Composer : Shri Indiresha ankita
ವಾದಿರಾಜ ಗುರು ದಯಮಾಡೊ ಎನ್ನಾ,
ಪಾದಾ ನತನನ್ನಾ [ಪ]
ವಾದಿ ಸಂಘವನು
ಭೇದಿಸಿದ್ಯೊ ಘನ್ನಾ ಹಯವದನನ್ನಾ,
ಮೋದದಿಂದ ಹೃದಿ ನೋಡಿದೆಯೊ ರನ್ನಾ,
ಸಾಧು ಸಂಗವನು ಪರಿಪಾಲಿಸಿನ್ನಾ
ಋಜುಗಣ ಮೋಹನ್ನ [ಅ.ಪ]
ಕೃಷ್ಣ ದರ್ಶನಕೆ ತುಷ್ಟಿಸಿ
ನೀ ಬಂದು , ಮಾರ್ಗದಲಿ ನಿಂದು
ದುಷ್ಟ ದೈತ್ಯನುವಾದಕ ಬರಲಿಂದು
ಇಟ್ಟಿಯಾ ಆನಂದ ಭಟ್ಟರಲ್ಲಿ,
ಭಾರರಸ ಕರುಣಾಪೂರ್ಣ [೧]
ಶ್ರೇಷ್ಠ ನಿನ್ನಯ ದೃಷ್ಟಿಯ
ರಸದಿಂದಾ ,ವಾದಿಯ ಕರದಿಂದಾ,
ಕೊಟ್ಟ ಪತ್ರವನು ತಿರುಗಿಸಲಾನಂದಾ,
ಭಟ್ಟರಿಗೆ ನೀ ಕೊಟ್ಟಿಯೊ ಪರಿರಂಭಾ
ಮಾಡದಲೆ ವಿಲಂಬಾ [೨]
ನೀಡಿದ ಪತ್ರದ ನೋಡುತ ಬಹು ಚರಿತಾ,
ಆನಂದವ ಬಿಡುತಾ ಬೇಡಿರಿ ವರಗಳ
ನೀಡುವೆ ನಾನೆನುತಾ,
ನೀಡಿದ್ಯೊ ಮನ ಸಮಗಾಡನೆ ಸುತಗೀತಾ
ನಿಮಗಾಗಲೆನುತಾ [೩]
ತಂದೆ ನಿನ್ನ ದಯದಿಂದಲಿ ವಂಶಾ
ಬೆಳೆದಿತೊ ಸುಯಶಾ, ಇಂದು ನೋಡೊ
ಹತ ಬಂಧನ ಭವಪಾಶಾ,
ಕಂದ ನಾನು ನಿನಗಿ ಇಂದಿರೇಶ ದಾಸಾ,
ಋಜುಗಣದೊಳಗೀಶಾ [೪]
vAdirAja guru dayamADo ennA,
pAdA natanannA [pa]
vAdi saMGavanu
BEdisidyo GannA hayavadanannA,
mOdadiMda hRudi nODideyo rannA,
sAdhu saMgavanu paripAlisinnA
RujugaNa mOhanna [a.pa]
kRuShNa darSanake tuShTisi
nI baMdu , mArgadali niMdu
duShTa daityanuvAdaka baraliMdu
iTTiyA AnaMda BaTTaralli,
BArarasa karuNApUrNa [1]
SrEShTha ninnaya dRuShTiya
rasadiMdA ,vAdiya karadiMdA,
koTTa patravanu tirugisalAnaMdA,
BaTTarige nI koTTiyo pariraMBA
mADadale vilaMbA [2]
nIDida patrada nODuta bahu caritA,
AnaMdava biDutA bEDiri varagaLa
nIDuve nAnenutA,
nIDidyo mana samagADane sutagItA
nimagAgalenutA [3]
taMde ninna dayadiMdali vaMSA
beLedito suyaSA, iMdu nODo
hata baMdhana BavapASA,
kaMda nAnu ninagi iMdirESa dAsA,
RujugaNadoLagISA [4]

Leave a Reply
You must be logged in to post a comment.