Bhajisi badukiro – Bhutaraja

Composer : Shri Tandevaradagopala vittala

ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೋ
ಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ (ಪ)

ಭಾವ ಶುದ್ಧದಿ ಓದಿ ಗ್ರಂಥ ಸಾರವಾ
ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ (೧)

ಅಷ್ಟ ಮಂದಿಯಾ ಅಮೃತ ವೃಷ್ಟಿಗರೆವರೂ
ಶ್ರೀ ಕೃಷ್ಣ ಮಹಿಮೆಯ ತಾವು ಕೂಡಿ ಪಾಡೊರೊ (೨)

ತಂದೆ ಎಂಬೊದೂ ತಾನು ಒಂದನರಿಯದೆ
ನಿಂದೆ ಮಾಡಿ ತಾನೆ ಬಲು ಕುಂದಿಗಳುಕುವಾ (೩)

ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ
ಸಿಟ್ಟಿನಿಂದ ಬೈದು ಬಹು ಕಷ್ಟ ಬಡುವನೊ (೪)

ಛಂಡಿ ಮನುಜನೇ ಪ್ರಚಂಡ ತಪಶಿಯೋ
ಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ (೫)

ಏನು ಪೇಳಲಿ ಇನ್ನೇನು ಹೇಳಲೀ
ಜ್ಞಾನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ (೬)

ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋ
ನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ (೭)

ಶರಣು ಪೊಕ್ಕೆನೊ ಸ್ವಾಮಿ ಮರೆಯ ಹೊಕ್ಕೆನೊ
ಕರುಣ ಮಾಡಿರೀ ಕಣ್ಣು ತೆರೆದು ನೋಡಿರೀ (೮)

ಭೂತ ಹರಣವಾ ತಾಳೋ ಭೀತಿಗೊಳಿಸುತಾ
ಪಾಪ ಪೋಪುದೂ ಯನ್ನ ಪಾದ ಸೋಂಕಲೂ (೯)

ಭೀತಿಗೊಳಿಸುತಾ-ನೇಕ ಭೂತ ಪ್ರೇತಕೇ
ರಾಜನಾಗಿ ನೀನು ಭೂತ ಪ್ರೇತ ಗಣದೊಳು (೧೦)

ನಂದಿವಾಹನಾ ಪದಕೆ ಮುಂದೆ ಬಾಹುವೀ
ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ (೧೧)

ಪಂಚವೃಂದದೀ ಸದ್ವ್ರುಂದ ಪೂಜ್ಯನಾ
ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ (೧೨)

ಸ್ವಾದಿ ನಿಲಯನಾ ಬಲು ಪ್ರೀತಿ ಪಡೆದು ತಾ
ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ (೧೩)

ಪ್ರಾಣ ಪತಿಯನಾ ರೇಣು ಪಾದ ಫಣಿಯಲೀ
ಪ್ರಾಣಿ ನಿಡದನಾ ಅವನ ಪ್ರಾಣ ಸೆಳೆವನಾ (೧೪)

ಎಂತು ಪೇಳಲೀ ಇವರ ಅಚಿಂತ್ಯ ಮಹಿಮೆಯಾ
ಶಾಂತ ಮೂರುತಿ ಶಶಿಕಾಂತ ಕೀರುತೀ (೧೫)

ದೂಷ ಜನರನಾ ಬಲು ಘಾಸಿಗೊಳಿಸಿದಾ ಶಕ್ತಿ-ದಾಯಕ
ತಂದೆವರದಗೋಪಾಲವಿಠಲನು (೧೬)


Bajisi badukirO divya pAdakeragirO
Bakutiyittu porevo BUtarAjareMbarA (pa)

BAva Suddhadi Odi graMtha sAravA
vAdirAjara kUDi tAnu vyAsa muniyali (1)

aShTa maMdiyA amRuta vRuShTigarevarU
SrI kRuShNa mahimeya tAvu kUDi pADoro (2)

taMde eMbodU tAnu oMdanariyade
niMde mADi tAne balu kuMdigaLukuvA (3)

SiShTa janaroLu ivanE SrEShThavEnidU
siTTiniMda baidu bahu kaShTa baDuvano (4)

CaMDi manujanE pracaMDa tapaSiyO
keMDa tuLidu vyartha nInu daMDakaLukuvi (5)

Enu pELali innEnu hELalI
j~jAna SUnyanaMte Sikki nuDiya byADelO (6)

Kulla kELelO elO Galla toDadirO
nigamavella pELisuvA kalliniMdalE (7)

SaraNu pokkeno svAmi mareya hokkeno
karuNa mADirI kaNNu teredu nODirI (8)

BUta haraNavA tALO BItigoLisutA
pApa pOpudU yanna pAda sOMkalU (9)

BItigoLisutA-nEka BUta prEtakE
rAjanAgi nInu BUta prEta gaNadoLu (10)

naMdivAhanA padake muMde bAhuvI
yanna kaMda nInu nAnE BAvi maMdajAsanA (11)

paMcavRuMdadI sadvruMda pUjyanA
dvaMdva poMdi tAnu svAnaMda paDedanU (12)

svAdi nilayanA balu prIti paDedu tA
triSUla dharisidA BAvi SUla ramaNanU (13)

prANa patiyanA rENu pAda PaNiyalI
prANi niDadanA avana prANa seLevanA (14)

eMtu pELalI ivara aciMtya mahimeyA
SAMta mUruti SaSikAMta kIrutI (15)

dUSha janaranA balu GAsigoLisidA Sakti-dAyaka
taMdevaradagOpAlaviThalanu (16)

Leave a Reply

You might also like

error: Content is protected !!