-
Ele manave Hari
Composer : Shri Purandara dasaru ಎಲೆ ಮನವೇ ಹರಿ ಧ್ಯಾನವ ಮಾಡು [ಪ] ಎಲೆ ಜಿಹ್ವೆ ಕೇಳು ಕೇಶವನ ಗುಣಗಳ ನುತಿಸು |ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ [೧] ಎಲೆ ನೇತ್ರಗಳಿರ ಶ್ರೀ ಕೃಷ್ಣ ಮೂರ್ತಿಯ ನೋಡಿ |ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ |ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |ತುಳಸೀ ಪರಿಮಳವನಾಘ್ರಾಣಿಸುವುದ್ ಅನುದಿನವು [೨] ಎಲೆ ಶಿರವೆ ನೀ ಕೇಳ್ ಅಧೋಕ್ಷಜನ…
