Composer : Shri Mohana dasaru
ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯ
ಮೋಕ್ಷದಾಯಕನೆ ಜಯ ಜಯ || ಪ||
ಮೋಕ್ಷದಾಯಕನೆ ಮಧುಸೂದನ
ಪದ್ಮಾಕ್ಷಗಾರುತಿಯ ಬೆಳಗಿರೇ ||ಅ.ಪ.||
ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದ
ಇಳೆಯ ದಾಡೆಯಿಂದ ನೆಗಹಿದಾ ||
ಇಳೆಯ ದಾಡೆಯಿಂದ ನೆಗಹಿದ ನರಹರಿ
ಚೆಲುವಗಾರುತಿಯ ಬೆಳಗಿರೆ ||೧||
ಶೋಭಾನೆ ಶೋಭಾನೆ ಶೋಭಾನೆ
ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿ
ಆಕ್ರಮಿಸಿದನೆ ತ್ರಿಲೋಕ ||
ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮ
ಶ್ರೀ ಕೃಷ್ಣಗಾರುತಿಯ ಬೆಳಗಿರೇ ||೨||
ಶೋಭಾನೆ ಶೋಭಾನೆ ಶೋಭಾನೆ
ನಗ್ನನಾಗಿ ವ್ರತವಾ ವಿಘ್ನವ ಚರಿಸಿದ
ಅಜ್ಞಾನಿ ಕಲಿಯ ಸದೆದ ||
ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ
ಸರ್ವಜ್ಞಗಾರುತಿಯ ಬೆಳಗಿರೇ ||೩||
ಶೋಭಾನೆ ಶೋಭಾನೆ ಶೋಭಾನೆ
lakShmIvallaBa jaya pakShivAhana jaya
mOkShadAyakane jaya jaya || pa||
mOkShadAyakane madhusUdana
padmAkShagArutiya beLagirE ||a.pa.||
jaladoLu saMcarisi balu giriya dharisida
iLeya dADeyiMda negahidA ||
iLeya dADeyiMda negahida narahari
celuvagArutiya beLagire ||1||
SOBAne SOBAne SOBAne
cikka brAhmaNanAgi baliya dAnava bEDi
Akramisidane trilOka ||
Akramisi trilOkanALda SrIrAma
SrI kRuShNagArutiya beLagirE ||2||
SOBAne SOBAne SOBAne
nagnanAgi vratavA viGnava carisida
aj~jAni kaliya sadeda ||
aj~jAni kaliya sadeda mOhanna viThThala
sarvaj~jagArutiya beLagirE ||3||
SOBAne SOBAne SOBAne

Leave a Reply
You must be logged in to post a comment.