Composer : Shri Rangesha vittala
ಸರುವದ ಪಠಿಸಿರೊ ಚತುರವಿಂಶತಿ ನಾಮ
ಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ [ಪ]
ಕೇಶವ ನಾರಾಯಣ ಮಾಧವ ಗೋವಿಂದನ
ಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ (೧)
ವಾಮನ ಶ್ರೀಧರ ಹೃಷಿಕೇಶ ಪದುಮನಾಭ
ದಾಮೋದರ ಸಂಕರುಷಣ ವಾಸುದೇವನ (೨)
ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮ ದೇವನ
ಅಧೋಕ್ಷಜ ನಾರಸಿಂಹ ಅಚ್ಯುತರಾಯನ (೩)
ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣ ಸ್ವಾಮಿಯ
ಜನನ ಮರಣ ರಹಿತನಾದ ಶ್ರೀನಿವಾಸನ (೪)
ಈ ಮಹಾ ನಾಮಂಗಳ ಪ್ರೇಮದಿಂ ಪಾಡಲು
ಕಾಮಿತಾರ್ಥವೀವ ಶ್ರೀ ರಂಗೇಶವಿಠಲ (೫)
saruvada paThisiro caturaviMSati nAma
siriviriMcAdigaLigE priyakara nAma [pa]
kESava nArAyaNa mAdhava gOviMdana
SrISa viShNu madhusUdhana trivikramana (1)
vAmana SrIdhara hRuShikESa padumanABa
dAmOdara saMkaruShaNa vAsudEvana (2)
pradyumna aniruddha puruShOttama dEvana
adhOkShaja nArasiMha acyutarAyana (3)
janArdhana upEMdra hari SrI kRuShNa svAmiya
janana maraNa rahitanAda SrInivAsana (4)
I mahA nAmaMgaLa prEmadiM pADalu
kAmitArthavIva SrI raMgESaviThala (5)

Leave a Reply
You must be logged in to post a comment.