Composer : Shri Gurujagannatha dasaru
ಶ್ರೀ ಗುರು ಜಗನ್ನಾಥ ದಾಸರ
|| ಶ್ರೀ ವೇಂಕಟೇಶ ಸ್ತವರಾಜ ||
ಶ್ರೀರಮಣ ಸರ್ವೇಶ ಸರ್ವಗ |
ಸಾರಭೋಕ್ತ ಸ್ವತಂತ್ರ ಸರ್ವದ |
ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||
ಸಾರಿದವರಘ ದೂರಗೈಸಿ |
ಸೂರಿಜನರಿಗೆ ಸೌಖ್ಯ ನೀಡುವ |
ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ ||
ಘನ್ನಮಹಿಮಾ ಪನ್ನಪಾಲಕ |
ನಿನ್ನಹೊರತಿನ್ನನ್ಯದೇವರ |
ಮನ್ನದಲಿ ನಾ ನೆನಿಸೆನೆಂದಿಗು ಬನ್ನ ಬಡಿಸದಿರು |
ಎನ್ನಪಾಲಕ ನೀನೇ ಇರುತಿರೆ |
ಇನ್ನು ಭವ ಭಯವೇಕೆ ಎನಗೆ |
ಚೆನ್ನ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೨ ||
ಲಕುಮಿ ಬೊಮ್ಮ ಭವಾಮರೇಶರು |
ಭಕುತಿ ಪೂರ್ವಕ ನಿನ್ನ ಭಜಿಸಿ |
ಸಕಲ ಲೋಕಕೆ ನಾಥರೆನಿಪರೊ ಸರ್ವ ಕಾಲದಲಿ ||
ನಿಖಿಳ ಜೀವರ ಪೋರೆವ ದೇವನೆ |
ಭಕುತಿ ನೀ ಯೆನಗೀಯದಿರಲು |
ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ || ೩ ||
ಯಾಕೆ ಪುಟ್ಟದೊ ಕರುಣ ಎನ್ನೊಳು |
ಸಾಕಲಾರೆಯ ನಿನ್ನ ಶರಣನ |
ನೂಕಿ ಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ||
ನೋಕನೀಯನೆ ನೀನೇ ಎನ್ನನು |
ಜೋಕೆಯಿಂದಲಿ ಕಾಯೋ ಬಿಡದೆ |
ಏಕದೇವನು ನೀನೇ ವೇಂಕಟ ಶೇಷಗಿರಿವಾಸ || ೪ ||
ಅಂಬುಜಾಂಬಕ ನಿನ್ನ ಪದಯುಗ |
ನಂಬಿಕೊಂಡೀ ಪರಿಯಲಿರುತಿರೆ |
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ ||
ಬಿಂಬ ಮೂರುತಿ ನಿನ್ನ ಕರಗತ |
ಕಂಬುವರವೇ ಗತಿಯೋ ವಿಶ್ವಕುಟುಂಬಿ |
ಎನ್ನನು ಸಲಹೋ ಸಂತತ ಶೇಷಗಿರಿವಾಸ || ೫ ||
ಸಾರಶಿರಿ ವೈಕುಂಠ ತ್ಯಜಿಸಿ |
ಧಾರುನಿಯೊಳು ಗೊಲ್ಲನಾಗಿ |
ಚೋರ ಕರ್ಮವ ಮಾಡಿ ಬದುಕಿಹ ದಾರಿಗರಿಕಿಲ್ಲ ||
ಸಾರಿ ಪೇಳುವೆ ನಿನ್ನ ಗುಣಗಳ |
ಪಾರವಾಗಿರುತಿಹವೊ ಜನರಿಗೆ |
ಧೀರ ವೆಂಕಟ ರಮಣ ಕರುಣದಿ ಪೊರೆಯೊ ನೀ ಯೆನ್ನ ||೬ ||
ನೀರ ಮುಳುಗಿ ಭಾರ ಪೊತ್ತು |
ಧಾರುಣೀ ತಳವಗಿದು ಸಿಟ್ಟಿಲಿ |
ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರು ||
ಪೋರ ವಿಪ್ರ ಕುಠಾರಿ ವನವನ |
ಚಾರಿ ಗೋಪ ದಿಗಂಬರಾಶ್ವವ |
ಏರಿ ಪೋದರು ಬಿಡೆನೋ ವೇಂಕಟ ಶೇಷಗಿರಿವಾಸ ||೭||
ಲಕ್ಷ್ಮೀನಾಯಕ ಸಾರ್ವಭೌಮನೆ |
ಪಕ್ಷಿವಾಹನ ಪರಮ ಪುರುಷನೆ |
ಮೊಕ್ಷದಾಯಕ ಪ್ರಾಣಜನಕನೆ ವಿಶ್ವ ವ್ಯಾಪಕನೆ ||
ಅಕ್ಷಯಾಂಬರವಿತ್ತಿ ವಿಜಯನ |
ಪಕ್ಷಪಾತವ ಮಾಡಿ ಕುರುಗಳ ಲಕ್ಷ್ಯಮಾಡದೆ
ಕೊಂದೆಯೋ ಶ್ರೀ ಶೇಷಗಿರಿವಾಸ ||೮||
ಹಿಂದೆ ನೀ ಪ್ರಹ್ಲಾದಗೋಸುಗ |
ಎಂದು ನೋಡದ ರೂಪ ಧರಿಸಿ |
ಬಂದು ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ ||
ತಂದೆ ತಾಯ್ಗಳ ಬಿಟ್ಟು ವಿಪಿನದಿ |
ನಿಂದು ತಪಿಸುವ ಪಂಚವತ್ಸರ |
ಕಂದನಾ ಧ್ರುವನಿಗೋಲಿದು ಪೊರೆದೆಯೊ ಶೇಷಗಿರಿವಾಸ ||೯||
ಮಡುವಿನೊಳಗಿಹ ಮಕರಿಕಾಲನು |
ಪಿಡಿದು ಬಾಧಿಸೆ ಕರಿಯು ತ್ರಿಜಗದ್ |
ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ ||
ಮಡದಿ ಮಾತನು ಕೇಳಿ ಬಲುಪರಿ |
ಬಡವ ಬ್ರಾಹ್ಮಣ ಧಾನ್ಯ ಕೊಡಲು |
ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ ||೧೦||
ಪಿಂತೆ ಮಾದಿದ ಮಹಿಮೆಗಳ ನಾ |
ನೆಂತು ವರ್ಣಿಸಲೇನು ಫಲ |
ಶ್ರೀಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ ||
ಕಂತು ಜನಕನೆ ಎನ್ನ ಮನಸಿನ |
ಅಂತರಂಗದಿ ನೀನೆ ಸರ್ವದ |
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ ||೧೧||
ಶ್ರೀನಿವಾಸನೆ ಭಕ್ತಪೋಷನೆ |
ಜ್ಞಾನಿ ಕುಲಗಳಿಗಭಯದಾಯಕ |
ದೀನ ಬಾಂದವ ನೀನೇ ಎನ ಮನದರ್ಥ ಪೂರೈಸೋ ||
ಅನುಪಮೋಪಮಜ್ಞಾನ ಸಂಪದ |
ವಿನಯ ಪೂರ್ವಕವಿತ್ತು ಪಾಲಿಸೊ |
ಜನುಮ ಜನುಮಕೆ ಮರೆಯ ಬೇಡವೋ ಶೇಷಗಿರಿವಾಸ || ೧೨ ||
ಮದವು ಮತ್ಸರ ಲೋಭ ಮೋಹವು |
ಒದಗಬಾರದು ಎನ್ನ ಮನದಲಿ |
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು ||
ಹೃದಯ ಮಧ್ಯದಿ ನಿನ್ನ ರೂಪವು |
ವದನದಲಿ ತವ ನಾಮ ಮಂತ್ರವು |
ಸದಯ ಪಾಲಿಸು ಬೇಡಿಕೊಂಬೇನೊ ಶೇಷಗಿರಿವಾಸ || ೧೩ ||
ಅಂದನುಡಿ ಪುಸಿಯಾಗಬಾರದು |
ಬಂದ ಭಾಗ್ಯವು ಪೋಗಬಾರದು |
ಕುಂದುಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ ||
ನಿಂದೆ ಮಾಡುವ ಜನರ ಸಂಗವು |
ಎಂದಿಗಾದರು ದೊರೆಯಬಾರದು |
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ ||
ಏನು ಬೇಡಲಿ ಎನ್ನ ದೇವನೇ |
ಸಾನುರಾಗದಿ ಎನ್ನ ಪಾಲಿಸೊ |
ನಾನಾ ವಿಧವಿಧ ಸೌಖ್ಯ ನಿಡುವದಿಹ ಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ |
ಏನು ಕೊರೆತಿಲೆಲ್ಲಿ ನೋಡಲು |
ನೀನೇ ನಿಂತೀವಿದದಿ ಪೇಳಿಸು ಶೇಷಗಿರಿವಾಸ ||೧೫ ||
ಆರು ಮುನಿದವರೇನು ಮಾಳ್ಪರೊ |
ಆರು ಒಲಿದವರೇನು ಮಾಳ್ಪರೊ |
ಆರು ನೇಹಿಗರಾರು ದ್ವೇಶಿಗಳಾರುದಾಶಿನರು ||
ಕ್ರೂರ ಜೀವರ ಹಣಿದು ಸಾತ್ವಿಕ |
ಧೀರ ಜೀವರ ಪೊರೆದು ನಿನ್ನಲಿ |
ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ || ೧೬ ||
ನಿನ್ನ ಸೇವೆಯನಿತ್ತು ಎನಗೆ |
ನಿನ್ನ ಪದಯುಗ ಭಕ್ತಿ ನೀಡಿ |
ನಿನ್ನ ಗುಣಗಣ ಸ್ತವನ ಮಾಡುವ ಜ್ಞಾನ ನೀನಿತ್ತು ||
ಎನ್ನ ಮನದಲಿ ನೀನೇ ನಿಂತು |
ಘನ್ನಕಾರ್ಯವ ಮಾಡಿ ಮಾಡಿಸು |
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||
ಜಯ ಜಯತು ಶಠ ಕೂರ್ಮರೂಪನೆ |
ಜಯ ಜಯತು ಕಿಟ ಸಿಂಹ ವಾಮನ |
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ ||
ಜಯ ಜಯತು ಶಿರಿ ಯದುವರೇಣ್ಯನೆ |
ಜಯ ಜಯತು ಜನಮೋಹ ಬುದ್ಧನೆ |
ಜಯ ಜಯತು ಕಲಿಕಲ್ಮಶಘ್ನನೆ ಕಲ್ಕಿ ನಾಮಕನೆ || ೧೮ ||
ಕರುಣಸಾಗರ ನೀನೇ ನಿಜಪದ |
ಶರಣವತ್ಸಲ ನೀನೇ ಶಾಶ್ವತ |
ಶರಣ ಜನಮಂದಾರ ಕಮಲಾ ಕಾಂತ ಜಯವಂತ ||
ನಿರುತ ನಿನ್ನನು ನುತಿಸಿ ಪಾಡುವೆ |
ವರದ ಗುರು ಜಗನ್ನಾಥವಿಠ್ಠಲ |
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ ||
|| ಶ್ರೀಕೃಷ್ಣಾರ್ಪಣಮಸ್ತು ||
shrI guru jagannAtha dAsara
|| shrI vEMkaTEsha stavarAja ||
shrIramaNa sarvEsha sarvaga |
sArabhOkta svataMtra sarvada |
pAra mahimOdAra sadguNa pUrNa gaMbhIra ||
sAridavaragha dUragaisi |
sUrijanarige saukhya nIDuva |
dhIra vEMkaTaramaNa karuNadi poreyo nI enna || 1 ||
ghannamahimA pannapAlaka |
ninnahoratinnanyadEvara |
mannadali nA neniseneMdigu banna baDisadiru |
ennapAlaka nInE irutire |
innu bhava bhayavEke enage |
cenna vEMkaTaramaNa karuNadi poreyo nI enna || 2 ||
lakumi bomma bhavAmarEsharu |
bhakuti pUrvaka ninna bhajisi |
sakala lOkake nAthareniparo sarva kAladali ||
nikhiLa jIvara pOreva dEvane |
bhakuti nee yenagIyadiralu |
vyakutavAgyapakIrti bappudo shrInikEtanane || 3 ||
yAke puTTado karuNa ennoLu |
sAkalAreya ninna sharaNana |
nUki biTTare ninage lOkadi khyAti bappuvudE ||
nOkanIyane nInE ennanu |
jOkeyiMdali kAyO biDade |
EkadEvanu nInE vEMkaTa shEShagirivAsa || 4 ||
aMbujAMbaka ninna padayuga |
naMbikoMDI pariyalirutire |
DoMbegArana teradi nI nirbhAgya sthiti tOre ||
biMba mUruti ninna karagata |
kaMbuvaravE gatiyO vishvakuTuMbi |
ennanu salahO saMtata shEShagirivAsa || 5 ||
sArashiri vaikuMTha tyajisi |
dhAruniyoLu gollanAgi |
cOra karmava mADi badukiha dArigarikilla ||
sAri pELuve ninna guNagaLa |
pAravAgirutihavo janarige |
dheera veMkaTa ramaNa karuNadi poreyo nee yenna ||6 ||
nIra muLugi bhAra pottu |
dhAruNI taLavagidu siTTili |
krUranudarava shILi karuLina mAle dharisidaru ||
pOra vipra kuThAri vanavana |
cAri gOpa digaMbarAshvava |
Eri pOdaru biDenO vEMkaTa shEShagirivAsa ||7||
lakShmInAyaka sArvabhoumane |
pakShivAhana parama puruShane |
mokShadAyaka prANajanakane vishwa vyApakane ||
akShayAMbaravitti vijayana |
pakShapAtava mADi kurugaLa lakShyamADade
koMdeyO shrI shEShagirivAsa ||8||
hiMde nI prahlAdagOsuga |
eMdu nODada rUpa dharisi |
baMdu daityana oDala bagedu porede bAlakana ||
taMde tAygaLa biTTu vipinadi |
niMdu tapisuva paMcavatsara |
kaMdanA dhruvanigOlidu poredeyo shEShagirivAsa ||9||
maDuvinoLagiha makarikAlanu |
piDidu bAdhise kariyu trijagad |
vaDeya pAliso enalu takShaNa baMdu pAliside ||
maDadi mAtanu kELi balupari |
baDava brAhmaNa dhAnya koDalu |
poDavigasadaLa bhAgya nIDide shEShagirivAsa ||10||
piMte mAdida mahimegaLa nA |
neMtu varNisalEnu phala |
shrIkAMta ennanu poreye kIruti ninage phalavenage ||
kaMtu janakane enna manasina |
aMtaraMgadi nIne sarvada |
niMtu prEraNe mALpe sarvada shEShagirivAsa ||11||
shrInivAsane bhaktapOShane |
jjAni kulagaLigabhayadAyaka |jAna saMpada |
dIna bAMdava nInE ena manadartha pUraisO ||
anupamOpamaj
vinaya pUrvakavittu pAliso |
januma janumake mareya bEDavO shEShagirivAsa || 12 ||
madavu matsara lObha mOhavu |
odagabAradu enna manadali |
padumanAbhane j~jAna bhakti virakti nInittu ||
hRudaya madhyadi ninna rUpavu |
vadanadali tava nAma maMtravu |
sadaya pAlisu bEDikoMbEno shEShagirivAsa || 13 ||
aMdanuDi pusiyAgabAradu |
baMda bhAgyavu pOgabAradu |
kuMdubArade ninna karuNavu dinadi vardhisali ||
niMde mADuva janara saMgavu |
eMdigAdaru doreyabAradu |
eMdu ninnanu bEDikoMbeno shEShagirivAsa || 14 ||
Enu bEDali enna dEvanE |
sAnurAgadi enna pAliso |
nAnA vidhavidha saukhya niDuvadiha paraMgaLali |
shrInivAsane ninna dAsage |
Enu koretilelli nODalu |
nInE niMtIvidadi pELisu shEShagirivAsa ||15 ||
Aru munidavarEnu mALparo |
Aru olidavarEnu mALparo |
Aru nEhigarAru dvEshigaLArudAshinaru ||
krUra jIvara haNidu sAtvika |
dhIra jIvara poredu ninnali |
sAra bhakutiyanittu pAlisO shEShagirivAsa || 16 ||
ninna sEveyanittu enage |
ninna padayuga bhakti nIDi |
ninna guNagaNa stavana mADuva j~jAna nInittu ||
enna manadali nInE niMtu |
ghannakAryava mADi mADisu |
dhanyaneMdenisenna lOkadi shEShagirivAsa || 17 ||
jaya jayatu shaTha kUrmarUpane |
jaya jayatu kiTa siMha vAmana |
jaya jayatu bhRugurAma raghukulasOma shrIrAma ||
jaya jayatu shiri yaduvarENyane |
jaya jayatu janamOha buddhane |
jaya jayatu kalikalmashaghnane kalki nAmakane || 18 ||
karuNasAgara nInE nijapada |
sharaNavatsala nInE shAshvata |
sharaNa janamaMdAra kamalA kAMta jayavaMta ||
niruta ninnanu nutisi pADuve |
varada guru jagannAthaviThThala |
parama prEmadi poreyo ennanu shEShagirivAsa || 19 ||
|| shrIkRuShNArpaNamastu ||

Leave a Reply
You must be logged in to post a comment.