-
Ramanujare namo namo
Composer : Shri Kanakadasaru ರಾಮಾನುಜರೇ ನಮೋ ನಮೋ ಸ್ವಾಮಿಲಕ್ಷ್ಮಣ ರೂಪ ನಮೋ ನಮೋ [ಪ] ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾ, ನಿಡುಶಿಖಿ ಯಜ್ಞೋಪವೀತ-ದಿಂದ,ತೊಡೆದ ದ್ವಾದಶ ನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ [೧] ಪಂಕಜನಾಭನ ಪಾವನ ಮೂರುತಿ,ಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರಗೆದ್ದ, ಓಂಕಾರ ಮೂರುತಿ ನಮೋ ನಮೋ [೨] ಕೇಶವ ಪಾದಾಂಬುಜ ಮಧುಕರಾ,ಪಾಷಂಡ ಗರ್ವಹರ ಗುರು ತಿಲಕಶೇಷಾವತಾರಿ ಮುನೀಶ ವಂದಿತಆದಿಕೇಶವ ಮೂರುತಿ ನಮೋ ನಮೋ [೩] rAmAnujarE namO namO svAmilakShmaNa…
-
Sheshadeva varunipati
Composer : Shri Jagannatha dasaru ಶೇಷದೇವ ವಾರುಣೀಪತಿ ಪಾಹಿ ||ಪ||ಶೇಷದೇವ ತ್ರೈಘೋಷಣ ಮುಖ ಪರಿಪೋಷಿಸು ಎಮ್ಮಭಿಲಾಷೆಯ ಸಲಿಸಿ ||ಅ.ಪ.|| ಭಜಿಸುವೆ ಸರ್ವದಾ ಸುಜನರಭೀಷ್ಟದಸುಜನಾರಾಧಕ ಭುಜಗೋತ್ತಂಸ (೧) ಪುಣ್ಯ ಚರಿತ ಸುಶರಣ್ಯಗೆ ಸುಬ್ರಹ್ಮಣ್ಯದೇವ ಕಾರುಣ್ಯ ಮೂರುತಿ (೨) ವಾರುಣಿ ಸುಮುಖ ಸರೋರುಹ ದಿನಕರತೋರು ತವಾಂಘ್ರಿ ಮಹೋರಗ ರಾಜ (೩) ಅಸಿತವಸನ ಹಲ ಮುಸಲಾಯುಧ ಧರದ್ವಿಸಹಸ್ರೇಕ್ಷಣ ಸುಶರಣ ಪಾಲ (೪) ಪಾತಾಳಪ ಪುರುಹೂತನುತ ಜಗನ್ನಾಥ ವಿಠ್ಠಲನ ಪ್ರೀತಿ ವಿಷಯನೆ (೫) SEShadEva vAruNIpati pAhi ||pa||SEShadEva traiGOShaNa mukha…
-
Shesha devara Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶವಿಠಲ ದಾಸಾರ್ಯ ಕೃತಶ್ರೀ ಶೇಷದೇವರ ಸುಳಾದಿ ರಾಗ: ಕಲ್ಯಾಣಿ ಧ್ರುವತಾಳವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರ |ವಾರಿಣಿ ಕಳತ್ರ ಚಟುಲಗಾತ್ರ |ವಾರಿಜನಾಭನ ಹಾಸುಗೆಯಾಗಿಯ –ಪಾರ ಸೇವೆಗರೆವ ಶೇಷದೇವ |ಧಾರುಣಿ ಪೊತ್ತು ಸರ್ವ ಜೀವರ ಸಲಹುವ |ವೀರ ಕಾಕೋದರ ನೀಲಾಂಬರ |ಈರೊಂದು ಸಹಸ್ರ ಜಿಹ್ವೆಗಳಿಂದ ನಿತ್ಯ |ಮಾರಮಣನ ಗುಣ ಮಹಿಮೆ ಕೊಂಡಾಡುವ |ವೀರ ವೈಷ್ಣವ ದೇವ ಚಕ್ಷುಸ್ರವ |ಕಾರೊಡಲ ಅಭಿನವ ಪ್ರಾಣೇಶವಿಠಲನ |ಚಾರು ಚರಣಾಬ್ಜಾಳಿ ಸರ್ಪಕುಲಮೌಳಿ || ೧ || ಮಟ್ಟತಾಳನಾರಾಯಣನೊಡನೆ ಮೂರುತಿಯಲಿ ಸುಬ್ದ |ಚಾರು…
