Baranalle sakhi

Composer : Shri Vijayaramachandra vittala

By Smt.Shubhalakshmi Rao

ಬಾರನಲ್ಲೆ ಸಖಿ ಪರಿಪೂರ್ಣ ಕಾಮನು [ಪ]
ತೋರನಲ್ಲೆ ಅವನ ಚರಣ ಕಮಲವನ್ನು [ಅ.ಪ]

ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದ
ಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ (೧)

ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವ
ತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ (೨)

ಒರಳನೆಳೆದು ಮರವನ್ನು ಮುರಿದು ನಿಲ್ಲುವ
ಅರಿಯದ ಬಲೆಯರ ಸೀರೆ ಮರಕೆ ಕಟ್ಟಿ ಪೋಗುವ (೩)

ವ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವ
ಭುಜ ಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ (೪)

ಏಸು ಕಾಲದಿಂದ ಅವನ ಬಯಸಿ ನಾ ಬೇಡುವೆ
ವಾಸುದೇವ ವಿಜಯ ರಾಮಚಂದ್ರವಿಠಲನ (೫)


bAranalle saKi paripUrNa kAmanu [pa]
tOranalle avana caraNa kamalavannu [a.pa]

patisutara biTTu kRuShNane gatiyeMdu naMbida
satiyara daNisuvudu lakShmIpatige sariye nalle (1)

sarasijAkShiyara kUDa avanU sarasavADuva
turugaLalli guDugyADi karugaLanu biccuva (2)

oraLaneLedu maravannu muridu nilluva
ariyada baleyara sIre marake kaTTi pOguva (3)

vrajada nArEra biTTu kubuje gaMdhava bEDuva
Buja balavannu tOri nija vairiyara kolluva (4)

Esu kAladiMda avana bayasi nA bEDuve
vAsudEva vijaya rAmacaMdraviThalana (5)

Leave a Reply

You might also like

error: Content is protected !!