Yarayya ee munige samaru

Composer : Shri Lakumeesha ankita

By Smt.Shubhalakshmi Rao

ಯಾರಯ್ಯಾ ಈ ಮುನಿಗೆ ಸಮರು |
ಶ್ರೀ ಸುಧೀಂದ್ರ ಯತಿಗೆ ಈ ಜಗದಲ್ಲಿ || ಪ ||

ಕೋರಿದ ವರವೀವ ಶ್ರೀ ರಾಘವೇಂದ್ರರ |
ವೀರ ಕುಮಾರರಾಗಿ ಪಡೆದಂಥ ಮಹಿಮರಿಗೆ || ಅ. ಪ ||

ನೂರಾನಾಲ್ಕು ಗ್ರಂಥಕರ್ತ ವಿಜಯೀಂದ್ರತೀರ್ಥ |
ಶ್ರೀ ರಾಮನಾಜ್ಞದಿ ಶಿರದಿ ಧರಿಸುತ್ತ |
ಶೂರ ಪವನ ಶಾಸ್ತ್ರ ಸಾರವ ಬೋಧಿಸಿ |
ಏರಿಸೆ ವೇದಾಂತ ರಾಜ್ಯವಾಳ್ವರಿಗೇ |೧|

ಕ್ರೂರ ನವಾಬ ವಿಜಾಪುರದಲ್ಲಿ ಅವನ ದಿವಾನ |
ಭಾರೀ ಅದ್ವೈತನಿದ್ದ ಅವನಲ್ಲಿ |
ಧೀರ ಸುಧೀಂದ್ರರು ಪೋಗಲು ಅಲ್ಲಿಗೆ |
ತೋರಿದ ಮಹಿಮೆಯ ವರ್ಣಿಸಲೋಶವೇ |೨|

ಮಳೆ ಬಾರದೆ ದ್ವಾದಶಾಬ್ಧ ಕ್ಷಾಮವು |
ಬೀಳೆ ಜನರು ಬಳಲೆ |
ತಿಳಿಸೆ ದಿವಾನನು ಬಂದ ನವಾಬನು ಕೇಳೆ ||
ಛಲದಿಂದ ಇವರನು ಮಳೆ ತರಸೀ ಯೆಂದ |
ಬಲಹೀನರಾದರೆ ನಿಮ್ಮನು ಬಿಡನೆಂದ |೩|

ಚೆಲುವಾ ಶ್ರೀಮೂಲರಾಮನ ಧ್ಯಾನಿಸಿ
ಬಹು ಬಗೆ ಪೂಜಿಸಿ |
ಒಲಿಯೆ ಶ್ರೀ ಪರ್ಜನ್ಯನ್ನ ಇವರು ಸ್ತುತಿಸೆ |
ಮಳೆ ಬರೆ ನದಿಗಳು ಹಳ್ಳ ಕೊಳ್ಳಗಳು |
ಜಲ ತುಂಬಿ ಹರಿಯಲು ಎಲ್ಲರ ನಲಿಸಿದ |೪|

ಮೋಡೀ ವಿದ್ಯದಿ ಬಂತು ಮಳೆ |
ಎಂದಾ ಇವರನು ನಿಂದಿಸಿ |
ಮಾಡಿರಿ ದಿವಿಯ ರಾತ್ರಿಯ ನೋಡುವೆನೆಂದಾ ||
ಮೂಢ ಅದ್ವೈತಿಯ ಕೂಡಿ ನವಾಬನು |
ಆಡಿದ ಮಾತಿಗೆ ಮಾಡಿ ತೋರಿಸಿದಾ |೫|

ವಿರಚೀಸಿ ಶ್ರೀ ಸುಭದ್ರ ಪರಿಣಯವ
ನಾಟಕ ಸಂಸ್ಕೃತ |
ವರ ಸದ್ಯುಕ್ತಿ ರತ್ನಾಕರವೆಂಬ ಗ್ರಂಥವಾ |
ವೈರಾಗ್ಯ ದಯಾಳು ಶತಕಗಳ ರಚಿಸುತ |
ಅಮೃತಾ ಹರಣಾದಿ ಗ್ರಂಥವ ಬರೆದಾ |೬|

ಶ್ರೀಶಾ ಶ್ರೀ ಲಕುಮೀಶಾ ಮೂಲರಾಮನ ಭಜಿಸೀ |
ತೋಷದಿ ವೇದಾಂತ ರಾಜ್ಯ ವಿಧಿಯಲಿ ಸಲಿಸಿ |
ಭೂಸುಕರ ಸುತೆ ನಡು ಗಡ್ಡೆಯಲಿ |
ಭಾಸುರ ಫಾಲ್ಗುಣ ವದ್ಯ ವಿಧಿಯ ನಿಂತ |೭|


yArayyA I munige samaru |
SrI sudhIMdra yatige I jagadalli || pa ||

kOrida varavIva SrI rAGavEMdrara |
vIra kumArarAgi paDedaMtha mahimarige || a. pa ||

nUrAnAlku graMthakarta vijayIMdratIrtha |
SrI rAmanAj~jadi Siradi dharisutta |
SUra pavana SAstra sArava bOdhisi |
Erise vEdAMta rAjyavALvarigE |1|

krUra navAba vijApuradalli avana divAna |
BArI advaitanidda avanalli |
dhIra sudhIMdraru pOgalu allige |
tOrida mahimeya varNisalOSavE |2|

maLe bArade dvAdaSAbdha kShAmavu |
bILe janaru baLale |
tiLise divAnanu baMda navAbanu kELe ||
CaladiMda ivaranu maLe tarasI yeMda |
balahInarAdare nimmanu biDaneMda |3|

celuvA SrImUlarAmana dhyAnisi
bahu bage pUjisi |
oliye SrI parjanyanna ivaru stutise |
maLe bare nadigaLu haLLa koLLagaLu |
jala tuMbi hariyalu ellara nalisida |4|

mODI vidyadi baMtu maLe |
eMdA ivaranu niMdisi |
mADiri diviya rAtriya nODuveneMdA ||
mUDha advaitiya kUDi navAbanu |
ADida mAtige mADi tOrisidA |5|

viracIsi SrI suBadra pariNayava
nATaka saMskRuta |
vara sadyukti ratnAkaraveMba graMthavA |
vairAgya dayALu SatakagaLa racisuta |
amRutA haraNAdi graMthava baredA |6|

SrISA SrI lakumISA mUlarAmana BajisI |
tOShadi vEdAMta rAjya vidhiyali salisi |
BUsukara sute naDu gaDDeyali |
BAsura PAlguNa vadya vidhiya niMta |7|

Leave a Reply

You might also like

error: Content is protected !!