Composer : Shri Shyamasundara dasaru
ಅಂಬಿಕಾ ಪತಿ ಶಂಭೊ ರಕ್ಷಿಸೆನ್ನ
ಶಂಬರಾರಿ ಹರನೆ ನಂಬಿದೆನೊ ನಿನ್ನ |ಪ|
ಭವಕಮಲ ಭವ ಭ್ರಕುಟ ಭವಹರನೆ ನೀ
ಎನ್ನ ಅವಗುಣಗಳೆಣಿಸದಿರು ಕವಿಗೇಯನೆ |
ಅವನಿಯೊಳು ಎನಗೀಗ ಸುವಿವೇಕಿಗಳ ಸಂಗ
ಜವದಿ ಪಾಲಿಸು ಮುದದಿ ಜವನಾರಿ ಶಿವನೆ [೧]
ಬಲವಿರೋಧಿ ವಿನುತ ಇಳೆವರೂಥನೆ ನಿರುತ
ತಲೆವಾಗಿ ಬೇಡುವೆನು ಸಲಹೆಂದು ನಾ |
ಎಲರುಣಿ ಭೂಷಣನೆ ಒಲಿದು ಪಾಲಿಸು ದಯದಿ
ಛಳಿ ಗಿರೀಶನ ಅಳಿಯ ನಳಿನಾರಿ ಧರನೆ [೨]
ಸಿರಿ ರಮಣ ಶಾಮಸುಂದರ ವಿಠಲ ಸಖನೆ
ಮೊರೆ ಹೊಕ್ಕೆ ಮರೆಯದಿರು ಗರ ಗೊರಳನೆ
ಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತು
ಕರವಿಡಿದು ಕಾಪಾಡೊ ಕರಿಚರ್ಮ ಧರನೆ [೩]
aMbikA pati shaMbho rakShisenna
shaMbarAri harane naMbideno ninna |pa|
bhavakamala bhava bhrakuTa bhavaharane nI
enna avaguNagaLeNisadiru kavigEyane |
avaniyoLu enagIga suvivEkigaLa saMga
javadi pAlisu mudadi javanAri shivane [1]
balavirOdhi vinuta iLevarUthane niruta
talevAgi bEDuvenu salaheMdu nA |
elaruNi bhUShaNane olidu pAlisu dayadi
ChaLi girIshana aLiya naLinAri dharane [2]
siri ramaNa shAmasuMdara viThala sakhane
more hokke mareyadiru gara goraLane
karuNadiMdali ninna charaNa sEveyanittu
karaviDidu kApADo karicharma dharane [3]

Leave a Reply
You must be logged in to post a comment.