Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೧೩. ನಾಮಸ್ಮರಣ ಸಂಧಿ
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಮಕ್ಕ-ಳಾಡಿಸು — ವಾಗ- ಮಡದಿಯೊ- |
ಳಕ್ಕ-ರದಿ ನಲಿ — ವಾಗ- ಹಯ ಪ- |
ಲ್ಲಕ್ಕಿ- ಗಜ ಮೊದ — ಲಾದ- ವಾಹನ — ವೇರಿ- ಮೆರೆವಾ-ಗ ||
ಬಿಕ್ಕು-ವಾಗಾ — ಕಳಿಸು-ತಲಿ ದೇ |
ವಕ್ಕಿ- ತನಯನ — ಸ್ಮರಿಸು-ತಿಹ ನರ |
ಸಿಕ್ಕ- ಯಮದೂ — ತರಿಗೆ- ಆವಾ — ವಲ್ಲಿ- ನೋಡಿದ-ರು || ೧೩-೧ ||
ಸರಿತು- ಪ್ರವಹಗ — ಳಲ್ಲಿ- ದಿವ್ಯಾಂ- |
ಬರದಿ- ಪತ್ರಾ — ದಿಯಲಿ- ಹರ್ಷಾ- |
ಮರ್ಷ- ವಿಸ್ಮೃತಿ — ಯಿಂದ-ಲಾಗಲಿ — ಒಮ್ಮೆ- ಬಾಯ್ದೆರೆ-ದು ||
ಹರಿ ಹ-ರೀ ಹರಿ — ಯೆಂಬ- ಎರಡ- |
ಕ್ಷರ ನು-ಡಿದ ಮಾ — ತ್ರದಲಿ- ದುರಿತ ಗ- |
ಳಿರದೆ- ಪೋಪವು — ತೂಲ- ರಾಶಿಯೊ — ಳನಲ- ಪೊಕ್ಕಂ-ತೆ || ೧೩-೨ ||
ಮಲಗು-ವಾಗಲಿ — ಏಳು-ವಾಗಲಿ |
ಕುಳಿತು- ಮಾತಾ — ಡುತಲಿ- ಮನೆಯೊಳು |
ಕೆಲಸ-ಗಳ ಮಾ — ಡುತಲಿ- ಮೈದೊಳೆ — ವಾಗ- ಮೆಲುವಾ-ಗ ||
ಕಲುಷ- ದೂರನ — ಸಕಲ- ಠಾವಿಲಿ |
ತಿಳಿಯೆ- ತತ್ತ — ನ್ನಾಮ- ರೂಪವ |
ಬಳಿಯ-ಲಿಪ್ಪನು — ಒಂದ-ರಕ್ಷಣ — ಬಿಟ್ಟ-ಗಲನವ-ರ || ೧೩-೩ ||
ಆವ-ಕುಲದವ — ನಾದ-ರೇನಿ- |
ನ್ನಾವ- ದೇಶದೊ — ಳಿದ್ದೊ-ಡೇನಿ- |
ನ್ನಾವ- ಕರ್ಮವ — ಮಾಡ-ಲೇನಿ — ನ್ನಾವ- ಕಾಲದ-ಲಿ ||
ಶ್ರೀವ-ರನ ಸ — ರ್ವತ್ರ-ದಲಿ ಸಂ- |
ಭಾವಿ-ಸುತ ಪೂ — ಜಿಸುತ- ಮೋದಿಪ |
ಕೋವಿ-ದರಿಗುಂ — ಟೇನೊ- ಭಯ ದುಃ — ಖಾದಿ- ದೋಷಗ-ಳು || ೧೩-೪ ||
ವಾಸು-ದೇವನ — ಗುಣ ಸ-ಮುದ್ರ ದೊ- |
ಳೀಸ- ಬಲ್ಲವ — ಭವ ಸ-ಮುದ್ರಾ- |
ಯಾಸ-ವಿಲ್ಲದೆ — ದಾಟು-ವನು ಶೀ — ಘ್ರದಲಿ- ಜಗದೊಳ-ಗೆ ||
ಬೇಸ-ರದೆ ದು — ರ್ವಿಷಯ-ಗಳ ಅಭಿ- |
ಲಾಷೆ-ಯಲಿ ಬಳ — ಲುವವ- ನಾನಾ- |
ಕ್ಲೇಶ-ಗಳನನು — ಭವಿಪ- ಭಕ್ತಿ ಸು — ಮಾರ್ಗ- ಕಾಣದ-ಲೆ || ೧೩-೫ ||
ಸ್ನಾನ- ಜಪ ದೇ — ವಾರ್ಚ-ನೆಯು ವ್ಯಾ- |
ಖ್ಯಾನ- ಭಾರತ — ಮುಖ- ಮಹೋಪಪು- |
ರಾಣ- ಕಥೆಗಳ — ಪೇಳಿ- ಕೇಳಿದ — ರೇನು- ದಿನದಿನ-ದಿ ||
ಜ್ಞಾನ- ಕರ್ಮೇಂ — ದ್ರಿಯಗ-ಳಿಂದೇ- |
ನೇನು- ಮಾಡುವ — ಕರ್ಮ-ಗಳು ಲ- |
ಕ್ಷ್ಮೀನಿ-ವಾಸನ — ಪೂಜೆ- ಎಂದ — ರ್ಪಿಸದ- ಮಾನವ-ನು || ೧೩-೬ ||
ದೇವ- ಗಂಗೆಯೊ — ಳುಳ್ಳ-ವಗೆ ದುರಿ- |
ತಾವ-ಳಿಗಳುಂ — ಟೇ ವಿ-ಚಾರಿಸೆ |
ಪಾವು-ಗಳ ಭಯ — ಉಂಟೆ- ವಿಹಗಾ — ಧಿಪನ- ಮಂದಿರ-ದಿ ||
ಜೀವ- ಕರ್ತೃ — ತ್ವವನು- ಮರೆದು ಪ-|
ರಾವ-ರೇಶನೆ — ಕರ್ತೃ-ಯೆಂದರಿ |
ದಾವ- ಕರ್ಮವ — ಮಾಡಿ-ದರು ಲೇ — ಪಿಸವು- ಕರ್ಮಗ-ಳು || ೧೩-೭ ||
ಏನು- ಮಾಡುವ — ಪುಣ್ಯ- ಪಾಪಗ- |
ಳಾನೆ- ಮಾಡುವೆ — ನೆಂಬು-ವಾಧಮ |
ಹೀನ- ಕರ್ಮಕೆ — ಪಾತ್ರ- ನಾ ಪು — ಣ್ಯಕ್ಕೆ- ಹರಿಯೆಂ-ಬ ||
ಮಾನ-ವನು ಮ — ಧ್ಯಮನು- ದ್ವಂದ್ವಕೆ |
ಶ್ರೀನಿ-ವಾಸನೆ — ಕರ್ತೃ-ವೆಂದು ಸ- |
ದಾನು-ರಾಗದಿ — ನೆನೆದು- ಸುಖಿಸುವ — ರೇ ನ-ರೋತ್ತಮ-ರು || ೧೩-೮ ||
ಈ ಉ-ಪಾಸನೆ — ಗೈವ-ರಿಳೆಯೊಳು |
ದೇವ-ತೆಗಳ — ಲ್ಲದಲೆ- ನರರ- |
ಲ್ಲಾವ- ಬಗೆಯಿಂ — ದಾದ-ರಿವರ — ರ್ಚನೆಯು- ಹರಿಪೂ-ಜೆ ||
ಕೇವ-ಲ ಪ್ರತಿ — ಮೆಗಳೆ-ನಿಪರು ರ- |
ಮಾ ವಿ-ನೋದಿಗೆ — ಇವರ-ನುಗ್ರಹ- |
ವೇ ವ-ರಾನು — ಗ್ರಹವೆ-ನಿಸುವುದು — ಮುಕ್ತಿ- ಯೋಗ್ಯರಿ-ಗೆ || ೧೩-೯ ||
ತನುವೆ- ನಾನೆಂ — ಬುವನು- ಸತಿ ಸುತ- |
ಮನೆ ಧ-ನಾದಿಗ — ಳೆನ್ನ-ದೆಂಬುವ |
ದ್ಯುನದಿ- ಮೊದಲಾ — ದುದಕ-ಗಳೆ ಸ — ತ್ತೀರ್ಥ-ವೆಂಬುವ-ನು ||
ಅನಲ- ಲೋಹಾ — ದಿ ಪ್ರ-ತೀಕಾ- |
ರ್ಚನೆಯೆ- ದೇವರ — ಪೂಜೆ- ಸುಜನರ |
ಮನುಜ-ರಹುದೆಂ — ಬುವನೆ- ಗೋಖರ — ನೆನಿಪ- ಬುಧರಿಂ-ದ || ೧೩-೧೦ ||
ಅನಲ- ಸೋಮಾ — ರ್ಕೇಂದು- ತಾರಾ- |
ವನಿ ಸು-ರಾಪಗ — ಮುಖ್ಯ- ತೀರ್ಥಗ- |
ಳನಿಲ- ಗಗನ ಮ — ನಾದಿ- ಇಂದ್ರಿಯ — ಗಳಿಗೆ- ಅಭಿಮಾ-ನಿ ||
ಎನಿಪ- ಸುರರು ವಿ — ಪಶ್ಚಿ-ತರು ಸ- |
ನ್ಮನದಿ- ಭಜಿಸದ — ಲಿಪ್ಪ-ವರ ಪಾ- |
ವನವ- ಮಾಡರು — ತಮ್ಮ- ಪೂಜೆಯ — ಮಾಡಿ-ದರು ಸರಿ-ಯೆ || ೧೩-೧೧ ||
ಕೆಂಡ- ಕಾಣದೆ — ಮುಟ್ಟಿ-ದರು ಸರಿ |
ಕಂಡು- ಮುಟ್ಟಲು — ದಹಿಸ- ದಿಪ್ಪುದೆ |
ಪುಂಡ-ರೀಕದ — ಳಾಯ-ತಾಕ್ಷನ — ವಿಮಲ- ಪದ ಪ-ದ್ಮ- |
ಬಂಡು-ಣಿಗಳೆಂ — ದೆನಿಪ- ಭಕ್ತರ |
ಹಿಂಡು- ನೋಡಿದ — ಮಾತ್ರ-ದಲಿ ತನು |
ದಿಂಡು- ಗೆಡಹಿದ — ನರರ- ಪಾವನ — ಮಾಳ್ಪ-ರಾಕ್ಷಣ-ದಿ || ೧೩-೧೨ ||
ಈ ನಿ-ಮಿತ್ತ ಪು — ನಃ ಪು-ನಃ ಸು- |
ಜ್ಞಾನಿ-ಗಳ ಸಹ — ವಾಸ- ಮಾಡು ಕು- |
ಮಾನ-ವರ ಕೂ — ಡಾಡ-ದಿರು ಲೌ — ಕಿಕಕೆ- ಮರುಳಾ-ಗಿ ||
ವೈನ-ತೇಯಾಂ — ಸಗನ- ಸರ್ವ- |
ಸ್ಥಾನ-ದಲಿ ತ — ನ್ನಾಮ- ರೂಪವ |
ಧೇನಿ-ಸುತ ಸಂ — ಚರಿಸು- ಇತರಾ — ಲೋಚ-ನೆಯ ಬಿ-ಟ್ಟು || ೧೩-೧೩ ||
ಈ ನ-ಳಿನಜಾಂ — ಡದೊಳು- ಸರ್ವ- |
ಪ್ರಾಣಿ-ಗಳೊಳಿ — ದ್ದನವ-ರತ ವಿ- |
ಜ್ಞಾನ-ಮಯ ವ್ಯಾ — ಪಾರ-ಗಳ ಮಾ — ಡುವನು- ತಿಳಿಸದ-ಲೆ ||
ಏನು- ಕಾಣದೆ — ಸಕಲ- ಕರ್ಮಗ- |
ಳಾನೆ- ಮಾಡುವೆ — ನೆಂಬ- ನರನು ಕು- |
ಯೋನಿ-ಯೈದುವ — ಕರ್ತೃ- ಹರಿ ಎಂ — ದವನೆ- ಮುಕ್ತನ-ಹ || ೧೩-೧೪ ||
ಕಲಿಮ-ಲಾಪಹ — ಳೆನಿಸು-ತಿಹ ಬಾಂ- |
ಬೊಳೆಯೊ-ಳಗೆ ಸಂ — ಚರಿಸಿ- ಬದುಕುವ |
ಜಲಚ-ರ ಪ್ರಾ — ಣಿಗಳು- ಬಲ್ಲವೆ — ತೀರ್ಥ- ಮಹಿಮೆಯ-ನು ||
ಹಲವು- ಬಗೆಯಲಿ — ಹರಿಯ- ಕರುಣಾ- |
ಬಲದಿ- ಬಲ್ಲಿದ — ರಾದ- ಬ್ರಹ್ಮಾ- |
ನಿಲ ವಿ-ಪೇಶಾ — ದ್ಯಮರ-ರರಿಯರ — ನಂತ-ನಮಲ ಗು-ಣ || ೧೩-೧೫ ||
ಶ್ರೀಲ-ಕುಮಿವ — ಲ್ಲಭನು- ಹೃತ್ಕೀ- |
ಲಾಲ-ಜದೊಳಿ — ದ್ದಖಿಲ- ಚೇತನ- |
ಜಾಲ-ವನು ಮೋ — ಹಿಸುವ- ತ್ರಿಗುಣದಿ — ಬದ್ಧ-ರನು ಮಾ-ಡಿ ||
ಸ್ಥೂಲ- ಕರ್ಮದಿ — ರತರ- ಮಾಡಿ ಸ್ವ- |
ಲೀಲೆ-ಗಳ ತಿಳಿ — ಸದಲೆ- ಭವದಿ ಕು- |
ಲಾಲ- ಚಕ್ರದ — ತೆರದಿ- ತಿರುಗಿಸು — ತಿಹನು- ಮಾನವ-ರ || ೧೩-೧೬ ||
ವೇದ- ಶಾಸ್ತ್ರ ವಿ — ಚಾರ-ಗೈದು ನಿ- |
ಷೇಧ- ಕರ್ಮವ — ತೊರೆದು- ನಿತ್ಯದಿ |
ಸಾಧು- ಕರ್ಮವ — ಮಾಳ್ಪ-ರಿಗೆ ಸ್ವ — ರ್ಗಾದಿ- ಸುಖವೀ-ವ ||
ಐದಿ-ಸುವ ಪಾ — ಪಿಗಳ- ನಿರಯವ |
ಖೇದ- ಮೋದ ಮ — ನುಷ್ಯ-ರಿಗೆ ದು- |
ರ್ವಾದಿ-ಗಳಿಗಂ — ಧಂತ-ಮದಿ ಮಹ — ದುಃಖ-ಗಳನುಣಿ-ಪ || ೧೩-೧೭ ||
ನಿರ್ಗು-ಣೋಪಾ — ಸಕಗೆ- ಗುಣ ಸಂ- |
ಸರ್ಗ- ದೋಷಗ — ಳೀಯ-ದಲೆ ಅಪ- |
ವರ್ಗ-ದಲಿ ಸುಖ — ವಿತ್ತು- ಪಾಲಿಸು — ವನು ಕೃ-ಪಾ ಸಾಂ-ದ್ರ ||
ದುರ್ಗ-ಮನು ಎಂ — ದೆನಿಪ- ತ್ರೈವಿ- |
ದ್ಯರ್ಗೆ- ತ್ರಿಗುಣಾ — ತೀತ- ಸಂತತ |
ಸ್ವರ್ಗ- ಭೂ ನರ — ಕದಲಿ- ಸಂಚಾ — ರವನೆ- ಮಾಡಿಸು-ವ || ೧೩-೧೮ ||
ಮೂವ-ರೊಳಗಿ — ದ್ದರು ಸ-ರಿಯೆ ಸುಖ- |
ನೋವು-ಗಳು ಸಂ — ಬಂಧ-ವಾಗವು |
ಪಾವ-ನಕೆ ಪಾ — ವನ ಪ-ರಾತ್ಪರ — ಪೂರ್ಣ- ಸುಖವನ-ಧಿ ||
ಈ ವ-ನರುಹ ಭ — ವಾಂಡ-ದೊಳು ಸ್ವ ಕ- |
ಳೇವ-ರ ತದಾ — ಕಾರ- ಮಾಡಿ ಪ- |
ರಾವ-ರೇಶ ಚ — ರಾಚ-ರಾತ್ಮಕ — ಲೋಕ-ಗಳ ಪೊರೆ-ವ || ೧೩-೧೯ ||
ಆ ನಿ-ಮಿತ್ತ ನಿ — ರಂತ-ರ ಸ್ವಾ- |
ಧೀನ- ಕರ್ತೃ — ತ್ವವನು- ಮರೆದೇ- |
ನೇನು- ಮಾಡುವು — ದೆಲ್ಲ- ಹರಿ ಒಳ — ಹೊರಗೆ- ನೆಲೆಸಿ-ದ್ದು ||
ತಾನೆ- ಮಾಡುವ — ನೆಂದ-ರಿದು ಮ- |
ದ್ದಾನೆ-ಯಂದದಿ — ಸಂಚ-ರಿಸು ಪವ- |
ಮಾನ- ವಂದಿತ — ಒಂದ-ರೆಕ್ಷಣ — ಬಿಟ್ಟ-ಗಲ ನಿ-ನ್ನ || ೧೩-೨೦ ||
ಹಲವು- ಕರ್ಮವ — ಮಾಡಿ- ದೇಹವ |
ಬಳಲಿ-ಸದೆ ದಿನ — ದಿನದಿ- ಹೃದಯಾ- |
ಮಲಸ-ದನದಿ ವಿ — ರಾಜಿ-ಸುವ ಹರಿ — ಮೂರ್ತಿ-ಯನೆ ಭಜಿ-ಸು ||
ತಿಳಿಯ-ದೀ ಪೂ — ಜಾ ಪ್ರ-ಕರಣವ |
ಫಲ ಸು-ಪುಷ್ಪಾ — ಗ್ರ್ಯೋದ-ಕ ಶ್ರೀ- |
ತುಳಸಿ-ಗಳನ — ರ್ಪಿಸಲು- ಒಪ್ಪನು — ವಾಸು-ದೇವ ಸ-ದಾ || ೧೩-೨೧ ||
ಧರಣಿ- ನಾರಾ — ಯಣನು- ಉದಕದಿ |
ತುರಿಯ- ನಾಮಕ — ಅಗ್ನಿ-ಯೊಳು ಸಂ- |
ಕರುಷ-ಣಾಹ್ವಯ — ವಾಯು-ಗ ಪ್ರ — ದ್ಯುಮ್ನ-ನನಿರು-ದ್ಧ ||
ಇರುತಿ-ಹನು ಆ — ಕಾಶ-ದೊಳು ಮೂ- |
ರೆರಡು- ರೂಪವ — ಧರಿಸಿ- ಭೂತಗ |
ಕರೆಸು-ವನು ತ — ನ್ನಾಮ- ರೂಪದಿ — ಪ್ರಜರ- ಸಂತೈ-ಪ || ೧೩-೨೨ ||
ಘನಗ-ತನು ತಾ — ನಾಗಿ- ನಾರಾ- |
ಯಣನು- ತನ್ನಾ — ಮದಲಿ- ಕರೆಸುವ |
ವನದ- ಗರ್ಭೋ — ದಕದಿ- ನೆಲೆಸಿಹ — ವಾಸು-ದೇವಾ-ಖ್ಯ ||
ಧ್ವನಿ ಸಿ-ಡಿಲು ಸಂ — ಕರುಷ-ಣನು ಮಿಂ- |
ಚಿನೊಳು- ಶ್ರೀಪ್ರ — ದ್ಯುಮ್ನ- ವೃಷ್ಟಿಯ |
ಹನಿಗ-ಳೊಳಗನಿ — ರುದ್ಧ-ನಿಪ್ಪನು — ವರುಷ-ವೆಂದೆನಿ-ಸಿ || ೧೩-೨೩ ||
ಗೃಹ ಕು-ಟುಂಬ ಧ — ನಾದಿ-ಗಳ ಸ- |
ನ್ನಹಗ-ಳುಳ್ಳವ — ರಾಗಿ- ವಿಹಿತಾ- |
ವಿಹಿತ- ಧರ್ಮ ಸು — ಕರ್ಮ-ಗಳ ತಿಳಿ — ಯದಲೆ- ನಿತ್ಯದ-ಲಿ ||
ಅಹರ- ಮೈಥುನ — ನಿದ್ರೆ-ಗೊಳಗಾ- |
ಗಿಹರು- ಸರ್ವ — ಪ್ರಾಣಿ-ಗಳು ಹೃ- |
ದ್ಗುಹ ನಿ-ವಾಸಿಯ — ನರಿಯ-ದಲೆ ಭವ — ದೊಳಗೆ- ತೊಳಲುವ-ರು || ೧೩-೨೪ ||
ಜಡಜ- ಸಂಭವ — ಖಗ ಫ-ಣಿಪ ಕೆಂ- |
ಜೆಡೆ ಯ-ರಿಂದೊಡ — ಗೂಡಿ- ರಾಜಿಸು- |
ತಡವಿ-ಯೊಳಗಿ — ಪ್ಪನು ಸ-ದಾ ಗೋ — ಜಾದ್ರಿ-ಜನು ಎನಿ-ಸಿ ||
ಉಡುಪ-ನಿಂದಭಿ — ವೃದ್ಧಿ-ಗಳ ತಾ |
ಕೊಡುತ- ಪಕ್ಷಿ ಮೃ — ಗಾಹಿ-ಗಳ ಕಾ- |
ರೊಡಲ- ಕಾವನು — ತತ್ತ-ದಾಹ್ವಯ — ನಾಗಿ- ಜೀವರ-ನು || ೧೩-೨೫ ||
ಅಪರಿ-ಮಿತ ಸ — ನ್ಮಹಿಮ- ನರಹರಿ |
ವಿಪಿನ-ದೊಳು ಸಂ — ತೈಸು-ವನು ಕಾ- |
ಶ್ಯಪಿಯ-ನಳೆದವ — ಸ್ಥಳಗ-ಳಲಿ ಸ — ರ್ವತ್ರ- ಕೇಶವ-ನು ||
ಖಪತಿ- ಗಗನದಿ — ಜಲಗ-ಳಲಿ ಮಹ- |
ಶಫರ- ನಾಮಕ — ಭಕ್ತ-ರನು ನಿ- |
ಷ್ಕಪಟ-ದಿಂದಲಿ — ಸಲಹು-ವನು ಕರು — ಣಾಳು- ದಿನದಿನ-ದಿ || ೧೩-೨೬ ||
ಕಾರ-ಣಾಂತ — ರ್ಯಾಮಿ- ಸ್ಥೂಲವ- |
ತಾರ- ವ್ಯಾಪ್ತಾಂ — ಶಾದಿ- ರೂಪಕೆ |
ಸಾರ- ಶುಭ ಪ್ರವಿ — ವಿಕ್ತ- ನಂದ — ಸ್ಥೂಲ- ನಿಸ್ಸಾ-ರ ||
ಆರು- ರಸಗಳ — ನರ್ಪಿ-ಸಲ್ಪರಿ- |
ಗೀ ರ-ಹಸ್ಯವ — ಪೇಳ-ದೆ ಸದಾ- |
ಪಾರ- ಮಹಿಮನ — ರೂಪ- ಗುಣಗಳ — ನೆನೆದು- ಸುಖಿಸುತಿ-ರು || ೧೩-೨೭ ||
ಜಲಗ-ತೋಡುಪ — ನಮಲ- ಬಿಂಬವ |
ಮೆಲುವೆ-ನೆಂಬತಿ — ಹರುಷ-ದಿಂದಲಿ |
ಜಲಚ-ರ ಪ್ರಾ — ಣಿಗಳು- ನಿತ್ಯದಿ — ಯತ್ನ- ಗೈವಂ-ತೆ ||
ಹಲಧ-ರಾನುಜ — ಭೋಗ್ಯ- ರಸಗಳ |
ನೆಲೆಯ-ನರಿಯದೆ — ಪೂಜಿ-ಸುತ ಹಂ- |
ಬಲಿಸು-ವರು ಪುರು — ಷಾರ್ಥ-ಗಳ ಸ — ತ್ಕುಲಜ-ರಾವೆಂ-ದು || ೧೩-೨೮ ||
ದೇವ- ಋಷಿ ಗಂ — ಧರ್ವ- ಪಿತೃ ನರ- |
ದೇವ- ಮಾನವ — ದನುಜ- ಗೋಽಜ ಖ- |
ರಾವಿ- ಮೊದಲಾ — ದಖಿಲ- ಚೇತನ — ಭೋಗ್ಯ- ರಸಗಳ-ನು ||
ಯಾವ-ದವಯವ — ಗಳೊಳ-ಗಿದ್ದು ರ |
ಮಾವ-ರನು ಸ್ವೀ — ಕರಿಪ- ಯಾವ- |
ಜ್ಜೀವ- ಗಣಕೆ ಸ್ವ — ಯೋಗ್ಯ- ರಸಗಳ — ನಿಪ್ಪ-ನೆಂದೆಂ-ದು || ೧೩-೨೯ ||
ಒರಟು- ಬುದ್ಧಿಯ — ಬಿಟ್ಟು- ಲೌಕಿಕ- |
ಹರಟೆ-ಗಳನೀ — ಡಾಡಿ- ಕಾಂಚನ- |
ಪರಟಿ- ಲೋಷ್ಟಾ — ದಿಗಳು- ಸಮವೆಂ — ದರಿದು- ನಿತ್ಯದ-ಲಿ ||
ಪುರುಟ- ಗರ್ಭಾಂ — ಡೋದ-ರನು ಸ- |
ತ್ಪುರುಷ-ನೆಂದೆನಿ — ಸೆಲ್ಲ-ರೊಳಗಿ- |
ರ್ದುರುಟ- ಕರ್ಮವ — ಮಾಳ್ಪ-ನೆಂದಡಿ — ಗಡಿಗೆ- ನೆನೆವುತಿ-ರು || ೧೩-೩೦ ||
ಭೂತ-ಳದಿ ಜನ — ರುಗಳು- ಮರ್ಮಕ- |
ಮಾತು-ಗಳನಾ — ಡಿದರೆ- ಸಹಿಸದೆ |
ಘಾತಿ-ಸುವರತಿ — ಕೋಪ-ದಿಂದಲಿ — ಎಚ್ಚ-ರಿಪ ತೆರ-ದಿ ||
ಮಾತು-ಳಾಂತಕ — ಜಾರ- ಹೇ ನವ- |
ನೀತ- ಚೋರನೆ — ಎನಲು- ತನ್ನ ನಿ- |
ಕೇತ-ನದೊಳಿ — ಟ್ಟವರ- ಸಂತೈ — ಸುವನು- ಕರುಣಾ-ಳು || ೧೩-೩೧ ||
ಹರಿಕ-ಥಾಮೃತ — ಸಾರ-ವಿದು ಸಂ- |
ತರು ಸ-ದಾ ಚಿ — ತ್ತೈಸು-ವುದು ನಿ- |
ಷ್ಠುರಿಗ-ಳಿಗೆ ಪಿಶು — ನರಿಗ-ಯೋಗ್ಯರಿ — ಗಿದನು- ಪೇಳದ-ಲೆ ||
ನಿರುತ- ಸದ್ಭ — ಕ್ತಿಯಲಿ- ಭಗವ- |
ಚ್ಚರಿತೆ-ಗಳ ಕೊಂ — ಡಾಡಿ- ಹಿಗ್ಗುವ |
ಪರಮ- ಭಗವ — ದ್ದಾಸ-ರಿಗೆ ತಿಳಿ — ಸುವುದು- ರಾಹ-ಸ್ಯ || ೧೩-೩೨ ||
ಸತ್ಯ- ಸಂಕ — ಲ್ಪನು ಸ-ದಾ ಏ- |
ನಿತ್ತು-ದೇ ಪುರು — ಷಾರ್ಥ-ವೆಂದರಿ |
ದತ್ಯ-ಧಿಕ ಸಂ — ತೋಷ-ದಲಿ ನೆನೆ — ಯುತ್ತ- ಭುಂಜಿಪು-ದು ||
ನಿತ್ಯ- ಸುಖ ಸಂ — ಪೂರ್ಣ- ಪರಮ ಸು- |
ಹೃತ್ತ-ಮ ಜಗ — ನ್ನಾಥ-ವಿಠ್ಠಲ |
ಬತ್ತಿ-ಸಿ ಭವಾಂ — ಬುಧಿಯ- ಚಿತ್ಸುಖ — ವ್ಯಕ್ತಿ- ಕೊಡುತಿ-ಪ್ಪ || ೧೩-೩೩ ||
|| ಇತಿ ಶ್ರೀ ನಾಮಸ್ಮರಣ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||
- naamasmaraNa saMdhi
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
makka-LaaDisu — vaaga- maDadiyo- |
Lakka-radi nali — vaaga- haya pa- |
llakki- gaja moda — laada- vaahana — vEri- merevaa-ga ||
bikku-vaagaa — kaLisu-tali dE |
vakki- tanayana — smarisu-tiha nara |
sikka- yamadoo — tarige- aavaa — valli- nODida-ru || 13-1 ||
saritu- pravahaga — Lalli- divyaaM- |
baradi- patraa — diyali- harShaa- |
marSha- vismRuti — yiMda-laagali — omme- baaydere-du ||
hari ha-rI hari — yeMba- eraDa- |
kShara nu-Dida maa — tradali- durita ga- |
Lirade- pOpavu — toola- raashiyo — Lanala- pokkaM-te || 13-2 ||
malagu-vaagali — ELu-vaagali |
kuLitu- maataa — Dutali- maneyoLu |
kelasa-gaLa maa — Dutali- maidoLe — vaaga- meluvaa-ga ||
kaluSha- doorana — sakala- Thaavili |
tiLiye- tatta — nnaama- roopava |
baLiya-lippanu — oMda-rakShaNa — biTTa-galanava-ra || 13-3 ||
aava-kuladava — naada-rEni- |
nnaava- dEshado — Liddo-DEni- |
nnaava- karmava — maaDa-lEni — nnaava- kaalada-li ||
shreeva-rana sa — rvatra-dali saM- |
bhaavi-suta poo — jisuta- mOdipa |
kOvi-dariguM — TEno- bhaya duH — khaadi- dOShaga-Lu || 13-4 ||
vaasu-dEvana — guNa sa-mudra do- |
LIsa- ballava — bhava sa-mudraa- |
yaasa-villade — daaTu-vanu shI — ghradali- jagadoLa-ge ||
bEsa-rade du — rviShaya-gaLa abhi- |
laaShe-yali baLa — luvava- naanaa- |
klEsha-gaLananu — bhavipa- bhakti su — maarga- kaaNada-le || 13-5 ||
snaana- japa dE — vaarca-neyu vyaa- |
khyaana- bhaarata — mukha- mahOpapu- |
raaNa- kathegaLa — pELi- kELida — rEnu- dinadina-di ||
j~jaana- karmEM — driyaga-LiMdE- |
nEnu- maaDuva — karma-gaLu la- |
kShmIni-vaasana — pooje- eMda — rpisada- maanava-nu || 13-6 ||
dEva- gaMgeyo — LuLLa-vage duri- |
taava-LigaLuM — TE vi-caarise |
paavu-gaLa bhaya — uMTe- vihagaa — dhipana- maMdira-di ||
jeeva- kartRu — twavanu- maredu pa-|
raava-rEshane — kartRu-yeMdari |
daava- karmava — maaDi-daru lE — pisavu- karmaga-Lu || 13-7 ||
Enu- maaDuva — puNya- paapaga- |
Laane- maaDuve — neMbu-vaadhama |
heena- karmake — paatra- naa pu — Nyakke- hariyeM-ba ||
maana-vanu ma — dhyamanu- dwaMdwake |
shreeni-vaasane — kartRu-veMdu sa- |
daanu-raagadi — nenedu- sukhisuva — rE na-rOttama-ru || 13-8 ||
ee u-paasane — gaiva-riLeyoLu |
dEva-tegaLa — lladale- narara- |
llaava- bageyiM — daada-rivara — rcaneyu- haripoo-je ||
kEva-la prati — megaLe-niparu ra- |
maa vi-nOdige — ivara-nugraha- |
vE va-raanu — grahave-nisuvudu — mukti- yOgyari-ge || 13-9 ||
tanuve- naaneM — buvanu- sati suta- |
mane dha-naadiga — Lenna-deMbuva |
dyunadi- modalaa — dudaka-gaLe sa — tteertha-veMbuva-nu ||
anala- lOhaa — di pra-teekaa- |
rcaneye- dEvara — pooje- sujanara |
manuja-rahudeM — buvane- gOkhara — nenipa- budhariM-da || 13-10 ||
anala- sOmaa — rkEMdu- taaraa- |
vani su-raapaga — mukhya- teerthaga- |
Lanila- gagana ma — naadi- iMdriya — gaLige- abhimaa-ni ||
enipa- suraru vi — pashci-taru sa- |
nmanadi- bhajisada — lippa-vara paa- |
vanava- maaDaru — tamma- poojeya — maaDi-daru sari-ye || 13-11 ||
keMDa- kaaNade — muTTi-daru sari |
kaMDu- muTTalu — dahisa- dippude |
puMDa-reekada — Laaya-taakShana — vimala- pada pa-dma- |
baMDu-NigaLeM — denipa- bhaktara |
hiMDu- nODida — maatra-dali tanu |
diMDu- geDahida — narara- paavana — maaLpa-raakShaNa-di || 13-12 ||
ee ni-mitta pu — naH pu-naH su- |
j~jaani-gaLa saha — vaasa- maaDu ku- |
maana-vara koo — DaaDa-diru lou — kikake- maruLaa-gi ||
vaina-tEyaaM — sagana- sarva- |
sthaana-dali ta — nnaama- roopava |
dhEni-suta saM — carisu- itaraa — lOca-neya bi-TTu || 13-13 ||
ee na-LinajaaM — DadoLu- sarva- |
praaNi-gaLoLi — ddanava-rata vi- |
j~jaana-maya vyaa — paara-gaLa maa — Duvanu- tiLisada-le ||
Enu- kaaNade — sakala- karmaga- |
Laane- maaDuve — neMba- naranu ku- |
yOni-yaiduva — kartRu- hari eM — davane- muktana-ha || 13-14 ||
kalima-laapaha — Lenisu-tiha baaM- |
boLeyo-Lage saM — carisi- badukuva |
jalaca-ra praa — NigaLu- ballave — teertha- mahimeya-nu ||
halavu- bageyali — hariya- karuNaa- |
baladi- ballida — raada- brahmaa- |
nila vi-pESaa — dyamara-rariyara — naMta-namala gu-Na || 13-15 ||
shreela-kumiva — llabhanu- hRutkI- |
laala-jadoLi — ddakhila- cEtana- |
jaala-vanu mO — hisuva- triguNadi — baddha-ranu maa-Di ||
sthoola- karmadi — ratara- maaDi swa- |
leele-gaLa tiLi — sadale- bhavadi ku- |
laala- cakrada — teradi- tirugisu — tihanu- maanava-ra || 13-16 ||
vEda- shaastra vi — caara-gaidu ni- |
ShEdha- karmava — toredu- nityadi |
saadhu- karmava — maaLpa-rige swa — rgaadi- sukhavee-va ||
aidi-suva paa — pigaLa- nirayava |
khEda- mOda ma — nuShya-rige du- |
rvaadi-gaLigaM — dhaMta-madi maha — duHkha-gaLanuNi-pa || 13-17 ||
nirgu-NOpaa — sakage- guNa saM- |
sarga- dOShaga — LIya-dale apa- |
varga-dali sukha — vittu- paalisu — vanu kRu-paa saaM-dra ||
durga-manu eM — denipa- traivi- |
dyarge- triguNaa — teeta- saMtata |
swarga- bhoo nara — kadali- saMcaa — ravane- maaDisu-va || 13-18 ||
moova-roLagi — ddaru sa-riye sukha- |
nOvu-gaLu saM — baMdha-vaagavu |
paava-nake paa — vana pa-raatpara — poorNa- sukhavana-dhi ||
ee va-naruha bha — vaaMDa-doLu swa ka- |
LEva-ra tadaa — kaara- maaDi pa- |
raava-rEsha ca — raaca-raatmaka — lOka-gaLa pore-va || 13-19 ||
aa ni-mitta ni — raMta-ra swaa- |
dheena- kartRu — twavanu- maredE- |
nEnu- maaDuvu — della- hari oLa — horage- nelesi-ddu ||
taane- maaDuva — neMda-ridu ma- |
ddaane-yaMdadi — saMca-risu pava- |
maana- vaMdita — oMda-rekShaNa — biTTa-gala ni-nna || 13-20 ||
halavu- karmava — maaDi- dEhava |
baLali-sade dina — dinadi- hRudayaa- |
malasa-danadi vi — raaji-suva hari — moorti-yane bhaji-su ||
tiLiya-dee poo — jaa pra-karaNava |
phala su-puShpaa — gryOda-ka shree- |
tuLasi-gaLana — rpisalu- oppanu — vaasu-dEva sa-daa || 13-21 ||
dharaNi- naaraa — yaNanu- udakadi |
turiya- naamaka — agni-yoLu saM- |
karuSha-Naahwaya — vaayu-ga pra — dyumna-naniru-ddha ||
iruti-hanu aa — kaasha-doLu moo- |
reraDu- roopava — dharisi- bhootaga |
karesu-vanu ta — nnaama- roopadi — prajara- saMtai-pa || 13-22 ||
ghanaga-tanu taa — naagi- naaraa- |
yaNanu- tannaa — madali- karesuva |
vanada- garbhO — dakadi- nelesiha — vaasu-dEvaa-khya ||
dhwani si-Dilu saM — karuSha-Nanu miM- |
cinoLu- shreepra — dyumna- vRuShTiya |
haniga-LoLagani — ruddha-nippanu — varuSha-veMdeni-si || 13-23 ||
gRuha ku-TuMba dha — naadi-gaLa sa- |
nnahaga-LuLLava — raagi- vihitaa- |
vihita- dharma su — karma-gaLa tiLi — yadale- nityada-li ||
ahara- maithuna — nidre-goLagaa- |
giharu- sarva — praaNi-gaLu hRu- |
dguha ni-vaasiya — nariya-dale bhava — doLage- toLaluva-ru || 13-24 ||
jaDaja- saMbhava — khaga pha-Nipa keM- |
jeDe ya-riMdoDa — gooDi- raajisu- |
taDavi-yoLagi — ppanu sa-daa gO — jaadri-janu eni-si ||
uDupa-niMdabhi — vRuddhi-gaLa taa |
koDuta- pakShi mRu — gaahi-gaLa kaa- |
roDala- kaavanu — tatta-daahwaya — naagi- jeevara-nu || 13-25 ||
apari-mita sa — nmahima- narahari |
vipina-doLu saM — taisu-vanu kaa- |
shyapiya-naLedava — sthaLaga-Lali sa — rvatra- kEshava-nu ||
khapati- gaganadi — jalaga-Lali maha- |
shaphara- naamaka — bhakta-ranu ni- |
ShkapaTa-diMdali — salahu-vanu karu — NaaLu- dinadina-di || 13-26 ||
kaara-NaaMta — ryaami- sthoolava- |
taara- vyaaptaaM — shaadi- roopake |
saara- shubha pravi — vikta- naMda — sthoola- nissaa-ra ||
aaru- rasagaLa — narpi-salpari- |
gee ra-hasyava — pELa-de sadaa- |
paara- mahimana — roopa- guNagaLa — nenedu- sukhisuti-ru || 13-27 ||
jalaga-tODupa — namala- biMbava |
meluve-neMbati — haruSha-diMdali |
jalaca-ra praa — NigaLu- nityadi — yatna- gaivaM-te ||
haladha-raanuja — bhOgya- rasagaLa |
neleya-nariyade — pooji-suta haM- |
balisu-varu puru — Shaartha-gaLa sa — tkulaja-raaveM-du || 13-28 ||
dEva- RuShi gaM — dharva- pitRu nara- |
dEva- maanava — danuja- gO&ja kha- |
raavi- modalaa — dakhila- cEtana — bhOgya- rasagaLa-nu ||
yaava-davayava — gaLoLa-giddu ra |
maava-ranu swee — karipa- yaava- |
jjeeva- gaNake swa — yOgya- rasagaLa — nippa-neMdeM-du || 13-29 ||
oraTu- buddhiya — biTTu- loukika- |
haraTe-gaLanee — DaaDi- kaaMcana- |
paraTi- lOShTaa — digaLu- samaveM — daridu- nityada-li ||
puruTa- garbhaaM — DOda-ranu sa- |
tpuruSha-neMdeni — sella-roLagi- |
rduruTa- karmava — maaLpa-neMdaDi — gaDige- nenevuti-ru || 13-30 ||
bhoota-Ladi jana — rugaLu- marmaka- |
maatu-gaLanaa — Didare- sahisade |
ghaati-suvarati — kOpa-diMdali — ecca-ripa tera-di ||
maatu-LaaMtaka — jaara- hE nava- |
neeta- cOrane — enalu- tanna ni- |
kEta-nadoLi — TTavara- saMtai — suvanu- karuNaa-Lu || 13-31 ||
harika-thaamRuta — saara-vidu saM- |
taru sa-daa ci — ttaisu-vudu ni- |
ShThuriga-Lige pishu — nariga-yOgyari — gidanu- pELada-le ||
niruta- sadbha — ktiyali- bhagava- |
ccarite-gaLa koM — DaaDi- higguva |
parama- bhagava — ddaasa-rige tiLi — suvudu- raaha-sya || 13-32 ||
satya- saMka — lpanu sa-daa E- |
nittu-dE puru — Shaartha-veMdari |
datya-dhika saM — tOSha-dali nene — yutta- bhuMjipu-du ||
nitya- sukha saM — poorNa- parama su- |
hRutta-ma jaga — nnaatha-viThThala |
batti-si bhavaaM — budhiya- citsukha — vyakti- koDuti-ppa || 13-33 ||
|| iti shree naamasmaraNa saMdhi saMpoorNaM ||
|| shreekRuShNaarpaNamastu ||

Leave a Reply
You must be logged in to post a comment.