Composer : Shri Vijaya dasaru
ನಿನ್ನ ದರುಶನಕೆ ಬಂದವನಲ್ಲವೊ,
ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ, ಮಹಾ ||ಪ||
ಎಲ್ಲಿ ನೋಡಲು ನೀನೆ ವ್ಯಾಪ್ತನಾಗಿರಲಿಕ್ಕೆ
ಇಲ್ಲಿಗೆ ಬಾಹ ಕಾರಣವಾಹುದೊ,
ಸೊಲ್ಲಿಗೆ ಕಂಭದೊಳು ತೋರಿದ ಮಹಾಮಹಿಮ
ಅಲ್ಲಿ ಇಲ್ಲೇನಯ್ಯ ಬಲ್ಲ ಭಕುತ ಜನರಿಗೆ ||೧||
ಕರೆದಾಗಲೆ ಓಡಿ ಬಂದೊದಗುವೊ ದೇವ
ಮರಳಿ ಗಾವುದವೆಣಿಸಿ ಬರಲ್ಯಾತಕೊ
ನೆರೆ ನಂಬಿದವರಿಗ್- ಆವಲ್ಲಿ ಆದರೇನು
ಅರಿತವರ ಮನದಲ್ಲಿ ನಿಂದಾಡುವೊ ಚಂದವಾ ||೨||
ಧ್ಯಾನಕ್ಕೆ ಸಿಲುಕುವೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಎನಿತು ಬರುವರು ಅಲ್ಲಿಗೆ
ಅನಂತ ಜನುಮದಲಿ ಜಪ ತಪ ವ್ರತ ಹೋಮ
ಏನು ಮಾಡಿದರ್-ಇಷ್ಟು ಜನ ಕೂಡುವದೊ ದೇವ ||೩||
ನೀನಿದ್ದ ಸ್ಥಾನದಲಿ ಸರ್ವ ಪುಣ್ಯಕ್ಷೇತ್ರ
ನೀನಿದ್ದ ಸ್ಥಾನದಲಿ ಸಕಲ ತೀರ್ಥ
ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು
ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ ||೫||
ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ
ನಿದರುಶನವಲ್ಲದೆ ಮಿಗಿಲಾವುದೊ
ಪದೇಪದೆ ಮಧ್ವಮತ ಪೊಂದಿದ ಸುಜನರ
ಹೃದಯದಲಿ ಒಂದೊಂದು ಪರಿ ನಿನ್ನ ರೂಪಂಗಳು ||೬||
ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ
ನೆಲೆಗಾಣೆ ನೆಲೆಗಾಣೆ ನೆರೆ ಹೊರೆಯಲಿ
ವೊಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡೆ
ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ ||೭||
ninna daruSanake baMdavanallavo,
puNyavaMtara divya caraNa nODalu baMde, mahA ||pa||
elli nODalu neene vyAptanAgiralikke
illige bAha kAraNavAhudo,
sollige kaMBadoLu tOrida mahAmahima
alli illEnayya balla Bakuta janarige ||1||
karedAgale ODi baMdodaguvo dEva
maraLi gAvudaveNisi baralyAtako
nere naMbidavarig- Avalli AdarEnu
aritavara manadalli niMdADuvo caMdavA ||2||
dhyAnakke silukuve ninna kANalibahudu
j~jAnigaLu enitu baruvaru allige
anaMta janumadali japa tapa vrata hOma
Enu mADidar-iShTu jana kUDuvado dEva ||3||
nInidda sthAnadali sarva puNyakShEtra
nInidda sthAnadali sakala tIrtha
nInidda sthAnadali samasta tAtvikaru
nAnitta baruvudu ninage tiLiyade svAmi ||5||
idane lAlisu jIyA ninnadoMdE mUrti
nidaruSanavallade migilAvudo
padEpade madhvamata poMdida sujanara
hRudayadali oMdoMdu pari ninna rUpaMgaLu ||6||
BaLire tirumalarAya ninna karuNA rasake
nelegANe nelegANe nere horeyali
volidu BakutarigAgi maduve havaNisikoMDe
sulaBa dEvaradEva vijayaviThThala veMkaTA ||7||

Leave a Reply
You must be logged in to post a comment.