Composer: Shri Bhu vittala
ಅರಿತು ಭಜಿಸಿರೋ ವಿಶ್ವೋತ್ತಮಾರ್ಯರಾ |
ಕೋರಿದಿಷ್ಟವಾ ತಕ್ಷಣದಿ ಕೊಡುವರಾ ||ಪ||
ಮೇರು ಪರ್ವತಾ ಅಘಕೆ ಪವೀ ಎನಿಪರಾ
ಘೋರಕರ್ಮದಾ ಸುಳಿಯ ಪಾರು ಮಾಳ್ಪರಾ [೧]
ಕಾಮಧೇನುವೂ ಕಲ್ಪವೃಕ್ಷ ನಾಕವೂ |
ವ್ಯೋಮಚರರೂ ಇವರಧೀನವೆಂಬರೂ [೨]
ಪಾರಮೇಷ್ಠಿಯ ಪದಕೆ ರಾಜರರ್ಹರು |
ಪುರಂದರಾದಿಯೂ ಇವರು ತಿಳಿದರೆಂದರೂ [೩]
ಸೌಮ್ಯರೂಪರು ಋಜುಗೆ ಪ್ರೇಮಪಾತ್ರರೂ |
ಕಾಮರಹಿತರೂ ನಿಷ್ಕಾಮ ಗಣ್ಯರೂ [೪]
ಧರೆಯ ಮುನಿಗಳಾ ಋಷೀವರರ ವಂದ್ಯರಾ
ಸುರರ ವಂದ್ಯರಾ ಋಜೂ ಆವೇಶ ಸಾಂದ್ರರಾ [೫]
ಕೋಟಿವರ್ಣನಾ ಕೋಟಿ ರೂಪ ಭಂಗಿಲಿ |
ದಿಟದಿ ವರ್ಣಿಸೀ ಋಜುವ ಕೊಟಿ ರಂಜಿಸೀ [೬]
ದಿಟವೆ ತಿಳಿಯದಾ ಸಟೆಯ ಜೀವರೆಲ್ಲರೂ |
ಚಾಟಿ ಏಟಿಲೀ ತಮದಿ ಬೀಳ್ವರೆಂದರೂ [೭]
ಅಜಪದಾರ್ಹನು ರಾಜ ಋಜುವು ಎನ್ನುತಾ |
ಕುಜಭಂಜಕಾ ಸಜ್ಜನರ ರಂಜಕಾ [೮]
ಸಟೆಯಿದಲ್ಲವೋ ಕಟೂ ಸತ್ಯವೆಂದರೂ ವಿ
ಕಟ ಮತಿಗಳೇ ಯಮ ಕುಟ್ವನೆಂದರೂ [೯]
ಸಾಟಿಯಿಲ್ಲವೋ ಕೃಪಾಕಟಾಕ್ಷಪೂರ್ಣರೂ |
ಕೋಟಿರೀತಿಲೀ ತಾವ್ ಬಿಡದೆ ಪೊರೆವರೂ [೧೦]
ಭೂವಿಠಲನಾ ಬಿಂಬದಲ್ಲಿ ಕಾಂಬರಾ |
ಭುವನ ತಾತಗೆ ಪೌತ್ರಜರೆನಿಪರಾ [೧೧]
ಭಾವಿಮಾರುತರಾ ಭಾವಪೂರ್ಣ ಭಜಿಸುತಾ |
ಭೂವಿಠಲನಾ ಅಡೀಗಳಿಗೆ ಸಾರ್ದರಾ [೧೨]
aritu BajisirO viSvOttamAryarA |
kOridiShTavA takShaNadi koDuvarA ||pa||
mEru parvatA aGake pavI eniparA
GOrakarmadA suLiya pAru mALparA [1]
kAmadhEnuvU kalpavRukSha nAkavU |
vyOmacararU ivaradhInaveMbarU [2]
pAramEShThiya padake rAjararharu |
puraMdarAdiyU ivaru tiLidareMdarU [3]
saumyarUparu Rujuge prEmapAtrarU |
kAmarahitarU niShkAma gaNyarU [4]
dhareya munigaLA RuShIvarara vaMdyarA
surara vaMdyarA RujU AvESa sAMdrarA [5]
kOTivarNanA kOTi rUpa BaMgili |
diTadi varNisI Rujuva koTi raMjisI [6]
diTave tiLiyadA saTeya jIvarellarU |
cATi ETilI tamadi bILvareMdarU [7]
ajapadArhanu rAja Rujuvu ennutA |
kujaBaMjakA sajjanara raMjakA [8]
saTeyidallavO kaTU satyaveMdarU vi
kaTa matigaLE yama kuTvaneMdarU [9]
sATiyillavO kRupAkaTAkShapUrNarU |
kOTirItilI tAv biDade porevarU [10]
BUviThalanA biMbadalli kAMbarA |
Buvana tAtage pautrajareniparA [11]
BAvimArutarA BAvapUrNa BajisutA |
BUviThalanA aDIgaLige sArdarA [12]

Leave a Reply
You must be logged in to post a comment.