Composer : Shri Kamalanabha vittala [Nidaguruki Jeevubai]
ಮಹಿಮೆ ನೋಡಿರೈ ರಾಯರ
ಮಹಿಮೆ ಪಾಡಿರೈ [ಪ]
ಜಲಜನಾಭನೊಲುಮೆ ಪಡೆದು
ಇಳೆಯೊಳು ಪ್ರಖ್ಯಾತರಾದ [ಅ.ಪ]
ರಾಘವೇಂದ್ರ ಯತಿಗಳೆಂದು
ಬಾಗಿ ನಮಿಸುವವರ ಮನದ
ರಾಗ ದ್ವೇಷಾದಿಗಳ ಕಳೆದು
ನೀಗಿಸುವರೊ ಭವದ ಬಂಧ (೧)
ತಾಳ ತಂಬೂರಿ ಪಿಡಿದು
ಭೋಗಿಶಯನನನ್ನು ಭಜಿಸಿ
ಕೂಗಿ ಪಾಡುತಿರಲು ನಲಿದು
ಬೇಗ ಪಾಲಿಸುತಲಿ ನಲಿವ (೨)
ದೇಶ ದೇಶದವರು ಬಹಳ
ಕ್ಲೇಶ ಪಡುತ ಬರಲು ಅವರ
ಕ್ಲೇಶಗಳನು ಕಳೆದು ಪರಮ ಉ-
ಲ್ಲಾಸ ನೀಡಿ ಪೊರೆಯುವಂಥ (೩)
ಸೀತಾಪತಿಯ ಪೂಜಿಸುತಲಿ
ಖ್ಯಾತರಾದ ಯತಿಗಳನ್ನು
ಪ್ರೀತಿಯಿಂದ ಸೇವಿಸುವರ
ಪಾತಕಗಳ ಕಳೆದು ಪೊರೆವ (೪)
ಗಳದಿ ಹೊಳೆವ ತುಳಸಿ ಮಾಲೆ
ಹೊಳೆವ ನಗೆಯ ಮುಖದ ಭಾವ
ಕಮಲನಾಭ ವಿಠ್ಠಲನೊಲಿಸಿ
ಹಲವು ವಿಧದಿ ಪೂಜಿಸುವರ (೫)
mahime nODirai rAyara
mahime pADirai [pa]
jalajanABanolume paDedu
iLeyoLu praKyAtarAda [a.pa]
rAGavEMdra yatigaLeMdu
bAgi namisuvavara manada
rAga dvEShAdigaLa kaLedu
nIgisuvaro Bavada baMdha (1)
tALa taMbUri piDidu
BOgiSayananannu Bajisi
kUgi pADutiralu nalidu
bEga pAlisutali naliva (2)
dESa dESadavaru bahaLa
klESa paDuta baralu avara
klESagaLanu kaLedu parama u-
llAsa nIDi poreyuvaMtha (3)
sItApatiya pUjisutali
KyAtarAda yatigaLannu
prItiyiMda sEvisuvara
pAtakagaLa kaLedu poreva (4)
gaLadi hoLeva tuLasi mAle
hoLeva nageya muKada BAva
kamalanABa viThThalanolisi
halavu vidhadi pUjisuvara (5)

Leave a Reply
You must be logged in to post a comment.