-
Potana paliso pavamana
Composer : Shri Shyamasundara dasaru ಪೋತನ ಪಾಲಿಸೋ ಪವಮಾನಾ | ಈಭೂತಳದೊಳು ನಿನ್ನ ಖ್ಯಾತಿ ಘನಾ [ಪ] ಒದಗಿದ ವ್ಯಾಧಿಯ ಪರಿಹರಿಸೊ ನಿನ್ನಪದರಿಗೆ ಬಿದ್ದವನೆಂದು ಗ್ರಹಿಸೋ (೧) ತಾಯಿಯು ಇಲ್ಲದ ಬಾಲಕನು | ಇವನಕಾಯಲು ನೀ ದಯಾ ಸಾಗರನು (೨) ಶ್ವಾಸದೊಡಿಯ ನೀನೆಂತೆಂದು | ಶೃತಿಘೋಷಿಸುವದು ಆನತ ಬಂಧು (೩) ಶಿಶುವಿಗೊಲಿದು ನೀ ಸಲಹಿದರೆ | ದೇವಅಸುನಾಯಕನೆಂಬ ಬಿರುದು ಖರೆ (೪) ಗ್ರಾಮ ಬಲ್ಲಿಟಗಿ ಕೃತವಾಸ |ಶಿರಿಶಾಮಸುಂದರನ ಪ್ರಿಯದಾಸ (೫) pOtana pAlisO pavamAnA |…
-
Ambikapati shambho
Composer : Shri Shyamasundara dasaru ಅಂಬಿಕಾ ಪತಿ ಶಂಭೊ ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ |ಪ| ಭವಕಮಲ ಭವ ಭ್ರಕುಟ ಭವಹರನೆ ನೀಎನ್ನ ಅವಗುಣಗಳೆಣಿಸದಿರು ಕವಿಗೇಯನೆ |ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ [೧] ಬಲವಿರೋಧಿ ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾ |ಎಲರುಣಿ ಭೂಷಣನೆ ಒಲಿದು ಪಾಲಿಸು ದಯದಿಛಳಿ ಗಿರೀಶನ ಅಳಿಯ ನಳಿನಾರಿ ಧರನೆ [೨] ಸಿರಿ ರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರ ಗೊರಳನೆಕರುಣದಿಂದಲಿ…
-
Jane nambide ispeta rani
Composer : Shri Shyamasundara dasaru ಜಾಣೆ ನಂಬಿದೆ ಇಸ್ಪೇಟರಾಣೀ ನೀನೊಲಿದೆನ್ನಪಾಣಿಯೊಳಗೆ ಬಂದು ಕಾಣಿಸಮ್ಮ [ಪ] ವಾಣಿ ಶ್ರೀಲಕುಮೀಶ ರುದ್ರಾಯಣಿಯರಿಗಿಂತಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ [ಅ.ಪ] ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆದನಕರ ಹೊಲಮನೆಯನು ಮಾರಿದೆಜನರೊಳಗಪಹಾಸ್ಯಗೊಳಗಾದೆ ಕೇಳಮ್ಮವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ (೧) ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥಒಡೆಯರ ಕಾಣೆ ಕೈಪಿಡಿದು ರಕ್ಷಿಸೊ ನೀನಮ್ಮ ನೀನಮ್ಮ (೨) ಎಷ್ಟೆಂತ ಹೇಳಲಿ ಮಡದಿಯ ಗೋಳಾಟತಾಳಿ…
