12. Nadiprakarana Sandhi – HKS

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Shri Kesava Rao Tadipatri

English Script

೧೨. ನಾಡೀಪ್ರಕರಣ ಸಂಧಿ

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

ವಾಸು-ದೇವನು — ಪ್ರಾಣ-ಮುಖ ತ- |
ತ್ವೇಶ-ರಿಂದಲಿ — ಸೇವೆ- ಕೈಕೊಳು- |
ತೀ ಶ-ರೀರದೊ — ಳಿಪ್ಪ- ಮೂವ — ತ್ತಾರು- ಸಾಹ-ಸ್ರ ||
ಈ ಸು-ನಾಡಿಗ — ಳೊಳಗೆ- ಶ್ರೀಭೂ- |
ಮೀ ಸ-ಮೇತ ವಿ — ಹಾರ-ಗೈವ ಪ- |
ರೇಶ-ನಮಲ ಸು — ಮೂರ್ತಿ-ಗಳ ಚಿಂ — ತಿಸುತ- ಹಿಗ್ಗುತಿ-ರು || ೧೨-೧ ||

ಚರಣ-ಗಳೊಳಿಹ — ನಾಡಿ-ಗಳು ಹ- |
ನ್ನೆರಡು- ಸಾವಿರ — ಮಧ್ಯ-ದೇಹ ದೊ-|
ಳಿರುತಿ-ಹವು ಹದಿ — ನಾಲ್ಕು- ಬಾಹುಗ — ಳೊಳಗೆ- ಈರೆರ-ಡು ||
ಶಿರದೊ-ಳಾರು ಸ — ಹಸ್ರ- ಚಿಂತಿಸಿ |
ಇರುಳು- ಹಗಲಭಿ — ಮಾನಿ- ದಿವಿಜರ- |
ನರಿತು-ಪಾಸನೆ — ಗೈವ-ರಿಳೆಯೊಳು — ಸ್ವರ್ಗ-ವಾಸಿಗ-ಳು || ೧೨-೨ ||

ಬೃಹತಿ- ನಾಮಕ — ವಾಸು-ದೇವನು |
ವಹಿಸಿ- ಪುಂ ಸ್ತ್ರೀ — ರೂಪ- ದೋಷ ವಿ- |
ರಹಿತ- ಎಪ್ಪ — ತ್ತೆರಡು- ಸಾವಿರ — ನಾಡಿ-ಗಳೊಳಿ-ದ್ದು ||
ದ್ರುಹಿಣ- ಮೊದಲಾ — ದಮರ- ಗಣ ಸ- |
ನ್ಮಹಿತ- ಸರ್ವ — ಪ್ರಾಣಿ-ಗಳ ಮಹ- |
ಮಹಿಮ- ಸಂತೈ — ಸುವನು- ಸಂತತ — ಪರಮ- ಕರುಣಾ-ಳು || ೧೨-೩ ||

ನೂರು- ವರುಷಕೆ — ದಿವಸ- ಮೂವ- |
ತ್ತಾರು- ಸಾವಿರ — ವಹವು- ನಾಡಿ ಶ- |
ರೀರ-ದೊಳಗಿನಿ — ತಿಹವು- ಎಂದರಿ — ತೊಂದು- ದಿವಸದ-ಲಿ ||
ಸೂರಿ-ಗಳ ಸ — ತ್ಕರಿಸಿ-ದವ ಪ್ರತಿ- |
ವಾರ-ದಲಿ ದಂ — ಪತಿಗ-ಳರ್ಚನೆ |
ತಾ ರ-ಚಿಸಿದವ — ಸತ್ಯ- ಸಂಶಯ — ವಿಲ್ಲ-ವೆಂದೆಂ-ದು || ೧೨-೪ ||

ಚತುರ-ವಿಂಶತಿ — ತತ್ತ್ವ-ಗಳು ತ-
ತ್ಪತಿಗ-ಳೆನಿಸುವ — ಬ್ರಹ್ಮ-ಮುಖ ದೇ- |
ವತೆಗ-ಳನುದಿನ — ಪ್ರತಿಪ್ರ-ತೀ ನಾ — ಡಿಗಳೊ-ಳಿರುತಿ-ದ್ದು ||
ಚತುರ-ದಶ ಲೋ — ಕದೊಳು- ಜೀವ- |
ಪ್ರತತಿ-ಗಳ ಸಂ — ರಕ್ಷಿ-ಸುವ ಶಾ- |
ಶ್ವತನ- ತತ್ತತ್ — ಸ್ಥಾನ-ದಲಿ ನೋ — ಡುತಲಿ- ಮೋದಿಪ-ರು || ೧೨-೫ ||

ಸತ್ಯ- ಸಂಕ — ಲ್ಪನು ಸ-ದಾ ಎ- |
ಪ್ಪತ್ತೆ-ರಡು ಸಾ — ಹಸ್ರ-ದೊಳು ಮೂ- |
ವತ್ತು-ನಾಲಕು — ಲಕ್ಷ-ದೈವ — ತ್ತಾರು- ಸಾಹ-ಸ್ರ ||
ಚಿತ್ಪ್ರ-ಕೃತಿಯೊಡ — ಗೂಡಿ- ಪರಮ ಸು- |
ನಿತ್ಯ- ಮಂಗಳ — ಮೂರ್ತಿ- ಭಕ್ತರ |
ತೆತ್ತಿ-ಗನು ತಾ — ನಾಗಿ- ಸರ್ವ — ತ್ರದಲಿ- ಸಂತೈ-ಪ || ೧೨-೬ ||

ಮಣಿಗ-ಳೊಳಗಿಹ — ಸೂತ್ರ-ದಂದದಿ |
ಪ್ರಣವ- ಪಾದ್ಯನು — ಸರ್ವ- ಚೇತನ- |
ಗಣದೊ-ಳಿದ್ದನ — ವರತ- ಸಂತೈ — ಸುವನು- ತನ್ನವ-ರ ||
ಪ್ರಣತ- ಕಾಮದ — ಭಕ್ತ- ಚಿಂತಾ- |
ಮಣಿ ಚಿ-ದಾನಂ — ದೈಕ- ದೇಹನು |
ಅಣು ಮ-ಹದ್ಗತ — ನಲ್ಪ-ರೋಪಾ — ದಿಯಲಿ- ನೆಲೆಸಿ-ಪ್ಪಾ || ೧೨-೭ ||

ಈ ಸು-ಷುಮ್ನಾ — ದ್ಯಖಿಲ- ನಾಡೀ- |
ಕೋಶ- ನಾಭೀ — ಮೂಲದಲಿ ವೃಷ- |
ಣಾಸ-ನದ ಮ — ಧ್ಯದಲಿ- ಇಪ್ಪದು — ತುಂದಿ-ನಾಮದ-ಲಿ ||
ಆ ಸ-ರೋಜಾ — ಸನ ಮು-ಖರು ಮೂ- |
ಲೇಶ-ನಾನಂ — ದಾದಿ- ಸುಗುಣೋ- |
ಪಾಸ-ನೆಯ ಗೈ — ವುತಲಿ- ದೇಹಗ — ಳೊಳಗೆ- ಇರುತಿಹ-ರು || ೧೨-೮ ||

ಸೂರಿ-ಗಳು ಚಿ — ತ್ತೈಸು-ವದು ಭಾ- |
ಗೀರ-ಥಿಯೆ ಮೊದ — ಲಾದ- ತೀರ್ಥಗ- |
ಳೀರ-ಧಿಕ ಎ — ಪ್ಪತ್ತು- ಸಾವಿರ — ನಾಡಿ-ಯೊಳಗಿಹ-ವು ||
ಈ ರ-ಹಸ್ಯವು — ಅಲ್ಪ- ಜನರಿಗೆ |
ತೋರಿ- ಪೇಳದೆ — ನಾಡಿ- ನದಿಯೊಳು |
ಧೀರ-ರನುದಿನ — ಮಜ್ಜ-ನವ ಮಾ — ಡುತಲಿ- ಸುಖಿಸುವ-ರು || ೧೨-೯ ||

ತಿಳಿವು-ದೀ ದೇ — ಹದೊಳ-ಗಿಹ ಎಡ- |
ಬಲದ- ನಾಡಿಗ — ಳೊಳಗೆ- ದಿವಿಜರು |
ಜಲಜ- ಸಂಭವ — ವಾಯು- ವಾಣ್ಯಾ — ದಿಗಳು- ಬಲದ-ಲ್ಲಿ ||
ಎಲರು-ಣಿಗ ವಿಹ — ಗೇಂದ್ರ- ಚಳಿವೆ- |
ಟ್ಟಳಿಯ- ಷಣ್ಮಹಿ — ಷಿಯರು- ವಾರುಣಿ- |
ಕುಲಿಶ-ಧರ ಕಾ — ಮಾದಿ-ಗಳು ಎಡ — ಭಾಗ-ದೊಳಗಿಹ-ರು || ೧೨-೧೦ ||

ಇಕ್ಕೆ-ಲದೊಳಿಹ — ನಾಡಿ-ಯೊಳು ದೇ- |
ವರ್ಕ-ಳಿಂದೊಡ — ನಾಡು-ತಲಿ ಪೊಂ- |
ಬಕ್ಕಿ-ದೇರನು — ಜೀವ-ರಧಿಕಾ — ರಾನು- ಸಾರದ-ಲಿ ||
ತಕ್ಕ- ಸಾಧನ — ಮಾಡಿ- ಮಾಡಿಸು – |
ತಕ್ಕ-ರದಿ ಸಂ — ತೈಪ- ಭಕ್ತರ |
ದಕ್ಕ-ಗೊಡನಸು — ರರಿಗೆ- ಸತ್ಪು — ಣ್ಯಗಳ-ನಪಹರಿ-ಪ || ೧೨-೧೧ ||

ತುಂದಿ- ವಿಡಿದಾ — ಶಿರದ- ಪರಿಯಂ- |
ತೊಂದೆ- ವ್ಯಾಪಿಸಿ — ಇಹುದು- ತಾವರೆ- |
ಕಂದ-ನಿಹನದ — ರೊಳಗೆ- ಅದಕೀ — ರೈದು- ಶಾಖೆಗ-ಳು ||
ಒಂದ-ಧಿಕ ದಶ — ಕರಣ-ದೊಳು ಸಂ- |
ಬಂಧ-ಗೈದಿಹ — ವಲ್ಲಿ- ರವಿ ಶಶಿ |
ಸಿಂಧು- ನಾಸ — ತ್ಯಾದಿ-ಗಳು ನೆಲೆ — ಗೊಂಡಿ-ಹರು ಸತ-ತ || ೧೨-೧೨ ||

ಪೊಕ್ಕ-ಳಡಿವಿಡಿ — ದೊಂದೆ- ನಾಡಿಯು |
ಸುಕ್ಕ-ದಲೆ ಧಾ — ರಾಳ- ರೂಪದಿ |
ಸಿಕ್ಕಿ-ಹುದು ನಡು — ದೇಹ-ದೊಳಗೆ ಸು — ಷುಮ್ನ- ನಾಮದ-ಲಿ ||
ರಕ್ಕ-ಸರನೊಳ — ಪೊಗಗೊ-ಡದೆ ದಶ- |
ದಿಕ್ಕಿ-ನೊಳಗೆ ಸ — ಮೀರ- ದೇವನು |
ಲೆಕ್ಕಿ-ಸದೆ ಮ — ತ್ತೊಬ್ಬ-ರನು ಸಂ — ಚರಿಪ- ದೇಹದೊ-ಳು || ೧೨-೧೩ ||

ಇನಿತು- ನಾಡೀ — ಶಾಖೆ-ಗಳು ಈ- |
ತನುವಿ-ನೊಳಗಿಹ — ವೆಂದು- ಏಕಾ- |
ತ್ಮನು ದ್ವಿ-ಸಪ್ತತಿ — ಸಾವಿ-ರಾತ್ಮಕ — ನಾಗಿ- ನಾಡಿಯೊ-ಳು ||
ವನಿತೆ-ಯಿಂದೊಡ — ಗೂಡಿ- ನಾರಾ- |
ಯಣ ದಿ-ವಾ ರಾ — ತ್ರಿಗಳ-ಲೀ ಪರಿ |
ವನಜ-ಜಾಂಡದೊ — ಳಖಿಲ- ಜೀವರೊ — ಳಿದ್ದು- ಮೋಹಿಸು-ವ || ೧೨-೧೪ ||

ದಿನ ದಿ-ನದಿ ವ — ರ್ಧಿಸುವ- ಕುಮುದಾ- |
ಪ್ತನ ಮ-ಯೂಖದ — ಸೊಬಗು- ಗತಲೋ- |
ಚನ ವಿ-ಲೋಕಿಸಿ — ಮೋದ- ಬಡ ಬ — ಲ್ಲನೆ ನಿ-ರಂತರ-ದಿ ||
ಕುನರ-ಗೀ ಸುಕ — ಥಾಮೃ-ತದ ಭೋ- |
ಜನದ- ಸುಖ ದೊರ — ಕುವದೆ- ಲಕ್ಷ್ಮೀ- |
ಮನೊಹ-ರನ ಸ — ದ್ಗುಣವ- ಕೀರ್ತಿಪ — ಭಕುತ-ಗಲ್ಲದ-ಲೆ || ೧೨-೧೫ ||

ಈ ತ-ನುವಿನೊಳ — ಗಿಹವು- ಓತ- |
ಪ್ರೋತ- ರೂಪದಿ — ನಾಡಿ-ಗಳು ಪುರು- |
ಹೂತ- ಮುಖರ — ಲ್ಲಿಹರು- ತಮ್ಮಿಂ — ದಧಿಕ- ರೊಡಗೂ-ಡಿ ||
ಭೀತಿ-ಗೊಳಿಸುತ — ದಾನ-ವರ ಸಂ- |
ಘಾತ- ನಾಮಕ — ಹರಿಯ- ಗುಣ ಸಂ- |
ಪ್ರೀತಿ-ಯಲಿ ಸದು — ಪಾಸ-ನವ ಗೈ — ವುತಲೆ- ಮೋದಿಪ-ರು || ೧೨-೧೬ ||

ಜಲಟ- ಕುಕ್ಕುಟ — ಖೇಟ- ಜೀವರ |
ಕಳೆವ-ರಗಳೊಳ — ಗಿದ್ದು- ಕಾಣಿಸಿ- |
ಕೊಳದೆ- ತತ್ತ — ದ್ರೂಪ- ನಾಮಗ — ಳಿಂದ- ಕರೆಸುತ-ಲಿ ||
ಜಲರು-ಹೇಕ್ಷಣ — ವಿವಿಧ- ಕರ್ಮಂ- |
ಗಳ ನಿ-ರಂತರ — ಮಾಡಿ ಮಾಡಿಸಿ |
ಫಲಗ-ಳುಣ್ಣದೆ — ಸಂಚ-ರಿಸುವನು — ನಿತ್ಯ- ಸುಖಪೂ-ರ್ಣ || ೧೨-೧೭ ||

ತಿಳಿದು-ಪಾಸನೆ — ಗೈವು-ತೀಪರಿ |
ಮಲಿನ-ನಂತಿರು — ದುರ್ಜ-ನರ ಕಂ- |
ಗಳಿಗೆ- ಗೋಚರಿ — ಸದೆ ವಿ-ಪಶ್ಚಿತ — ರೊಡನೆ- ಗರ್ವಿಸ-ದೆ ||
ಮಳೆ ಬಿ-ಸಿಲು ಹಸಿ — ತೃಷೆ ಜ-ಯಾ ಜಯ |
ಖಳರ- ನಿಂದಾ — ನಿಂದೆ- ಭಯಗಳಿ- |
ಗಳುಕ-ದಲೆ ಮ — ದ್ದಾನೆ-ಯಂದದಿ — ಚರಿಸು- ಧರೆಯೊಳ-ಗೆ || ೧೨-೧೮ ||

ಕಾನ-ನ ಗ್ರಾ — ಮಸ್ಥ- ಸರ್ವ- |
ಪ್ರಾಣಿ-ಗಳು ಪ್ರತಿ — ದಿವಸ-ದಲಿ ಏ- |
ನೇನು- ಮಾಡುವ — ಕರ್ಮ-ಗಳು ಹರಿ — ಪೂಜೆ- ಎಂದರಿ-ದು ||
ಧೇನಿ-ಸುತ ಸ — ದ್ಭಕ್ತಿ-ಯಲಿ ಪವ- |
ಮಾನ- ಮುಖ ದೇ — ವಾಂತ-ರಾತ್ಮಕ- |
ಶ್ರೀನಿ-ವಾಸನಿ — ಗರ್ಪಿ-ಸುತ ಮೋ — ದಿಸುತ- ನಲಿಯುತಿ-ರು || ೧೨-೧೯ ||

ನೋಕ-ನೀಯನು — ಲೋಕ-ದೊಳು ಶುನಿ- |
ಸೂಕ-ರಾದಿಗ — ಳೊಳಗೆ- ನೆಲೆಸಿ- |
ದ್ದೇಕ-ಮೇವಾ — ದ್ವಿತಿಯ- ಬಹು ರೂ — ಪಾಹ್ವ-ಯಗಳಿಂ-ದ ||
ತಾ ಕ-ರೆಸುತೊಳ — ಗಿದ್ದು- ತಿಳಿಸದೆ |
ಶ್ರೀಕ-ಮಲಭವ — ಮುಖ್ಯ- ಸಕಲ ದಿ- |
ವೌಕ-ಸ ಗಣಾ — ರಾಧ್ಯ- ಕೈಕೊಂ — ಡನವ-ರತ ಪೊರೆ-ವ || ೧೨-೨೦ ||

ಇನಿತು-ಪಾಸನೆ — ಗೈವು-ತಿಹ ಸ- |
ಜ್ಜನರು- ಸಂಸಾ — ರದಲಿ- ಪ್ರತಿ ಪ್ರತಿ- |
ದಿನಗ-ಳಲಿ ಏ — ನೇನು- ಮಾಡುವ — ದೆಲ್ಲ- ಹರಿಪೂ-ಜೆ ||
ಎನಿಸಿ-ಕೊಂಬುದು — ಸತ್ಯ-ವೀ ಮಾ- |
ತಿನಲಿ- ಸಂಶಯ — ಬಡುವ- ನರನ- |
ಲ್ಪನು ಸು-ನಿಶ್ಚಯ — ಬಾಹ್ಯ- ಕರ್ಮವ — ಮಾಡಿ- ಫಲವೇ-ನು || ೧೨-೨೧ ||

ಭೋಗ್ಯ- ಭೋಕ್ತೃಗ — ಳೊಳಗೆ- ಹರಿ ತಾ- |
ಭೋಗ್ಯ- ಭೋಕ್ತನು — ಎನಿಸಿ- ಯೋಗ್ಯಾ- |
ಯೋಗ್ಯ- ರಸಗಳ — ದೇವ- ದಾನವ — ಗಣಕೆ- ಉಣಿಸುವ-ನು ||
ಭಾಗ್ಯ-ನಿಧಿ ಭ — ಕ್ತರಿಗೆ- ಸದ್ವೈ- |
ರಾಗ್ಯ- ಭಕ್ತಿ — ಜ್ಞಾನ-ವೀವಾ- |
ಯೋಗ್ಯ-ರಿಗೆ ದ್ವೇ — ಷಾದಿ-ಗಳ ತ — ನ್ನಲ್ಲಿ- ಕೊಡುತಿ-ಪ್ಪ || ೧೨-೨೨ ||

ಈ ಚ-ತು ರ್ದಶ — ಭುವನ-ದೊಳಗೆ ಚ- |
ರಾಚ-ರಾತ್ಮಕ — ಜೀವ-ರಲ್ಲಿ ವಿ- |
ರೋಚ-ನಾತ್ಮಜ — ವಂಚ-ಕನು ನೆಲೆ — ಸಿದ್ದು- ದಿನದಿನ-ದಿ ||
ಯಾಚ-ಕನು ಎಂ — ದೆನಿಸಿ-ಕೊಂಬ ಮ- |
ರೀಚಿ- ದಮನ ಸು — ಹಂಸ- ರೂಪಿ ನಿ- |
ಷೇಚ-ಕಾಹ್ವಯ — ನಾಗಿ- ಜನರಭಿ — ಲಾಷೆ- ಪೂರೈ-ಪ || ೧೨-೨೩ ||

ಅನ್ನ-ದನ್ನಾ — ದನ್ನ-ಮಯ ಸ್ವಯ- |
ಮನ್ನ- ಬ್ರಹ್ಮಾ — ದ್ಯಖಿಲ- ಚೇತನ- |
ಕನ್ನ- ಕಲ್ಪಕ — ನಾಹ-ನನಿರು — ದ್ಧಾದಿ- ರೂಪದ-ಲಿ ||
ಅನ್ಯ-ರನಪೇ — ಕ್ಷಿಸದೆ- ಗುಣ ಕಾ- |
ರುಣ್ಯ- ಸಾಗರ — ಸೃಷ್ಟಿ-ಸುವನು ಹಿ- |
ರಣ್ಯ- ಗರ್ಭನೊ — ಳಿದ್ದು- ಪಾಲಿಸು — ವನು ಜ-ಗತ್ರಯ-ವ || ೧೨-೨೪ ||

ತ್ರಿಪದ- ತ್ರಿದಶಾ — ಧ್ಯಕ್ಷ- ತ್ರಿಸ್ಥ |
ತ್ರಿಪಥ-ಗಾಮಿನಿ — ಪಿತ ತ್ರಿ-ವಿಕ್ರಮ |
ಕೃಪಣ- ವತ್ಸಲ — ಕುವಲ-ಯದಳ — ಶ್ಯಾಮ- ನಿಸ್ಸೀ-ಮ ||
ಅಪರಿ-ಮಿತ ಚಿ — ತ್ಸುಖ ಗು-ಣಾತ್ಮಕ- |
ವಪುಷ- ವೈಕುಂ — ಠಾದಿ- ಲೋಕಾ- |
ಧಿಪ ತ್ರ-ಯೀಮಯ — ತನ್ನ-ವರ ನಿ — ಷ್ಕಪಟ-ದಿಂ ಪೊರೆ-ವ || ೧೨-೨೫ ||

ಲವಣ- ಮಿಶ್ರಿತ — ಜಲವು- ತೋರ್ಪುದು |
ಲವಣ- ದೋಪಾ — ದಿಯಲಿ- ಜಿಹ್ವೆಗೆ |
ವಿವರ-ಗೈಸಲು — ಶಕ್ಯ-ವಾಗುವು — ದೇನೊ- ನೋಳ್ಪರಿ-ಗೆ ||
ಸ್ವವಶ- ವ್ಯಾಪೀ — ಎನಿಸಿ- ಲಕ್ಷ್ಮೀ- |
ಧವ ಚ-ರಾ ಚರ — ದೊಳಗೆ- ತುಂಬಿಹ |
ನವಿದಿ-ತನ ಸಾ — ಕಲ್ಯ- ಬಲ್ಲವ — ರಾರು- ಸುರರೊಳ-ಗೆ || ೧೨-೨೬ ||

ವ್ಯಾಪ್ಯ-ನಂದದಿ — ಸರ್ವ- ಜೀವರೊ- |
ಳಿಪ್ಪ- ಚಿನ್ಮಯ — ಘೋರ- ಭವ ಸಂ- |
ತಪ್ಯ- ಮಾನರು — ಭಜಿಸೆ- ಭಕುತಿಯ — ಲಿಂದ-ಲಿಹಪರ-ದಿ ||
ಪ್ರಾಪ್ಯ-ನಾಗುವ — ನವರ-ವಗುಣಗ- |
ಳೊಪ್ಪು- ಗೊಂಬನು — ಭಕ್ತ-ವತ್ಸಲ |
ತಪ್ಪಿ-ಸುವ ಜ — ನ್ಮಾದಿ- ದೋಷಗ — ಳವರಿ-ಗನವರ-ತ || ೧೨-೨೭ ||

ಹಲವು- ಬಗೆಯಲಿ — ಹರಿಯ- ಮನದೊಳ |
ಗೊಲಿಸಿ- ನಿಲ್ಲಿಸಿ — ಏನು- ಮಾಡುವ |
ಕೆಲಸ-ಗಳು ಅವ — ನಂಘ್ರಿ- ಪೂಜೆಗ — ಳೆಂದು- ನೆನೆಯುತಿ-ರು ||
ಹಲಧ-ರಾನುಜ — ತಾನೆ- ಸರ್ವ- |
ಸ್ಥಳಗ-ಳಲಿ ನೆಲೆ — ಸಿದ್ದು- ನಿಶ್ಚಂ- |
ಚಲ ಭ-ಕುತಿ ಸು — ಜ್ಞಾನ- ಭಾಗ್ಯವ — ಕೊಟ್ಟು- ಸಂತೈ-ಪ || ೧೨-೨೮ ||

ದೋಷ- ಗಂಧ ವಿ — ದೂರ- ನಾನಾ- |
ವೇಷ-ಧಾರಕ — ನೀ ಜ-ಗತ್ತ್ರಯ- |
ಪೋಷ-ಕ ಪುರಾ — ತನ ಪು-ರುಷ ಪುರು — ಹೂತ- ಮುಖ ವಿನು-ತ ||
ಶೇಷ-ವರ ಪರಿ — ಯಂಕ- ಶಯನ ವಿ- |
ಭೀಷ-ಣ ಪ್ರಿಯ — ವಿಜಯ- ಸಖ ಸಂ- |
ತೋಷ- ಬಡಿಸುವ — ಸುಜನ-ರಿಷ್ಟಾ — ರ್ಥಗಳ- ಪೂರೈ-ಸಿ || ೧೨-೨೯ ||

ಶ್ರೀಮ-ಹೀ ಸೇ — ವಿತ ಪ-ದಾಂಬುಜ |
ಭೂಮ- ಸದ್ಭ — ಕ್ತೈಕ- ಲಭ್ಯ ಪಿ- |
ತಾಮ-ಹಾದ್ಯಮ — ರಾ ಸು-ರಾರ್ಚಿತ — ಪಾದ- ಪಂಕೇ-ಜ ||
ವಾಮ- ವಾಮನ — ರಾಮ- ಸಂಸಾ- |
ರಾಮ-ಯೌಷಧ — ಹೇ ಮ-ಮ ಕುಲ- |
ಸ್ವಾಮಿ- ಸಂತೈ — ಸೆನಲು- ಬಂದೊದ — ಗುವನು- ಕರುಣಾ-ಳು || ೧೨-೩೦ ||

ದನುಜ- ದಿವಿಜರೊ — ಳಿದ್ದು- ಅವರವ- |
ರನುಸ-ರಿಸಿ ಕ — ರ್ಮಗಳ- ಮಾಳ್ಪನು |
ಜನನ- ಮರಣಾ — ದ್ಯಖಿಲ- ದೋಷ ವಿ — ದೂರ- ಎಮ್ಮೊಡ-ನೆ ||
ಜನಿಸು-ವನು ಜೀ — ವಿಸುವ- ಸಂರ- |
ಕ್ಷಣೆಯ- ಮಾಡುವ — ನೆಲ್ಲ- ಕಾಲದಿ |
ಧನವ- ಕಾಯ್ದಿಹ — ಸರ್ಪ-ನಂತನಿ — ಮಿತ್ತ- ಬಾಂಧವ-ನು || ೧೨-೩೧ ||

ಬಿಸರು-ಹಾಪ್ತಾ — ಗಸದಿ- ತಾನುದ- |
ಯಿಸಲು- ವೃಕ್ಷಂ — ಗಳ ನೆ-ಳಲು ಪಸ- |
ರಿಸುವ-ವಿಳೆಯೊಳ — ಗಸ್ತ-ಮಿಸಲ — ಲ್ಲಲ್ಲೆ- ಲೀನಿಪ-ವು ||
ಶ್ವಸನ- ಮುಖ್ಯ ಮ — ರಾಂತ-ರಾತ್ಮಕ- |
ನೊಶದೊ-ಳಿರುತಿ — ಪ್ಪವು ಜ-ಗತ್ತ್ರಯ |
ಬಸುರೊ-ಳಿಂಬಿ — ಟ್ಟೆಲ್ಲ- ಕರ್ಮವ — ತೋರ್ಪ- ನೋಳ್ಪರಿ-ಗೆ || ೧೨-೩೨ ||

ತ್ರಿಭುವ-ನೈಕಾ — ರಾಧ್ಯ- ಲಕ್ಷ್ಮೀ- |
ಸುಭುಜ-ಯುಗಳಾ — ಲಿಂಗಿ-ತಾಂಗ |
ಸ್ವಭು ಸು-ಖಾತ್ಮ ಸು — ವರ್ಣ- ವರ್ಣ ಸು — ಪರ್ಣ- ವರ ವಹ-ನ ||
ಅಭಯ-ದಾನಂ — ತಾರ್ಕ- ಶಶಿ ಸ- |
ನ್ನಿಭ ನಿ-ರಂಜನ — ನಿತ್ಯ-ದಲಿ ತನ- |
ಗಭಿನ-ಮಿಸುವರಿ — ಗೀವ- ಸರ್ವಾ — ರ್ಥಗಳ- ತಡೆಯದ-ಲೆ || ೧೨-೩೩ ||

ಕವಿಗ-ಳಿಂದಲಿ — ತಿಳಿದು- ಪ್ರಾತಃ- |
ಸವನ- ಮಾಧ್ಯಂ — ದಿನವು- ಸಾಯಂ- |
ಸವನ-ಗಳ ವಸು — ರುದ್ರ-ರಾದಿ — ತ್ಯರೊಳು- ರಾಜಿಸು-ವ ||
ಪವನ-ನೊಳು ಕೃತಿ — ಜಯ ಸು-ಮಾಯಾ- |
ಧವನ- ಮೂರ್ತಿ — ತ್ರಯವ- ಚಿಂತಿಸಿ |
ದಿವಸ-ವೆಂಬಾ — ಹುತಿಗ-ಳಿಂದ — ರ್ಚಿಸುತ- ಸುಖಿಸುತಿ-ರು || ೧೨-೩೪ ||

ಚತುರ-ವಿಂಶ — ತ್ಯಬ್ದ- ವಸುದೇ- |
ವತೆಗ-ಳೊಳು ಪ್ರ — ದ್ಯುಮ್ನ-ನಿಪ್ಪನು |
ಚತುರ- ಚತ್ವಾ — ರಿಂಶ-ತಿಗಳಲಿ — ಸಂಕ-ರುಷಣಾ-ಖ್ಯ ||
ಹುತವ-ಹಾಕ್ಷನೊ — ಳಿಹನು- ಮಾಯಾ- |
ಪತಿಯು- ಹದಿನಾ — ರಧಿಕ- ದ್ವಾತ್ರಿಂ- |
ಶತಿ ವ-ರುಷಗಳ — ಲಿಪ್ಪ-ನಾದಿ — ತ್ಯನೊಳು- ಸಿತಕಾ-ಯ || ೧೨-೩೫ ||

ಷೋಡ-ಶೋತ್ತರ — ಶತ ವ-ರುಷದಲಿ |
ಷೋಡ-ಶೋತ್ತರ — ಶತ ಸ್ವ-ರೂಪದಿ |
ಕ್ರೀಡಿ-ಸುವ ವಸು — ರುದ್ರ-ರಾದಿ — ತ್ಯರೊಳು- ಸತಿ ಸಹಿ-ತ ||
ವ್ರೀಡ-ವಿಲ್ಲದೆ — ಭಜಿಪ- ಭಕ್ತರ |
ಪೀಡಿ-ಸುವ ದುರಿ — ತೌಘ-ಗಳ ದೂ- |
ರೋಡಿ-ಸುತ ಬಳಿ — ಯಲಿ ಬಿ-ಡದೆ ನೆಲೆ — ಸಿಪ್ಪ- ಭಯಹಾ-ರಿ || ೧೨-೩೬ ||

ಮೂರ-ಧಿಕ ಎಂ — ಭತ್ತು- ಸಹಸ್ರೈ- |
ನೂರ- ಯಿಪ್ಪ — ತ್ತೆನಿಪ- ರೂಪದಿ |
ತೋರು-ತಿಪ್ಪ ದಿ — ವಾ ನಿ-ಶಾಧಿಪ — ರೊಳಗೆ- ನಿತ್ಯದ-ಲಿ ||
ಭಾರ-ತೀ ಪ್ರಾ — ಣರೊಳ-ಗಿದ್ದು ನಿ- |
ವಾರಿ-ಸುತ ಭ — ಕ್ತರ ದು-ರಿತ ಹಿಂ- |
ಕಾರ- ನಿಧನ — ಪ್ರಥಮ- ರೂಪದಿ — ಪಿತೃಗ-ಳನೆ ಪೊರೆ-ವ || ೧೨-೩೭ ||

ಬುದ್ಧಿ- ಪೂರ್ವಕ — ಉತ್ತ-ಮೋತ್ತಮ- |
ಶುದ್ಧ- ಊರ್ಣಾಂ — ಬರವ- ಪಂಕದೊ- |
ಳದ್ದಿ- ತೆಗೆಯಲು — ಲೇಪ-ವಾಗುವ — ದೇ ಪ-ರೀಕ್ಷಿಸ-ಲು ||
ಪದ್ಮ-ನಾಭನು — ಸರ್ವ- ಜೀವರೊ- |
ಳಿದ್ದ-ರೇನು ಗು — ಣತ್ರ-ಯಗಳಿಂ- |
ಬದ್ಧ-ನಾಗುವ — ನೇನೊ- ನಿತ್ಯ ಸು — ಖಾತ್ಮ- ಚಿನ್ಮಯ-ನು || ೧೨-೩೮ ||

ಸಕಲ- ದೋಷ ವಿ — ದೂರ- ಶಶಿ ಪಾ- |
ವಕ ಸ-ಹಸ್ರಾ — ನಂತ- ಸೂರ್ಯ- |
ಪ್ರಕರ- ಸನ್ನಿಭ — ಗಾತ್ರ- ಲಕುಮಿ ಕ — ಳತ್ರ- ಸುರಮಿ-ತ್ರ ||
ವಿಖನ-ಸಾಂಡದೊ — ಳಿಪ್ಪ- ಬ್ರಹ್ಮಾ- |
ದ್ಯಖಿಲ- ಚೇತನ — ಗಣಕೆ- ತಾನೇ |
ಸಖನೆ-ನಿಸಿಕೊಂ — ಡ ಕುಟಿ-ಲಾತ್ಮಕ — ನಿಪ್ಪ-ನವರಂ-ತೆ || ೧೨-೩೯ ||

ದೇಶ- ಭೇದಗ — ಳಲ್ಲಿ- ಇಪ್ಪಾ- |
ಕಾಶ-ದೋಪಾ — ದಿಯಲಿ- ಚೇತನ- |
ರಾಶಿ-ಯೊಳು ನೆಲೆ — ಸಿಪ್ಪ-ನವ್ಯವ — ಧಾನ-ದಲಿ ನಿರು-ತ ||
ಶ್ರೀಸ-ಹಿತ ಸ — ರ್ವತ್ರ- ನಿರವಾ- |
ಕಾಶ- ಕೊಡುವಂ — ದದಲಿ- ಕೊಡುತ ನಿ- |
ರಾಶೆ-ಯಲಿ ಸ — ರ್ವಾಂತ-ರಾತ್ಮಕ — ಶೋಭಿ-ಸುವ ಸುಖ-ದ || ೧೨-೪೦ ||

ಶ್ರೀವಿ-ರಿಂಚಾ — ದ್ಯಮರ-ಗಣ ಸಂ- |
ಸೇವಿ-ತಾಂಘ್ರಿ ಸ — ರೋಜ- ಈ ಜಡ- |
ಜೀವ-ರಾಶಿಗ — ಳೊಳ ಹೊ-ರಗೆ ನೆಲೆ — ಸಿದ್ದು- ನಿತ್ಯದ-ಲಿ ||
ಸಾವ-ಕಾಶನು — ಎನಿಸಿ- ತನ್ನ ಕ- |
ಳೇವ-ರದೊಳಿಂ — ಬಿಟ್ಟು- ಸಲಹುವ |
ದೇವ- ದೇವಕಿ — ರಮಣ- ದಾನವ — ಹರಣ- ಜಿತಮರ-ಣ || ೧೨-೪೧ ||

ಮಾಸ-ವೊಂದಕೆ — ಪ್ರತಿ ದಿ-ವಸದಲಿ |
ಶ್ವಾಸ-ಗಳು ಅಹ — ವಷ್ಟ- ಚತ್ವಾ- |
ರಿಂಶ-ತಿ ಸಹ — ಸ್ರಾಧಿ-ಕಾರು ಸು — ಲಕ್ಷ- ಸಂಖ್ಯೆಯ-ಲಿ ||
ಹಂಸ- ನಾಮಕ — ಹರಿಯ- ಷೋಡಶ |
ಈ ಶ-ತಾಬ್ದದಿ — ಭಜಿಸೆ- ಒಲಿವ ದ- |
ಯಾ ಸ-ಮುದ್ರ ಕು — ಚೇಲ- ಗೊಲಿದಂ — ದದಲಿ- ದಿನದಿನ-ದಿ || ೧೨-೪೨ ||

ಸ್ಥೂಲ- ದೇಹದೊ — ಳಿದ್ದು- ವರುಷಕೆ |
ಏಳ-ಧಿಕ ಎ — ಪ್ಪತ್ತು- ಲಕ್ಷದ- |
ಮೇಲೆ- ಎಪ್ಪ — ತ್ತಾರು- ಸಾವಿರ — ಶ್ವಾಸ- ಜಪಗಳ-ನು ||
ಗಾಳಿ- ದೇವನು — ಕರುಣ-ದಲಿ ಈ – |
ರೇಳು- ಲೋಕದೊ — ಳುಳ್ಳ- ಚೇತನ- |
ಜಾಲ-ದೊಳು ಮಾ — ಡುವನು- ತ್ರಿಜಗ — ದ್ವ್ಯಾಪ್ತ- ಪರಮಾ-ಪ್ತ || ೧೨-೪೩ ||

ಈರೆ-ರಡು ದೇ — ಹಗಳೊ-ಳಿದ್ದು ಸ- |
ಮೀರ-ದೇವನು — ಶ್ವಾಸ-ಜಪ ನಾ- |
ನೂರ-ಧಿಕವಾ — ಗಿಪ್ಪ- ಎಂಭ — ತ್ತಾರು- ಸಾಹ-ಸ್ರ ||
ತಾ ರ-ಚಿಸುವನು — ದಿವಸ-ವೊಂದಕೆ |
ಮೂರು- ವಿಧ ಜೀ — ವರೊಳ-ಗಿದ್ದು ಖ- |
ರಾರಿ- ಕರುಣಾ — ಬಲವ-ದೆಂತುಟೊ — ಪವನ-ರಾಯನೊ-ಳು || ೧೨-೪೪ ||

ಶ್ರೀಧ-ವ ಜಗ — ನ್ನಾಥ-ವಿಠ್ಠಲ |
ತಾ ದ-ಯದಿ ವದ — ನದೊಳು- ನುಡಿದೋ- |
ಪಾದಿ-ಯಲಿ ನಾ — ನುಡಿದೆ-ನಲ್ಲದೆ — ಕೇಳಿ- ಬುಧ ಜನ-ರು ||
ಸಾಧು- ಲಿಂಗ — ಪ್ರದರು-ಶಕರು ನಿ- |
ಷೇಧಿ-ಸಿದರೇ — ನಹುದು- ಎನ್ನಪ- |
ರಾಧ-ವೇನಿದ — ರೊಳಗೆ- ಪೇಳ್ವದು — ತಿಳಿದು- ಕೋವಿದ-ರು || ೧೨-೪೫ ||

|| ಇತಿ ಶ್ರೀ ನಾಡೀಪ್ರಕರಣ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||

13. Namasmarana Sandhi – HKS


  1. naaDIprakaraNa saMdhi

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

vaasu-dEvanu — praaNa-mukha ta- |
twEsha-riMdali — sEve- kaikoLu- |
tee sha-reerado — Lippa- moova — ttaaru- saaha-sra ||
ee su-naaDiga — LoLage- shreebhoo- |
mee sa-mEta vi — haara-gaiva pa- |
rEsha-namala su — moorti-gaLa ciM — tisuta- higguti-ru || 12-1 ||

caraNa-gaLoLiha — naaDi-gaLu ha- |
nneraDu- saavira — madhya-dEha do-|
Liruti-havu hadi — naalku- baahuga — LoLage- eerera-Du ||
shirado-Laaru sa — hasra- ciMtisi |
iruLu- hagalabhi — maani- divijara- |
naritu-paasane — gaiva-riLeyoLu — swarga-vaasiga-Lu || 12-2 ||

bRuhati- naamaka — vaasu-dEvanu |
vahisi- puM strI — roopa- dOSha vi- |
rahita- eppa — tteraDu- saavira — naaDi-gaLoLi-ddu ||
druhiNa- modalaa — damara- gaNa sa- |
nmahita- sarva — praaNi-gaLa maha- |
mahima- saMtai — suvanu- saMtata — parama- karuNaa-Lu || 12-3 ||

nooru- varuShake — divasa- moova- |
ttaaru- saavira — vahavu- naaDi sha- |
reera-doLagini — tihavu- eMdari — toMdu- divasada-li ||
soori-gaLa sa — tkarisi-dava prati- |
vaara-dali daM — patiga-Larcane |
taa ra-cisidava — satya- saMshaya — villa-veMdeM-du || 12-4 ||

catura-viMshati — tattwa-gaLu ta-
tpatiga-Lenisuva — brahma-mukha dE- |
vatega-Lanudina — pratipra-tI naa — DigaLo-Liruti-ddu ||
catura-dasha lO — kadoLu- jeeva- |
pratati-gaLa saM — rakShi-suva shaa- |
shwatana- tattat — sthaana-dali nO — Dutali- mOdipa-ru || 12-5 ||

satya- saMka — lpanu sa-daa e- |
ppatte-raDu saa — hasra-doLu moo- |
vattu-naalaku — lakSha-daiva — ttaaru- saaha-sra ||
citpra-kRutiyoDa — gooDi- parama su- |
nitya- maMgaLa — moorti- bhaktara |
tetti-ganu taa — naagi- sarva — tradali- saMtai-pa || 12-6 ||

maNiga-LoLagiha — sootra-daMdadi |
praNava- paadyanu — sarva- cEtana- |
gaNado-Liddana — varata- saMtai — suvanu- tannava-ra ||
praNata- kaamada — bhakta- ciMtaa- |
maNi ci-daanaM — daika- dEhanu |
aNu ma-hadgata — nalpa-rOpaa — diyali- nelesi-ppaa || 12-7 ||

ee su-Shumnaa — dyakhila- naaDee- |
kOsha- naabhee — mooladali vRuSha- |
Naasa-nada ma — dhyadali- ippadu — tuMdi-naamada-li ||
aa sa-rOjaa — sana mu-kharu moo- |
lEsha-naanaM — daadi- suguNO- |
paasa-neya gai — vutali- dEhaga — LoLage- irutiha-ru || 12-8 ||

soori-gaLu ci — ttaisu-vadu bhaa- |
geera-thiye moda — laada- teerthaga- |
LIra-dhika e — ppattu- saavira — naaDi-yoLagiha-vu ||
ee ra-hasyavu — alpa- janarige |
tOri- pELade — naaDi- nadiyoLu |
dheera-ranudina — majja-nava maa — Dutali- sukhisuva-ru || 12-9 ||

tiLivu-dee dE — hadoLa-giha eDa- |
balada- naaDiga — LoLage- divijaru |
jalaja- saMbhava — vaayu- vaaNyaa — digaLu- balada-lli ||
elaru-Niga viha — gEMdra- caLive- |
TTaLiya- ShaNmahi — Shiyaru- vaaruNi- |
kulisha-dhara kaa — maadi-gaLu eDa — bhaaga-doLagiha-ru || 12-10 ||

ikke-ladoLiha — naaDi-yoLu dE- |
varka-LiMdoDa — naaDu-tali poM- |
bakki-dEranu — jeeva-radhikaa — raanu- saarada-li ||
takka- saadhana — maaDi- maaDisu – |
takka-radi saM — taipa- bhaktara |
dakka-goDanasu — rarige- satpu — NyagaLa-napahari-pa || 12-11 ||

tuMdi- viDidaa — shirada- pariyaM- |
toMde- vyaapisi — ihudu- taavare- |
kaMda-nihanada — roLage- adakee — raidu- shaakhega-Lu ||
oMda-dhika dasha — karaNa-doLu saM- |
baMdha-gaidiha — valli- ravi shashi |
siMdhu- naasa — tyaadi-gaLu nele — goMDi-haru sata-ta || 12-12 ||

pokka-LaDiviDi — doMde- naaDiyu |
sukka-dale dhaa — raaLa- roopadi |
sikki-hudu naDu — dEha-doLage su — Shumna- naamada-li ||
rakka-saranoLa — pogago-Dade dasha- |
dikki-noLage sa — meera- dEvanu |
lekki-sade ma — ttobba-ranu saM — caripa- dEhado-Lu || 12-13 ||

initu- naaDI — shaakhe-gaLu ee- |
tanuvi-noLagiha — veMdu- Ekaa- |
tmanu dwi-saptati — saavi-raatmaka — naagi- naaDiyo-Lu ||
vanite-yiMdoDa — gooDi- naaraa- |
yaNa di-vaa raa — trigaLa-lee pari |
vanaja-jaaMDado — Lakhila- jeevaro — Liddu- mOhisu-va || 12-14 ||

dina di-nadi va — rdhisuva- kumudaa- |
ptana ma-yookhada — sobagu- gatalO- |
cana vi-lOkisi — mOda- baDa ba — llane ni-raMtara-di ||
kunara-gee suka — thaamRu-tada bhO- |
janada- sukha dora — kuvade- lakShmI- |
manoha-rana sa — dguNava- keertipa — bhakuta-gallada-le || 12-15 ||

ee ta-nuvinoLa — gihavu- Ota- |
prOta- roopadi — naaDi-gaLu puru- |
hoota- mukhara — lliharu- tammiM — dadhika- roDagoo-Di ||
bheeti-goLisuta — daana-vara saM- |
ghaata- naamaka — hariya- guNa saM- |
preeti-yali sadu — paasa-nava gai — vutale- mOdipa-ru || 12-16 ||

jalaTa- kukkuTa — khETa- jeevara |
kaLeva-ragaLoLa — giddu- kaaNisi- |
koLade- tatta — droopa- naamaga — LiMda- karesuta-li ||
jalaru-hEkShaNa — vividha- karmaM- |
gaLa ni-raMtara — maaDi mADisi |
phalaga-LuNNade — saMca-risuvanu — nitya- sukhapoo-rNa || 12-17 ||

tiLidu-paasane — gaivu-teepari |
malina-naMtiru — durja-nara kaM- |
gaLige- gOcari — sade vi-pashcita — roDane- garvisa-de ||
maLe bi-silu hasi — tRuShe ja-yaa jaya |
khaLara- niMdaa — niMde- bhayagaLi- |
gaLuka-dale ma — ddaane-yaMdadi — carisu- dhareyoLa-ge || 12-18 ||

kaana-na graa — mastha- sarva- |
praaNi-gaLu prati — divasa-dali E- |
nEnu- maaDuva — karma-gaLu hari — pooje- eMdari-du ||
dhEni-suta sa — dbhakti-yali pava- |
maana- mukha dE — vaaMta-raatmaka- |
shreeni-vaasani — garpi-suta mO — disuta- naliyuti-ru || 12-19 ||

nOka-neeyanu — lOka-doLu shuni- |
sooka-raadiga — LoLage- nelesi- |
ddEka-mEvaa — dwitiya- bahu roo — paahwa-yagaLiM-da ||
taa ka-resutoLa — giddu- tiLisade |
shreeka-malabhava — mukhya- sakala di- |
vouka-sa gaNaa — raadhya- kaikoM — Danava-rata pore-va || 12-20 ||

initu-paasane — gaivu-tiha sa- |
jjanaru- saMsaa — radali- prati prati- |
dinaga-Lali E — nEnu- maaDuva — della- haripoo-je ||
enisi-koMbudu — satya-vI maa- |
tinali- saMshaya — baDuva- narana- |
lpanu su-nishcaya — baahya- karmava — maaDi- phalavE-nu || 12-21 ||

bhOgya- bhOktRuga — LoLage- hari taa- |
bhOgya- bhOktanu — enisi- yOgyaa- |
yOgya- rasagaLa — dEva- daanava — gaNake- uNisuva-nu ||
bhaagya-nidhi bha — ktarige- sadwai- |
raagya- bhakti — j~jaana-veevaa- |
yOgya-rige dwE — Shaadi-gaLa ta — nnalli- koDuti-ppa || 12-22 ||

ee ca-tu rdasha — bhuvana-doLage ca- |
raaca-raatmaka — jeeva-ralli vi- |
rOca-naatmaja — vaMca-kanu nele — siddu- dinadina-di ||
yaaca-kanu eM — denisi-koMba ma- |
reeci- damana su — haMsa- roopi ni- |
ShEca-kaahwaya — naagi- janarabhi — laaShe- poorai-pa || 12-23 ||

anna-dannaa — danna-maya swaya- |
manna- brahmaa — dyakhila- cEtana- |
kanna- kalpaka — naaha-naniru — ddhaadi- roopada-li ||
anya-ranapE — kShisade- guNa kaa- |
ruNya- saagara — sRuShTi-suvanu hi- |
raNya- garbhano — Liddu- paalisu — vanu ja-gatraya-va || 12-24 ||

tripada- tridashaa — dhyakSha- tristha |
tripatha-gaamini — pita tri-vikrama |
kRupaNa- vatsala — kuvala-yadaLa — shyaama- nissI-ma ||
apari-mita ci — tsukha gu-Naatmaka- |
vapuSha- vaikuM — Thaadi- lOkaa- |
dhipa tra-yeemaya — tanna-vara ni — ShkapaTa-diM pore-va || 12-25 ||

lavaNa- mishrita — jalavu- tOrpudu |
lavaNa- dOpaa — diyali- jihwege |
vivara-gaisalu — shakya-vaaguvu — dEno- nOLpari-ge ||
swavasha- vyaapI — enisi- lakShmI- |
dhava ca-raa cara — doLage- tuMbiha |
navidi-tana saa — kalya- ballava — raaru- suraroLa-ge || 12-26 ||

vyaapya-naMdadi — sarva- jeevaro- |
Lippa- cinmaya — ghOra- bhava saM- |
tapya- maanaru — bhajise- bhakutiya — liMda-lihapara-di ||
praapya-naaguva — navara-vaguNaga- |
Loppu- goMbanu — bhakta-vatsala |
tappi-suva ja — nmaadi- dOShaga — Lavari-ganavara-ta || 12-27 ||

halavu- bageyali — hariya- manadoLa |
golisi- nillisi — Enu- maaDuva |
kelasa-gaLu ava — naMghri- poojega — LeMdu- neneyuti-ru ||
haladha-raanuja — taane- sarva- |
sthaLaga-Lali nele — siddu- nishcaM- |
cala bha-kuti su — j~jaana- bhaagyava — koTTu- saMtai-pa || 12-28 ||

dOSha- gaMdha vi — doora- naanaa- |
vESha-dhaaraka — nee ja-gattraya- |
pOSha-ka puraa — tana pu-ruSha puru — hoota- mukha vinu-ta ||
shESha-vara pari — yaMka- shayana vi- |
bheeSha-Na priya — vijaya- sakha saM- |
tOSha- baDisuva — sujana-riShTaa — rthagaLa- poorai-si || 12-29 ||

shreema-hee sE — vita pa-daaMbuja |
bhooma- sadbha — ktaika- labhya pi- |
taama-haadyama — raa su-raarcita — paada- paMkE-ja ||
vaama- vaamana — raama- saMsaa- |
raama-youShadha — hE ma-ma kula- |
swaami- saMtai — senalu- baMdoda — guvanu- karuNaa-Lu || 12-30 ||

danuja- divijaro — Liddu- avarava- |
ranusa-risi ka — rmagaLa- maaLpanu |
janana- maraNaa — dyakhila- dOSha vi — doora- emmoDa-ne ||
janisu-vanu jee — visuva- saMra- |
kShaNeya- maaDuva — nella- kaaladi |
dhanava- kaaydiha — sarpa-naMtani — mitta- baaMdhava-nu || 12-31 ||

bisaru-haaptaa — gasadi- taanuda- |
yisalu- vRukShaM — gaLa ne-Lalu pasa- |
risuva-viLeyoLa — gasta-misala — llalle- leenipa-vu ||
shwasana- mukhya ma — raaMta-raatmaka- |
noshado-Liruti — ppavu ja-gattraya |
basuro-LiMbi — TTella- karmava — tOrpa- nOLpari-ge || 12-32 ||

tribhuva-naikaa — raadhya- lakShmI- |
subhuja-yugaLaa — liMgi-taaMga |
swabhu su-khaatma su — varNa- varNa su — parNa- vara vaha-na ||
abhaya-daanaM — taarka- shashi sa- |
nnibha ni-raMjana — nitya-dali tana- |
gabhina-misuvari — geeva- sarvaa — rthagaLa- taDeyada-le || 12-33 ||

kaviga-LiMdali — tiLidu- praataH- |
savana- maadhyaM — dinavu- saayaM- |
savana-gaLa vasu — rudra-raadi — tyaroLu- raajisu-va ||
pavana-noLu kRuti — jaya su-maayaa- |
dhavana- moorti — trayava- ciMtisi |
divasa-veMbaa — hutiga-LiMda — rcisuta- sukhisuti-ru || 12-34 ||

catura-viMsha — tyabda- vasudE- |
vatega-LoLu pra — dyumna-nippanu |
catura- catwaa — riMsha-tigaLali — saMka-ruShaNaa-khya ||
hutava-haakShano — Lihanu- maayaa- |
patiyu- hadinaa — radhika- dwaatriM- |
shati va-ruShagaLa — lippa-naadi — tyanoLu- sitakaa-ya || 12-35 ||

ShODa-shOttara — shata va-ruShadali |
ShODa-shOttara — shata swa-roopadi |
kreeDi-suva vasu — rudra-raadi — tyaroLu- sati sahi-ta ||
vreeDa-villade — bhajipa- bhaktara |
peeDi-suva duri — tougha-gaLa doo- |
rODi-suta baLi — yali bi-Dade nele — sippa- bhayahaa-ri || 12-36 ||

moora-dhika eM — bhattu- sahasrai- |
noora- yippa — ttenipa- roopadi |
tOru-tippa di — vaa ni-shaadhipa — roLage- nityada-li ||
bhaara-tee praa — NaroLa-giddu ni- |
vaari-suta bha — ktara du-rita hiM- |
kaara- nidhana — prathama- roopadi — pitRuga-Lane pore-va || 12-37 ||

buddhi- poorvaka — utta-mOttama- |
shuddha- UrNaaM — barava- paMkado- |
Laddi- tegeyalu — lEpa-vaaguva — dE pa-reekShisa-lu ||
padma-naabhanu — sarva- jeevaro- |
Lidda-rEnu gu — Natra-yagaLiM- |
baddha-naaguva — nEno- nitya su — khaatma- cinmaya-nu || 12-38 ||

sakala- dOSha vi — doora- shashi paa- |
vaka sa-hasraa — naMta- soorya- |
prakara- sannibha — gaatra- lakumi ka — Latra- surami-tra ||
vikhana-saaMDado — Lippa- brahmaa- |
dyakhila- cEtana — gaNake- taanE |
sakhane-nisikoM — Da kuTi-laatmaka — nippa-navaraM-te || 12-39 ||

dEsha- bhEdaga — Lalli- ippaa- |
kaasha-dOpaa — diyali- cEtana- |
raashi-yoLu nele — sippa-navyava — dhaana-dali niru-ta ||
shreesa-hita sa — rvatra- niravaa- |
kaasha- koDuvaM — dadali- koDuta ni- |
raashe-yali sa — rvaaMta-raatmaka — shObhi-suva sukha-da || 12-40 ||

shreevi-riMcaa — dyamara-gaNa saM- |
sEvi-taaMghri sa — rOja- ee jaDa- |
jeeva-raashiga — LoLa ho-rage nele — siddu- nityada-li ||
saava-kaashanu — enisi- tanna ka- |
LEva-radoLiM — biTTu- salahuva |
dEva- dEvaki — ramaNa- daanava — haraNa- jitamara-Na || 12-41 ||

maasa-voMdake — prati di-vasadali |
shwaasa-gaLu aha — vaShTa- catwaa- |
riMsha-ti saha — sraadhi-kaaru su — lakSha- saMkhyeya-li ||
haMsa- naamaka — hariya- ShODasha |
ee sha-taabdadi — bhajise- oliva da- |
yaa sa-mudra ku — cEla- golidaM — dadali- dinadina-di || 12-42 ||

sthoola- dEhado — Liddu- varuShake |
ELa-dhika e — ppattu- lakShada- |
mEle- eppa — ttaaru- saavira — shwaasa- japagaLa-nu ||
gaaLi- dEvanu — karuNa-dali ee – |
rELu- lOkado — LuLLa- cEtana- |
jaala-doLu maa — Duvanu- trijaga — dwyaapta- paramaa-pta || 12-43 ||

eere-raDu dE — hagaLo-Liddu sa- |
meera-dEvanu — shwaasa-japa naa- |
noora-dhikavaa — gippa- eMbha — ttaaru- saaha-sra ||
taa ra-cisuvanu — divasa-voMdake |
mooru- vidha jee — varoLa-giddu kha- |
raari- karuNaa — balava-deMtuTo — pavana-raayano-Lu || 12-44 ||

shreedha-va jaga — nnaatha-viThThala |
taa da-yadi vada — nadoLu- nuDidO- |
paadi-yali naa — nuDide-nallade — kELi- budha jana-ru ||
saadhu- liMga — pradaru-shakaru ni- |
ShEdhi-sidarE — nahudu- ennapa- |
raadha-vEnida — roLage- pELwadu — tiLidu- kOvida-ru || 12-45 ||

|| iti shree naaDeeprakaraNa saMdhi saMpoorNaM ||
|| shreekRuShNaarpaNamastu ||

13. Namasmarana Sandhi – HKS

Leave a Reply

You might also like

error: Content is protected !!