-
Adavi Nilaya
Composer : Shri Shyamasundara dasaru ಅಡವಿನಿಲಯ ನಿನ್ನಡಿಗೆರಗುವೆಕರ ಪಿಡಿದು ಪಾಲಿಸಯ್ಯ ||ಪ||ಮೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ |ಬಿಡಿಸು ಭವದ ಮಾಯಾ ||ಅ.ಪ|| ನಿನ್ನ ದರುಶನದಿ | ಎನ್ನ ಜನುಮಪಾವನ್ನ ವಾಯಿತಯ್ಯ |ನಿನ್ನನುಗ್ರಹವನ್ನು ಪಡೆದಸಂಪನ್ನರೊಳಿಡು ಜೀಯಾ ||೧|| ತರುಚರ ನರ ದ್ವಿಜ ವರರೂಪತ್ರಯಧರಿಸಿದಂತ ದೇವ ||ದುರುಳ ದೈತ್ಯ ಪರಿವಾರ ಗರ್ವಹರಶರಣರ ಸಂಜೀವ ||೨|| ಸೃಷ್ಟಿಯೊಳಗೆ ಅತಿ ಶ್ರೇಷ್ಠವೆಂದೆನಿಸಿದಕುಷ್ಟಗಿ ಪುರವಾಸಧಿಟ್ಟ ಮೂರುತಿ ಶಾಮಸುಂದರವಿಠ್ಠಲ ಪ್ರಿಯದಾಸ ||೩|| aDavinilaya ninnaDigeraguvekara piDidu pAlisayya ||pa||mRuDanuta bhArati oDeyane prArthipe |biDisu…
-
Satata paliso enna
Composer : Shri Shyamasundara dasaru ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ [ಪ] ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿವೀಣ ವೆಂಕಟ ಅಭಿದಾನದಿಂದಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ |ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕ [೧] ನಂಬಿದೆನು ನಿನ್ನ ಚರಣಾಂಬುಜವ ಮನ್ಮನದಹಂಬಲ ಪೂರೈಸೊ ಬೆಂಬಿಡದಲೆಕುಂಭಿಣೀಸುರ ನಿಕುರುಂಭ ವಂದಿತ ಜಿತಶಂಬರಾಂತಕ ಶಾತಕುಂಭ ಕಶ್ಯಪ ತನಯ [೨] ಮಂದಮತಿಗಳ ಸಂಗದಿಂದ ನಿನ್ನಯ ಚರಣಇಂದಿನ ತನಕ ನಾ ಪೊಂದಲಿಲ್ಲಕುಂದು ಎಣಿಸದೆ…
