Composer : Shri Shyamasundara dasaru
ಇಂಥಾ ಗುರುಗಳ ಕಾಣೆನಾ | ಭೂತಳದೊಳು
ಇಂಥಾ ಯತಿಗಳ ಕಾಣೆನಾ [ಪ]
ಇಂಥ ಗುರುಗಳ ಕಾಣೆ , ಮಂತ್ರ ಮಂದಿರದಲ್ಲಿ
ನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ [ಅ.ಪ]
ದೇವ ಸ್ವಭಾವನೀತನು | ಸತತ ಪವನ
ದೇವನಾವೇಶಯುಕ್ತನು |
ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗ
ದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿ
ಭಾವ ಭಕ್ತಿಯಲಿ | ಸೇವಿಪರಿಗೆ ಭವ
ನೋವು ಕಳೆದು ಸುರ | ಗೋವಿನ ತೆರ ವರ
ವೀವನು ಕರುಣದಿ | ಕಾಮನು ಪರಮ
ಪಾವನ ಚರಿತನು | ಕೋವಿದರೊಡೆಯನು [೧]
ವರಹಜ ತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿ ಬರುವ |
ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ
ಪರಿಮಳ ಗ್ರಂಥವ ವಿರಚಿಸಿ, ಬುಧರಿಗೆ
ಗರೆದನು ಕರುಣದಿ ಪೊರೆದನು ಪರಮತ
ಮುರಿದನು ಜಗದೋಳ್ ಮೆರೆದನು ಹೊಸ ಹೊಸ,
ಪರಿ ಸುಮಹೋತ್ಸವ ಹರುಷದಿ ಪ್ರತಿದಿನ
ಗುರು ಸುಯಮೀಂದ್ರಿಂ | ಕರದಿಂಗೊಂಬರು [೨]
ಮಂದಜಾಸನ ಜನಕ | ಶ್ರೀ ಶಾಮಸುಂದರ
ನಂಘ್ರಿ ಸೇವಕ |
ಕಂದರ್ಪ ಶರಕರಿ ವೃಂದ ಕೇಸರಿ ಎನಿಸಿ
ಗಂಧವಾಹನ ಮತ | ಸಿಂಧುವಿಗೆ ಶಶಿ,
ಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ | ಕಂದರಕ್ಷಿಗಳ
ಕುಂದದಿ ಕೊಡುವ | ಕರ್ಮಂದಿ ಕುಲಾಗ್ರಣಿ [೩]
iMthA gurugaLa kANenA | BUtaLadoLu
iMthA yatigaLa kANenA [pa]
iMtha gurugaLa kANe , maMtra maMdiradalli
niMtu Bajakarige | ciMte kaLeva karuNi [a.pa]
dEva svaBAvanItanu | satata pavana
dEvanAvESayuktanu |
Ava saMSayavyAke | dEvAdhidEva naramRuga
dEvanItana Baktige | dhAvisi baMda staMBadi
BAva Baktiyali | sEviparige Bava
nOvu kaLedu sura | gOvina tera vara
vIvanu karuNadi | kAmanu parama
pAvana caritanu | kOvidaroDeyanu [1]
varahaja taTadalliruva Baktaru kUgi
karedalligODi baruva |
maruta SAstrada marma BaritavAdaMtha divya
parimaLa graMthava viracisi, budharige
garedanu karuNadi poredanu paramata
muridanu jagadOL meredanu hosa hosa,
pari sumahOtsava haruShadi pratidina
guru suyamIMdriM | karadiMgoMbaru [2]
maMdajAsana janaka | SrI SAmasuMdara
naMGri sEvaka |
kaMdarpa Sarakari vRuMda kEsari enisi
gaMdhavAhana mata | siMdhuvige SaSi,
yaMdadi rAjisi vRuMdAvanavanu
oMde manadali vaMdisi namisuva
vaMdyAMdhakarige | kaMdarakShigaLa
kuMdadi koDuva | karmaMdi kulAgraNi [3]

Leave a Reply
You must be logged in to post a comment.