Tulasi Sankeertane – Composer : Shri Vadirajaru
ಗೋವಿಂದ ಗೋವಿಂದ ರಾಮ
ಗೋವಿಂದ ನಾರಾಯಣ |
ಗೋವಿಂದ ಗೋಪಾಲಕೃಷ್ಣ |
ಗೋವಿಂದ ನಾರಾಯಣ |
ದಿತಿಜರ ಬನಕೆ ದುರಂತ ಕೃತಾಂತ |
ಗತಿ ನೀನೆ ನಮಗೆ ಗುಣವಂತ ಹನುಮಂತ |ಪ| ಹರಿ
ಗೋವಿಂದ..
ಅಬುಧಿಯ ದಾಟಿ ಸೀತೆಯ ರೂಹ ಕಂಡೆ |
ಕುಬುದ್ಧಿ ರಾವಣನ ಪುರವ ಸೂರೆಗೊಂಡೆ | ಹರಿ
ಗೋವಿಂದ..
ವಿಬುಧರುತ್ಸಾಹದಿ ಮಾಡಿದ ಬಲುಗಂಡೆ |
ಪ್ರಬುದ್ಧ ವೃಂದರ ಪುಣ್ಯ ಫಲರಸ ಉಂಡೆ |೧| ಹರಿ
ಗೋವಿಂದ…
ಕೇಸರಿಯ ತನಯ ದಕ್ಷಿಣಕಾಗಿ ಬಂದೆ |
ವಾರಿಧಿ ಬಂಧನಕೆ ಬಲು ಗಿರಿಗಳ ತಂದೆ | ಹರಿ
ಗೋವಿಂದ…
ಈಶ ರಘುಪತಿ ಸೇವೆಗೆ ಘನವಾಗಿ ನಿಂದೆ |
ಅಸುರ ರಾವಣನ ಸರ್ವ ಸೈನ್ಯವ ಕೊಂದೆ |೨| ಹರಿ
ಗೋವಿಂದ…
ಹಯವದನ ಕೃಪಾ ಪ್ರವಾಹವ ಪೊತ್ತೆ |
ಅಪ್ರಿಯವಾದ ಭವ ತರುವಿನ ಬೇರ ಕಿತ್ತೆ | ಹರಿ
ಗೋವಿಂದ…
ಭಯವ ಖಂಡಿಸಿ ಸಂತೋಷವ ನಮಗಿತ್ತೆ |
ಜಯ ಜಯ ಪ್ರಾಣಸುತ ನಮೋ ನಮಸ್ತೇ |೩| ಹರಿ
gOviMda gOviMda rAma
gOviMda nArAyaNa |
gOviMda gOpAlakRuShNa |
gOviMda nArAyaNa |
ditijara banake duraMta kRutAMta |
gati nIne namage guNavaMta hanumaMta |pa| hari
gOviMda..
abudhiya dATi sIteya rUha kaMDe |
kubuddhi rAvaNana purava sUregoMDe | hari
gOviMda..
vibudharutsAhadi mADida balugaMDe |
prabuddha vRuMdara puNya Palarasa uMDe |1| hari
gOviMda…
kEsariya tanaya dakShiNakAgi baMde |
vAridhi baMdhanake balu girigaLa taMde | hari
gOviMda…
ISa raGupati sEvege GanavAgi niMde |
asura rAvaNana sarva sainyava koMde |2| hari
gOviMda…
hayavadana kRupA pravAhava potte |
apriyavAda Bava taruvina bEra kitte | hari
gOviMda…
Bayava KaMDisi saMtOShava namagitte |
jaya jaya prANasuta namO namastE |3| hari
