Composer : Shri Tandevarada gopala vittala
ರೋಗವನು ಪರಿಹರಿಸೊ ಗುರು ರಾಘವೇಂದ್ರಾ [ಪ]
ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ [ಅ.ಪ]
ಅರಿಯದಾ ತರಳ ತನ್ನ ನಿಜ ಮತಿಯಿಂದ ದೂಷಿಸಲಿಲ್ಲ
ಪರರ ಮಾತನು ಕೇಳಿ ದೂಷಿಸಿದನಲ್ಲದೇ [೧]
ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ
ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ [೨]
ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡು ಬೆಂಡಾದಾ
ತಂದೆ ವರದ ಗೋಪಾಲವಿಠ್ಠಲ ಪ್ರೀಯಾ [೩]
rOgavanu parihariso guru rAGavEMdrA [pa]
karamugidu binnaipe dhIra yOgEMdra pAlA [a.pa]
ariyadA taraLa tanna nija matiyiMda dUShisalilla
parara mAtanu kELi dUShisidanalladE [1]
Ena pELali guruve ninna samakaruNigaLu innuMTe
jagadoLu kELida kAraNadi baMdu binnaiside [2]
bAlakanu paripariyiMda pIDitanAgi beMDu beMDAdA
taMde varada gOpAlaviThThala prIyA [3]

Leave a Reply
You must be logged in to post a comment.