Ranga Kolalanudalagi

Composer : Shri Prasannavenkata dasaru

Shri Varadendra Bidkar

ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು [ಪ]
ಮಂಗಳಮಯವಾಯಿತು ಧರೆ
ಜನಂಗಳು ಜೀವನ ಚೇತನ ಮರೆದು
ರಂಗ ಧ್ಯಾನಪರರಾದರು ||ಅ. ಪ||

ಬಾಡಿದ ಬಳ್ಳಿ ಮರ ಗೊನೆಯೊಡೆದಾವು
ತೀಡುವ ಮಂದಮಾರುತ ಕೂಡ ತೂ
ಗಾಡುವ ವನದ ಫಲದಗೊಂಚಲದಿ
ಪಾಡಲೊಲ್ಲವಳಿ ಕುಲಗಳು
ಹೇಡಿಗೊಂಡವು ಜಾಣಕ್ಕಿ ಗಿಳಿಯು ಮಾ
ತಾಡದೆ ಕಳೆಗುಂದಿತು ಕೋಗಿಲ
ಓಡಾಟ ವೈರಾಟ ಜರೆದು ಖಗಮೃಗ
ಗಾಢ ನಿದ್ರೆಗೆ ವಶವಾದವೊ ||೧||

ಕೆಳಗಿನುದಕ ಉಕ್ಕೇರಿ ಬಂದವು
ತುಳುಕಿ ಚೆಲ್ಲಾಡಿ ನಿಂತಳು ಯಮುನೆ
ಮ್ಯಾಲೆ ಮಾಡೊಡ್ಡಿ ಮೇಘಾಳಿ ಬೋರಿಟ್ಟವು
ಕಲ್ಲು ಕರಗಿ ನೀರಾದವೋ
ನಳಿನ ಚಂಪಕ ನಾಗ ಪುನ್ನಾಗ ಪಾ
ಟಾಲ ಶಾವಂತಿಗಿ ಕೂಡ ಬಕುಳವು
ಮಾಲತಿ ಜಾಜಿಯು ಪರಿಮಳಂಗೂಡಿ
ನೀಲಾಂಗನಂಘ್ರಿಗೆ ಎರಗಿದವೋ ||೨||

ಕೆಚ್ಚಲಾ ಬಿಗಿದು ತೊರೆದ ಮೊಲೆಯ
ವತ್ಸದೊಡಲಾಸೆ ಜರಿದೆಳೆ ಹುಲ್ಲು
ಕಚ್ಚಿ ಅಲ್ಲಿಗಲ್ಲಿ ನಿಂದವು ತಲೆಯ ಮೇಲ್
ಪುಚ್ಛವ ನೆಗಹಿ ನೀಂಟಿಸಿ
ಅಚ್ಯುತಾನಾಕೃತಿ ನೋಡಲು ಸುರರಿ
ಗಚ್ಚರವಾಯಿತು ಕಂಡಾನಂದ
ಪೆಚ್ಚಿ ಮುಕುಂದನ ಲೀಲಾವಿನೋದಕ್ಕೆ
ಮೆಚ್ಚಿ ಕುಸುಮವ ಸುರಿದರೊ ||೩||

ಮುದ್ದುಮೋಹನನ ಮಂಜುಳ ಸಂಗೀತ
ಸದ್ದನಾಲಿಸಿ ಗೋಪಾಂಗನೆರೆಲ್ಲರೂ
ಬುದ್ಧಿ ಸುರ್ಯಾಡಿದರಂಗಜ ಬಾಣಕ್ಕೆ
ಬಿದ್ದು ಪರವಶರಾದರು
ಸಿದ್ಧ ಮುನಿಜನರಿದ್ದ ಸಮಾಧಿಯೊಳೆ
ದ್ದೆದ್ದು ಕುಣಿದು ಎದೆ ತಾವರೆ
ಗದ್ದುಗಿಯರಸನೊಲಿಸಿಕೊಂಡರು
ಗೆದ್ದರೊ ಭವಸಮುದ್ರವ ||೪||

ಶ್ರೀ ಮನೋಹರಮೂರ್ತಿ ಗೋಪಾಲನು
ಆ ಮಧುಕುಂಜವನದಿ ತ್ರಿಭಂಗಿಲಿ
ಹೇಮಾಂಬರುಟ್ಟು ಗೀರುಗಂಧ ಕಸ್ತೂರಿಯ
ನಾಮ ಕುಂಡಲದ ಬೆಳಕಿನಲಿ
ಧಾಮ ವನಮಾಲೆ ರತ್ನಾಭರಣ
ಸ್ವಾಮಿ ಶ್ರೀ ಪ್ರಸನ್ನವೆಂಕಟಕೃಷ್ಣನ
ನಾಮಕ್ರಿಯ ಗುಂಡಕ್ರಿಯ ಮೇಘರಾಗವ ಮಾಡಿ
ಸಾಮಗಾನದಿ ನಮೋ ಎಂದರು ||೫||


raMga koLalanUdalAgi raMgayya koLalanUdalu [pa]
maMgaLamayavAyitu dhare
janaMgaLu jIvana cEtana maredu
raMga dhyAnapararAdaru ||a. pa||

bADida baLLi mara goneyoDedAvu
tIDuva maMdamAruta kUDa tU
gADuva vanada PaladagoMcaladi
pADalollavaLi kulagaLu
hEDigoMDavu jANakki giLiyu mA
tADade kaLeguMditu kOgila
ODATa vairATa jaredu KagamRuga
gADha nidrege vaSavAdavo ||1||

keLaginudaka ukkEri baMdavu
tuLuki cellADi niMtaLu yamune
myAle mADoDDi mEGALi bOriTTavu
kallu karagi nIrAdavO
naLina caMpaka nAga punnAga pA
TAla SAvaMtigi kUDa bakuLavu
mAlati jAjiyu parimaLaMgUDi
nIlAMganaMGrige eragidavO ||2||

keccalA bigidu toreda moleya
vatsadoDalAse jarideLe hullu
kacci alligalli niMdavu taleya mEl
pucCava negahi nIMTisi
acyutAnAkRuti nODalu surari
gaccaravAyitu kaMDAnaMda
pecci mukuMdana leelAvinOdakke
mecci kusumava suridaro ||3||

muddumOhanana maMjuLa saMgIta
saddanAlisi gOpAMganerellarU
buddhi suryADidaraMgaja bANakke
biddu paravaSarAdaru
siddha munijanaridda samAdhiyoLe
ddeddu kuNidu ede tAvare
gaddugiyarasanolisikoMDaru
geddaro Bavasamudrava ||4||

SrI manOharamUrti gOpAlanu
A madhukuMjavanadi triBaMgili
hEmAMbaruTTu gIrugaMdha kastUriya
nAma kuMDalada beLakinali
dhAma vanamAle ratnABaraNa
svAmi SrI prasannaveMkaTakRuShNana
nAmakriya guMDakriya mEGarAgava mADi
sAmagAnadi namO eMdaru ||5||

Leave a Reply

You might also like

error: Content is protected !!