Narasimha

  • Ena Helali Narahari

    Composer : Shri Vadirajaru ಏನ ಹೇಳಲಿ ನರಹರಿ ನಿನ್ನ ಮಹಿಮೆಯನು || ಪ ||ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ || ಅ.ಪ || ಸಚ್ಚಿದಾನಂದನ ಪಾದಾರವಿಂದವ |ಮೆಚ್ಚಿ ಹಸನಾಗಿರುವೆಂದಡೆ ||ಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಯಲಿ |ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ || ೧ || ವಾಸುದೇವನ ಗುಣಂಗಳ ಸ್ತುತಿಸದೆ ದು – |ರಾಸೆಯೊಳು ಬಿದ್ದು ಕಾಡಿಸುವದೆ ||ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ |ಏಸು ಬಾರಿ ತೀಡಿದರೆ ನೀಟಾಗುವುದೇ || ೨ || ಸಾಧು ಸಜ್ಜನರ…

  • Ele manave Hari

    Composer : Shri Purandara dasaru ಎಲೆ ಮನವೇ ಹರಿ ಧ್ಯಾನವ ಮಾಡು [ಪ] ಎಲೆ ಜಿಹ್ವೆ ಕೇಳು ಕೇಶವನ ಗುಣಗಳ ನುತಿಸು |ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ [೧] ಎಲೆ ನೇತ್ರಗಳಿರ ಶ್ರೀ ಕೃಷ್ಣ ಮೂರ್ತಿಯ ನೋಡಿ |ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ |ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |ತುಳಸೀ ಪರಿಮಳವನಾಘ್ರಾಣಿಸುವುದ್ ಅನುದಿನವು [೨] ಎಲೆ ಶಿರವೆ ನೀ ಕೇಳ್ ಅಧೋಕ್ಷಜನ…

  • Bhalire Bhalire Narasimha

    Composer : Shri Vijayadasaru ಭಳಿರೆ ಭಳಿರೆ ನಾರಸಿಂಹ ಮಹಸಿಂಹ,ಮಲಮಲಮಲತವರ ವೈರಿ ಉರಿಮಾರೀ [ಪ] ನಗನಗನಗಳಲ್ಲಾಡೆ ಚತುರ್ದಶ,ಜಗಜಗಜಗವೆಲ್ಲ ಕಂಪಿಸಿ ಕೆಂಪಾಗೆ,ಹಗೆಹಗೆಹಗೆ ಬಲವ ದೆಶೆ ಗೆಡಿಸಿ ರೋಷಗಿಡಿ,ಉಗುಉಗುಉಗುಳುತ್ತ ಬಂದ ನರಸಿಂಹ [೧] ಬಿಗಿಬಿಗಿಬಿಗಿಬಿಗಿದು ಹುಬ್ಬು ಗಂಟನೆ ಹಾಕಿ,ಹೊಗೆಹೊಗೆಹೊಗೆಸುತ್ತೆ ಸರ್ವರಂಜಿನೆಗೆನೆಗೆನೆಗೆನೆಗೆದು ಕುಪ್ಪಳಿಸಿ ಅಸುರನ್ನ,ಮಗುಮಗುಮಗು ಬೇಡಿಕೊಂಡ ನರಸಿಂಹ [೨] ಉಗುಉಗುಉಗುರಿಂದ ಕ್ರೂರನ್ನ ಹೇರೊಡಲ,ಬಗೆಬಗೆಬಗೆಬಗೆದು ರಕುತ ವನ್ನು,ಉಗಿಉಗಿಉಗಿಉಗಿದು ಚೆಲ್ಲಿ ಕೊರಳಿಗೆ ಕರುಳ,ತೆಗೆತೆಗೆತೆಗೆದಿಟ್ಟ ನಾರಸಿಂಹ [೩] ಯುಗಯುಗಯುಗದೊಳಗೆ ಪ್ರಣತಾರ್ತಿಹರನೆಂದು,ಝಗಝಗಝಗಝಗಿಪ ಮುಕುಟ ತೂಗೇ,ನಗುನಗುನಗುನಗುತ ಸುರರು ಗಗಗನದಿ ನೆರೆದು,ಮಿಗಿಮಿಗಿಮಿಗಿಲೆನೆ ನಾರಸಿಂಹ [೪] ಒಂದೊಂದೊಂದೊಂದೊಂದು ಮುನಿಗಳಿಗೆ ಒಲಿದು,ಅಂದಂದಂದಂದದಿಗಾಯ ತಾ…

error: Content is protected !!