Composer : Shri Shyamasundara dasaru
ಎಂದು ಕಾಂಬೆನು ನಂದ ಗೋಪನ |
ಕಂದ ಶ್ರೀ ಗೋವಿಂದನ [ಪ]
ಮಂದರಾಚಲಧರ ಶ್ರೀ ಯದುಕುಲ |
ಚಂದ್ರ ಗುಣಗಣಸಾಂದ್ರನ [ಅ.ಪ]
ವಿಜಯಸೂತನ ವಿಶ್ವ ಪಾಲನ | ಭುಜಗವರ ಪರಿಯಂಕನ,
ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರ-ಗಮನನ [೧]
ಪಾಲುದಧಿ ನವನೀತ ಚೋರನ | ಬಾಲಕೃಷ್ಣ ಗೋಪಾಲನ
ಶೈಲ ಬೆರಳಿಲಿ ತಾಳಿ ಗೋಕುಲ, ಪಾಲಿಸಿದ ಪರಮಾತ್ಮನ [೨]
ಭಾಮೆ ರುಕ್ಮಿಣಿ ರಮಣ ರಂಗನ | ಸಾಮಗಾನ ವಿಲೋಲನ
ಶ್ರೀಮದಾನಂದ ಮುನಿ ಕರಾರ್ಚಿತ ಶಾಮಸುಂದರ ವಿಠಲನ [೩]
eMdu kAMbenu naMda gOpana |
kaMda SrI gOviMdana [pa]
maMdarAcaladhara shrI yadukula |
caMdra guNagaNasAMdrana [a.pa]
vijayasUtana viSva pAlana | Bujagavara pariyaMkana,
rajanicararaLida jana janakana | SrI jagapati dvijavara-gamanana [1]
pAludadhi navanIta cOrana | bAlakRuShNa gOpAlana
Saila beraLili tALi gOkula, pAlisida paramAtmana [2]
BAme rukmiNi ramaNa raMgana | sAmagAna vilOlana
SrImadAnaMda muni karArcita SAmasuMdara viThalana [3]

Leave a Reply
You must be logged in to post a comment.