Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
|| ೧೧. ಧ್ಯಾನಪ್ರಕ್ರಿಯಾ ಸಂಧಿ ||
( ಸ್ಥಾವರಜಂಗಮ ಸಂಧಿ )
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಪಾದು-ಕೆಯ ಕಂ — ಟಕ ಸಿ-ಕತ ಮೊದ- |
ಲಾದ-ವನುದಿನ — ಬಾಧಿ-ಸವು ಏ |
ಕಾದ-ಶೇಂದ್ರಿಯ — ಗಳಲಿ- ಬಿಡದೆ ಹೃ — ಷೀಕ-ಪನ ಮೂ-ರ್ತಿ ||
ಸಾದ-ರದಿ ನೆನೆ — ವವನು- ಏನಪ |
ರಾಧ-ಗಳ ಮಾ — ಡಿದರು- ಸರಿಯೆ ನಿ |
ರೋಧ-ಗೈಸವು — ಮೋಕ್ಷ- ಮಾರ್ಗಕೆ — ದುರಿತ- ರಾಶಿಗ-ಳು || ೧೧-೧ ||
ಹಗಲು- ನಂದಾ — ದೀಪ-ದಂದದಿ |
ನಿಗಮ- ವೇದ್ಯನ — ಪೂಜಿ-ಸುತ ಕೈ |
ಮುಗಿದು- ನಾಲ್ಕರೊ — ಳೊಂದು- ಪುರುಷಾ — ರ್ಥವನು- ಬೇಡದ-ಲೆ ||
ಜಗದು-ದರ ಕೊ — ಟ್ಟುದನು- ಭುಂಜಿಸು |
ಮಗ ಮ-ಡದಿ ಪ್ರಾ — ಣೇಂದ್ರಿ-ಯಾತ್ಮಾ |
ದಿಗಳು- ಭಗವದ — ಧೀನ-ವೆಂದಡಿ — ಗಡಿಗೆ- ನೆನೆವುತಿ-ರು || ೧೧-೨ ||
ಅಸ್ವ-ತಂತ್ರನು — ಜೀವ- ಹರಿ ಸ |
ರ್ವ ಸ್ವ-ತಂತ್ರನು — ನಿತ್ಯ- ಸುಖಮಯ |
ನಿಃಸ್ವ-ಬದ್ಧಾ — ಲ್ಪಜ್ಞ- ಶಕ್ತ ಸ — ದುಃಖ- ನಿರ್ವಿ-ಣ್ಣ ||
ಹ್ರಸ್ವ-ದೇಹಿ ಸ — ನಾಥ- ಜೀವನು |
ವಿಶ್ವ-ವ್ಯಾಪಕ — ಕರ್ತೃ- ಬ್ರಹ್ಮ ಸ |
ರಸ್ವ-ತೀಶಾ — ದ್ಯಮರ-ನುತ ಹರಿ — ಯೆಂದು- ಕೊಂಡಾ-ಡು || ೧೧-೩ ||
ಮತ್ತೆ- ವಿಶ್ವಾ — ದ್ಯೆಂಟು- ರೂಪೊಂ |
ಭತ್ತ-ರಿಂದಲಿ — ಪೆಚ್ಚಿ-ಸಲು ಎ- |
ಪ್ಪತ್ತೆ-ರಡು ರೂ — ಪಗಳ-ಹವು ಒಂ — ದೊಂದೆ- ಸಾಹ-ಸ್ರ ||
ಪೃಥ್ ಪೃ-ಥಕು ನಾ — ಡಿಗಳೊ-ಳಗೆ ಸ- |
ರ್ವೋತ್ತ-ಮನ ತಿಳಿ — ಯೆಂದು- ಭೀಷ್ಮನು |
ಬಿತ್ತ-ರಿಸಿದನು — ಧರ್ಮ- ತನಯಗೆ — ಶಾಂತಿ- ಪರ್ವದ-ಲಿ || ೧೧-೪ ||
ಎಂಟು- ಪ್ರಕೃತಿಗ — ಳೊಳಗೆ- ವಿಶ್ವಾ- |
ದ್ಯೆಂಟು- ರೂಪದ — ಲಿದ್ದು- ಭಕ್ತರ |
ಕಂಟ-ಕವ ಪರಿ — ಹರಿಸು-ತಲಿ ಪಾ — ಲಿಸುವ- ಪ್ರತಿದಿನ-ದಿ ||
ನೆಂಟ-ನಂದದಿ — ಎಡೆಬಿ-ಡದೆ ವೈ- |
ಕುಂಠ- ರಮಣನು — ತನ್ನ-ವರ ನಿ- |
ಷ್ಕಂಟ-ಕ ಸುಮಾ — ರ್ಗದಲಿ- ನಡೆಸುವ — ದುರ್ಜ-ನರ ಬಡಿ-ವ || ೧೧-೫ ||
ಸ್ವರಮ-ಣನು ಶ — ಕ್ತ್ಯಾದಿ- ರೂಪದಿ |
ಕರಣ-ಮಾನಿಗ — ಳೊಳಗೆ- ನೆಲೆಸಿ- |
ದ್ದರ ವಿ-ದೂರನು — ಸ್ಥೂಲ- ವಿಷಯಗ — ಳುಂಡು-ಣಿಪ ನಿ-ತ್ಯ ||
ಅರಿಯ-ದಲೆ ನಾ — ನುಂಬೆ-ನೆಂಬುವ |
ನಿರಯ-ಗಳನುಂ — ಬುವನು- ನಿಶ್ಚಯ |
ಮರಳಿ- ಮರಳಿ ಭ — ವಾಟ-ವಿಯ ಸಂ — ಚರಿಸಿ- ಬಳಲುವ-ನು || ೧೧-೬ ||
ಸುರುಚಿ- ರುಚಿರ ಸು — ಗಂಧ- ಶುಚಿ ಯೆಂ- |
ದಿರುತಿ-ಹನು ಷ — ಡ್ರಸಗ-ಳೊಳು ಹ- |
ನ್ನೆರಡು- ರೂಪದ — ಲಿಪ್ಪ- ಶ್ರೀ ಭೂ — ದುರ್ಗೆ-ಯರ ಸಹಿ-ತ ||
ಸ್ವರಮ-ಣನು ಎ — ಪ್ಪತ್ತೆ-ರಡು ಸಾ- |
ವಿರ ಸ-ಮೀರನ — ರೂಪ-ದೊಳಗಿ- |
ದ್ದುರು ಪ-ರಾಕ್ರಮ — ಕರ್ತೃ- ಎನಿಸುವ — ನಾಡಿ-ಗಳೊಳಿ-ದ್ದು || ೧೧-೭ ||
ನಿನ್ನ- ಸರ್ವ — ತ್ರದಲಿ- ನೆನೆವವ |
ರನ್ಯ- ಕರ್ಮವ — ಮಾಡಿ-ದರು ಸರಿ |
ಪುಣ್ಯ- ಕರ್ಮಗ — ಳೆನಿಸು-ವವು ಸಂ — ದೇಹ-ವಿನಿತಿ-ಲ್ಲ ||
ನಿನ್ನ- ಸ್ಮರಿಸದೆ — ಸ್ನಾನ- ಜಪ ಹೋ- |
ಮಾನ್ನ- ವಸ್ತ್ರ ಗ — ಜಾಶ್ವ- ಭೂ ಧನ |
ಧಾನ್ಯ- ಮೊದಲಾ — ದಖಿಲ- ಧರ್ಮವ — ಮಾಡಿ- ಫಲವೇ-ನು || ೧೧-೮ ||
ಇಷ್ಟ- ಭೋಗ್ಯ ಪ — ದಾರ್ಥ-ದೊಳು ಶಿಪಿ- |
ವಿಷ್ಟ- ನಾಮದಿ — ಸರ್ವ- ಜೀವರ |
ತುಷ್ಟಿ- ಬಡಿಸುವ –ದಿನದಿ-ನದಿ ಸಂ — ತುಷ್ಟ- ತಾನಾ-ಗಿ ||
ಕೋಷ್ಠ-ದೊಳು ನೆಲೆ — ಸಿದ್ದು- ರಸಮಯ |
ಪುಷ್ಟಿ-ಯೈದಿಸು — ತಿಂದ್ರಿ-ಯಗಳೊಳು |
ಪ್ರೇಷ್ಟ-ನಾಗಿ — ದ್ದೆಲ್ಲ- ವಿಷಯಗ — ಳುಂಬ- ತಿಳಿಸದ-ಲೆ || ೧೧-೯ ||
ಕಾರ-ಕಾಹ್ವಯ — ಜ್ಞಾನ- ಕರ್ಮ- |
ಪ್ರೇರ-ಕನು ತಾ — ನಾಗಿ- ಕ್ರಿಯೆಗಳ |
ತೋರು-ವನು ಕ — ರ್ಮೇಂದ್ರಿ-ಯಾಧಿಪ — ರೊಳಗೆ- ನೆಲೆಸಿ-ದ್ದು ||
ಮೂರು- ಗುಣಮಯ — ದ್ರವ್ಯ-ಗ ತದಾ- |
ಕಾರ- ತನ್ನಾ — ಮದಲಿ- ಕರೆಸುವ |
ತೋರಿ-ಕೊಳ್ಳದೆ — ಜನರ- ಮೋಹಿಪ — ಮೋಹ- ಕಲ್ಪಕ-ನು || ೧೧-೧೦ ||
ದ್ರವ್ಯ-ನೆನಿಸುವ — ಭೂತ- ಮಾತ್ರದೊ- |
ಳವ್ಯ-ಯನು ಕ — ರ್ಮೇಂದ್ರಿ-ಯಗಳೊಳು |
ಭವ್ಯ- ಸತ್ಕ್ರಿಯ — ನೆನಿಪ- ಜ್ಞಾನೇಂ — ದ್ರಿಯಗ-ಳೊಳಗಿ-ದ್ದು ||
ಸ್ತವ್ಯ-ಕಾರಕ — ನೆನಿಸಿ- ಸುಖಮಯ |
ಸೇವ್ಯ- ಸೇವಕ — ನೆನಿಸಿ- ಜಗದೊಳು |
ಹವ್ಯ-ವಾಹನ — ನರಣಿ-ಯೊಳಗಿ — ಪ್ಪಂತೆ- ಇರುತಿ-ಪ್ಪ || ೧೧-೧೧ ||
ಮನವೆ- ಮೊದಲಾ — ದಿಂದ್ರಿ-ಯಗಳೊಳ- |
ಗನಿಲ- ದೇವನು — ಶುಚಿಯೆ-ನಿಸಿ ಕೊಂ- |
ಡನವ-ರತ ನೆಲೆ — ಸಿಪ್ಪ- ಶುಚಿಷ — ದ್ಧೋತ-ನೆಂದೆನಿ-ಸಿ ||
ತನುವಿ-ನೊಳಗಿ — ಪ್ಪನು ಸ-ದಾ ವಾ- |
ಮನ ಹೃ-ಷಿಕೇ — ಶಾಖ್ಯ- ರೂಪದ- |
ಲನುಭ-ವಕೆ ತಂ — ದೀವ- ವಿಷಯಜ — ಸುಖವ- ಜೀವರಿ-ಗೆ || ೧೧-೧೨ ||
ಪ್ರೇರ-ಕ ಪ್ರೇ — ರ್ಯರೊಳು- ಪ್ರೇರ್ಯ- |
ಪ್ರೇರ-ಕನು ತಾ — ನಾಗಿ- ಹರಿ ನಿ- |
ರ್ವೈರ-ದಿಂದ ಪ್ರ — ವರ್ತಿ-ಸುವ ತ — ನ್ನಾಮ- ರೂಪದ-ಲಿ ||
ತೋರಿ-ಕೊಳ್ಳದೆ — ಸರ್ವ-ರೊಳು ಭಾ- |
ಗೀರ-ಥೀ ಜನ — ಕನು ಸ-ಕಲ ವ್ಯಾ- |
ಪಾರ-ಗಳ ತಾ — ಮಾಡಿ- ಮಾಡಿಸಿ — ನೋಡಿ- ನಗುತಿ-ಪ್ಪ || ೧೧-೧೩ ||
ಹರಿಯೆ- ಮುಖ್ಯ ನಿ — ಯಾಮ-ಕನು ಎಂ- |
ದರಿದು- ಪುಣ್ಯಾ — ಪುಣ್ಯ- ಹರ್ಷಾ- |
ಮರುಷ- ಲಾಭಾ — ಲಾಭ- ಸುಖ ದುಃ — ಖಾದಿ- ದ್ವಂದ್ವಗ-ಳ ||
ನಿರುತ- ಅವನಂ — ಘ್ರಿಗೆ ಸ-ಮರ್ಪಿಸಿ |
ನರಕ- ಭೂ ಸ್ವ — ರ್ಗಾಪ- ವರ್ಗದಿ |
ಕರಣ- ನೀಯಾ — ಮಕನ- ಸರ್ವ — ತ್ರದಲಿ- ನೆನೆವುತಿ-ರು || ೧೧-೧೪ ||
ಮಾಣ-ವಕ ತ — ತ್ಫಲಗ-ಳನು ಸಂ- |
ಧಾನ-ವಿಲ್ಲದೆ — ಕರ್ಮ-ಗಳ ಸ್ವೇ- |
ಚ್ಛಾನು-ಸಾರದಿ — ಮಾಡಿ- ಮೋದಿಸು — ವಂತೆ- ಪ್ರತಿದಿನ-ದಿ ||
ಜ್ಞಾನ- ಪೂರ್ವಕ — ವಿಧಿ ನಿ-ಷೇಧಗ- |
ಳೇನು- ನೋಡದೆ — ಮಾಡು- ಕರ್ಮ ಪ್ರ- |
ಧಾನ- ಪುರುಷೇ — ಶನಲಿ- ಭಕುತಿಯ — ಬೇಡು- ಕೊಂಡಾ-ಡು || ೧೧-೧೫ ||
ಹಾನಿ- ವೃದ್ಧಿ ಜ — ಯಾಪ-ಜಯಗಳ- |
ನೇನು- ಕೊಟ್ಟುದ — ಭುಂಜಿ-ಸುತ ಲ- |
ಕ್ಷ್ಮೀನಿ-ವಾಸನ — ಕರುಣ-ವನೆ ಸಂ — ಪಾದಿ-ಸನುದಿನ-ದಿ ||
ಜ್ಞಾನ- ಸುಖಮಯ — ತನ್ನ-ವರ ಪರ- |
ಮಾನು- ರಾಗದಿ — ಸಂತ-ಯಿಪ ದೇ- |
ಹಾನು-ಬಂಧಿಗ — ಳಂತೆ- ಒಳಹೊರ — ಗಿದ್ದು- ಕರುಣಾ-ಳು || ೧೧-೧೬ ||
ಆ ಪ-ರಮ ಸಕ — ಲೇಂದ್ರಿ-ಯಗಳೊಳು |
ವ್ಯಾಪ-ಕನು ತಾ — ನಾಗಿ- ವಿಷಯವ- |
ತಾ ಪ-ರಿಗ್ರಹಿ — ಸುವನು- ತಿಳಿಸದೆ — ಸರ್ವ- ಜೀವರೊ-ಳು ||
ಪಾಪ- ರಹಿತ ಪು — ರಾಣ- ಪುರುಷ ಸ- |
ಮೀಪ-ದಲಿ ನೆಲೆ — ಸಿದ್ದು- ನಾನಾ- |
ರೂಪ- ಧಾರಕ — ತೋರಿ-ಕೊಳ್ಳದೆ — ಕರ್ಮ-ಗಳ ಮಾ-ಳ್ಪ || ೧೧-೧೭ ||
ಖೇಚ-ರರು ಭೂ — ಚರರು- ವಾರಿ ನಿ- |
ಶಾಚ-ರರೊಳಿ — ದ್ದವರ- ಕರ್ಮಗ- |
ಳಾಚ-ರಿಸುವನು — ಘನ ಮ-ಹಿಮ ಪರ — ಮಾಲ್ಪ-ನೋಪಾ-ದಿ ||
ಗೋಚ-ರಿಸನು ಬ — ಹು ಪ್ರ-ಕಾರಾ- |
ಲೋಚ-ನೆಯ ಮಾ — ಡಿದರು- ಮನಸಿಗೆ |
ಕೀಚ-ಕಾರಿ — ಪ್ರೀಯ- ಕವಿಜನ — ಗೇಯ- ಮಹರಾ-ಯ || ೧೧-೧೮ ||
ಒಂದೆ- ಗೋತ್ರ — ಪ್ರವರ- ಸಂಧ್ಯಾ- |
ವಂದ-ನೆಗಳನು — ಮಾಡಿ- ಪ್ರಾಂತಕೆ |
ತಂದೆ- ತನಯರು — ಬೇರೆ- ತಮ್ಮಯ — ಪೆಸರು- ಗೊಂಬಂ-ತೆ ||
ಒಂದೆ- ದೇಹದೊ — ಳಿದ್ದು- ನಿಂದ್ಯಾ- |
ನಿಂದ್ಯ- ಕರ್ಮವ — ಮಾಡಿ- ಮಾಡಿಸಿ |
ಇಂದಿ-ರೇಶನು — ಸರ್ವ- ಜೀವರೊ — ಳೀಶ- ನೆನಿಸುವ-ನು || ೧೧-೧೯ ||
ಕಿಟ್ಟಿ-ಗಟ್ಟಿದ — ಲೋಹ- ಪಾವಕ |
ಸುಟ್ಟು- ವಿಂಗಡ — ಮಾಡು-ವಂತೆ ಘ- |
ರಟ್ಟ- ವ್ರೀಹಿಯೊ — ಳಿಪ್ಪ- ತಂಡುಲ — ಕಡೆಗೆ- ತೆಗೆವಂ-ತೆ ||
ವಿಠ್ಠ-ಲಾನೆಂ — ದೊಮ್ಮೆ- ಮೈಮರೆ- |
ದಟ್ಟ-ಹಾಸದಿ — ಕರೆಯೆ- ದುರಿತಗ- |
ಳಟ್ಟು-ಳಿಯ ಬಿಡಿ — ಸವನ- ತನ್ನೊಳ — ಗಿಟ್ಟು- ಸಲಹುವ-ನು || ೧೧-೨೦ ||
ಜಲಧಿ-ಯೊಳು ಸ್ವೇ — ಚ್ಛಾನು-ಸಾರದಿ |
ಜಲಚ-ರ ಪ್ರಾ — ಣಿಗಳು- ತತ್ತತ್ |
ಸ್ಥಳಗ-ಳಲಿ ಸಂ — ತೋಷ-ಬಡುತಲಿ — ಸಂಚ-ರಿಸುವಂ-ತೆ ||
ನಳಿನ-ನಾಭ ನೊ — ಳಬ್ಜ- ಭವ ಮು- |
ಪ್ಪೊಳಲು-ರಿಗ ಮೈ — ಗಣ್ಣ- ಮೊದಲಾ- |
ದ್ಹಲವು- ಜೀವರ — ಗಣವು- ವರ್ತಿಸು — ತಿಹುದು- ನಿತ್ಯದ-ಲಿ || ೧೧-೨೧ ||
ವಾಸು-ದೇವನು — ಒಳಹೊ-ರಗೆ ಆ- |
ಭಾಸ-ಕನು ತಾ — ನಾಗಿ- ಬಿಂಬ ಪ್ರ- |
ಕಾಶಿ-ಸುವ ತ — ದ್ರೂಪ- ತನ್ನಾ — ಮದಲಿ- ಸರ್ವ-ತ್ರ ||
ಈ ಸ-ಮನ್ವಯ — ವೆಂದೆ-ನಿಪ ಸದು- |
ಪಾಸ-ನೆಯ ಗೈ — ವವನು- ಮೋಕ್ಷಾ- |
ನ್ವೇಷಿ-ಗಳೊಳು — ತ್ತಮನು- ಜೀವ — ನ್ಮುಕ್ತ-ನವನಿಯೊ-ಳು || ೧೧-೨೨ ||
ಭೋಗ್ಯ- ವಸ್ತುಗ — ಳೊಳಗೆ- ಯೋಗ್ಯಾ- |
ಯೋಗ್ಯ- ರಸಗಳ — ನರಿತು- ಯೋಗ್ಯಾ- |
ಯೋಗ್ಯ-ರಲಿ ನೆಲೆ — ಸಿಪ್ಪ- ಹರಿಗೆ ಸ — ಮರ್ಪಿ-ಸನುದಿನ-ದಿ ||
ಭಾಗ್ಯ- ಬಡತನ — ಬರಲು- ಹಿಗ್ಗದೆ |
ಕುಗ್ಗಿ- ಸೊರಗದೆ — ಸದ್ಭ-ಕುತಿ ವೈ- |
ರಾಗ್ಯ-ಗಳ ನೇ– ಮಾಡು ನೀ ನಿ — ರ್ಭಾಗ್ಯ-ನೆನಿಸದ-ಲೆ || ೧೧-೨೩ ||
ಸ್ಥಳ ಜ-ಲಾದ್ರಿಗ — ಳಲ್ಲಿ- ಜನಿಸುವ |
ಫಲ ಸು- ಪುಷ್ಪಜ — ಗಂಧ-ರಸ ಶ್ರೀ- |
ತುಳಸಿ- ಮೊದಲಾ — ದಖಿಲ- ಪೂಜಾ — ಸಾಧ-ನ ಪದಾ-ರ್ಥ ||
ಹಲವು- ಬಗೆಯಿಂ — ದರ್ಪಿ-ಸುತ ಬಾಂ- |
ಬೊಳೆಯ- ಜನಕಗೆ — ನಿತ್ಯ- ನಿತ್ಯದಿ- |
ತಿಳಿವು-ದಿದು ವ್ಯತಿ — ರೇಕ- ಪೂಜೆಗ — ಳೆಂದು- ಕೋವಿದ-ರು || ೧೧-೨೪ ||
ಶ್ರೀಕ-ರನ ಸ — ರ್ವತ್ರ-ದಲಿ ಅವ- |
ಲೋಕಿ-ಸುತ ಗುಣ — ರೂಪ- ಕ್ರಿಯ ವ್ಯತಿ- |
ರೇಕ- ತಿಳಿಯದೆ — ಅನ್ವ-ಯಿಸು ಬಿಂ — ಬನಲಿ- ಮರೆಯದ-ಲೆ ||
ಸ್ವೀಕ-ರಿಸುವನು — ಕರುಣ-ದಿಂದ ನಿ- |
ರಾಕ-ರಿಸದೆ ಕೃ — ಪಾಳು- ಭಕ್ತರ |
ಶೋಕ-ಗಳ ಪರಿ — ಹರಿಸಿ- ಸುಖವಿ — ತ್ತನವ-ರತ ಪೊರೆ-ವ || ೧೧-೨೫ ||
ಇನಿತು- ವ್ಯತಿರೇ — ಕಾನ್ವ-ಯಗಳೆಂ- |
ದೆನಿಪ- ಪೂಜಾ — ವಿಧಿಗ-ಳನೆ ತಿಳಿ- |
ದನಿಮಿ-ಷೇಶನ — ತೃಪ್ತಿ- ಬಡಿಸುತ — ಲಿರು ನಿ-ರಂತರ-ದಿ ||
ಘನ ಮ-ಹಿಮ ಕೈ — ಕೊಂಡು- ಸ್ಥಿತಿ ಮೃತಿ- |
ಜನುಮ-ಗಳ ಪರಿ — ಹರಿಸಿ- ಸೇವಕ- |
ಜನರೊ-ಳಿಟ್ಟಾ — ನಂದ- ಬಡಿಸುವ — ಭಕ್ತ- ವತ್ಸಲ-ನು || ೧೧-೨೬ ||
ಜಲಜ-ನಾಭನಿ — ಗೆರಡು- ಪ್ರತಿಮೆಗ- |
ಳಿಳೆಯೊ-ಳಗೆ ಜಡ — ಚೇತ-ನಾತ್ಮಕ |
ಚಲದೊ-ಳೀರ್ಬಗೆ — ಸ್ತ್ರೀ ಪು-ರುಷ ಭೇ — ದದಲಿ- ಜಡದೊಳ-ಗೆ ||
ತಿಳಿವು-ದಾಹಿತ — ಪ್ರತಿಮೆ- ಸಹಜಾ- |
ಚಲಗ-ಳೆಂದೀ — ರ್ಬಗೆ ಪ್ರ-ತೀಕದಿ |
ಲಲಿತ- ಪಂಚ — ತ್ರಯ ಸು-ಗೋಳಕ — ವರಿತು- ಭಜಿಸುತಿ-ರು || ೧೧-೨೭ ||
ವಾರಿ-ಜಾಸನ — ವಾಯು-ವೀಂದ್ರ ಉ- |
ಮಾ ರ-ಮಣ ನಾ — ಕೇಶ- ಸ್ಮರಹಂ- |
ಕಾರಿ-ಕ ಪ್ರಾ — ಣಾದಿ-ಗಳು ಪುರು — ಷರ ಕ-ಳೇವರ-ದಿ ||
ತೋರಿ-ಕೊಳದನಿ — ರುದ್ಧ- ದೋಷವಿ- |
ದೂರ- ನಾರಾ — ಯಣನ- ರೂಪ ಶ- |
ರೀರ-ಮಾನಿಗ — ಳಾಗಿ- ಭಜಿಸುತ — ಸುಖವ- ಕೊಡುತಿಹ-ರು || ೧೧-೨೮ ||
ಸಿರಿ ಸ-ರಸ್ವತಿ — ಭಾರ-ತೀ ಸೌ |
ಪರಣಿ- ವಾರುಣಿ — ಪಾರ್ವ-ತೀ ಮುಖ |
ರಿರುತಿ-ಹರು ಸ್ತ್ರೀ — ಯರೊಳ-ಗಭಿಮಾ — ನಿಗಳು- ತಾವೆನಿ-ಸಿ ||
ಅರುಣ- ವರ್ಣ ನಿ — ಭಾಂಗ- ಶ್ರೀಸಂ |
ಕರುಷ-ಣ ಪ್ರ — ದ್ಯುಮ್ನ- ರೂಪಗ- |
ಳಿರುಳು- ಹಗಲು ಉ — ಪಾಸ-ನೆಯ ಗೈ — ಯುತಲೆ- ಮೋದಿಪ-ರು || ೧೧-೨೯ ||
ಕೃತಪ್ರ-ತೀಕದಿ — ಟಂಕಿ- ಭಾರ್ಗವ |
ಹುತವ-ಹಾನಿಲ — ಮುಖ್ಯ- ದಿವಿಜರು |
ತುತಿಸಿ-ಕೊಳುತಭಿ — ಮಾನಿ-ಗಳು ತಾ — ವಾಗಿ- ನೆಲೆಸಿ-ದ್ದು ||
ಪ್ರತಿ ದಿ-ವಸ ಶ್ರೀ — ತುಳಸಿ- ಗಂಧಾ- |
ಕ್ಷತೆ ಕು-ಸುಮ ಫಲ — ದೀಪ- ಪಂಚಾ- |
ಮೃತದಿ- ಪೂಜಿಪ — ಭಕ್ತ-ರಿಗೆ ಕೊಡು — ತಿಹರು- ಪುರುಷಾ-ರ್ಥ || ೧೧-೩೦ ||
ನಗಗ-ಳಭಿಮಾ — ನಿಗಳೆ-ನಿಪ ಸುರ- |
ರುಗಳು- ಸಹಜಾ — ಚಲಗ-ಳಿಗೆ ಮಾ- |
ನಿಗಳೆ-ನಿಸಿ ಶ್ರೀ — ವಾಸು-ದೇವನ — ಪೂಜಿ-ಸುತಲಿಹ-ರು ||
ಸ್ವಗತ- ಭೇದ ವಿ — ವರ್ಜಿ-ತನ ನಾ- |
ಲ್ಬಗೆ ಪ್ರ-ತೀಕದಿ — ತಿಳಿದು- ಪೂಜಿಸೆ |
ವಿಗಡ- ಸಂಸಾ — ರಾಬ್ಧಿ- ದಾಟಿಸಿ — ಮುಕ್ತ-ರನು ಮಾ-ಳ್ಪ || ೧೧-೩೧ ||
ಆವ- ಕ್ಷೇತ್ರಕೆ — ಪೋದ-ರೇನಿ- |
ನ್ನಾವ- ತೀರ್ಥದಿ — ಮುಳಗ-ಲೇನಿ- |
ನ್ನಾವ- ಜಪ ತಪ — ಹೋಮ- ದಾನವ — ಮಾಡಿ- ಫಲವೇ-ನು ||
ಶ್ರೀವ-ರ ಜಗ — ನ್ನಾಥ-ವಿಠಲನ |
ಈ ವಿ-ಧದಿ ಜಂ — ಗಾಮ- ಸ್ಥಾವರ- |
ಜೀವ-ರೊಳು ಪರಿ — ಪೂರ್ಣ-ನೆಂದರಿ — ಯದಿಹ- ಮಾನವ-ನು || ೧೧-೩೨ ||
|| ಇತಿ ಶ್ರೀ ಧ್ಯಾನಪ್ರಕ್ರಿಯಾ ಸಂಧಿ ಸಂಪೂರ್ಣಂ ||
( ಇತಿ ಶ್ರೀ ಸ್ಥಾವರಜಂಗಮ ಸಂಧಿ ಸಂಪೂರ್ಣಂ )
|| ಶ್ರೀಕೃಷ್ಣಾರ್ಪಣಮಸ್ತು ||
12. Nadiprakarana Sandhi – HKS
11. dhyaanaprakriyaa saMdhi
( sthaavarajaMgama saMdhi )
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
paadu-keya kaM — Taka si-kata moda- |
laada-vanudina — baadhi-savu E |
kaada-shEMdriya — gaLali- biDade hRu — ShIka-pana moo-rti ||
saada-radi nene — vavanu- Enapa |
raadha-gaLa maa — Didaru- sariye ni |
rOdha-gaisavu — mOkSha- maargake — durita- raashiga-Lu || 11-1 ||
hagalu- naMdaa — deepa-daMdadi |
nigama- vEdyana — pooji-suta kai |
mugidu- naalkaro — LoMdu- puruShaa — rthavanu- bEDada-le ||
jagadu-dara ko — TTudanu- bhuMjisu |
maga ma-Dadi praa — NEMdri-yaatmaa |
digaLu- bhagavada — dheena-veMdaDi — gaDige- nenevuti-ru || 11-2 ||
aswa-taMtranu — jeeva- hari sa |
rva swa-taMtranu — nitya- sukhamaya |
niHswa-baddhaa — lpaj~ja- shakta sa — duHkha- nirvi-NNa ||
hraswa-dEhi sa — naatha- jeevanu |
vishwa-vyaapaka — kartRu- brahma sa |
raswa-teeshaa — dyamara-nuta hari — yeMdu- koMDaa-Du || 11-3 ||
matte- vishwaa — dyeMTu- roopoM |
bhatta-riMdali — pecci-salu e- |
ppatte-raDu roo — pagaLa-havu oM — doMde- saaha-sra ||
pRuth pRu-thaku naa — DigaLo-Lage sa- |
rvOtta-mana tiLi — yeMdu- bheeShmanu |
bitta-risidanu — dharma- tanayage — shaaMti- parvada-li || 11-4 ||
eMTu- prakRutiga — LoLage- vishwaa- |
dyeMTu- roopada — liddu- bhaktara |
kaMTa-kava pari — harisu-tali paa — lisuva- pratidina-di ||
neMTa-naMdadi — eDebi-Dade vai- |
kuMTha- ramaNanu — tanna-vara ni- |
ShkaMTa-ka sumaa — rgadali- naDesuva — durja-nara baDi-va || 11-5 ||
swarama-Nanu sha — ktyaadi- roopadi |
karaNa-maaniga — LoLage- nelesi- |
ddara vi-dooranu — sthoola- viShayaga — LuMDu-Nipa ni-tya ||
ariya-dale naa — nuMbe-neMbuva |
niraya-gaLanuM — buvanu- nishcaya |
maraLi- maraLi bha — vaaTa-viya saM — carisi- baLaluva-nu || 11-6 ||
suruci- rucira su — gaMdha- shuci yeM- |
diruti-hanu Sha — Drasaga-LoLu ha- |
nneraDu- roopada — lippa- shree bhoo — durge-yara sahi-ta ||
swarama-Nanu e — ppatte-raDu saa- |
vira sa-meerana — roopa-doLagi- |
dduru pa-raakrama — kartRu- enisuva — naaDi-gaLoLi-ddu || 11-7 ||
ninna- sarva — tradali- nenevava |
ranya- karmava — maaDi-daru sari |
puNya- karmaga — Lenisu-vavu saM — dEha-viniti-lla ||
ninna- smarisade — snaana- japa hO- |
maanna- vastra ga — jaashwa- bhoo dhana |
dhaanya- modalaa — dakhila- dharmava — maaDi- phalavE-nu || 11-8 ||
iShTa- bhOgya pa — daartha-doLu shipi- |
viShTa- naamadi — sarva- jeevara |
tuShTi- baDisuva –dinadi-nadi saM — tuShTa- taanaa-gi ||
kOShTha-doLu nele — siddu- rasamaya |
puShTi-yaidisu — tiMdri-yagaLoLu |
prEShTa-naagi — ddella- viShayaga — LuMba- tiLisada-le || 11-9 ||
kaara-kaahwaya — j~jaana- karma- |
prEra-kanu taa — naagi- kriyegaLa |
tOru-vanu ka — rmEMdri-yaadhipa — roLage- nelesi-ddu ||
mooru- guNamaya — dravya-ga tadaa- |
kaara- tannaa — madali- karesuva |
tOri-koLLade — janara- mOhipa — mOha- kalpaka-nu || 11-10 ||
dravya-nenisuva — bhoota- maatrado- |
Lavya-yanu ka — rmEMdri-yagaLoLu |
bhavya- satkriya — nenipa- j~jaanEM — driyaga-LoLagi-ddu ||
stavya-kaaraka — nenisi- sukhamaya |
sEvya- sEvaka — nenisi- jagadoLu |
havya-vaahana — naraNi-yoLagi — ppaMte- iruti-ppa || 11-11 ||
manave- modalaa — diMdri-yagaLoLa- |
ganila- dEvanu — shuciye-nisi koM- |
Danava-rata nele — sippa- shuciSha — ddhOta-neMdeni-si ||
tanuvi-noLagi — ppanu sa-daa vaa- |
mana hRu-ShikE — shaakhya- roopada- |
lanubha-vake taM — deeva- viShayaja — sukhava- jeevari-ge || 11-12 ||
prEra-ka prE — ryaroLu- prErya- |
prEra-kanu taa — naagi- hari ni- |
rvaira-diMda pra — varti-suva ta — nnaama- roopada-li ||
tOri-koLLade — sarva-roLu bhaa- |
geera-thI jana — kanu sa-kala vyaa- |
paara-gaLa taa — maaDi- maaDisi — nODi- naguti-ppa || 11-13 ||
hariye- mukhya ni — yaama-kanu eM- |
daridu- puNyaa — puNya- harShaa- |
maruSha- laabhaa — laabha- sukha duH — khaadi- dwaMdwaga-La ||
niruta- avanaM — Grige sa-marpisi |
naraka- bhoo swa — rgaapa- vargadi |
karaNa- nIyaa — makana- sarva — tradali- nenevuti-ru || 11-14 ||
maaNa-vaka ta — tphalaga-Lanu saM- |
dhaana-villade — karma-gaLa swE- |
cChaanu-saaradi — maaDi- mOdisu — vaMte- pratidina-di ||
j~jaana- poorvaka — vidhi ni-ShEdhaga- |
LEnu- nODade — maaDu- karma pra- |
dhaana- puruShE — shanali- bhakutiya — bEDu- koMDaa-Du || 11-15 ||
haani- vRuddhi ja — yaapa-jayagaLa- |
nEnu- koTTuda — bhuMji-suta la- |
kShmIni-vaasana — karuNa-vane saM — paadi-sanudina-di ||
j~jaana- sukhamaya — tanna-vara para- |
maanu- raagadi — saMta-yipa dE- |
haanu-baMdhiga — LaMte- oLahora — giddu- karuNaa-Lu || 11-16 ||
aa pa-rama saka — lEMdri-yagaLoLu |
vyaapa-kanu taa — naagi- viShayava- |
taa pa-rigrahi — suvanu- tiLisade — sarva- jeevaro-Lu ||
paapa- rahita pu — raaNa- puruSha sa- |
meepa-dali nele — siddu- naanaa- |
roopa- dhaaraka — tOri-koLLade — karma-gaLa maa-Lpa || 11-17 ||
khEca-raru bhoo — cararu- vaari ni- |
shaaca-raroLi — ddavara- karmaga- |
Laaca-risuvanu — ghana ma-hima para — maalpa-nOpaa-di ||
gOca-risanu ba — hu pra-kaaraa- |
lOca-neya maa — Didaru- manasige |
keeca-kaari — preeya- kavijana — gEya- maharaa-ya || 11-18 ||
oMde- gOtra — pravara- saMdhyaa- |
vaMda-negaLanu — maaDi- praaMtake |
taMde- tanayaru — bEre- tammaya — pesaru- goMbaM-te ||
oMde- dEhado — Liddu- niMdyaa- |
niMdya- karmava — maaDi- maaDisi |
iMdi-rEshanu — sarva- jeevaro — LIsha- nenisuva-nu || 11-19 ||
kiTTi-gaTTida — lOha- paavaka |
suTTu- viMgaDa — maaDu-vaMte gha- |
raTTa- vrIhiyo — Lippa- taMDula — kaDege- tegevaM-te ||
viThTha-laaneM — domme- maimare- |
daTTa-haasadi — kareye- duritaga- |
LaTTu-Liya biDi — savana- tannoLa — giTTu- salahuva-nu || 11-20 ||
jaladhi-yoLu swE — cChaanu-saaradi |
jalaca-ra praa — NigaLu- tattat |
sthaLaga-Lali saM — tOSha-baDutali — saMca-risuvaM-te ||
naLina-naabha no — Labja- bhava mu- |
ppoLalu-riga mai — gaNNa- modalaa- |
d~halavu- jeevara — gaNavu- vartisu — tihudu- nityada-li || 11-21 ||
vaasu-dEvanu — oLaho-rage aa- |
bhaasa-kanu taa — naagi- biMba pra- |
kaashi-suva ta — droopa- tannaa — madali- sarva-tra ||
ee sa-manwaya — veMde-nipa sadu- |
paasa-neya gai — vavanu- mOkShaa- |
nwEShi-gaLoLu — ttamanu- jeeva — nmukta-navaniyo-Lu || 11-22 ||
bhOgya- vastuga — LoLage- yOgyaa- |
yOgya- rasagaLa — naritu- yOgyaa- |
yOgya-rali nele — sippa- harige sa — marpi-sanudina-di ||
bhaagya- baDatana — baralu- higgade |
kuggi- soragade — sadbha-kuti vai- |
raagya-gaLa nE– maaDu nee ni — rbhaagya-nenisada-le || 11-23 ||
sthaLa ja-laadriga — Lalli- janisuva |
phala su- puShpaja — gaMdha-rasa shree- |
tuLasi- modalaa — dakhila- poojaa — saadha-na padaa-rtha ||
halavu- bageyiM — darpi-suta baaM- |
boLeya- janakage — nitya- nityadi- |
tiLivu-didu vyati — rEka- poojega — LeMdu- kOvida-ru || 11-24 ||
shreeka-rana sa — rvatra-dali ava- |
lOki-suta guNa — roopa- kriya vyati- |
rEka- tiLiyade — anwa-yisu biM — banali- mareyada-le ||
sweeka-risuvanu — karuNa-diMda ni- |
raaka-risade kRu — paaLu- bhaktara |
shOka-gaLa pari — harisi- sukhavi — ttanava-rata pore-va || 11-25 ||
initu- vyatirE — kaanwa-yagaLeM- |
denipa- poojaa — vidhiga-Lane tiLi- |
danimi-ShEshana — tRupti- baDisuta — liru ni-raMtara-di ||
ghana ma-hima kai — koMDu- sthiti mRuti- |
januma-gaLa pari — harisi- sEvaka- |
janaro-LiTTaa — naMda- baDisuva — bhakta- vatsala-nu || 11-26 ||
jalaja-naabhani — geraDu- pratimega- |
LiLeyo-Lage jaDa — cEta-naatmaka |
calado-LIrbage — strI pu-ruSha bhE — dadali- jaDadoLa-ge ||
tiLivu-daahita — pratime- sahajaa- |
calaga-LeMdI — rbage pra-teekadi |
lalita- paMca — traya su-gOLaka — varitu- bhajisuti-ru || 11-27 ||
vaari-jaasana — vaayu-veeMdra u- |
maa ra-maNa naa — kEsha- smarahaM- |
kaari-ka praa — Naadi-gaLu puru — Shara ka-LEvara-di ||
tOri-koLadani — ruddha- dOShavi- |
doora- naaraa — yaNana- roopa sha- |
reera-maaniga — Laagi- bhajisuta — sukhava- koDutiha-ru || 11-28 ||
siri sa-raswati — bhaara-tI sou |
paraNi- vaaruNi — paarva-tI mukha |
riruti-haru strI — yaroLa-gabhimaa — nigaLu- taaveni-si ||
aruNa- varNa ni — bhaaMga- shreesaM |
karuSha-Na pra — dyumna- roopaga- |
LiruLu- hagalu u — paasa-neya gai — yutale- mOdipa-ru || 11-29 ||
kRutapra-teekadi — TaMki- bhaargava |
hutava-haanila — mukhya- divijaru |
tutisi-koLutabhi — maani-gaLu taa — vaagi- nelesi-ddu ||
prati di-vasa shree — tuLasi- gaMdhaa- |
kShate ku-suma phala — deepa- paMcaa- |
mRutadi- poojipa — bhakta-rige koDu — tiharu- puruShaa-rtha || 11-30 ||
nagaga-Labhimaa — nigaLe-nipa sura- |
rugaLu- sahajaa — calaga-Lige maa- |
nigaLe-nisi shree — vaasu-dEvana — pooji-sutaliha-ru ||
swagata- bhEda vi — varji-tana naa- |
lbage pra-teekadi — tiLidu- poojise |
vigaDa- saMsaa — raabdhi- daaTisi — mukta-ranu maa-Lpa || 11-31 ||
aava- kShEtrake — pOda-rEni- |
nnaava- teerthadi — muLaga-lEni- |
nnaava- japa tapa — hOma- daanava — maaDi- phalavE-nu ||
shreeva-ra jaga — nnaatha-viThalana |
ee vi-dhadi jaM — gAma- sthaavara- |
jeeva-roLu pari — poorNa-neMdari — yadiha- maanava-nu || 11-32 ||
|| iti shree dhyaanaprakriyaa saMdhi saMpoorNaM ||
( iti shree sthaavarajaMgama saMdhi saMpoorNaM )
|| shreekRuShNaarpaNamastu ||

Leave a Reply
You must be logged in to post a comment.