Composer : Shri Gurugovinda dasaru
ಬಾರಯ್ಯ ಭಾಗಣ್ಣನೇ |
ಯನ್ನಯ ಮನಕೆ ಬಾರಯ್ಯ ಭಾಗಣ್ಣನೆ
ಕರೆ ಕರೆ ಮನದ ವಿಷಾದವ ಕಳೆದು
ಶ್ರೀ ಹರಿಯಲಿ ಮನವಿತ್ತು ಕರುಣಿಪುದಯ್ಯ [ಅ.ಪ]
ಗೋಪಾಲ ವಿಠಲನ ಭಜಕನೇ |
ಹೇ ಉಮಾಪತಿಸುತ ಬಲುತ್ಯಾಗ ಶೀಲನೆ |
ಶಾಪದಿ ನೊಂದ ಶ್ರೀನಿವಾಸಪ್ಪಗೆ
ಆಪಾರಾಯುಷ್ಯವಿತ್ತು ಸಲಹೀದ [೧]
ತಡವು ಇನ್ಯಾತಕಯ್ಯಾ |
ಗುರುಮಡದಿಯ ಸಲಹಿದ ಪರಿಯಾ |
ಒಡಲೊಳು ತೋರಿಸಿ ಸಲಹೆಂದು ಬೇಡುವೆ
ಕಡು ದಯಾನಿಧೆ ಅಡಿಗೆರುಗುವೆನಯ್ಯಾ [೨]
ಸಕಲ ಶಾಸ್ತ್ರದಿ ಬಲು ನಿಪುಣಾ |
ಮಂತ್ರ ಸಕಲವ ಚಿತ್ರದಿ ರಚಿಸಿದ ಧಿಷಣಾ |
ಲಕುಮಿಯರಸ ಗುರು ಗೋವಿಂದ ವಿಠಲನೆ
ಸಕಲಕ್ಕು ದೇವನೆಂದರುಹಿದ ಗುರುವೇ [೩]
bArayya BAgaNNanE |
yannaya manake bArayya BAgaNNane
kare kare manada viShAdava kaLedu
SrI hariyali manavittu karuNipudayya [a.pa]
gOpAla viThalana BajakanE |
hE umApatisuta balutyAga SIlane |
SApadi noMda SrInivAsappage
ApArAyuShyavittu salahIda [1]
taDavu inyAtakayyA |
gurumaDadiya salahida pariyA |
oDaloLu tOrisi salaheMdu bEDuve
kaDu dayAnidhe aDigeruguvenayyA [2]
sakala SAstradi balu nipuNA |
maMtra sakalava citradi racisida dhiShaNA |
lakumiyarasa guru gOviMda viThalane
sakalakku dEvaneMdaruhida guruvE [3]
Leave a Reply