Srinivasa Kalyana

  • Vara Vaikuntadi – mangalam

    Composer : Shri Anantadreesharu ವರ ವೈಕುಂಠದಿ ಬಂದವಗೆವರಗಿರಿಯಲಿ ಸಂಚರಿಸುವಗೆವರಹ ದೇವನ ಅನುಸರಿಸಿಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆಮಂಗಳಂ ಜಯ ಮಂಗಳಂ [೧] ಸರಸದಿ ಬೇಟೆಗೆ ಹೊರಟವಗೆಸರಸಿಜಾಕ್ಷಿಯಳ ಕಂಡವಗೆಮರುಳಾಟದಿ ತಾ ಪರವಶನಾಗುತಕೊರವಿ ವೇಷ ಧರಿಸಿರುವವಗೆಮಂಗಳಂ ಜಯ ಮಂಗಳಂ [೨] ಗಗನ ರಾಜನ ಪುರಕ್ ಹೋದವಗೆಬಗೆ ಬಗೆ ನುಡಿಗಳ ನುಡಿದವಗೆಅಗವಾಸಿಗೆ ನಿನ್ನ ಮಗಳನು ಕೊಡು ಎಂದುಗಗನ ರಾಜನ ಸತಿಗ್ ಹೇಳಿದವಗೆಮಂಗಳಂ ಜಯ ಮಂಗಳಂ [೩] ತನ್ನ ಕಾರ್ಯ ತಾ ಮಾಡಿದವಗೆಇನ್ನೊಬ್ಬರ ಹೆಸರ್ ಹೇಳಿದವಗೆಮುನ್ನ ಮದುವೆ ನಿಶ್ಚಯವಾಗಿರಲುತನ್ನ ಬಳಗ ಕರೆಸಿರುವವಗೆಮಂಗಳಂ ಜಯ ಮಂಗಳಂ…

  • Bandu nintiha nodi

    Composer : Shri Purandara dasaru ಬಂದು ನಿಂತಿಹ ನೋಡಿ ಭೂತಳದಿ ವೆಂಕಟಇಂದಿರೆಯನೊಡಗೂಡಿ ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ ಆನಂದಬೇಡಿ || ಪ ||ವಂದಿಸುತ ಮನದೊಳಗೆ ಇವನಡಿ –ದ್ವಂದ್ವ ಭಜಿಸಲು ಬಂದ ಭಯಹರಇಂದುಧರ ಸುರವೃಂದನುತ ಗೋ –ವಿಂದ ಘನದಯಸಿಂಧು ಶ್ರೀಹರಿ || ಅ.ಪ || ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ –ಗಾರನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ ವಿಸ್ತಾರದಲ್ಲಿ ||ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ –ಧಾರಿ ಭುಜಕೇಯೂರ ಭೂಷಿತಮಾರಪಿತ ಗುಣಮೋಹನಾಂಗ ||ಚಾರುಪೀತಾಂಬರಕಟಿಯ ಕರ –ವೀರ ಕಲ್ಹಾರಾದಿ…

  • Bhanukoti teja – Stuti ratnamala

    Composer : Shri Gurushrisha Vittala ಭಾನುಕೋಟಿತೇಜ ಲಾವಣ್ಯಮೂರುತಿಶ್ರೀವೇಂಕಟೇಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ಪ || ಶೇಷಾಚಲವಾಸ ದೋಷದೂರನೆ ಭಕ್ತಪೋಷಕಶ್ರೀಕಾಂತ ನಮೋ ನಮೋ , ಶ್ರೀನಿವಾಸದಯಾನಿಧೇ || ೧ || ಖಗರಾಜನವಾಹನ ಜಗದೊಡೆಯನೆ ನಿನ್ನಅಗಣಿತ ಮಹಿಮೆಗೆ ನಮೋ ನಮೋ , ಶ್ರೀನಿವಾಸದಯಾನಿಧೇ || ೨ || ನೀಲಮೇಘಶ್ಯಾಮ ಪಾಲಸಾಗರಶಯನಶ್ರೀಲಕುಮೀಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ೩ || ಶಂಖಚಕ್ರಧರ ವೇಂಕಟರಮಣ ಅಕಳಂಕಮೂರುತಿದೇವ ನಮೋ ನಮೋ, ಶ್ರೀನಿವಾಸದಯಾನಿಧೇ || ೪ || ಪನ್ನಂಗಶಯನನೆ ನಿನ್ನಂಥ ದೇವರು ಇನ್ನುಂಟೆಅಜಭವಸುರವಂದ್ಯಾ…

error: Content is protected !!