Composer : Shri Mahipati dasaru
ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ
ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ [ಪ]
ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊ
ಪ್ರೇಮ ಪ್ರೀತಿಯಿನ್ದ ಕುಣಿದಾಡುವ ಬನ್ನಿರೊ ||೧||
ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊ
ಮದ ಮತ್ಸರವ ಬೂದಿ ಮಾಡಿ ಚೆಲ್ಲುವ ಬನ್ನಿರೊ ||೨||
ಏಕರಂಗವಾಗಿ ಓಕುಳ್ಯಾಡುವ ಬನ್ನಿರೊ
ಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ ||೩||
ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚೆಲುವನೊ
ಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ ||೪||
ಹೋಳಿಯಾಡಿದನು ನೋಡಿ ಇಳಿಯೊಳಗ ಮಹಿಪತಿಯು
ಕಳೆದು ಕಲ್ಪನೆ ಕೋಟಿಲಿನ್ದ ಗೆದ್ದ ನೋಡಿರೊ ||೫||
trAhi trAhi enniro trailOkyadoDiyage
trAhi trAhi enniro tAraka brahmage [pa]
kAma krOdha suTTu hOLiyADuva banniro
prEma prItiyinda kuNidADuva banniro ||1||
BEdavaLidu sAdhu janara kUDikoMba banniro
mada matsarava bUdi mADi celluva banniro ||2||
EkaraMgavAgi OkuLyADuva banniro
jIkaLiya mADi mAya mOha esuva banniro ||3||
ellaroLagiha namma pullanABa celuvano
balla mahimanige neleya nODi olivano ||4||
hOLiyADidanu nODi iLiyoLaga mahipatiyu
kaLedu kalpane kOTilinda gedda nODiro ||5||

Leave a Reply
You must be logged in to post a comment.