೨೪-೨೨ ||

ಪಾಹಿ- ಕಲ್ಕಿ ಸು — ತೇಜ- ದಾಸನೆ |
ಪಾಹಿ- ಧರ್ಮಾ — ಧರ್ಮ- ಖಂಡನೆ |
ಪಾಹಿ- ವರ್ಚ — ಸ್ವೀ ಖ-ಷಣ ನಮೊ — ಸಾಧು- ಮಹಿಪತಿ-ಯೆ ||
ಪಾಹಿ- ಸದ್ಧ — ರ್ಮಜ್ಞ- ಧರ್ಮಜ |
ಪಾಹಿ- ಸಂಪೂ — ರ್ಣ ಶುಚಿ- ವೈಕೃತ |
ಪಾಹಿ- ಅಂಜನ — ಸರ್ಷ-ಪನೆ ಖ — ರ್ಪಟನೆ- ಶ್ರದ್ಧಾ-ಹ್ವ || ೨೪-೨೩ ||

ಪಾಹಿ- ಸಂಧ್ಯಾ — ತ ವಿ-ಜ್ಞಾನನೆ |
ಪಾಹಿ- ಮಹ ವಿ — ಜ್ಞಾನ- ಕೀರ್ತನೆ |
ಪಾಹಿ- ಸಂಕೀ — ರ್ಣಾಖ್ಯ- ಕತ್ಥನೆ — ಮಹಾ- ಬುದ್ಧಿ ಜ-ಯ ||
ಪಾಹಿ- ಮಾಹ — ತ್ತರ ಸು-ವೀರ್ಯನೆ |
ಪಾಹಿ- ಮಾಂ ಮೇ — ಧಾವಿ- ಜಯಜಯ |
ಪಾಹಿ- ಮಾಂ ರಂ — ತಿಮ್ನ- ಮನು ಮಾಂ — ಪಾಹಿ- ಮಾಂ ಪಾ-ಹಿ || ೨೪-೨೪ ||

ಪಾಹಿ- ಮೋದ ಪ್ರ — ಮೋದ- ಸಂತತ |
ಪಾಹಿ- ಆನಂ — ದ ಸಂ-ತುಷ್ಟನೆ |
ಪಾಹಿ- ಮಾಂ ಚಾ — ರ್ವಾಂಗ- ಚಾರುಸು — ಬಾಹು- ಚಾರುಪ-ದ ||
ಪಾಹಿ- ಪಾಹಿ ಸು — ಲೋಚ-ನನೆ ಮಾಂ |
ಪಾಹಿ- ಸಾರ — ಸ್ವತ ಸು-ವೀರನೆ |
ಪಾಹಿ- ಪ್ರಾಜ್ಞ ಕ — ಪೀಯ-ಲಂಪಟ — ಪಾಹಿ- ಸರ್ವ-ಜ್ಞ || ೨೪-೨೫ ||

ಪಾಹಿ- ಮಾಂ ಸ — ರ್ವಜಿತು- ಮಿತ್ರನೆ |
ಪಾಹಿ- ಪಾಪ ವಿ — ನಾಶ-ಕನೆ ಮಾಂ |
ಪಾಹಿ- ಧರ್ಮವಿ — ನೇತ- ಶಾರದ — ಓಜ- ಸುತಪ-ಸ್ವಿ |
ಪಾಹಿ- ಮಾಂ ತೇ — ಜಸ್ವಿ- ನಮೊ ಮಾಂ |
ಪಾಹಿ- ದಾನ ಸು — ಶೀಲ- ನಮೊ ಮಾಂ |
ಪಾಹಿ- ಯಜ್ಞ ಸು — ಕರ್ತ- ಯಜ್ವೀ — ಯಾಗ-ವರ್ತಕ-ನೆ || ೨೪-೨೬ ||

ಪಾಹಿ- ಪ್ರಾಣ — ತ್ರಾಣ ಅಮರಿಷಿ |
ಪಾಹಿ- ಮಾಮುಪ — ದೇಷ್ಟ- ಮಾರಕ |
ಪಾಹಿ- ಕಾಲ — ಕ್ರೀಡ-ನ ಸುಕ — ರ್ತಾ ಸು-ಕಾಲ-ಜ್ಞ ||
ಪಾಹಿ- ಕಾಲ ಸು — ಸೂಚ-ಕನೆ ಮಾಂ |
ಪಾಹಿ- ಕಲಿಸಂ — ಹರ್ತ- ಕಲಿ ಮಾಂ |
ಪಾಹಿ- ಕಾಲ — ಶ್ಯಾಮ- ರೇತ ಸ — ದಾರ-ತ ಸುಬಲ-ನೆ || ೨೪-೨೭||

ಪಾಹಿ- ಪಾಹಿ ಸ — ಹೋ ಸ-ದಾಕಪಿ |
ಪಾಹಿ- ಗಮ್ಯ — ಜ್ಞಾನ- ದಶಕುಲ |
ಪಾಹಿ- ಮಾಂ ಶ್ರೋ — ತವ್ಯ- ನಮೊ ಸಂ — ಕೀರ್ತಿ- ತವ್ಯ ನ-ಮೋ ||
ಪಾಹಿ- ಮಾಂ ಮಂ — ತವ್ಯ- ಕವ್ಯನೆ |
ಪಾಹಿ- ಮಾಂ ದ್ರ — ಷ್ಟವ್ಯ- ಸಖ್ಯನೆ |
ಪಾಹಿ- ಮಾಂ ಗಂ — ತವ್ಯ- ಕ್ರವ್ಯನೆ — ಪಾಹಿ- ಸ್ಮರ್ತ-ವ್ಯ || ೨೪-೨೮ ||

ಪಾಹಿ- ಸೇವ್ಯ ಸು — ಭವ್ಯ- ನಮೊ ಮಾಂ |
ಪಾಹಿ- ಸ್ವರ್ಗ — ವ್ಯ ನಮೊ- ಭವ್ಯನೇ |
ಪಾಹಿ- ಮಾಂ ಜ್ಞಾ — ತವ್ಯ- ನಮೊ ವ — ಕ್ತವ್ಯ- ಗವ್ಯ ನ-ಮೋ ||
ಪಾಹಿ- ಮಾಂ ಲಾ — ತವ್ಯ- ವಾಯುವೆ |
ಪಾಹಿ- ಬ್ರಹ್ಮ — ಬ್ರಾಹ್ಮ-ಣಪ್ರಿಯ |
ಪಾಹಿ- ಪಾಹಿ ಸ — ರಸ್ವ-ತೀಪತೆ — ಜಗ-ದ್ಗುರುವ-ರ್ಯ || ೨೪-೨೯ ||

ವಾಮ-ನ ಪುರಾ — ಣದಲಿ- ಹೇಳಿದ |
ಈ ಮ-ಹಾತ್ಮರ — ಪರಮ- ಮಂಗಳ |
ನಾಮ-ಗಳ ಸಂ — ಪ್ರೀತಿ- ಪೂರ್ವಕ — ನಿತ್ಯ- ಸ್ಮರಿಸುವ-ರ ||
ಶ್ರೀಮ-ನೋಹರ — ನವರು- ಬೇಡಿದ |
ಕಾಮಿ-ತಾರ್ಥಗ — ಳಿತ್ತು -ತನ್ನ ತ್ರಿ- |
ಧಾಮ-ದೊಳಗನು — ದಿನದ-ಲಿಟ್ಟಾ — ನಂದ- ಪಡಿಸುವ-ನು || ೨೪-೩೦ ||

ಈ ಸ-ಮೀರಗೆ — ನೂರು- ಜನ್ಮ ಮ- |
ಹಾ ಸು-ಖ ಪ್ರಾ — ರಬ್ಧ- ಭೋಗ ಪ್ರ- |
ಯಾಸ-ವಿಲ್ಲದ — ಲೈದಿ-ದನು ಲೋ — ಕಾಧಿ-ಪತ್ಯವ-ನು ||
ಭೂಸು-ರನ ಒ — ಪ್ಪಿಡಿ ಅ-ವಲಿಗೆ ವಿ- |
ಶೇಷ- ಸೌಖ್ಯವ — ನಿತ್ತ- ದಾತನ |
ದಾಸ-ವರ್ಯನು — ಲೋಕ-ಪತಿಯೆನಿ — ಸುವುದು- ಅಚ್ಚರಿ-ಯೆ || ೨೪-೩೧ ||

ದ್ವಿಶತ- ಕಲ್ಪಗ — ಳಲ್ಲಿ- ಬಿಡದೀ- |
ಪೆಸರಿ-ನಿಂದಲಿ — ಕರೆಸಿ-ದನು ತ- |
ನ್ನೊಶಗ-ರಮರರೊ — ಳಿಟ್ಟು- ಮಾಡುವ — ನವರ- ಸಾಧನ-ವ ||
ಅಸದು-ಪಾಸನೆ — ಗೈವ- ಕಲ್ಯಾ- |
ದ್ಯಸುರ-ಪರ ಸಂ — ಹರಿಸಿ- ತಾ ಪೊಂ- |
ಬಸಿರ- ಪದ ವೈ — ದಿದನು- ಗುರು ಪವ — ಮಾನ- ಸತಿಯೊಡ-ನೆ || ೨೪-೩೨ ||

ಅನಿಮಿ-ಷರ ನಾ — ಮದಲಿ- ಕರೆಸುವ |
ನನಿಲ-ದೇವನು — ಒಂದು- ಕಲ್ಪದಿ |
ವನಜ- ಸಂಭವ — ನೆನಿಸಿ- ಎಂಭ — ತ್ತೇಳು-ವರೆ ವರು-ಷ ||
ಗುಣದ- ತ್ರಯ ವ — ರ್ಜಿತನ -ಮಂಗಳ |
ಗುಣದ- ಕ್ರೀಯ ಸು — ರೂಪ-ಗಳುಪಾ-
ಸನೆಯ-ನವ್ಯ — ಕ್ತಾದಿ- ಪೃಥ್ವ್ಯಂ — ತರದ-ಲಿರುತಿಹು-ದು || ೨೪-೩೩ ||

ಮಹಿತ- ಋಜುಗಣ — ಕೊಂದೆ- ಪರಮೋ- |
ತ್ಸಹ ವಿ-ವರ್ಜಿತ — ವೆಂಬ- ದೋಷವು |
ವಿಹಿತ-ವೇ ಸರಿ — ಇದನು- ಪೇಳ್ದಿರೆ — ಮುಕ್ತ- ಬ್ರಹ್ಮರಿ-ಗೆ ||
ಬಹುದು- ಸಾಮ್ಯ — ಜ್ಞಾನ- ಭಕುತಿಯು |
ದ್ರುಹಿಣ- ಪದ ಪರಿ — ಯಂತ- ವೃದ್ಧಿಯು |
ಬಹಿರು-ಪಾಸನೆ — ಯುಂಟ-ನಂತರ — ಬಿಂಬ- ದರ್ಶನ-ವು || ೨೪-೩೪ ||

ಜ್ಞಾನ-ರಹಿತ ಭ — ಯತ್ವ- ಪೇಳ್ವ ಪು- |
ರಾಣ- ದೈತ್ಯರ — ಮೋಹ-ಕವು ಚತು- |
ರಾನ-ನಗೆ ಕೂ — ಡುವುದೆ- ಮೋಹಾ — ಜ್ಞಾನ- ಭಯ ಶೋ-ಕ ||
ಭಾನು- ಮಂಡಲ — ಚಲಿಸಿ-ದಂದದಿ |
ಕಾಣು-ವುದು ದೃ — ಗ್ದೋಷ-ದಿಂದಲಿ |
ಶ್ರೀನಿ-ವಾಸನ — ಪ್ರೀತಿ-ಗೋಸುಗ — ತೋರ್ದ-ನಲ್ಲದ-ಲೆ || ೨೪-೩೫ ||

ಕಮಲ- ಸಂಭವ — ಸರ್ವ-ರೊಳಗು – |
ತ್ತಮನೆ-ನಿಸುವನು — ಎಲ್ಲ- ಕಾಲದಿ |
ವಿಮಲ- ಭಕುತಿ — ಜ್ಞಾನ- ವೈರಾ — ಗ್ಯಾದಿ- ಗುಣದಿಂ-ದ ||
ಸಮ-ಭ್ಯಧಿಕವಿ — ವರ್ಜಿ-ತನ ಗುಣ |
ರಮೆಯ- ಮುಖದಿಂ — ದರಿತು- ನಿತ್ಯದಿ |
ದ್ಯುಮಣಿ- ಕೋಟಿಗ — ಳಂತೆ- ಕಾಂಬನು — ಬಿಂಬ- ರೂಪವ-ನು || ೨೪-೩೬ ||

ಜ್ಞಾನ- ಭಕ್ತ್ಯಾ — ದ್ಯಖಿಳ- ಗುಣ ಚತು- |
ರಾನ-ನೋಳಗಿ — ಪ್ಪಂತೆ- ಮುಖ್ಯ- |
ಪ್ರಾಣ-ನಲಿ ಚಿಂ — ತಿಪುದು- ಯತ್ಕಿಂ — ಚಿತ್ ಕೊ-ರತೆಯಾ-ಗಿ ||
ನ್ಯೂನ- ಋಜುಗಣ — ಜೀವ-ರಲ್ಲಿ ಕ್ರ- |
ಮೇಣ- ವೃದ್ಧಿ — ಜ್ಞಾನ- ಭಕುತಿ ಸ- |
ಮಾನ- ಭಾರತಿ — ವಾಣಿ-ಗಳಲಿ ಪ — ದ ಪ್ರ-ಯುಕ್ತಧಿ-ಕ || ೨೪-೩೭ ||

ಸೌರಿ- ಸೂರ್ಯನ — ತೆರದಿ- ಬ್ರಹ್ಮ ಸ- |
ಮೀರ- ಗಾಯ — ತ್ರೀ ಗಿ-ರಿಗಳೊಳು- |
ತೋರು-ವುದು ಅ — ಸ್ಪಷ್ಟ- ರೂಪದಿ — ಮುಕ್ತಿ- ಪರಿಯಂ-ತ ||
ವಾರಿ-ಜಾಸನ — ವಾಯು- ವಾಣೀ- |
ಭಾರ-ತಿಗಳಿಗೆ — ಮಾಹ- ಪ್ರಳಯದಿ- |
ಬಾರ-ದಜ್ಞಾ — ನಾದಿ- ದೋಷವು — ಹರಿಕೃ-ಪಾ ಬಲ-ದಿ || ೨೪-೩೮ ||

ನೂರು- ವರುಷಾ — ನಂತ-ರದಲಿ ಸ- |
ರೋರು-ಹಾಸನ — ತನ್ನ- ಕಲ್ಪದ- |
ಲಾರು- ಮುಕ್ತಿಯ — ನೈದು-ವರೊ ಅವ — ರವರ- ಕರೆದೊ-ಯ್ದು ||
ಶೌರಿ- ಪುರದೊಳ — ಗಿಪ್ಪ- ನದಿಯಲಿ |
ಕಾರು-ಣಿಕ ಸು — ಸ್ನಾನ- ನಿಜಪರಿ- |
ವಾರ- ಸಹಿತದಿ — ಮಾಡಿ- ಹರಿಯುದ — ರ ಪ್ರ-ವೇಶಿಸು-ವ || ೨೪-೩೯ ||

ವಾಸು-ದೇವನ — ಉದರ-ದಲ್ಲಿ ಪ್ರ- |
ವೇಶ-ಗೈದಾ — ನಂತ-ರದಿ ನಿ- |
ರ್ದೋಷ- ಮುಕ್ತರು — ಉದರ-ದಿಂ ಪೊರ — ಮಟ್ಟು- ಹರುಷದ-ಲಿ ||
ಈಶ-ನಿಂದಾ — ಜ್ಞೆಯ ಪ-ಡೆದನಂ- |
ತಾಸ-ನ ಸಿತ — ದ್ವೀಪ- ಮೋಕ್ಷದಿ |
ವಾಸ-ವಾಗಿ ವಿ — ಮುಕ್ತ- ದುಃಖರು — ಸಂಚ-ರಿಸುತಿಹ-ರು || ೨೪-೪೦ ||

ಸತ್ವ- ಸತ್ವ ಮ — ಹಾ ಸು-ಸೂಕ್ಷ್ಮವು- |
ಸತ್ವ- ಸತ್ವಾ — ತ್ಮಕ ಕ-ಳೇವರ |
ಸತ್ಯ-ಲೋಕಾ — ಧಿಪನೆ-ನಿಪಗ — ತ್ಯಲ್ಪ-ವೆರಡುಗು-ಣ ||
ಮುಕ್ತಿ- ಯೋಗ್ಯವಿ — ದಲ್ಲ-ಜಾಂಡೋ- |
ತ್ಪತ್ತಿ- ಕಾರಣ — ವಲ್ಲ- ಹರಿಪ್ರೀ- |
ತ್ಯರ್ಥ-ವಾಗೀ — ಜಗದ- ವ್ಯಾಪಾ — ರಗಳ- ಮಾಡುವ-ನು || ೨೪-೪೧ ||

ಪಾದ- ನ್ಯೂನ ಶ — ತಾಬ್ದ- ಪರಿಯಂ- |
ತೋದಿ- ಉಗ್ರತ — ಪಾಹ್ವ-ಯದಿ ಲವ- |
ಣೋದ-ಧಿಯೊಳಗೆ — ಕಲ್ಪ-ದಶ ತಪ — ವಿದ್ದ-ನಂತರ-ದಿ ||
ಸಾಧಿ-ಸಿದ ಮಹ — ದೇವ- ಪದವಾ- |
ರೈದು- ನವಕ — ಲ್ಪಾವ-ಸಾನಕೆ |
ಐದು-ವನು ತಾ — ಶೇಷ-ಪದವನು — ಪಾರ್ವ-ತೀ ಸಹಿ-ತ || ೨೪-೪೨ ||

ಇಂದ್ರ- ಮನು ದಶ — ಕಲ್ಪ-ಗಳಲಿ ಸು- |
ನಂದ- ನಾಮದಿ — ಶ್ರವಣ-ಗೈದು ಮು- |
ಕುಂದ-ನಪರೋ — ಕ್ಷಾರ್ಥ- ನಾಲ್ಕು ಸು — ಕಲ್ಪ- ತಪವಿ-ದ್ದು ||
ನೊಂದು- ಪೊಗೆಯೊಳು — ಕೋಟಿ- ವರುಷ ಪು- |
ರಂದ-ರನು ಅದ — ನುಂಡ-ನಂತರ |
ಪೊಂದಿ-ದನು ನಿಜ — ಲೋಕ- ಸುರಪತಿ — ಕಾಮ-ನಿದರಂ-ತೆ || ೨೪-೪೩ ||

ಕರೆಸು-ವರು ಪೂ — ರ್ವದಲಿ- ಚಂದ್ರಾ- |
ರ್ಕರತಿ- ಶಾಂತ ಸು — ರೂಪ- ನಾಮದಿ |
ಎರಡೆ-ರಡು ಮನು — ಕಲ್ಪ- ಶ್ರವಣವ — ಗೈದು- ಮನುಕ-ಲ್ಪ ||
ವರ ತ-ಪೋಬಲ — ದಿಂದ-ಲರ್ವಾಕ್ |
ಶಿರಗ-ಳಾಗೀ — ರೈದು- ಸಾವಿರ |
ವರುಷ- ದುಃಖವ — ನೀಗಿ- ಕಾಂಬರು — ಬಿಂಬ-ರೂಪವ-ನು || ೨೪-೪೪ ||

ಸಾಧ-ನಗಳಪ — ರೋಕ್ಷ- ನಂತರ |
ಐದು-ವರು ಮೋ — ಕ್ಷವನು- ಶಿವ ಶ- |
ಕ್ರಾದಿ- ದಿವಿಜರು — ಉಕ್ತ-ಕ್ರಮದಿಂ — ಕಲ್ಪ- ಸಂಖ್ಯೆಯ-ಲಿ ||
ಐದ-ಲೆಯಗೈ — ವತ್ತು-ಪೇಂದ್ರ ಸ- |
ಹೋದ-ರನಿಗಿ — ಪ್ಪತ್ತು- ದ್ವಿನವ ತ್ವ- |
ಗಾಧಿ-ಪತಿ ಪ್ರಾ — ಣನಿಗೆ- ಗುರು ಮನು — ಗಳಿಗೆ- ಷೋಡಶ-ವು || ೨೪-೪೫ ||

ಪ್ರವಹ- ಮರುತಗೆ — ಹನ್ನೆ-ರಡು ಸೈಂ |
ಧವ ದಿ-ವಾಕರ — ಧರ್ಮ-ರಿಗೆ ದಶ |
ನವ ಸು-ಕಲ್ಪವು — ಮಿತ್ರ-ರಿಗೆ ಶೇ — ಷಶತ- ಜನಕೆಂ-ಟು ||
ಕವಿ ಸ-ನಕನು ಸು — ನಂದ-ನ ಸನ- |
ತ್ಕುವರ- ಮುನಿಗಳಿ — ಗೇಳು- ವರುಣನ |
ಯುವತಿ- ಪರ್ಜ — ನ್ಯಾದಿ- ಪುಷ್ಕರ — ಗಾರು- ಕಲ್ಪದ-ಲಿ || ೨೪-೪೬ ||

ಐದು- ಕರ್ಮಜ — ಸುರರಿ-ಗಾಜಾ- |
ನಾದಿ-ಗಳಿಗೆರ — ಡೆರಡು- ಕಲ್ಪಾ- |
ರ್ಧಾದಿ-ಕತ್ರಯ — ಗೋಪಿ-ಕಾಸ್ತ್ರೀ — ಯರು ಪಿ-ತೃತ್ರಯ-ವು ||
ಈ ದಿ-ವೌಕಸ — ಮನುಜ- ಗಾಯಕ- |
ರೈದು-ವರು ಎರ — ಡೊಂದು- ಕಲ್ಪನ- |
ರಾಧಿ-ಪರಿಗರೆ — ಕಲ್ಪ-ದೊಳಗಪ — ರೋಕ್ಷ-ವಿರುತಿಹು-ದು || ೨೪-೪೭ ||

ದೀಪ-ಗಳನನು — ಸರಿಸಿ- ದೀಪ್ತಿಯು- |
ವ್ಯಾಪಿ-ಸಿ ಮಹಾ — ತಿಮಿರ- ಕಳೆದು ಪ- |
ರೋಪ-ಕಾರವ — ಮಾಳ್ಪ- ತೆರದಂ — ದದಲಿ- ಪರಮಾ-ತ್ಮ ||
ಆ ಪ-ಯೋಜಾ — ಸನರೊ-ಳಿದ್ದು ಸ್ವ- |
ರೂಪ- ಶಕ್ತಿಯ — ವ್ಯಕ್ತಿ-ಗೈಸುತ |
ತಾ ಪೊ-ಳೆವನವ — ರಂತೆ- ಚೇಷ್ಟೆಯ — ಮಾಡಿ- ಮಾಡಿಸು-ವ || ೨೪-೪೮ ||

ಸ್ವೋದ-ರಸ್ಥಿತ — ಪ್ರಾಣ- ರುದ್ರೇಂ- |
ದ್ರಾದಿ- ಸುರರಿಗೆ — ದೇಹ-ಗಳ ಕೊ- |
ಟ್ಟಾದ-ರದಲವ — ರವರ- ಸೇವೆಯ — ಕೊಂಬ-ನನವರ-ತ ||
ಮೋದ- ಬೋಧ ದ — ಯಾಬ್ಧಿ- ತನ್ನವ |
ರಾಧಿ- ರೋಗವ — ಕಳೆದು- ಮಹದಪ |
ರಾಧ-ಗಳ ನೋ — ಡದಲೆ- ಸಲಹುವ — ಸತತ- ಸ್ಮರಿಸುವ-ರ || ೨೪-೪೯ ||

ಪ್ರತಿ ಪ್ರ-ತೀ ಕ — ಲ್ಪದಲಿ- ಸೃಷ್ಟಿ- |
ಸ್ಥಿತಿ ಲ-ಯವ ಮಾ — ಡುತಲಿ- ಮೋದಿಪ |
ಚತುರ-ಮುಖ ಪವ — ಮಾನ-ರನ್ನವ — ಮಾಡಿ- ಭುಂಜಿಸು-ವ ||
ಘೃತವೆ- ಮೃತ್ಯುಂ — ಜಯನೆ-ನಿಪ ದೇ- |
ವತೆಗ-ಳೇ ಉಪ — ಸೇಚನ-ರು ಶ್ರೀ- |
ಪತಿಗೆ- ಮೂರ್ಜಗ — ವೆಲ್ಲ- ವೋದನ — ತಿಥಿಯೆ-ನಿಸಿಕೊಂ-ಬ || ೨೪-೫೦ ||

ಗರ್ಭಿ-ಣೀಸ್ತ್ರೀ — ಯುಂಡ- ಭೋಜನ |
ಗರ್ಭ-ಗತ ಶಿಶು — ವುಂಬ- ತೆರದಲಿ |
ನಿರ್ಭ-ಯನು ತಾ — ನುಂಡು-ಣಿಸುವನು — ಸರ್ವ- ಜೀವರಿ-ಗೆ ||
ನಿರ್ಬ-ಲತಿ ಪರ — ಮಾಣು- ಜೀವಗೆ |
ಅಬ್ಬು-ವುದೆ ಸ್ಥೂ — ಲಾನ್ನ- ಭೋಜನ |
ಅರ್ಭ-ಕರು ಪೇ — ಳುವರು- ಕೋವಿದ — ರಿದನೊ-ಡಂಬಡ-ರು || ೨೪-೫೧ ||

ಅಪಚ-ಯಗಳಿ — ಲ್ಲುಂಡ-ದದರಿಂ- |
ದುಪಚ-ಯಗಳಿ — ಲ್ಲಮರ-ಗಣದೊಳ- |
ಗುಪಮ-ರೆನಿಸುವ — ರಿಲ್ಲ- ಜನ್ಮಾ — ದಿಗಳು- ಮೊದಲಿ-ಲ್ಲ ||
ಅಪರಿ-ಮಿತ ಸ — ನ್ಮಹಿಮ- ನರಹರಿ |
ಅಪುನ-ರಾವ — ರ್ತರನು- ಮಾಡುವ |
ಕೃಪಣ- ವತ್ಸಲ — ಸ್ವಪದ- ಸೌಖ್ಯವ — ನಿತ್ತು- ಶರಣರಿ-ಗೆ || ೨೪-೫೨ ||

ಬಿತ್ತಿ- ಬೀಜವ — ಭೂಮಿ-ಯೊಳು ನೀ- |
ರೆತ್ತಿ- ಬೆಳೆಸಿದ — ಬೆಳಸು- ಪ್ರಾಂತಕೆ |
ಕಿತ್ತಿ- ಮೆಲುವಂ — ದದಲಿ- ಲಕುಮೀ — ರಮಣ- ಲೋಕಗ-ಳ ||
ಮತ್ತೆ- ಜೀವರ — ಕರ್ಮ- ಕಾಲೋ- |
ತ್ಪತ್ತಿ- ಸ್ಥಿತಿಲಯ — ಮಾಡು-ತಲಿ ಸಮ- |
ವರ್ತಿ-ಯೆನಿಸುವ — ಖೇದ- ಮೋದಗ — ಳಿಲ್ಲ- ಅನವರ-ತ || ೨೪-೫೩ ||

ಶ್ವಸನ- ರುದ್ರೇಂ — ದ್ರಾದಿ-ವರ ಸುಮ- |
ನಸರೊ-ಳಿದ್ದರು — ಕ್ಷುತ್ಪಿ-ಪಾಸಗ |
ಳೊಶದೊ-ಳಿಪ್ಪುವು — ಸಕಲ- ಭೋಗಕೆ — ಸಾಧ-ನಗಳಾ-ಗಿ ||
ಅಸುರ- ಪ್ರೇತ ಪಿ — ಶಾಚ-ಗಳ ಬಾ- |
ಧಿಸುತ-ಲಿಪ್ಪವು — ದಿನದಿ-ನದಿ ಮಾ- |
ನಿಸರೊ-ಳಗೆ ಮೃಗ — ಪಕ್ಷಿ- ಜೀವರೊ — ಳಿದ್ದು- ಪೋಗುವ-ವು || ೨೪-೫೪ ||

ವಾಸು-ದೇವಗೆ — ಸ್ವಪ್ನ- ಸುಪ್ತಿ ಪಿ- |
ಪಾಸ- ಕ್ಷುದೆ ಭಯ — ಶೋಕ- ಮೋಹಾ- |
ಯಾಸ- ವಿಸ್ಮೃತಿ — ಮಾತ್ಸ-ರಿಯ ಮದ — ಪುಣ್ಯ- ಪಾಪಾ-ದಿ ||
ದೋಷ- ವರ್ಜಿತ — ನೆಂದು- ಬ್ರಹ್ಮ ಸ- |
ದಾಶಿ-ವಾದಿ ಸ — ಮಸ್ತ- ದಿವಿಜರು- |
ಪಾಸ-ನೆಯ ಗೈ — ದೆಲ್ಲ- ಕಾಲದಿ — ಮುಕ್ತ-ರಾಗಿಹ-ರು || ೨೪-೫೫ ||

ಪರಮ- ಸೂಕ್ಷ್ಮ — ಕ್ಷಣವ-ಯಿದು ತೃಟಿ |
ಕರೆಸು-ವದು ಐ — ವತ್ತು- ತೃಟಿ ಲವ- |
ವೆರಡು- ಲವ ನಿಮಿ — ಷಗಳು- ನಿಮಿಷಗ — ಳೆಂಟು- ಮಾತ್ರ ಯು-ಗ ||
ಗುರುದ-ಶ ಪ್ರಾ — ಣಾರು-ಪಳ ಹ- |
ನ್ನೆರಡು- ಬಾಣವು — ಘಳಿಗೆ- ತ್ರಿಂಶತಿ |
ಇರುಳು- ಹಗಲರ — ವತ್ತು- ಘಟಿಕೆಗ — ಳಹೋ-ರಾತ್ರಿಗ-ಳು || ೨೪-೫೬ ||

ಈ ದಿ-ವಾರಾ — ತ್ರಿಗಳೆ-ರಡು ಹದಿ- |
ನೈದು- ಪಕ್ಷಗ — ಳೆರಡು- ಮಾಸಗ- |
ಳಾದ-ಪವು ಮಾ — ಸದ್ವ-ಯವೆ ಋತು — ಋತುತ್ರ-ಯಗಳಯ-ನ ||
ಐದು-ವವು ಅಯ — ನ ದ್ವ-ಯಾಬ್ಜ ಕೃ- |
ತಾದಿ- ಯುಗಗಳು — ದೇವ-ಮಾನದಿ |
ದ್ವಾದ-ಶ ಸಹ — ಸ್ರ ವರು-ಷಗಳಹ — ವದನು- ಪೇಳುವೆ-ನು || ೨೪-೫೭ ||

ಚತುರ- ಸಾವಿರ — ದೆಂಟು- ನೂರವು |
ಕೃತಯು-ಗಕೆ ತ್ರಿಸ — ಹಸ್ರ- ಸಲೆ ಷಟ್ |
ಶತವು- ತ್ರೇತೆಗೆ — ದ್ವಾಪ-ರಕೆ ದ್ವಿಸ — ಹಸ್ರ- ನಾನೂ-ರು ||
ದಿತಿಜ- ಪತಿ ಕಲಿ — ಯುಗಕೆ- ಸಾವಿರ |
ಶತಗ-ಳದ್ವಯ — ಕೂಡಿ- ಈ ದೇ- |
ವತೆಗ-ಳಿಗೆ ಹ — ನ್ನೆರಡು- ಸಾವಿರ — ವಹವು- ವರುಷಗ-ಳು || ೨೪-೫೮ ||

ಪ್ರಥಮ- ಯುಗಕೇ — ಳಧಿಕ-ಅರೆವಿಂ- |
ಶತಿ ಸು-ಲಕ್ಷಾ — ಷ್ಟೋತ್ರ- ಶತವಿಂ- |
ಶತ ಸ-ಹಸ್ರ ಮ — ನುಷ್ಯ- ಮಾನಾ — ಬ್ದಗಳು- ಷಣ್ಣವ-ತಿ ||
ಮಿತ ಸ-ಹಸ್ರದ — ಲಕ್ಷ- ದ್ವಾದಶ |
ದ್ವಿತಿಯ- ತೃತಿಯಕೆ — ಎಂಟು- ಲಕ್ಷದ |
ಚತುರ-ಷಷ್ಠಿ ಸ — ಹಸ್ರ- ಕಲಿಗಿದ — ರರ್ಧ- ಚಿಂತಿಪು-ದು || ೨೪-೫೯ ||

ಮೂರ-ಧಿಕ ನಾ — ಲ್ವತ್ತು- ಲಕ್ಷದ |
ಲಾರು- ಮೂರೆರ — ಡಧಿಕ- ಸಾವಿರ |
ವೀರೆ-ರಡು ಯುಗ — ವರುಷ- ಸಂಖ್ಯೆಯ — ಗೈಯ-ಲೆನಿತಿಹು-ದೊ ||
ಸೂರಿ- ಪೆಚ್ಚಿಸೆ — ಸಾವಿ-ರದ ನಾ- |
ನೂರು- ಮೂವ — ತ್ತೆರಡು- ಕೋಟಿ ಸ- |
ರೋರು-ಹಾಸನ — ಗಿದು ದಿ-ವಸವೆಂ — ಬರು ವಿ-ಪಶ್ಚಿತ-ರು || ೨೪-೬೦ ||

ಶತಧೃ-ತಿಗೆ ಈ — ದಿವಸ-ಗಳ ತ್ರಿಂ- |
ಶತಿಯು- ಮಾಸ — ದ್ವಾದ-ಶಾಬ್ದವು |
ಶತವೆ-ರಡರೊಳು — ಸರ್ವ- ಜೀವೋ — ತ್ಪತ್ತಿ- ಸ್ಥಿತಿಲಯ-ವು ||
ಶ್ರುತಿ- ಸ್ಮೃತಿಗಳು — ಪೇಳು-ತಿಹವ- |
ಚ್ಯುತಗೆ- ನಿಮಿಷವಿ — ದೆಂದು- ಸುಖ ಶಾ- |
ಶ್ವತಗೆ- ಪಾಸಟೆ — ಯೆಂಬು-ವರೆ ಬ್ರ — ಹ್ಮಾದಿ- ದಿವಿಜರ-ನು || ೨೪-೬೧ ||

ಆದಿ- ಮಧ್ಯಾಂ — ತಗಳು- ಇಲ್ಲದ |
ಮಾಧ-ವಗಿದುಪ — ಚಾರ-ವೆಂದು ಋ- |
ಗಾದಿ- ವೇದ ಪು — ರಾಣ-ಗಳು ಪೇ — ಳುವವು- ನಿತ್ಯದ-ಲಿ ||
ಮೋದ-ಮಯನಾ — ನುಗ್ರ-ಹವ ಸಂ- |
ಪಾದಿ-ಸಿ ರಮಾ — ಬ್ರಹ್ಮ- ರುದ್ರೇಂ- |
ದ್ರಾದಿ-ಗಳು ತಂ — ತಮ್ಮ- ಪದವಿಯ — ನೈದಿ- ಸುಖಿಸುವ-ರು || ೨೪-೬೨ ||

ಈ ಕ-ಥಾಮೃತ — ಪಾನ- ಸುಖ ಸುವಿ- |
ವೇಕಿ-ಗಳಿಗ — ಲ್ಲದಲೆ- ವೈಷಿಕ- |
ವ್ಯಾಕು-ಲ ಕುಚಿ — ತ್ತರಿಗೆ- ದೊರೆವುದೆ — ಯಾವ-ಕಾಲದ-ಲಿ ||
ಲೋಕ-ವಾರ್ತೆಯ — ಬಿಟ್ಟು- ಇದನವ |
ಲೋಕಿ-ಸುತ ಮೋ — ದಿಪರಿ-ಗೊಲಿದು ಕೃ- |
ಪಾಕ-ರ ಜಗ — ನ್ನಾಥ-ವಿಠ್ಠಲ — ಪೊರೆವ-ನನುದಿನ-ದಿ || ೨೪-೬೩ ||

|| ಇತಿ ಶ್ರೀ ಕಲ್ಪಸಾಧನ ಸಂಧಿ ಸಂಪೂರ್ಣಂ ||
|| ( ಇತಿ ಶ್ರೀ ಅಪರೋಕ್ಷ ತಾರತಮ್ಯ ಸಂಧಿ ಸಂಪೂರ್ಣಂ ) ||
|| ಶ್ರೀ ಕೃಷ್ಣಾರ್ಪಣಮಸ್ತು ||

25. Arohana taratamya Sandhi


  1. shree kalpasaadhana saMdhi
    || ( shree aparOkSha taaratamya saMdhi ) ||

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

Eka-viMshati — mata pra-vartaka |
kaaku- maaygaLa — kuhaka- yukti ni- |
raaka-risi sa — rvOtta-manu hari — yeMdu- sthaapisi-da ||
shreeka-Latrana — sadana- dwijapa pi- |
naaki-sannuta — mahima- parama kRu- |
paaka-TaakShadi — nODu- madhwaa — caarya- guruva-rya || 24-1 ||

vEdha- modalaa — gippa-mala mO- |
kShaadhi-kaariga — Laada- jeevara |
saadha-nagaLapa — rOkSha- naMtara — liMga- bhaMgava-nu ||
saadhu-gaLu ci — ttaYipu-dennapa- |
raadha-gaLa nO — Dadale- cakra ga |
daadha-ranu pE — Lisida- teradaM — dadali- pELuve-nu || 24-2 ||

tRuNa kRu-mi dwija — pashu na-rOttama |
janapa- nara gaM — dharva- gaNariva- |
renipa-raMsha vi — heena- karma su — yOgi-gaLu eM-du ||
tanu pra-teekadi — biMba-nanupaa- |
sanava- gaiyuta — liMdri-yaja ka- |
rmanava-rata hari — garpi-suta ni — rmamaru- enisuva-ru || 24-3 ||

ELu- vidha jee — va gaNa- bahaLa su- |
raaLi- saMkhyaa — nEma-vuLLadu |
taaLi- naradE — havanu- braahmaNa — kulada-lavatari-si ||
sthoola- karmava — toredu- gurugaLu |
pELi-darthava — tiLidu- tatta- |
tkaala- dharma sa — marpi-sutiharu — karma-yOgiga-Lu || 24-4 ||

heena- karmaga — LiMda- bahu vidha- |
yOni-yali saM — carisi- praaMtake |
maanu-Shatwava — naidi- sarvO — ttamanu- hariyeM-ba |
j~jaana- bhaktiga — LiMda- vEdO- |
ktaanu-saara sa — hasra- janumaa- |
nyoona- karmava — maaDi- hariga — rpisida- naMtara-di || 24-5 ||

hattu- janmaga — Lalli- hari sa- |
rvOtta-ma suraa — sura ga-Naarcita |
citra-karma vi — shOka-naMtaa — naMta- roopaa-tma ||
satya-satsaM — kalpa- jagadu- |
tpatti- sthiti laya — kaara-Na jaraa- |
mRutyu- varjita — neMdu-paasane — gaida- taruvaa-ya || 24-6 ||

mooru- janmaga — Lalli- dEhaa |
gaara- pashu dhana — patni- mitra ku- |
maara- maataa — pitRuga-Lalliha — snEha-kiMtadhi-ka ||
maara-maNanali — biDade- maaDuva |
soori-gaLu ee — ukta- janumava |
meeri- paramaa — tmana swa-dEhadi — nODi- sukhisuva-ru || 24-7 ||

dEva-gaayaka — jaana- cirapitRu- |
dEva-rellaru — jjaana-yOgiga- |
Laava- kaalaku — puShka-ra shanai — shcara u-Shaa swaa-haa- |
dEvi- budha sana — kaadi-gaLu mE- |
ghaava-LI pa — rjanya-saaMsharu |
ee vu-bhaya gaNa — doLagi-varu vi — jjaana- yOgiga-Lu || 24-8 ||

bharata- khaMDadi — nooru- janumava |
dharisi- niShkaa — maka su-karmaa- |
carisi-daanaM — taradi- dashasaa — hasra- janmada-li ||
uruta-ra j~jaa — navanu- paDedai |
deraDu- dasha dE — hadali- bhakutiya |
nirava-dhikanali — maaDi- kaaMbaru — biMba-roopava-nu || 24-9 ||

saadha-naatpoo — rvadali- ivari ga- |
naadi- kaalapa — rOkSha-villa ni- |
ShEdha- karmaga — Lilla- naraka — praapti- modali-lla ||
vEda- shaastraga — Lalli- ippa vi- |
rOdha- vaakyava — pariha-risi madhu |
sooda-nane sa — rvOtta-mOttama — neMdu- sukhisuva-ru || 24-10 ||

satya-lOkaa — dhipana- hiDidu sha- |
tastha- dEvaga — NaaMta- ellaru |
bhakti- yOgiga — LeMdu- karesuva — raava-kaalada-li ||
bhakti- yOgyara — madhya-dali sa- |
dbhakti- vij~jaa — naadi- guNadiM- |
dutta-mOttama — brahma-vaayoo — vaaNi- vaagdE-vi || 24-11 ||

Rujuga-Nake bha — ktyaadi- guNa sa- |
hajave-nisuvavu — kramadi vRuddhyaa |
bjaja pa-davi pari — yaMta- biMbO — paasa-navu adhi-ka ||
vRujina- varjita — rivaro-Lage trigu- |
Naja vi-kaaraga — Lilla-veMdigu |
dwija pha-Nipa mRuDa — shakra- modalaa — davaro-Lirutiha-vu || 24-12 ||

saadha-naatpoo — rvadali- ee Ru- |
jwaadi- taatwika — renipa- suragaNa- |
naadi- saamaa — nyaapa-rOkShiga — LeMdu- karesuva-ru ||
saadha-nOttara — swaswa-biMba u- |
paadhi-rahitaa — ditya- naMdadi |
saada-radi nO — Duvaru- adhikaa — raanu-saarada-li || 24-13 ||

Chinna- bhaktaru — enisu-tiharu su- |
parNa- shEShaa — dyamara-rellaa- |
cCinna- bhaktaru — naalwa-reniparu — bhaara-tI praa-Na ||
sonno-Dala vaa — gdEvi-yaru paNe |
gaNNa- modalaa — davaro-Lage ta- |
ttanni-yaamaka — raagi- vyaapaa — ravane- maaDuva-ru || 24-14 ||

heena- satka — rmagaLe-raDu pava- |
maana-dEvanu — maaLpa-nidakanu- |
maana-villeM — denuta- dRuDha bha — ktiyali- bhajipa-rge ||
praaNa-pati saM — preeta-naagi ku- |
yOni-gaLa koDa — nella- karmaga- |
Laane- maaDuve — neMba- manujara — naraka-vaidisu-va || 24-15 ||

dEva- RuShi pitRu — nRupana-renisuva |
aiva-roLu nele — siddu- avara swa- |
bhaava- karmava — maaDi- maaDipa — noMdu- roopada-li ||
bhaavi- brahmanu — koorma- roopada |
lee vi-riMcaaM — Davanu- bennoLu |
taa va-hisi lO — kagaLa- porevanu — dwitiya- roopada-li || 24-16 ||

gupta-naagi — ddanila-dEva dwi- |
sapta- lOkada — jeeva-roLage tri- |
sapta- saavira — daaru-nooru — shwaasa- japagaLa-nu ||
supti- swapnadi — jaagra-tegaLali |
aapta-naMdadi — maaDi- maaDisi |
klRupta-bhOgaga — LIva- praaMtake — tRutiya- roopada-li || 24-17 ||

shuddha- satwaa — tmaka sha-reerado- |
Lidda- kaalaku — liMga- dEhavu |
baddha-vaagadu — dagdha- paTadO — paadi- irutihu-du ||
siddha- saadhana — sarva-roLagana- |
vadya-nenisuva — garuDa- shESha ka- |
pardi- modalaa — damara-rellaru — daasa-renisuva-ru || 24-18 ||

gaNado-Lage taa — niddu- RujuyeM- |
denisi-koMbanu — kalpa-shata saa- |
dhanava-gaidaa — naMta-radi taa — kalki- enisuva-nu ||
dwinava-sheeti — praaMta- bhaagada |
anila- hanuma — dbheema- roopadi |
danuja-rellara — sadedu- madhwaa — caarya-renisida-nu || 24-19 ||

vishwa- vyaapaka — harige- taa saa- |
dRushya- roopava — dharisi- brahma sa- |
raswa-tI bhaa — ratiga-LiMdoDa — gooDi- pavamaa-na ||
shaashwa-ta subha — ktiyali- suj~jaa- |
na swa-roopana — roopa- guNagaLa- |
nashwa-ravu eM — denuta- pogaLuva — shRutiga-LoLagi-ddu || 24-20 ||

khETa- kukkuTa — jalaTa-veMba tri- |
kOTi- roopava — dharisi- satata ni- |
shaaTa-ranu saM — harisi- salahuva — sarva- sajjana-ra ||
kaiTa-bhaariya — purada- prathama ka- |
vaaTa-nenisuva — garuDa- shESha la- |
laaTa- lOcana — mukhya- surarige — aava-kaalada-li || 24-21 ||

ee Ru-jugaLoLa — gobba- saadhana |
nooru- kalpadi — maaDi- karesuva |
jaaru-tara maM — gaLa su-naamadi — kalpa- kalpada-li ||
soori-gaLu saM — tutisi- vaMdise |
GOra-duritaga — LaLidu- pOpuvu |
maara-maNa saM — preeta-naaguva — sarva- kaalada-li || 24-22 ||

paahi- kalki su — tEja- daasane |
paahi- dharmaa — dharma- khaMDane |
paahi- varca — swI kha-ShaNa namo — saadhu- mahipati-ye ||
paahi- saddha — rmaj~ja- dharmaja |
paahi- saMpoo — rNa shuci- vaikRuta |
paahi- aMjana — sarSha-pane kha — rpaTane- shraddhaa-hwa || 24-23 ||

paahi- saMdhyaa — ta vi-jjaanane |
paahi- maha vi — j
jaana- keertane |
paahi- saMkee — rNaakhya- katthane — mahaa- buddhi ja-ya ||
paahi- maaha — ttara su-veeryane |
paahi- maaM mE — dhaavi- jayajaya |
paahi- maaM raM — timna- manu maaM — paahi- maaM paa-hi || 24-24 ||

paahi- mOda pra — mOda- saMtata |
paahi- aanaM — da saM-tuShTane |
paahi- maaM caa — rvaaMga- caarusu — baahu- caarupa-da ||
paahi- paahi su — lOca-nane maaM |
paahi- saara — swata su-veerane |
paahi- praajja ka — pIya-laMpaTa — paahi- sarva-jja || 24-25 ||

paahi- maaM sa — rvajitu- mitrane |
paahi- paapa vi — naasha-kane maaM |
paahi- dharmavi — nEta- shaarada — Oja- sutapa-swi |
paahi- maaM tE — jaswi- namo maaM |
paahi- daana su — sheela- namo maaM |
paahi- yaj~ja su — karta- yajwI — yaaga-vartaka-ne || 24-26 ||

paahi- praaNa — traaNa amariShi |
paahi- maamupa — dEShTa- maaraka |
paahi- kaala — kreeDa-na suka — rtaa su-kaala-j~ja ||
paahi- kaala su — sooca-kane maaM |
paahi- kalisaM — harta- kali maaM |
paahi- kaala — shyaama- rEta sa — daara-ta subala-ne || 24-27||

paahi- paahi sa — hO sa-daakapi |
paahi- gamya — j~jaana- dashakula |
paahi- maaM shrO — tavya- namo saM — keerti- tavya na-mO ||
paahi- maaM maM — tavya- kavyane |
paahi- maaM dra — ShTavya- sakhyane |
paahi- maaM gaM — tavya- kravyane — paahi- smarta-vya || 24-28 ||

paahi- sEvya su — bhavya- namo maaM |
paahi- swarga — vya namo- bhavyanE |
paahi- maaM j~jaa — tavya- namo va — ktavya- gavya na-mO ||
paahi- maaM laa — tavya- vaayuve |
paahi- brahma — braahma-Napriya |
paahi- paahi sa — raswa-tIpate — jaga-dguruva-rya || 24-29 ||

vaama-na puraa — Nadali- hELida |
ee ma-haatmara — parama- maMgaLa |
naama-gaLa saM — preeti- poorvaka — nitya- smarisuva-ra ||
shreema-nOhara — navaru- bEDida |
kaami-taarthaga — Littu -tanna tri- |
dhaama-doLaganu — dinada-liTTaa — naMda- paDisuva-nu || 24-30 ||

ee sa-meerage — nooru- janma ma- |
haa su-kha praa — rabdha- bhOga pra- |
yaasa-villada — laidi-danu lO — kaadhi-patyava-nu ||
bhoosu-rana o — ppiDi a-valige vi- |
shESha- soukhyava — nitta- daatana |
daasa-varyanu — lOka-patiyeni — suvudu- accari-ye || 24-31 ||

dwishata- kalpaga — Lalli- biDadee- |
pesari-niMdali — karesi-danu ta- |
nnoshaga-ramararo — LiTTu- maaDuva — navara- saadhana-va ||
asadu-paasane — gaiva- kalyaa- |
dyasura-para saM — harisi- taa poM- |
basira- pada vai — didanu- guru pava — maana- satiyoDa-ne || 24-32 ||

animi-Shara naa — madali- karesuva |
nanila-dEvanu — oMdu- kalpadi |
vanaja- saMbhava — nenisi- eMbha — ttELu-vare varu-Sha ||
guNada- traya va — rjitana -maMgaLa |
guNada- krIya su — roopa-gaLupaa-
saneya-navya — ktaadi- pRuthwyaM — tarada-lirutihu-du || 24-33 ||

mahita- RujugaNa — koMde- paramO- |
tsaha vi-varjita — veMba- dOShavu |
vihita-vE sari — idanu- pELdire — mukta- brahmari-ge ||
bahudu- saamya — j~jaana- bhakutiyu |
druhiNa- pada pari — yaMta- vRuddhiyu |
bahiru-paasane — yuMTa-naMtara — biMba- darshana-vu || 24-34 ||

jjaana-rahita bha — yatwa- pELwa pu- |
raaNa- daityara — mOha-kavu catu- |
raana-nage koo — Duvude- mOhaa — j
jaana- bhaya shO-ka ||
bhaanu- maMDala — calisi-daMdadi |
kaaNu-vudu dRu — gdOSha-diMdali |
shreeni-vaasana — preeti-gOsuga — tOrda-nallada-le || 24-35 ||

kamala- saMbhava — sarva-roLagu – |
ttamane-nisuvanu — ella- kaaladi |
vimala- bhakuti — j~jaana- vairaa — gyaadi- guNadiM-da ||
sama-bhyadhikavi — varji-tana guNa |
rameya- mukhadiM — daritu- nityadi |
dyumaNi- kOTiga — LaMte- kaaMbanu — biMba- roopava-nu || 24-36 ||

jjaana- bhaktyaa — dyakhiLa- guNa catu- |
raana-nOLagi — ppaMte- mukhya- |
praaNa-nali ciM — tipudu- yatkiM — cit ko-rateyaa-gi ||
nyoona- RujugaNa — jeeva-ralli kra- |
mENa- vRuddhi — j
jaana- bhakuti sa- |
maana- bhaarati — vaaNi-gaLali pa — da pra-yuktadhi-ka || 24-37 ||

souri- sooryana — teradi- brahma sa- |
meera- gaaya — trI gi-rigaLoLu- |
tOru-vudu a — spaShTa- roopadi — mukti- pariyaM-ta ||
vaari-jaasana — vaayu- vaaNI- |
bhaara-tigaLige — maaha- praLayadi- |
baara-daj~jaa — naadi- dOShavu — harikRu-paa bala-di || 24-38 ||

nooru- varuShaa — naMta-radali sa- |
rOru-haasana — tanna- kalpada- |
laaru- muktiya — naidu-varo ava — ravara- karedo-ydu ||
shouri- puradoLa — gippa- nadiyali |
kaaru-Nika su — snaana- nijapari- |
vaara- sahitadi — maaDi- hariyuda — ra pra-vEshisu-va || 24-39 ||

vaasu-dEvana — udara-dalli pra- |
vEsha-gaidaa — naMta-radi ni- |
rdOSha- muktaru — udara-diM pora — maTTu- haruShada-li ||
eesha-niMdaa — j~jeya pa-DedanaM- |
taasa-na sita — dweepa- mOkShadi |
vaasa-vaagi vi — mukta- duHkharu — saMca-risutiha-ru || 24-40 ||

satwa- satwa ma — haa su-sookShmavu- |
satwa- satwaa — tmaka ka-LEvara |
satya-lOkaa — dhipane-nipaga — tyalpa-veraDugu-Na ||
mukti- yOgyavi — dalla-jaaMDO- |
tpatti- kaaraNa — valla- hariprI- |
tyartha-vaagee — jagada- vyaapaa — ragaLa- maaDuva-nu || 24-41 ||

paada- nyoona sha — taabda- pariyaM- |
tOdi- ugrata — paahwa-yadi lava- |
NOda-dhiyoLage — kalpa-dasha tapa — vidda-naMtara-di ||
saadhi-sida maha — dEva- padavaa- |
raidu- navaka — lpaava-saanake |
aidu-vanu taa — shESha-padavanu — paarva-tI sahi-ta || 24-42 ||

iMdra- manu dasha — kalpa-gaLali su- |
naMda- naamadi — shravaNa-gaidu mu- |
kuMda-naparO — kShaartha- naalku su — kalpa- tapavi-ddu ||
noMdu- pogeyoLu — kOTi- varuSha pu- |
raMda-ranu ada — nuMDa-naMtara |
poMdi-danu nija — lOka- surapati — kaama-nidaraM-te || 24-43 ||

karesu-varu poo — rvadali- caMdraa- |
rkarati- shaaMta su — roopa- naamadi |
eraDe-raDu manu — kalpa- shravaNava — gaidu- manuka-lpa ||
vara ta-pObala — diMda-larvaak |
shiraga-Laagee — raidu- saavira |
varuSha- duHkhava — neegi- kaaMbaru — biMba-roopava-nu || 24-44 ||

saadha-nagaLapa — rOkSha- naMtara |
aidu-varu mO — kShavanu- shiva sha- |
kraadi- divijaru — ukta-kramadiM — kalpa- saMkhyeya-li ||
aida-leyagai — vattu-pEMdra sa- |
hOda-ranigi — ppattu- dwinava twa- |
gaadhi-pati praa — Nanige- guru manu — gaLige- ShODasha-vu || 24-45 ||

pravaha- marutage — hanne-raDu saiM |
dhava di-vaakara — dharma-rige dasha |
nava su-kalpavu — mitra-rige shE — Shashata- janakeM-Tu ||
kavi sa-nakanu su — naMda-na sana- |
tkuvara- munigaLi — gELu- varuNana |
yuvati- parja — nyaadi- puShkara — gaaru- kalpada-li || 24-46 ||

aidu- karmaja — surari-gaajaa- |
naadi-gaLigera — DeraDu- kalpaa- |
rdhaadi-katraya — gOpi-kaastree — yaru pi-tRutraya-vu ||
ee di-voukasa — manuja- gaayaka- |
raidu-varu era — DoMdu- kalpana- |
raadhi-parigare — kalpa-doLagapa — rOkSha-virutihu-du || 24-47 ||

deepa-gaLananu — sarisi- deeptiyu- |
vyaapi-si mahaa — timira- kaLedu pa- |
rOpa-kaarava — maaLpa- teradaM — dadali- paramaa-tma ||
aa pa-yOjaa — sanaro-Liddu swa- |
roopa- shaktiya — vyakti-gaisuta |
taa po-Levanava — raMte- cEShTeya — maaDi- maaDisu-va || 24-48 ||

swOda-rasthita — praaNa- rudrEM- |
draadi- surarige — dEha-gaLa ko- |
TTaada-radalava — ravara- sEveya — koMba-nanavara-ta ||
mOda- bOdha da — yaabdhi- tannava |
raadhi- rOgava — kaLedu- mahadapa |
raadha-gaLa nO — Dadale- salahuva — satata- smarisuva-ra || 24-49 ||

prati pra-tI ka — lpadali- sRuShTi- |
sthiti la-yava maa — Dutali- mOdipa |
catura-mukha pava — maana-rannava — maaDi- bhuMjisu-va ||
ghRutave- mRutyuM — jayane-nipa dE- |
vatega-LE upa — sEcana-ru shree- |
patige- moorjaga — vella- vOdana — tithiye-nisikoM-ba || 24-50 ||

garbhi-NeestrI — yuMDa- bhOjana |
garbha-gata shishu — vuMba- teradali |
nirbha-yanu taa — nuMDu-Nisuvanu — sarva- jeevari-ge ||
nirba-lati para — maaNu- jeevage |
abbu-vude sthoo — laanna- bhOjana |
arbha-karu pE — Luvaru- kOvida — ridano-DaMbaDa-ru || 24-51 ||

apaca-yagaLi — lluMDa-dadariM- |
dupaca-yagaLi — llamara-gaNadoLa- |
gupama-renisuva — rilla- janmaa — digaLu- modali-lla ||
apari-mita sa — nmahima- narahari |
apuna-raava — rtaranu- maaDuva |
kRupaNa- vatsala — swapada- soukhyava — nittu- sharaNari-ge || 24-52 ||

bitti- beejava — bhoomi-yoLu nee- |
retti- beLesida — beLasu- praaMtake |
kitti- meluvaM — dadali- lakumI — ramaNa- lOkaga-La ||
matte- jeevara — karma- kaalO- |
tpatti- sthitilaya — maaDu-tali sama- |
varti-yenisuva — khEda- mOdaga — Lilla- anavara-ta || 24-53 ||

shwasana- rudrEM — draadi-vara suma- |
nasaro-Liddaru — kShutpi-paasaga |
Loshado-Lippuvu — sakala- bhOgake — saadha-nagaLaa-gi ||
asura- prEta pi — shaaca-gaLa baa- |
dhisuta-lippavu — dinadi-nadi maa- |
nisaro-Lage mRuga — pakShi- jeevaro — Liddu- pOguva-vu || 24-54 ||

vaasu-dEvage — swapna- supti pi- |
paasa- kShude bhaya — shOka- mOhaa- |
yaasa- vismRuti — maatsa-riya mada — puNya- paapaa-di ||
dOSha- varjita — neMdu- brahma sa- |
daashi-vaadi sa — masta- divijaru- |
paasa-neya gai — della- kaaladi — mukta-raagiha-ru || 24-55 ||

parama- sookShma — kShaNava-yidu tRuTi |
karesu-vadu ai — vattu- tRuTi lava- |
veraDu- lava nimi — ShagaLu- nimiShaga — LeMTu- maatra yu-ga ||
guruda-sha praa — Naaru-paLa ha- |
nneraDu- baaNavu — ghaLige- triMshati |
iruLu- hagalara — vattu- GaTikega — LahO-raatriga-Lu || 24-56 ||

ee di-vaaraa — trigaLe-raDu hadi- |
naidu- pakShaga — LeraDu- maasaga- |
Laada-pavu maa — sadwa-yave Rutu — Rututra-yagaLaya-na ||
aidu-vavu aya — na dwa-yaabja kRu- |
taadi- yugagaLu — dEva-maanadi |
dwaada-sha saha — sra varu-ShagaLaha — vadanu- pELuve-nu || 24-57 ||

catura- saavira — deMTu- nooravu |
kRutayu-gake trisa — hasra- sale ShaT |
shatavu- trEtege — dwaapa-rake dwisa — hasra- naanoo-ru ||
ditija- pati kali — yugake- saavira |
shataga-Ladwaya — kooDi- ee dE- |
vatega-Lige ha — nneraDu- saavira — vahavu- varuShaga-Lu || 24-58 ||

prathama- yugakE — Ladhika-areviM- |
shati su-lakShaa — ShTOtra- shataviM- |
shata sa-hasra ma — nuShya- maanaa — bdagaLu- ShaNNava-ti ||
mita sa-hasrada — lakSha- dwaadasha |
dwitiya- tRutiyake — eMTu- lakShada |
catura-ShaShThi sa — hasra- kaligida — rardha- ciMtipu-du || 24-59 ||

moora-dhika naa — lwattu- lakShada |
laaru- moorera — Dadhika- saavira |
veere-raDu yuga — varuSha- saMkhyeya — gaiya-lenitihu-do ||
soori- peccise — saavi-rada naa- |
nooru- moova — tteraDu- kOTi sa- |
rOru-haasana — gidu di-vasaveM — baru vi-pashcita-ru || 24-60 ||

shatadhRu-tige ee — divasa-gaLa triM- |
shatiyu- maasa — dwaada-shaabdavu |
shatave-raDaroLu — sarva- jeevO — tpatti- sthitilaya-vu ||
shruti- smRutigaLu — pELu-tihava- |
cyutage- nimiShavi — deMdu- sukha shaa- |
shwatage- paasaTe — yeMbu-vare bra — hmaadi- divijara-nu || 24-61 ||

aadi- madhyaaM — tagaLu- illada |
maadha-vagidupa — caara-veMdu Ru- |
gaadi- vEda pu — raaNa-gaLu pE — Luvavu- nityada-li ||
mOda-mayanaa — nugra-hava saM- |
paadi-si ramaa — brahma- rudrEM- |
draadi-gaLu taM — tamma- padaviya — naidi- sukhisuva-ru || 24-62 ||

ee ka-thaamRuta — paana- sukha suvi- |
vEki-gaLiga — lladale- vaiShika- |
vyaaku-la kuci — ttarige- dorevude — yaava-kaalada-li ||
lOka-vaarteya — biTTu- idanava |
lOki-suta mO — dipari-golidu kRu- |
paaka-ra jaga — nnaatha-viThThala — poreva-nanudina-di || 24-63 ||

|| iti shree kalpasaadhana saMdhi saMpoorNaM ||
|| ( iti shree aparOkSha taaratamya saMdhi saMpoorNaM ) ||
|| shree kRuShNaarpaNamastu ||

25. Arohana taratamya Sandhi

Leave a Reply

You might also like

error: Content is protected !!