HeLabedamma neenu

Composer: Shri Gurupurandara dasaru [Son of Shri Purandara dasaru]

By Smt.Shubhalakshmi Rao

ಹೇಳಬ್ಯಾಡಮ್ಮ ನೀನು ದಾಸರ ಕೂಡ |
ಹೇಳಬ್ಯಾಡ ವ್ಯಾಸರಾಯ ಬಂದಿದ್ದನೆಂದು |
ಕಾಲಿಗೆ ಬೀಳುವೆ ಕರುಣಿಸಿ ದಯಮಾಡೆ || ಪ ||

ಹೀಗೆಂದು ಕೈಮುಗಿದು ಬ್ಯಾಗ ಭಕ್ತಿಯಿಂದ |
ಆಗ ಪ್ರದಕ್ಷಿಣೆ ಮಾಡುತಲಿ |
ಯೋಗಿ ಅವರ ಕಣ್ಣಿಲಿ ನೋಡಿ ಧೇನಿಸಿ |
ಹೀಗೆ ಅನುದಿನ ಮಾಡುತಲಿಪ್ಪನು || ೧ ||

ಒಂದು ದಿನದಲ್ಲಿ ಪುರಂದರದಾಸರು |
ಛಂದುಳ್ಳ ಕೆಸರ ಚಿನ್-ಹಿತ ಪಾದಾರ |
ವಿಂದಗಳನು ಕಂಡು ತಮ್ಮ ಸತಿಯ ಕೇಳಿ |
ವಂದಿಸಿದರು ಗುರುಪಾದಗಳಿಗೆ || ೨ ||

ತರುಣಿಂದು ಆರು ಬಂದಿದ್ದರು ವ್ಯಾಸರಾ |
ಯರ ಪದಗಳು ಗುರುತುಂಟು ಎನಗೆ |
ಖರೆಯ ಅವರ ಪದಂಗಳಹುದೆಂದು |
ಕರವ ಪಿಡಿದು ದಾಸರು ಕೇಳಿದರು || ೩ ||

ಸ್ವಾಮಿ ಕೇಳುವೆ ಸಾರಾಂಶವ |
ಸ್ವಾಮಿರಾಯರು ತಾವು ನಿತ್ಯ ಬಂದು |
ಪ್ರೇಮದಿಂದಲಿ ಪ್ರದಕ್ಷಿಣೆಯನು ಮಾಡುತ |
ಸುಮ್ಮನಿರು ಹೇಳಬ್ಯಾಡೆಂದರೆನಗೆ || ೪ ||

ಹೀಗೆಂದ ನುಡಿಯನು ಕೇಳಿ ಶ್ರೀರಂಗನ |
ಬ್ಯಾಗದಿಂದವನ ಪದವ ನೆನದು |
ಆಗ ಗುರು ಪುರಂದರವಿಠ್ಠಲನ ದಾಸ |
ನಾಗಿಹ್ಯ ವ್ಯಾಸರಾಯರ ತುತಿಸಿದರು || ೫ ||


hELabyADamma nInu dAsara kUDa |
hELabyADa vyAsarAya baMdiddaneMdu |
kAlige bILuve karuNisi dayamADe || pa ||

hIgeMdu kaimugidu byAga BaktiyiMda |
Aga pradakShiNe mADutali |
yOgi avara kaNNili nODi dhEnisi |
hIge anudina mADutalippanu || 1 ||

oMdu dinadalli puraMdaradAsaru |
CaMduLLa kesara cin-hita pAdAra |
viMdagaLanu kaMDu tamma satiya kELi |
vaMdisidaru gurupAdagaLige || 2 ||

taruNiMdu Aru baMdiddaru vyAsarA |
yara padagaLu gurutuMTu enage |
Kareya avara padaMgaLahudeMdu |
karava piDidu dAsaru kELidaru || 3 ||

svAmi kELuve sArAMSava |
svAmirAyaru tAvu nitya baMdu |
prEmadiMdali pradakShiNeyanu mADuta |
summaniru hELabyADeMdarenage || 4 ||

hIgeMda nuDiyanu kELi SrIraMgana |
byAgadiMdavana padava nenadu |
Aga guru puraMdaraviThThalana dAsa |
nAgihya vyAsarAyara tutisidaru || 5 ||

Leave a Reply

Your email address will not be published. Required fields are marked *

You might also like

error: Content is protected !!