Mareyadiru Maramanane

Composer : Shri Vyasa vittala

By Smt.Shubhalakshmi Rao

ಮರೆಯದಿರು ಮರೆಯದಿರು ಮಾರಮಣನೇ [ಪ]
ಗುರು ಸತ್ಯಬೋಧಾರ್ಯ ವರದ ರಘುರಾಮಾ [ಅ.ಪ]

ವನ ವನಂಗಳ ತಿರುಗಿ ಹಣ್ಣು ಹಂಪಲ ಮೆದ್ದು
ದಣುವಾದ ಪಾಡು ನಿನಗರಿಕಿಲ್ಲವೇ |
ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನು, ಕ್ಷಣ
ಬಿಡದೆ ಕೈಕೊಂಬ ಘನ ಗರ್ವದಿಂದೆನ್ನ (೧)

ನಾರ ವಸ್ತ್ರವನುಟ್ಟು ತಲೆ ಜಡೆ ಗಟ್ಟಿದುದು
ತೋರದೇನೊ ನಿನ್ನ ಮನಸಿಗಿಂದೂ |
ಮೇರೆಯಿಲ್ಲದ ಪದಕ ವಜ್ರ ಮಣಿ ಮಕುಟಗಳ,
ಭಾರವನು ನೀ ವಹಿಸಿ, ಬಹು ಬಿಂಕವನೆ ತಾಳೀ (೨)

ಅರ್ಭಕನ ತೆರನಂತೆ ದರ್ಭೆ ಹಾಸಿಕೆ ಮೇಲೆ
ಗುಬ್ಬಿಯಂದದಿ ಮಲಗಿದುದು ಮರತೆಯಾ |
ಲಭ್ಯವಾದಾ ಹೇಮ ತೊಟ್ಟಿಲೊಳು ನೀ ಮಲಗಿ
ಉಬ್ಬಿ ಓಲಗಗೊಂಬ ಉತ್ಸಾಹದಿಂದೆನ್ನ (೩)

ಹೆಂಡತಿಯ ಕಳಕೊಂಡು ಕಂಡ ಕಂಡವರಿಗೇ
ಅಂಡಲಿದ ಮಾತುಗಳು ಅನಲೇತಕೇ |
ಮಂಡಿತಾದಾಭರಣ ಮತ್ತೆ ಎಡದಲಿ ಸತಿಯು ಕಂಡು
ಸುಖ ಬಡುವಂಥ ಕಳವಳಿಕೆಯಿಂದೆನ್ನ (೪)

ಈಗಲೀ ಸತ್ಯಬೋಧರ ಬಳಿಯಲಿರಲಾಗಿ
ನೀಗಿ ಹೋಯಿತೆ ನಿನ್ನ ಪಡಿಪಾಟಲೂ |
ಆಗೀಗಲೆನ್ನದೇ ಕ್ಷಣ ಬಿಡದೆ ಕೈಕೊಂಡು
ವೈಭೋಗ ಬಡುವುದೂ ಮೊದಲಿಗಿದ್ದಿಲ್ಲ (೫)

ನಮ್ಮ ಗುರುಗಳು ನಿಮಗೆ ಈ ಪರೀಯುಪಚಾರ
ಘಮ್ಮನೇ ಮಾಡಲೂ ಘನತೆಯಿಂದಾ |
ನಮ್ಮ ಸಾಕದೆ ಇನಿತು ದೂರ ಮಾಳ್ಪುದು ನಿನಗೆ
ಧರ್ಮವಲ್ಲವೊ ಸ್ವಾಮಿ ದಯದಿಂದ ನೋಡೆಮ್ಮ (೬)

ಸಾಕಾರ ರೂಪ ಸರ್ವೋತ್ತಮನೆ ವೈಕುಂಠ
ಬೇಕಾಗಲಿಲ್ಲ ಹೊಸ ಪರಿ ಭಾಗ್ಯವೂ |
ಯಾಕೆ ಭಕುತರ ಮಾತು ನಿರಾಕರಿಸಿ ಬಿಡುವುದೂ
ಶ್ರೀಕಾಂತ ಎರಗುವೆ ವ್ಯಾಸ ವಿಠ್ಠಲರೇಯಾ (೭)


mareyadiru mareyadiru mAramaNanE [pa]
guru satyabOdhArya varada raGurAmA [a.pa]

vana vanaMgaLa tirugi haNNu haMpala meddu
daNuvAda pADu ninagarikillavE |
dina dinadi citra vicitra BOjyagaLannu, kShaNa
biDade kaikoMba Gana garvadiMdenna (1)

nAra vastravanuTTu tale jaDe gaTTidudu
tOradEno ninna manasigiMdU |
mEreyillada padaka vajra maNi makuTagaLa,
BAravanu nI vahisi, bahu biMkavane tALI (2)

arBakana teranaMte darBe hAsike mEle
gubbiyaMdadi malagidudu marateyA |
laByavAdA hEma toTTiloLu nI malagi
ubbi OlagagoMba utsAhadiMdenna (3)

heMDatiya kaLakoMDu kaMDa kaMDavarigE
aMDalida mAtugaLu analEtakE |
maMDitAdABaraNa matte eDadali satiyu kaMDu
suKa baDuvaMtha kaLavaLikeyiMdenna (4)

IgalI satyabOdhara baLiyaliralAgi
nIgi hOyite ninna paDipATalU |
AgIgalennadE kShaNa biDade kaikoMDu
vaiBOga baDuvudU modaligiddilla (5)

namma gurugaLu nimage I parIyupacAra
GammanE mADalU GanateyiMdA |
namma sAkade initu dUra mALpudu ninage
dharmavallavo svAmi dayadiMda nODemma (6)

sAkAra rUpa sarvOttamane vaikuMTha
bEkAgalilla hosa pari BAgyavU |
yAke Bakutara mAtu nirAkarisi biDuvudU
SrIkAMta eraguve vyAsa viThThalarEyA (7)

Leave a Reply

You might also like

error: Content is protected !!