Composer : Shri Vadirjaru
[Page is still under construction]
ಶ್ರೀ ಕೃಷ್ಣಬಾಲಲೀಲೆ
ಪೂರ್ವಾರ್ಧ
ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆ
ಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧|
ವಾಯು ಹನುಮ ಭೀಮ ಶ್ರೀಮದಾನಂದತೀರ್ಥರ
ಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨|
ಸಕಲ ವಿದ್ವತ್ ಪ್ರೌಢರಾದ ಸುಖತೀರ್ಥರ ಮತವ
ಪ್ರಕಟಿಸಿದ ವ್ಯಾಸಮುನಿಯ ಚರಣಕೆರಗುವೆ |೩|
ನ್ಯಾಯ ಸುಧೆಯ ವ್ಯಾಖ್ಯಾನ ಮಾಡಿ ಮಾಯವಾದಿಗಳ ಗೆಲಿದ
ರಾಯ ರಾಮಚಂದ್ರರ ಚರಣಕೆರಗುವೆ |೪|
ಪ್ರಾಣನಾಥ ವಿರಿಂಚರಿಗೆ ರಾಣಿವಾಸವಾಗಿರಲು ವೇದ
ವರ್ತಮಾನಿಗಳಿಗೆ ವಂದಿಪೆ ನಾನು |೫|
ಮುಕ್ಕಣ್ಣ ಹರನು ಜಗಕ್ಕೆ ಗುರು ಎಂದೆನಿಸಿ
ಶಕ್ರ ಸುರಾಭೀಷ್ಟರಿಗೆ ಶರಣೆಂದೆನೂ |೬|
ಮಧ್ವಮತಾಬ್ಧಿ ಪೂರ್ಣಚಂದ್ರನಾದ ಜಯಮುನಿಯ
ಪಾದಗಳಿಗೆರಗುವೇ ಪರಮ ಹರುಷದಿ |೭|
ಹಿರಿಯರಿಗೆ ಗುರುಗಳಿಗೆ ಮುನಿಗಳಿಗೆ ಋಷಿಗಳಿಗೆ
ಎರಗಿ ಪೇಳ್ವೆ ರಾಮಕೃಷ್ಣರ ಬಾಲಲೀಲೆಯ|೮ |
ಚಿತ್ತದೊಲ್ಲಭನ ಪಾದಚಿತ್ತದಲ್ಲಿ ಇಟ್ಟು ನಾನು
ಭಕ್ತಿಯಿಂದ ಪೇಳ್ವೆ ರಾಮಕೃಷ್ಣ ಚರಿತೆಯ |೯ |
ಘಟ್ಟ ಬೆಟ್ಟ ಸಾಗರ ಸುತ್ತಲಿದ್ದ ಅಸುರರ
ಹೊತ್ತಿರಲಾರೆನೆಂದು ಪೃಥ್ವಿ ಅತ್ತಳು |೧೦|
ರಾಜ ದೈತ್ಯರನ್ನು ತಾಳಲಾರದೆ ಭೂಮಿದೇವಿ
ಪೋಗಿ ಮೊರೆಯಿಟ್ಟಳು ದೇವತೆಗಳಿಗೆ | ೧೧|
ದೇವತೆಗಳೆಲ್ಲರು ಭೂಮಿದೇವಿಯೊಡಗೊಂಡು –
ಕ್ಷೀರಸಾಗರ ಶಯನನೆದುರು ಬಂದರಾಗಲೆ | ೧೨|
ಗೋವುರೂಪ ಧರಿಸಿ ಭೂಮಿದೇವಿ ಅಜನ ಬಳಿಗೆ ಬರಲು
ದೇವಾದಿದೇವನ ಸ್ತುತಿಸುತ್ತಿದ್ದರು | ೧೩|
ಅಂಬುಧಿಶಯನನಾಗಿ ಅಂಬುಜಾಕ್ಷ ಮಲಗಿರಲು
ಬಂದು ದೇವತೆಗಳೆಲ್ಲ ಸ್ತುತಿಯ ಮಾಡಲು | ೧೪|
ವಾರಿಧಿಶಯನನಾಗಿ ಅಂಬುಜಾಕ್ಷ ಮಲಗಿರಲು
ಬಂದು ದೇವತೆಗಳೆಲ್ಲ ಸ್ತುತಿಯ ಮಾಡಲು |೧೫|
ದೇವತೆಗಳ ಮಾತ ದೇವ ಚಿತ್ತದಲ್ಲಿಟ್ಟು ಬಂದು
ದೇವಕಿಯಲ್ಲವತರಿಸುವೆನೆಂದನು |೧೬|
ವಸುದೇವನಲ್ಲಿ ಹುಟ್ಟಿ ಅಸುರರ ಕೊಲ್ಲುವೆನೆಂದು
ವಸುಧೆಭಾರ ಇಳುಹುವೆನೆಂದ ವಾಸುದೇವನು | ೧೭|
ಹಾಸಿಗೆಯಾಗಿರುವ ಶೇಷದೇವರನ್ನೆ ಕರೆದು
ಜೈಷ್ಠನಾಗಿ ಮುಂಚ್ಯವತರಿಸು ಎಂದನು |೧೮|
ಅದಿತಿ ಕಾಶ್ಯಪರು ಮರುತ ಗಂಧರ್ವರೂ
ಸನಕಾದಿ ಯೋಗಿಗಳು ಜನಿಸಿರೆಂದನೂ | ೧೯|
ಮುನಿಗಳೆಲ್ಲ ತರು ಪಕ್ಷಿ ಮೃಗಗಳಾಗಿ ಜನಿಸಿದರು
ಅನಿಮಿಷರೆಲ್ಲ ಗೋಪಾಲರಾದರು |೨೦|
ಸನಕಾದಿ ಯೋಗಿಗಳು ಪಶುಗಳಾಗಿ ಜನಿಸಿದರು
ತುರುವ ಕಾಯ್ವ ಗೊಲ್ಲನಾದ ಪರಮಾತ್ಮನು |೨೧|
ದೇವರ ಬಾಲಲೀಲೆ ನೋಡಬೇಕೆಂದೆನುತ
ದ್ರೋಣನೆಂಬ ವಸು ನಂದಗೊಪನಾದನು |೨೨|
ಕೃಷ್ಣನ ಬಾಲಲೀಲೆ ನೋಡಬೇಕೆಂದೆನುತ
ಆಗ ಧರಾದೇವಿ ಯಶೋದೆಯಾದಳು |೨೩|
ಶೂರನಲ್ಲಿ ಕಾಶ್ಯಪ ವಸುದೇವನಾಗಿ ಜನಿಸಿದನು
ದೇವಕನಲ್ಲಿ ಅದಿತಿದೇವಿ ದೇವಕಿಯಾದಳು |೨೪ |
ದೇವಕಿ ವಸುದೇವರಿಗೆ ವಿವಾಹದುತ್ಸವವ ಮಾಡೆ
ದೇವದುಂದುಭಿಗಳಾವಾಗಲೆಸೆದುವು | ೨೫ |
ನಾಕು ಬೀದಿಯಲ್ಲಿ ಕಂಸ ಅನೇಕ ಸಂಭ್ರಮವ ಮೆರಸಿ
ಆಕಾಶವಾಣಿ ಅವನ ಕುರಿತು ನುಡಿಯಿತು |೨೬|
ತಂಗಿಯಾ ಮದುವೆ ಎಂದು ಸಂಭ್ರಮಗೊಳಲು ಬೇಡ
ಕೊಲ್ಲುವನು ಆಕೆಯ ಕಂದ ನಿನ್ನನೂ |೨೭|
ಅಷ್ಟಮಿಯ ರೋಹಿಣಿಯಲ್ಲಿ ಹುಟ್ಟಿದಾ ಮಗನು ನಿನಗೆ
ಮೃತ್ಯುವಾಹನೆಂದು ಆವಿರ್ಭೂತ ನುಡಿಯಿತು |೨೮|
ಆಕಾಶವಾಣಿ ನುಡಿಯೆ ಆಕೆಯಾ ಕೊಲುವೆನೆಂದು
ವ್ಯಾಕುಲದಿಂದ ಕಂಸ ನಡೆದು ಬಂದನು | ೨೯ |
ಭಗಿನಿಯ ಕೊಲ್ಲುವೆನೆಂದು ಬಹಳ ಕೋಪದಿಂದ ಬಂದ
ಆಯುಧವನ್ನೆ ಹಿಡಿದು ಕಂಸ ಕಡಿವೆನೆನುತಲಿ |೩೦|
ಕೂಡೆ ಹುಟ್ಟಿದವಳ ಕೊಂದು ದುಷ್ಕರ್ಮವನು ಮಾಡುವರೆ
ಬೇಡ ಕಂಸ ಸ್ತ್ರೀ ಹತ್ಯ ಬೇಗ ಬಾಹುದು |೩೧ |
ಎನ್ನ ಪ್ರಾಣಕೆ ಮುನಿದ ತಂಗಿ ಇದ್ದು ಪ್ರಯೋಜನವೇನು
ಕಣ್ಣು ಹೋದ ಹುಬ್ಬು ತನಗೆ ಬೇಡವೆಂದನು |೩೨|
ಆನಕದುಂದುಭಿ ಕಂಸಗಾನೇಕ ವಿಧವಾಗಿ ತಿಳುಹಿ
ಆದ ಸುತರನೆಲ್ಲ ನಿನಗೆ ಈವೆನೆಂದನು |೩೩|
ಎಂದ ಮಾತ ಕೇಳಿ ತಾನು ನಂಬಲಾರೆನೆಂದ ಕಂಸ
ಆಯುಧವನಿಟ್ಟು ಅಡ್ಡ ದಾಟು ಎಂದನು |೩೪|
ಹೇಳಿದಾ ಮಾತು ಕೇಳಿ ತಾನು ತಾಳಲಾರೆನೆಂದ ಕಂಸ
ಗಾಂಡೀವ ಇಟ್ಟು ಅಡ್ಡ ದಾಟು ಎಂದನು | ೩೫ |
ಆನೆ ಇಳಿದು ವಸುದೇವ ರಾಣಿಯಾ ಕೈಯಾ ಹಿಡಿದು
ಆಯುಧವ ದಾಟಿ ಅರಮನೆಗೆ ನಡೆದನು | ೩೬ |
ಅಂದಣವನಿಳಿದು ವಸುದೇವ ಹಂಡತಿ ಕೈಯ ಹಿಡಿದು
ಗಾಂಡೀವವ ದಾಟಿ ಅರಮನೆಗೆ ನಡೆದನು |೩೭|
ಆಗ ಅರಮನೆಯೊಳಗೆ ಭಾಮೆ ದೇವಕಿದೇವಿ
ಬೇಗದಿಂದ ಋತುಮತಿಯಾಗುತ್ತಿದ್ದಳು |೩೮|
ಕೇಳಿ ಉಗ್ರಸೇನರಾಯ ಬಹಳ ಸಂತೋಷದಿಂದ
ಶೋಭನವ ಮಾಡಿಸಿದ ಅಷ್ಟು ಹರುಷದಿ |೩೯|
ಅಷ್ಟ ಋಷಿಗಳನ್ನೆ ಕರೆಸಿ ಅಷ್ಟ ಫಲಗಳನ್ನೆ ತರಿಸಿ
ಪುತ್ರಿಯ ಕೈಯಲ್ಲಿ ಫಲದಾನವ ಕೊಡಿಸಿದ |೪೦ |
ಆಗ ಅರಮನೆಯೊಳಗೆ ಭಾಮೆ ದೇವಕಿ ದೇವಿಗೆ
ಬೇಗದಿಂದ ಪ್ರಥಮ ಗರ್ಭವಾಗುತಿದ್ದಿತು |೪೧ |
ಕೇಳಿ ಉಗ್ರಸೇನ ರಾಯ ಬಹಳ ಸಂತೋಷದಿಂದ
ಸೀಮಂತವ ಮಾಡಿಸಿದ ಅಷ್ಟು ಹರುಷದಿ |೪೨|
ಬಾಲಕನು ಹುಟ್ಟುತ್ತಿರಲು ಬೇಗದಿಂದ ವಸುದೇವ
ಕಂಸನ ಮುಂದೆ ಇಟ್ಟು ಕರವ ಮುಗಿದು ನಿಂತನೂ |೪೩|
ಬಾಲಕನ ನೋಡುತ ಬಹಳ ಸಂತೋಷದಿಂದ
ನೀನು ನಿನ್ನ ಮನೆಗೆ ಬೇಗ ಹೋಗು ಎಂದನೂ |೪೪ |
ಅಂದ ಮಾತು ಕೇಳಿ ತಾನು ಬಂದನಾಗ ವಸುದೇವ –
ಹೆಂಡತಿಯ ಕೈಲಿ ಶಿಶುವ ತಂದು ಕೊಟ್ಟನೂ |೪೫|
ಹೇಳಿದ ಮಾತು ಕೇಳಿ ತಾನು ಹೋದ ವಸುದೇವ
ರಾಣಿಯ ಕೈಲಿ ಶಿಶುವ ತಂದು ಕೊಟ್ಟನೂ |೪೬|
ಅಂಬರದಿಂದಲಿ ಬಂದರೀಗ ನಾರದರು
ಇಂದಿರಾಪತಿ ಈತ ಸಂದೇಹವಿಲ್ಲವೂ |೪೭|
ದೇವಕಿ ವಸುದೇವರಿಗೆ ಸೆರೆಯ ಸಂಕೋಲೆ ಹಾಕ್ಸಿ
ಬಾಗಿಲ ಮುಂದೆ ಭಟರ ತಂದು ಕಾವಲಿಟ್ಟನು |೪೮|
ನಾರದನ ಮಾತ ಕೇಳಿ ಬಹಳ ಕೋಪವನ್ನೆ ತಾಳಿ
ಆಯುಧವನ್ನು ಹಿಡಿದು ಅರಮನೆಗೆ ಬಂದನು |೪೯|
ಆರು ಮಂದಿ ಪುತ್ರರ ದೇವಕಿಯು ಪಡೆದಿರಲು
ಆಗ ಕಂಸ ಶಿಲೆಯೊಳಪ್ಪಳಿಸಿ ಕೊಂದನೂ | ೫೦ |
ಏಳನೆಯ ಗರ್ಭ ದೇವಕಿಗೆ ಮೂರು ತಿಂಗಳಾಗುತಿರಲು
ಮಾಯೆ ಸೆಳೆದುಕೊಂಡು ರೋಹಿಣಿಯಲ್ಲಿಟ್ಟಿತೂ |೫೧|
ಸೆಳೆಯಪಟ್ಟು ಶೇಷನಾಗಿ ಸಂಕರ್ಷಣನೆಂದೆನಿಸಿ
ಜನಿಸಿದನೆ ರೋಹಿಣಿಯ ಗೃಹದೊಳಾಗಲೇ |೫೨ |
ದೇವಕಿಗೇಳನೆಯ ಗರ್ಭ ಶುರುವಾದವೆಂದು
ಬಹಳ ವಾಕ್ಯದಿಂದ ಜನರು ಆಡಿಕೊಂಬರು |೫೩|
ದೇವಕಿಯ ಗರ್ಭದೊಳಗೆ ದೇವ ಶ್ರೀಹರಿಯು ಜನಿಸೆ
ಬಹಳ ವಾಕ್ಯದಿಂದ ಜನರು ಆಡಿಕೊಂಬರು |೫೪ |
ಅಕಳಂಕಚರಿತ ದೇವಕಿಯ ಬಸುರೊಳಗೆ ಬಂದಿರಲು
ವಿಕಸಿತವಾದುದು ಅವಳ ಮುಖ ಕಮಲವು | ೫೫ |
ಮೂರು ಲೋಕವ ತಿರುಗಿ ನಾರದ ಮುನಿಯು ಬರಲು
ಬುದ್ಧಿ ಕ್ಷಮೆಯಿಂದ ಮಾತನಾಡುತಿದ್ದನು |೫೬ |
ಪೂರ್ವಕಾಲದಲ್ಲಿ ಕಾಲನೇಮಿ ವಿಷ್ಣು ಕೈಲಿ ಮರಣ ನಿನಗೆ
ಈ ಜನ್ಮದಲಿ ಹರಿಯ ಕೈಯಲಿ ಮರಣವೆಂದನು |೫೭|
ಒಂದು ದಿವಸ ದೇವಕಿಯ ಮಂದಿರಕ್ಕೆ ಬಂದ ಕಂಸ
ತಂಗಿಯ ಮುಖದ ಕಾಂತಿಯ ನೋಡಿ ಬೆರಗು ಬಿದ್ದನು |೫೮ |
ಎಂದಿನಂತಲ್ಲ ಗರ್ಭ ಚೆಂದವಾಗಿ ತೋರುತಿದೆ
ಕೊಂದೀತು ಎನ್ನ ಸಂದೇಹವಿಲ್ಲವು |೫೯|
ದೇವಕಿಗೆಂಟನೆಯ ಗರ್ಭ ಬಹಳ ಎಚ್ಚರಿಕೆ ಎಂದು
ಹೇಳಿದನೆ ಕಂಸ ತನ್ನ ಆಳು ಮಂದಿಗೆ |೬೦|
ದೇವಕಿ ವಸುದೇವರಿಗೆ ಸೆರೆಯ ಸಂಕೋಲೆ ಹಾಕ್ಸಿ
ಬಾಗಿಲ ಮುಂದೆ ಭಟರ ತಂದು ಕಾವಲಿಟ್ಟನು |೬೧|
ಪುರದ ಬಾಗಿಲುಗಳಿಕ್ಕಿ ಜನರು ಎಲ್ಲ ನಿದ್ರೆಗೈವ
ಸಮಯದಲಿ ದೇವಕಿ ದೇವಿಯ ನಡು ನೊಂದುವು |೬೨ |
ಅಷ್ಟಮೀ ರೋಹಿಣಿಯಲ್ಲಿ ಅರ್ಧರಾತ್ರಿ ವೇಳ್ಯದಲ್ಲಿ
ಅಚ್ಯುತನ ಚರಿತವಾವಿರ್ಭೂತವಾಯಿತು |೬೩|
ಶ್ರಾವಣ ಬಹುಳ ಅಷ್ಟಮಿಯಲ್ಲಿ ಚಂದ್ರ ಉದಯ ಕಾಲದಲ್ಲಿ
ಭೂಮಿಯ ಮೇಲೆ ಕೃಷ್ಣನವತರಿಸಿದನು |೬೪|
ಶುಕ್ಲ ಶೋಣಿತ ಸಂಬಂಧ ಪ್ರಸಕ್ತಿ ತನಗಿಲ್ಲವೆಂದು
ಶಂಖ ಚಕ್ರ ಚತುರ್ಭುಜದಲವತರಿಸಿದನು |೬೫|
ಜಗದೊಡೆಯ ದೇವಕಿಯ ಗೃಹದೊಳಗೆ ಜನಿಸಿರಲು
ಧರಣಿದೇವಿ ತನ್ನ ಭಾರವಿಳುಹಿತೆಂದಳು |೬೬ |
ಪಟ್ಟಣದ ಕೇರಿಯೊಳಗೆ ಸುತ್ತೇಳು ಗೃಹದೊಳಗೆ
ಪಕ್ಷಿವಾಹನ ಕೃಷ್ಣನ ಬೆಳಕು ತುಂಬಿತು |೬೭|
ರಾಜ ಬೀದಿಯೊಳಗೆ ನಾಲ್ಕೆಳು ಗೃಹದೊಳಗೆ
ವಾರಿಜನಾಭನ ಬೆಳಕು ತುಂಬಿತು |೬೮ |
ಪಟ್ಟಣದ ಬೆಳಕು ಕಂಡು ದುಷ್ಟ ಕಂಗೆಟ್ಟು ಅಂಜಿ
ಮೃತ್ಯು ಬಂದಿತು ಸಂದೇಹವಿಲ್ಲವು |೬೯|
ದೇವಕಿಯ ಗೃಹದೊಳಗೆ ದೇವ ಶ್ರೀಹರಿಯು ಜನಿಸಿ
ಆಗ ಅಜನು ಬಂದು ತುತಿಯ ಮಾಡಿ ಹೋದನು | ೭೦ |
ದೇವಾದಿದೇವನೇ ವೇದಪಾಲಕನೇ
ಮಾವಮರ್ದನನೆಂದು ಬ್ರಹ್ಮ ತುತಿಸಿದ |೭೧ |
ಅಸುರ ಸಂಹಾರ ನೀನೆ ಶಿಶುಪಾಲ ವೈರಿ ನೀನೆ
ಕಂಸ ಮರ್ದನನೆಂದು ಬ್ರಹ್ಮ ತುತಿಸಿದ |೭೨|
ಶಂಖ ಚಕ್ರ ಗದಾ ಪದ್ಮ ಅಂಕಿತ ಪೀತಾಂಬರ ಉಟ್ಟ
ಪಂಕಜಾಕ್ಷನ ಕಂಡು ಅವರು ಶಂಕಿಸಿದರು |೭೩|
ಪೀತಾಂಬರ ಉಟ್ಟುಕೊಂಡು ಲಕ್ಷ್ಮೀದೇವಿಯರು ಸಹಿತ
ಶಂಖ ಚಕ್ರ ಚತುರ್ಭುಜದಲವತರಿಸಿದ |೭೪|
ಶಂಖ ಚಕ್ರ ಗದಾ ಪದುಮ ಮುಕುಟ ಕೌಸ್ತುಭಹಾರ
ಶ್ರೀವತ್ಸ ಕುಂಡಲವು ನೊಸಲ ತಿಲಕವು |೭೫|
ಉಟ್ಟ ಪೊಂಬಟ್ಟೆಯು ಹೊದ್ದ ಪೀತಾಂಬರವು
ಹೊಳೆಯೆ ಕತ್ತಲೆಗಳೆಲ್ಲ ಹರಿದವಾಗಲೇ |೭೬|
ಹೃದಯದಿ ತುಲಸಿಯ ಸರ ವೈಜಯಂತಿ ಮಾಲೆಗಳು
ಅಸುರ ಮರ್ದನನತಿ ಮುದ್ದು ಮುಖವ ಕಂಡರು |೭೭|
ಎಸಳು ಕಂಗಳು ತುದಿನೋಟದ ಕರುಣ ರಸವು
ಸುರಿಯೆ ಹಲವು ಕುರುಳು ಚೆಲುವ ಮುದ್ದು ಕೃಷ್ಣ ಜನಿಸಿದ |೭೮|
ಚತುರ್ಭುಜದಿಂದ ವ್ಯಕ್ತನಾದ ಶಂಖ ಚಕ್ರ ಗದಾ ಧರಿಸಿ
ಪ್ರಾಕೃತಭಾವನಾಗಿ ಮುಂದೆ ಬಂದು ನಿಂತನು |೭೯|
ನಿಂತಿರುವ ಹರಿಯ ಕಂಡು ಅಂಜಿ ದೇವಕಿದೇವಿ
ಬಂದು ವಸುದೇವನ ಅಪ್ಪಿಕೊಂಡಳು |೮೦ |
ಅಂಜಬೇಡ ತಾಯೆ ಎಂದು ರಂಗ ಅಭಯವನ್ನು ಕೊಟ್ಟ
ಹಿಂದಿನಾ ತಪಕೆ ಮೆಚ್ಚಿ ಬಂದೆನೆಂದನು |೮೧ |
ಹೆದರಬೇಡ ತಾಯೆ ಎಂದು ಹರಿಯು ಅಭಯವನ್ನು ಕೊಟ್ಟ
ಹಲವು ಕಾಲದ ತಪಕೆ ಮೆಚ್ಚಿ ಬಂದೆನೆಂದನು |೮೨|
ಹಿಂದಕೆ ವರವನಿತ್ತು ಬಂದೆ ನಿನ್ನ ಗರ್ಭದಲ್ಲಿ
ನಂದಗೋಪ ಗೋಪಿಯರರ್ತಿ ಸಲಿಸ ಬಂದೆನು | ೮೩ |
ಅದ್ಭುತವಾದ ಶಿಶುವ ಕಂಡು ಆದಿಪುರುಷನೆಂದು
ಮೈ ಉಬ್ಬಿ ವಸುದೇವ ಸ್ತುತಿಯ ಮಾಡಿದ |೮೪|
ಕೇಶವ ನಾರಾಯಣ ಮಾಧವ ಗೋವಿಂದ
ವಾಸುದೇವ ಕರುಣಿಸೆಂದು ಸ್ತುತಿಸುತಿದ್ದನು | ೮೫ |
ಸ್ತುತಿಗಳೇ ಬಹಳ ಬೇಡ ಕಂಸನ ಭಯವು ನಿಮಗೆ
ಶಿಶುವಾಗಿ ನಿಮ್ಮನು ಸಲುಹುವೆನೆಂದ |೮೬|
ಮಗುವಾಗಿ ಮೊರದೊಳಗೆ ಮಲಗಿ ನಿಮ್ಮ ಸಲುಹುವೆ
ಬಲರಾಮನ ಕೂಡೆ ಹೋಗಿ ಬೆಳೆವೆನೆಂದನು |೮೭|
ಪೃಶ್ನಿಜನ್ಮದಲ್ಲಿ ನಿಮ್ಮ ಉದರದಲ್ಲಿ ಪುಟ್ಟಿದೆ
ಅದಿತಿ ಕಾಶ್ಯಪರಲ್ಲಿ ವಾಮನನಾಗಿ ಪುಟ್ಟಿದೆ |೮೮|
ಮೂರು ಜನ್ಮದಲ್ಲಿ ನಿಮ್ಮ ಉದರದಲ್ಲಿ ಪುಟ್ಟಿದೆ
ಮುಕ್ತಿಗೆ ಯೋಗ್ಯಳಾದೆ ದೇವಕಿ ಎಂದನು |೮೯ |
ಮೂರು ಜನ್ಮದಲ್ಲಿ ತಪಸು ಮಾಡಿದೆಲ್ಲ ಗಳಿಸಿತು
ಮುಕ್ತಿಗೆ ಐದು ದೇವಕಿ ಎಂದನು |೯೦|
ಆಗ ಸೆರೆಮನೆಯೊಳಗೆ ಭಾಮೆ ದೇವಕಿದೇವಿ
ಸೋದರಾಗೆ ಅಂಜಿ ಮಾತನಾಡುತ್ತಿದ್ದಳು |೯೧ |
ಮಂದಿಯ ಒಳಗೆ ಎನ್ನ ಕಂದನೆಂದು ತಿಳಿಸಬೇಡ
ಒಂದು ಮಾಡಿಸೆಂದು ರಂಗಗೆ ಬೇಡಿಕೊಂಡಳು |೯೨ |
ಮಾತೆಯ ಸ್ತೋತ್ರವನ್ನೆ ಕೇಳಿ ದೇವ ಪ್ರೀತನಾಗಿ ನುಡಿದ
ಸೋದರನ ಭಯವು ನಿಮಗೆ ಬೇಡವೆಂದನು |೯೩|
ಪುತ್ರ ಹುಟ್ಟಿದನೆಂದು ಅರ್ತಿಯಿಂದ ವಸುದೇವ
ಹತ್ತು ಸಾವಿರ ಗೋವುದಾನ ಸಂಕಲ್ಪ ಮಾಡಿದ |೯೪|
ಬಾಲ ಹುಟ್ಟಿದನೆಂದು ಹರುಷದಿಂದಲಿ ವಸುದೇವ
ನೂರು ಲಕ್ಷ ಗೋವುದಾನ ಸಂಕಲ್ಪ ಮಾಡಿದ |೯೫ |
ವಸುದೇವನ ಸ್ತುತಿಯ ಕೇಳಿ ಅಸುರಮರ್ದನ ಕೃಷ್ಣ
ಶಿಶುರೂಪವ ಧರಿಸಿದನಾಕ್ಷಣದಲ್ಲಿ |೯೬|
ಕಾಳಿಂದಿಯ ತೀರದಲ್ಲಿ ನಂದಗೋಪನ ಪಳ್ಳಿ
ಮಂದಿರದೊಳಿಟ್ಟು ಹೆಣ್ಣು ಮಗಳ ತಂದುಕೋ |೯೭|
ದೇವನಾಡಿದ ಮಾತ ಕೇಳಿ ವಸುದೇವನೆತ್ತಿ ನಡೆಯುತಿರಲು
ಬೀಗ ಮುದ್ರೆಗಳು ಸಡಿಲಿ ದ್ವಾರ ತೆರೆದುವು |೯೮ |
ಗಸ್ತು ಎಚ್ಚರಿತು ಕೂಗೆ ಆಗ ವಸುದೇವನು
ಕವಳವ ಕೊಟ್ಟು ಬೇಗ ಬೇಡಿಕೊಂಡನು |೯೯|
ಹನಿಯ ಮಳೆಗೆ ಶೇಷ ತನ್ನ ಹೆಡೆಯ ಕೊಡೆಯ ಮಾಡಿದ
ಯಮುನೆ ಈರ್ಭಾಗವಾಗಿ ದಾರಿ ಕೊಟ್ಟಳು |೧೦೦|
ದುರ್ಗೆ ಜನಿಸಿ ನಂದಗೋಕುಲದಿ ಇದ್ದ ಜನರಿಗೆಲ್ಲ
ನಿದ್ರೆಯನ್ನೆಸೆದಳಜ್ಞಾನ ವಶದಿ | ೧೦೧ |
ವಾಸುದೇವನ ವಸುದೇವ ಯಶೋದೆ ಹಾಸಿಗೆಯಲಿಟ್ಟು
ಶಿಶುರೂಪು ಧರಿಸಿದಿ ಹೆಣ್ಣು ತಂದನು | ೧೦೨|
ತಿರುಗಿ ಬಂದು ವಸುದೇವ ಸೆರೆಯ ಸಂಕೋಲೆಯಲ್ಲಿರಲು
ತಾವಾಗಿ ಮುಚ್ಚಿದಾವೆ ತೆರೆದ ಬಾಗಿಲು | ೧೦೩|
ಹೆಣ್ಣು ತಂದು ವಸುದೇವ ಹೆಂಡತಿಯ ಕೈಲಿ ಕೊಡಲು
ಕಣ್ಣು ತೆರೆದು ಕಾವುಕಾವೆಂದತ್ತಿತ್ತಾಗಲೇ |೧೦೪ |
ದೇವಕಿ ಪ್ರಸವವಾದಳೆಂದು ಆಗ ಎಚ್ಚರಿತು ಜನರು
ಬೇಗದಿಂದಲಿ ಕಂಸಗೆ ಹೋಗಿ ಹೇಳಲು | ೧೦೫ |
ಹಾಸಿಕೆ ಬಿಟ್ಟಿದ್ದು ಕಂಸ ಕೇಶ ಕೆದರಿ ಹಸನ ಉಗುಳಿ
ಆ ಕ್ಷಣದಿ ಶಿಶುವ ಸೆಳೆದುಕೊಂಡನಾಗಲೇ | ೧೦೬ |
ಚಿಣ್ಣನಲ್ಲ ಹೆಣ್ಣಿದು ಅಣ್ಣ ನಿನ್ನ ಕೊಲ್ಲುವುದೆ
ಕಣ್ಣಿನೊಳ್ಳೋಡಿಕೊಂಬೆ ಕರುಣಿಸೆಂದಳು | ೧೦೭ |
ಹೆಣ್ಣೆನಿಂದಲವು ಉಂಟು ಹೆಣ್ಣಿನಿಂದಲೇ ಲಯವು ಉಂಟು
ಹೆಣ್ಣು ಸೀತೆ ಹುಟ್ಟಿ ಲಂಕೆ ಹಾಳು ಆಯಿತು | ೧೦೮ |
ಸೀತೆ ಹುಟ್ಟಿದ ಕಾರಣದಿಂದ ಲಂಕೆಗೆ ಅಳಿತವಾಯ್ತು
ನಿನ್ನ ಕಾರಣದಿಂದ ಎನ್ನ ಕೊಂದಿತೆಂದನು | ೧೦೯ |
ರೋಷದಿಂದ ಶಿಶುವ ಸೆಳೆದು ಹಾಸಿದ ಕಲ್ಲಿನ ಮೇಲೆ
ಬೀಸಿ ಅಪ್ಪಳಿಸಲಂಬರದಲಿದ್ದಳೂ | ೧೧೦|
ಅಂತರಿಕ್ಷದೊಳು ದುರ್ಗೆ ಆಯುಧವ ಧರಿಸಿಕೊಂಡು
ಅಷ್ಟ ಭುಜಗಳನ್ನು ತೋರಿ ನಿಂತಳಾಗಲೇ | ೧೧೧|
ಬೀಳಲಿದ್ದಿ ಎಲವೂ ಕಂಸ ಆಳಿಗಾರ ನಿನ್ನ ವೈರಿ
ಬಾಲಕೃಷ್ಣ ನಂದನ ಮನೇಲಿ ಬೆಳೆವುತಿದ್ದನೆ | ೧೧೨|
ನಿನ್ನ ಕೊಲ್ಲುವ ವೈರಿ ಅನ್ಯತ್ರ ಬೆಳೆಯುತಾನೆ
ಉನ್ಮತ್ತನಾಗಿ ನೀನು ಎನ್ನ ಕೊಲ್ಲುವಿಯೊ |೧೧೩|
ದುರ್ಗೆಯಾಡಿದ ಮಾತ ಕೇಳಿ ಕಡುನೊಂದು ಮನದಲ್ಲಿ
ಕಂಸನಂದು ಬಿಡಿಸಿದ ದೇವಕಿಯ ಬಂಧನಂಗಳ | ೧೧೪ |
ಮಾಯದ ಸೀತೆಯಲ್ಲಿ ಸಾಯಲಿಕ್ಕೆ ಅಂಜುವರೆ ತಾಯೆ
ನಮ್ಮನ್ಯಾರು ಮುಂದೆ ರಕ್ಷಿಸುವರು |೧೧೫|
ಇತ್ತ ಗೋಕುಲದೊಳಗೆ ಎಚ್ಚರಿತು ಜನರು ಎಲ್ಲ
ಪುತ್ರನ ಪಡೆದಳೆ ಯಶೋದೆ ಎಂದರೂ | ೧೧೬|
ಗಂಡು ಮಗನ ಪಡೆದಳೆಂದು ನಂದಗೋಪಗ್-ಹೇಳಲು
ಕಾಳಿಂದಿಯಲ್ಲಿ ಸ್ನಾನ ಮಾಡಿ ಬಂದನು ಅವನು |೧೧೭|
ಹೇಳಿದ ಪರಿಚಾರಕರಿಗೆ ಬಹಳ ಉಡುಗರೆಯ ಕೊಟ್ಟು
ಬ್ರಾಹ್ಮಣರಿಗೆ ದಕ್ಷಿಣೆ ತಾಂಬೂಲವಿತ್ತನು |೧೧೮|
ಪುತ್ರ ಹುಟ್ಟಿದನೆಂಬ ಅರ್ತಿಯಿಂದಲಿ ನಂದಗೋಪ
ಹತ್ತು ಸಾವಿರ ಗೋವು ದಾನ ಕೊಟ್ಟನು |೧೧೯|
ಬಾಲ ಹುಟ್ಟಿದನೆಂದು ಬಹಳ ಹರುಷದಿಂದಲಿ ಗೋಪ
ಹತ್ತು ಸಾವಿರ ಗೋವು ದಾನ ಕೊಟ್ಟನು |೧೨೦|
ವತ್ಸಪೈರು ಸಹಿತಲಾಗಿ ಚೊಚ್ಚಲು ಸಾಧು ಮಣಕವನ್ನು
ರತ್ನ ಹೇಮ ಚಿನ್ನದಿಂದ ಅಲಂಕರಿಸಿದ |೧೨೧ |
ಮಧು ಎಂಬ ದೈತ್ಯನ ಸದೆಬಡಿದ ಶ್ರೀಹರಿಗೆ
ಮಧುವ ತಂದು ವದನದಲ್ಲಿ ತೊಡೆದರಾಗಲೇ | ೧೨೨ |
ಬಾಯಿಗೆ ಮಧುವನಿಟ್ಟು ನಾಭಿಯ ಛೇದಿಸಿದರು
ಭಾಗೀರಥಿ ಜನಕಗೆ ಮಜ್ಜನಕೆರೆದರು |೧೨೩ |
ತೊಡೆಯ ತೊಳೆದು ಮುಡಿಯ ಕಟ್ಟಿ ನಡುವೆ ಸುತ್ತಿಕ್ಕಿದರು
ಭರದಿ ಗೂಡಾರಗಳ ಕಟ್ಟುತಿದ್ದರು | ೧೨೪ |
ಅಚ್ಯುತಾನಂತಗೆ ಹತ್ತವತಾರಗೆ ಅನಂತಗೆ
ಬಚ್ಚಂಬಲೆಯ ತಂದು ಬಿಸಿ ಮಾಡಿ ಎರೆದರು | ೧೨೫ |
ಮತ್ಸ್ಯಗೆ ಕೂರ್ಮಗೆ ವರಾಹಗೆ ನರಹರಿಗೆ
ವಾಮನ ಭಾರ್ಗವಗೆ ನೀರ ಎರೆದಾರು |೧೨೬ |
ರಾಮಗೆ ಕೃಷ್ಣಗೆ ಬೌದ್ಧಗೆ ಕಲ್ಕಿಗೆ
ಬಚ್ಚಂಬಲೆಯ ತಂದು ಬಿಸಿ ಮಾಡಿ ಎರೆದರು | ೧೨೭ |
ಶಂಬರಾರಿ ಪಿತನು ಹರಿಯು ಜನಿಸದನು ಸಕ್ಕರೆ
ತಂದು ಬೀರಿರೆಂದು ನಂದಗೋಪ ಹೇಳನು | ೧೨೮ |
ಚೆಲುವ ಚೀನಿ ಸಕ್ಕರೆ ಭೇರಿ ಭಂಡಿಯಲಿ ತುಂಬಿ
ಬೀರಿದರು ಯಮುನೆ ಗೋಕುಲದ ಕೇರಿಗೆ |೧೨೯ |
ಪುತ್ರ ಹುಟ್ಟಿದನೆಂದು ಅರ್ತಿಯಿಂದ ನಂದಗೋಪಗೆ
ಮುತ್ತಿನಾರತಿ ಎತ್ತಿದರೆ ಮುತ್ತೈದೆಯರು |೧೩೦ |
ಗೋಕುಲದ ನಾರಿಯರು ಓಕುಳಿಯನಾಡಿದರು
ಅನೇಕ ಹಾಲು ಮೊಸರು ಬೆಣ್ಣೆ ಹೈನಗಳಿಂದ | ೧೩೧|
ಜಾತ ಶ್ರೀಹರಿಗೆ ಗೋಪ ಜಾತಕರ್ಮವನೆ ಮಾಡಿ
ಅನೇಕ ಭೂಷಣಂಗಳ ದ್ವಿಜರಿಗಿತ್ತನು |೧೩೨|
ಹರುಷದಿಂದ ನಂದಗೋಪ ಕರೆಸಿದ ಜೋಯಿಸರ ಬೇಗ
ತರಿಸಿ ಉಡುಗಿರೆ ಕೊಟ್ಟು ಜಾತಕ ಬರೆಸು ನೀನೆಂದ | ೧೩೩ |
ಜ್ಯೋತಿಶ್ಯಾಸ್ತ್ರಿಗಳು ಬಂದು ಜಾತಕವನು ಹೇಳಿದರು
ಅನೇಕ ಸ್ತ್ರೀಯರಿಗೆ ಪತಿಯಾಗುವನೀತನು | ೧೩೪ |
ಹುಟ್ಟಿದ ವೇಳ್ಯದಿ ಬಹು ದುಷ್ಟರ ಸಂಹರಿಸುವ
ಸೃಷ್ಟಿ ಪಾಲಿಸುವಂಥ ದಿಟ್ಟನೀತನು | ೧೩೫ |
ದಶರಾತ್ರಿಯೊಳಗೊಬ್ಬಳಸುರೆಯಾ ಸಂಹರಿಸುವ
ಕೆಲ ಶೂರರರ್ತಿಯಲಿ ಕೊಲುವ ಅಸುರರ | ೧೩೬ |
ಅತ್ತೆಯಾ ಮಕ್ಕಳಿಗತ್ಯಂತ ಪ್ರಿಯನಾಗುವ
ಪಾರ್ಥನ ರಥಕೆ ಸಾರಥಿಯನಾಗುವ |೧೩೭ |
ರೋಹಿಣಿ ನಕ್ಷತ್ರದಲಿ ಜನನವಾದ ಕಾರಣದಿ
ಸೋದರಮಾವಗೆ ಗಂಡಾಂತರ ಸಂದೇಹವಿಲ್ಲವು |೧೩೮ |
ಜಾತಕವ ಕೇಳಿದ ನಂಗೋಪ ಹರುಷದಿಂದ
ಪಟ್ಟಾವಳಿಯ ಉಡುಗಿರೆಯ ಕೊಟ್ಟು ಕಳುಹಿದ | ೧೩೯ |
ರಂಗನುದಿಸಿ ಕೊಂಗೊಳಿಸೆ ಹಿಂಗಿತು ಪಾಪಂಗಳೆಲ್ಲ
ತಿಂಗಳುದಿಸಿದಂತೆ ನಮ್ಮ ಜನ್ಮ ಸಫಲವಾಯಿತು | ೧೪೦ |
ರಾಮಗೆ ಜಾತಕವ ಹೇಳಿ ಹೋದರು ಜೋಯಿಸರು
ಕಾಮಿತವಾಯ್ತು ಜನ್ಮ ಸಫಲವೆಂದರು |೧೪೧ |
ಮೂರು ದಿನದ ಕೊಯ್ಲುಗಳ ನೋಡಬೇಕೆಂದೆನುತ
ಬೀರಿದರು ಯಮುನೆ ಗೋಕುಲದ ಕೇರಿಲಿ | ೧೪೨|
ಕೇರಿಯ ಮುತ್ತೆದೆಯರು ಬಾಗಿಲ ತೆಗೆದುಕೊಂಡು
ದೇವರ ಕೊಯ್ಲು ನೋಡಬಂದರು ಅಂದು |೧೪೩ |
ಶಶಿಮುಖಿಯರೆಲ್ಲರು ಶ್ರೀಕೃಷ್ಣನ ಕೊಯ್ಲು ಎಂದು
ಹೊಸ ಮುತ್ತಿನಾಭರಣವಿಟ್ಟು ಮುಂಜುಡಿಗೆಯುಟ್ಟರು |೧೪೪|
ಕುಸುರು ಕಡೆಗೋಲು ಬೇವು ಯಶೋದೆ ರೋಹಿಣಿ ಕೈಯ
ಶಶಿಮುಖಿಯರು ಕೊಯ್ಲುಗಳ ಪೂಜಿಸಿದರು | ೧೪೫ |
ಗೆದ್ದು ವಿಳ್ಯವನೆ ಕೊಂಡು ಪದ್ಮನಾಭ ಹರಿಯು ಎನಲು ಎದ್ದು
ಸ್ತುತಿಯ ಮಾಡಿ ಕರವ ಮುಗಿದು ನಿಂತರು | ೧೪೬ |
ಎಂಟು ದಿನಗಳಾದುವು ಚಿಂತಿಸಿ ಅವನ ಯಂತ್ರದಿಂದ
ಕೊಲುವ ಹದನ ಎನಗೆ ತಿಳಿಯದೆಂದನು | ೧೪೭ |
ಬೇಗದಿಂದಲಿ ತನ್ನ ಮಂತ್ರಿಗಳ ಕರೆಕಳುಹಿ
ಆಲೋಚನೆಯ ಮಾಡಿ ಹೇಳಿರೆಂದನು | ೧೪೮ |
ಆತನ ಮಂತ್ರಿಗಳು ಪೂತನಿಯ ಕರೆಯ ಕಳುಹಿ
ದಶರಾತ್ರಿಯೊಳಗೆ ಶಿಶುವ ಕೊಲ್ಲು ಎಂದರು | ೧೪೯ |
ಅಸುರೆ ಪೂತನಿಯು ತಾನು ಆತ್ಮದಲಿ ವಿಷವ ಧರಸಿ
ಶಿಶುಗಳಾರಿಸುತ್ತ ಗೋಕುಲಕೆ ಬಂದಳು | ೧೫೦ |
ಸಾರಾವಳಿಯನುಟ್ಟು ಸರದ ಮುತ್ತುಗಳ ತೊಟ್ಟು
ಪುತ್ರರಸುತ್ತ ಗೋಕುಲಕೆ ಅಸುರೆ ಬಂದಳು | ೧೫೧ |
ಯಶೋದೆ ಕೈಯಲೆತ್ತುತಿದ್ದ ಶಿಶುವ ಸೆಳೆದುಕೊಂಡು
ವಿಷದ ಮೊಲೆಯ ಕೊಟ್ಟಳೆ ಅಸುರವೈರಿಗೆ | ೧೫೨ |
ಅಸುರಾರಿ ಪೂತನಿಯ ಅಸು ಸಹಿತಲೆ ಹೀರೆ
ವಸುಧೆಯೊಳಗೆ ಬಿದ್ದಳೆ ಅಸುರ ರೂಪಿಲಿ | ೧೫೩ |
ಅಸುರ ರೂಪವನೆ ಕಂಡು ಅಂಜಿ ಕಂಗೆಟ್ಟು ಜನರು
ಶಿಶುವು ಬದುಕಿದ್ದುದು ಆಶ್ಚರ್ಯವೆಂದರು |೧೫೪|
ಪೂತನಿಯ ವಿಷವನುಂಡ ಭೂತನಾಥಯ್ಯಗೆ
ಭೀತಿಪಟ್ಟನೆಂದು ವಿಭೂತಿ ಇಟ್ಟರು |೧೫೫|
ಅಂದ ಮಾತ ಕೇಳಿ ಬೇಗ ಬಂದನಾಗ ನಂದಗೋಪ
ಬಂದು ಕೋರೆದಾಡೆಯ ಅಸುರೆಯ ಕಂಡನವನು | ೧೫೬ |
ವಸುದೇವನ ಮಾತು ಹುಸಿಯಾದುದಿಲ್ಲವು
ತ್ರಿಕಾಲ ಜ್ಞಾನಿಯೆ ತಿಳಿದು ಹೇಳಿದ |೧೫೭ |
ಗೋಮಯ ಪಂಚಗವ್ಯದಿಂದ ಬಾಲಕಗೆ ರಕ್ಷೆ ಕಟ್ಟಿ
ಗೋಧೂಳಿ ಅಭಿಷೇಕವರೆರೆದರು | ೧೫೮ |
ಅಂದು ಕಂಸಗೆ ಕಪ್ಪವ ನಂದಗೋಪ ಸಲಿಸುತಿರಲು
ಬಂದು ಶೂರರಾಯನ ಸುತನು ಕಂಡನು | ೧೫೯ |
ಗೋಕುಲದೊಳಗುತ್ಪಾತವನೇಕವಾಗಿ ತೋರುತಿವೆ
ಈ ಕ್ಷಣದಿಂದಿಲ್ಲಿರದೆ ಪೋಗು ಎಂದನು | ೧೬೦ |
ಪೂತನಿಯ ಸುಡುತಿರಲು ಜಾತಿ ಪರಿಮಳವೆ ಬಂತು
ವಾಸುದೇವನ ಸ್ತುತಿಸಲು ಸದ್ಗತಿಯಾಯಿತು | ೧೬೧ |
ಕವಡೆ ಬಜ್ಜರ ದಾರಗಳ ಹೊನ್ನ ಕಂಕಣದ ನಡುವೆ
ಕಮಲನಾಭನ ತೋಳು ತೊಡೆಯಲೊಪ್ಪು ತಿದ್ದಿತು |೧೬೨|
ಹಂಚಿ ಕಡುಬು ಪಾಯಸ ಹೊನ್ನ ಹರಿವಾಣದ ಪೂಜೆ
ಕೆಂಚೆಯರು ಮಾಡಿದರು ಸಂತೋಷಗಳಿಂದ |೧೬೩ |
ಸಾರಿಸಿ ಮುತ್ತಿನ ಕಾರಣೆಗಳನ್ನೆ ರಚಿಸಿ
ತೋರಣವ ಕಟ್ಟಿದರೆ ಶಿಖರ ಮಕರಕೆ | ೧೬೪ |
ಜ್ಞಾತಿಗಳೆಲ್ಲ ದಶರಾತ್ರಿಗಳಾಗುತಿರಲು
ಸೂತಕಂಗಳನೆ ಕಳೆದು ಸುಖದಲಿದ್ದರು |೧೬೫ |
ಚಿನ್ನದ ಕೊಪ್ಪರಿಗೆಯೆಳಗೆ ಕನ್ನೆಯರು ನೀರು ಬೆರಸಿ
ಪನ್ನಂಗಶಯನಗೆ ಯಶೋದೆಗೆ ಮೊದಲೆ ಎರೆದರು | ೧೬೬ |
ಹವಳದಾ ಕೊಪ್ಪರಿಗೆಯೊಳಗೆ ಹರದಿಯರು ನೀರು ಬೆರಸಿ
ಬಲರಾಮಗೂ ರೋಹಿಣಿಗೂ ಮುನ್ನ ಎರೆದರು | ೧೬೭ |
ಹರುಷದಿಂದ ನಂದಗೋಪ ಮಂಗಳ ಸ್ನಾನವ ಮಾಡಿ
ಇಂದ್ರಮಾಣಿಕದ ಮಣೆಯ ಮೇಲೆ ಬಂದು ಕುಳಿತನು | ೧೬೮ |
ಮಂಗಳ ಸ್ನಾನವ ಮಾಡಿ ನಂದಗೋಪ ಕುಳ್ಳಿರಲು
ಕಂದರವೆತ್ತಿ ಯಶೋದೆ ರೋಹಿಣಿ ಬಂದು ಕುಳಿತರು | ೧೬೯ |
ಗಾರ್ಗ್ಯರೇ ಮೊದಲಾದ ಅಲ್ಲಿದ್ದ ಬ್ರಾಹ್ಮಣರ ಕರೆಸಿ
ಪುಣ್ಯಾಹವ ಮಾಡಿದರೆ ವಿಧ್ಯುಕ್ತದಿ |೧೭೦|
ಮಿಸುಣಿಯ ಹರಿವಾಣದಲ್ಲಿ ಹೊಸ ಮುತ್ತು ದಾಣಿ ತುಂಬಿ
ಯಶೋದೆಯ ಸುತನ ನಾಮಾಂಕಿತವ ಬರೆದನು | ೧೭೧ |
ಚಿನ್ನದಾ ಹರಿವಾಣದಲ್ಲಿ ಮುತ್ತು ರತ್ನ ದಾಣಿ ತುಂಬಿ
ರೋಹಿಣಿಯ ಸುತನ ನಾಮಾಂಕಿತವ ಬರೆದನು | ೧೭೨|
ಬಲ ಜ್ಞಾನದಿಂದ ಆದಿತ್ಯನಾದ ಕಾರಣದಿಂದ
ಹಲಾಯುಧಕೆ ಬಲರಾಮನೆಂದು ಕರೆದರು |೧೭೩|
ಮೃತ್ಯು ಜ್ಞಾನ ಆನಂದ ಗುಣಪೂರ್ಣನಾದ ಕಾರಣದಿಂದ
ಕೃಷ್ಣನೆಂದು ಕರೆದರೆ ಸಂತುಷ್ಟ ಹರಿಯ | ೧೭೪|
ಗೋವುಗಳು ನಮ್ಮನು ರಕ್ಷಿಸುವನೀತನು
ಗೋವಿಂದನೆಂದರು ಅವರು ಸದಾನಂದನ |೧೭೫|
ವಾಸುದೇವ ಜಗತಿನಲ್ಲಿ ಒಳಗೆ ಹೊರಗೆ ವ್ಯಾಪ್ತನಾದ
ವಾಸುದೇವನೆಂದರು ದೋಷರಹಿತನ | ೧೭೬|
ವಾಸುದೇವನ ಮಾಸನಾಮ ಜನ್ಮನಾಮ ವಿಶ್ವರೂಪ
ನಡೆವ ನಾಮದಿಂದ ಕೃಷ್ಣನೆಂದು ಕರೆದರು | ೧೭೭ |
ನಾಮಕರಣ ಮಾಡಿದ ನಂದಗೋಪ ಹರುಷದಿಂದ
ಬ್ರಾಹ್ಮಣರಿಗೆ ದಕ್ಷಿಣೆ ತಾಂಬೂಲವನಿತ್ತನು |೧೭೮|
ಶಾಲ್ಯಾನ್ನ ಸೂಪ ಭಕ್ಷ್ಯ ಪಾಯಸ ದಧಿ ಧೃತವು
ಭಾಮೆಯರು ಮಾಡಿದರೆ ಸಂತೋಷಗಳಿಂದ | ೧೭೯|
ಮೃಷ್ಟಾನ್ನ ಭೋಜನ ನೆಂಟರಿಗೆ ಇಷ್ಟರಿಗೆ
ವಿಪ್ರರಿಗೆ ಮಾಡಿಸಿ ಕೃತಕೃತ್ಯನಾದನು | ೧೮೦|
ನಂದಗೋಪ ಕೃಷ್ಣ ನಿನ್ನ ಕಂದನೆಂದು ತಿಳಿಯಬೇಡ
ಇಂದಿರಾಪತಿಯೆ ಅವನು ಸಂದೇಹವಿಲ್ಲವು | ೧೮೧ |
ಹತ್ತೆಂಟು ವರುಷ ನೀನು ಕಷ್ಟಪಟ್ಟು ತಪವಿರಲು
ಮತ್ತೆ ನಿನ್ನ ಮನೆಗೆ ಪುರುಷೋತ್ತಮನೆ ಬಂದನು | ೧೮೨ |
ಹನ್ನೆರಡು ವರುಷ ನೀನು ಅರ್ತಿಯಿಂದ ತಪವಿರಲು
ನಿನ್ನ ಬಯಕೆ ಸಲಿಸಲೆಂದು ಪನ್ನಂಗ ಬಂದನು | ೧೮೩ |
ನರನೆ ಬಲರಾಮನಾದ ನಾರಾಯಣನೆ ಕೃಷ್ಣನಾದ
ಭೂಮಿಭಾರ ಇಳುಹಲೆಂದು ಅವತರಿಸಿದರು |೧೮೪ |
ಪನ್ನಂಗ ಬಲರಾಮ ಪರಮಾತ್ಮ ಶ್ರೀಕೃಷ್ಣ
ನಿನ್ನ ಪುತ್ರರೆಂಬ ಬುದ್ಧಿ ಮನದಲ್ಲಿ ಮೂಡದೆ |೧೮೫|
ಆಚಾರ್ಯರ ಮಾತು ವಿಶ್ವಾಸದಿಂದ ತಿಳಿದು ಗೋಪ
ಈತನೀಗ ಮುಕ್ತಿಗೆ ಪ್ರಖ್ಯಾತನೆಂದನು |೧೮೬ |
ರಾಮಕೃಷ್ಣರಿಬ್ಬರಿಗೂ ರೋಹಿಣಿ ಯಶೋದೆಯರು
ಮಾಣಿಕದ ಮುತ್ತಿನಾಭರಣವಿಟ್ಟರು |೧೮೭|
ಖಳಜನರ ತುಳಿದು ಸಂಹರಿಸುವ ಪಾದಗಳಿಗೆ
ಕಿರುಗೆಜ್ಜೆ ಕಾಲಹೆಂಡ ವನಿಟರು |೧೮೮ |
ಸರ್ಪನ ಹೆಡೆಯ ಮೇಲೆ ನಾಟ್ಯವಾಡಿದ ಹರಿಗೆ
ನೂಪುರವನಿಟ್ಟರೆ ಜಾತಿರತುನದ |೧೮೯|
ಜಾನೂರು ಜಂಘಯಲ್ಲಿ ಮೇಲೆ ಕಟಿ ಮಧ್ಯದಲ್ಲಿ
ಮಾಣಿಕದ ಮಣಿಯನುಡುದಾರವಿಟ್ಟರು |೧೯೦|
ಉಡಿಗೆ ಗಂಟೆ ಕಿರುಗೆಜ್ಜೆ ಜಡಿವ ಕಾಂಚಿದಾಮ
ಬಡನಡುವಿಗಿಟ್ಟರು ಮೃಡನ ಪ್ರಿಯೆಗೆ |೧೯೧ |
ಮಲಕು ರತ್ನ ಮಾಣಿಕದ ಹರಳು ಕೆಂಪು ಕೆತ್ತಿಸಿದ
ಹಂಸ ಮಾಟದರಳೋಲೆ ಶ್ರೀಹರಿಗೆ ಇಟ್ಟರು | ೧೯೨ |
ಆರು ಮುತ್ತಿನ ಬಾವಲಿ ಅಣಿಮುತ್ತಿನ ಚೌಕುಳಿ
ರಾಮನ ಕಿವಿಗೆ ಜರಿವ ಕುಂಡಲವನಿಟ್ಟರು |೧೯೩|
ಎಂಟು ಮುತ್ತಿನ ಬಾವಲಿ ಎಂಟು ಮುತ್ತಿನ ಚೌಕುಳಿ
ಕೃಷ್ಣನ ಕಿವಿಗೆ ಜರಿವ ಕುಂಡಲವನಿಟ್ಟರು ೧೯೪|
ಬಾಲಕಿಯರೆಲ್ಲರು ಮೋಹಿಸಬೇಕೆನುತ
ಮೂಗುತಿಯನಿಟ್ಟರು ಮುದ್ದು ಕೃಷ್ಣಗೆ |೧೯೫ |
ಕುಸುಮನಾಭಗೆ ಬಾಲಕಿಯರು ಹಸುರಂಗಿಯ ತೊಡಿಸಿದರು
ಬಲರಾಮಗೆ ತೊಡಿಸಿದರು ಕರಿಯ ಅಂಗಿಯ | ೧೯೬ |
ಮಿತ್ರೆಯರು ರಾಮಕೃಷ್ಣರಿಗೆ ತೊಟ್ಟಿಲಿಕ್ಕಬೇಕೆನುತ
ಎಚ್ಚರಿಸಿದರೆ ಬೇಗ ಅಂದು ವಿಶ್ವಕರ್ಮನ |೧೯೭ |
ಎಂದಿನ ಪುಣ್ಯವೋ ಎಂದಿನ ಸುಕೃತವೋ
ಗೋವಿಂದನ ಸೇವೆ ತನಗೆ ಬಂದಿತೆಂದನು | ೧೯೮ |
ದೇವರ ಸೇವೆ ಎಂದು ಬಹಳ ಸಂತೋಷದಿಂದ
ವೀಳ್ಯವ ಪಿಡಿದನು ಅಂದು ವಿಶ್ವಕರ್ಮನು |೧೯೯|
ಪ್ರೇಮದ ಪ್ರತಿಮೆಯಿಂದ ಚೀನಿ ಕೆಲಸದಿಂದ
ಮಾಣಿಕದ ಮಿಳಿತಾದ ಹಲಿಗೆಗಳಿಂದ |೨೦೦ |
ವಿಶ್ವಕರ್ಮ ತಾನು ಕಲಿತ ಹಸ್ತಕೆಲಸವನೆಲ್ಲ ಹಾಕಿ
ವಿಚಿತ್ರದಿಂದ ತೊಟ್ಟಿಲ ರಚಿಸಿದನಾಗ |೨೦೧|
ತಂದು ತೊಟ್ಟಿಲ ವಿಶ್ವಕರ್ಮನಿಂದು ಕರಗಳ ಮುಗಿದು
ನಂದಗೋಪ ಯಶೋದೆಯ ಮುಂದೆ ಇಳುಹಿದ |೨೦೨ |
ತೊಟ್ಟಿಲ ನೋಡಿ ಗೋಪ ಮೆಚ್ಚಿ ಸಂತೋಷದಿಂದ
ಪಟ್ಟಾವಾಳಿ ಉಡುಗಿರೆಯ ಕೊಟ್ಟು ಕಳುಹಿದ |೨೦೩ |
ಆರು ಖಂಡುಗದ ಅಕ್ಕಿ ನೂರು ಖಂಡುಗದ ಬೇಳೆ
ಅರ್ತಿಯಿಂದ ಹಾಕಿದಾರೆ ವಿಶ್ವಕರ್ಮಗೆ |೨೦೪ |
ಮುತ್ತಿನ ತೊಟ್ಟಿಲಿಗೆ ರತ್ನದ ಕೀಲು ಬಿಗಿದು
ಮಿತ್ರೆಯರು ತೊಟ್ಟಿಲ ಕಟ್ಟುತ್ತಿದ್ದರು |೨೦೫|
ತೊಟ್ಟಿಲ ಮನೆಗೆ ಮೇಲ್ಕಟ್ಟುಗಳ ಕಟ್ಟಿದರು
ಮುತ್ತಿನ ಚಂಡು ತಂದು ನಡುವೆ ಕಟ್ಟಲು |೨೦೬ |
ಕೃಷ್ಣರ ತೊಟ್ಟಿಲಿಗೆ ಪಟ್ಟೆ ಮುಂಜುಡಿಗೆ ಹಾಸಿ
ಮುತ್ತಿನ ಲೋಡು ತಲೆಗಿಂಬನಿಟ್ಟರು |೨೦೭|
ರಾಮರ ತೊಟ್ಟಿಲಿಗೆ ಶಾಲು ಮೈದುಡುಗೆ ಹಾಸಿ
ನೀಲದ ಲೋಡು ತಲೆಗಿಂಬನಿಟ್ಟರು |೨೦೮ |
ದೀಪಗಳನೆ ಹಚ್ಚಿ ಧೂಪದ ಹೊಗೆಯನ್-ಹಾಕಿ
ನಾಕು ಕಡೆ ಸಿಕ್ಕಿಸಿದರೆ ನಂದನಂಬುವ |೨೦೯ |
ಮಂದರೋದ್ಧರ ಹರಿಯ ಇಂದಿರೇಶನ ತೊಟ್ಟಿಲೆಂದು
ನಂದಗೋಪಿ ಹೇಳಿದಳೆ ಬಂಧುಗಳಿಗೆ |೨೧೦|
ಕೇರಿಯ ಮುತ್ತೈದೆಯರು ಬಾಗಿಲ ತೆಗೆದುಕೊಂಡು
ದೇವರ ತೊಟ್ಟಿಲೆಂದು ನೋಡಬಂದರು |೨೧೧|
ನಂದಗೋಪನ ರಾಣಿಯರು ಮಿಂದು ಅರಿಸಿನ ಪೂಸಿ
ಚಂದ್ರಗಾವಿಯನುಟ್ಟು ರವಕೆ ತೊಟ್ಟರೂ |೨೧೨|
ಕೇಶಗಳನ್-ಹಿಕ್ಕಿ ಕಟ್ಟಿ ಸೂಸುವ ಮೊಗ್ಗೆಗಳಿಂದ
ಜಾತಿ ಮಲ್ಲಿಗೆ ಸಂಪಿಗೆಯ ಮುಡಿದರೂ |೨೧೩|
ಕಂಗಳಿಗಂಜನ ಹಚ್ಚಿ ಕಸ್ತೂರಿಯ ತಿದ್ದಿದಾರು
ಮುತ್ತಿನ ಬೊಟ್ಟು ಮೂಗುತಿಯನಿಟ್ಟರೂ |೨೧೪|
ಚಿಂತಾಕು ಮಲಕು ಪೆಂಡ್ಯವೆಂಬ ರತ್ನದ ಸರವು
ಕೆಂಪಿನ ಹವಳದ ಸರವನಿಟ್ಟರೂ |೨೧೫|
ಹಾರ ಸರಗಳನೆ ಹಾಕಿ ತೋಳು ಬೊಟ್ಟುಗಳನೆ ಕಟ್ಟಿ
ಧೋರವಾದ ಮುಂಗೈಯ ಮುರಾರಿಗಿಟ್ಟರು |೨೧೬|
ಕಡಗ ಕಂಕಣಗಳು ರವೆಯ ಉಂಗುರುಗಳು
ನಡವಿನೊಡ್ಯಾಣ ಜಲಕಮಲವಿಟ್ಟರು |೨೧೭|
ಅಂದುಗೆ ಪಾಯ್-ಬೊಟ್ಟು ಕಾಲುಂಗುರ ವೀರಮುದ್ರಿಕೆ
ಚೆಂದವಾದ ಮಿಂಚು ಮಿಂಟಿಗೆಯನಿಟ್ಟರು |೨೧೮|
ಕೃಷ್ಣರಾಮರ ತೊಟ್ಟಿಲಿಗೆ ರೋಹಿಣಿ ಯಶೋದೆಯರು
ಮುತ್ತಿನಾಭರಣವಿಟ್ಟು ಶೃಂಗಾರವಾದರು |೨೧೯|
ರಾಮಕೃಷ್ಣರನೆತ್ತಿಕೊಂಡು ರೋಹಿಣಿ ಯಶೋದೆಯರು
ನೀರ ಹೊಳೆಯ ಮೆಟ್ಟಿ ಪೂಜೆ ಮಾಡುತ್ತಿದ್ದರು |೨೨೦|
ಅಂಗಳವ ಸಾರಿಸಿ ರಂಗವಿಲ್ಲಿಯನಿಕ್ಕಿ
ರಂಭೆಯರು ಕೊಡನ ಪೂಜೆ ಮಾಡುತ್ತಿದ್ದರು |೨೨೧ |
ಹೊಸ್ತಿಲ ಸಾರಿಸಿ ಸುತ್ತ ಕಾಲೆಳೆಯ ತೆಗೆದು
ಮಿತ್ರೆಯರು ಕೊಡನ ಪೂಜೆ ಮಾಡುತ್ತಿದ್ದರು |೨೨೨|
ನಾರಿಯರೆಲ್ಲರು ಲಾಲಿಯ ಪೂಜೆ ಮಾಡಿ
ಮೀರದಿರು ಮೂರು ವರುಷಕೆಂದು ನುಡಿದರು | ೨೨೩ |
ಮಿತ್ರೆಯರೆಲ್ಲರು ತೊಟ್ಟಿಲ ಪೂಜೆ ಮಾಡಿ
ತಪ್ಪದಿರು ಮೂರು ವರುಷಕೆಂದು ನುಡಿದರು | ೨೨೪ |
ಪಟ್ಟಾವಳಿಯ ಸೀರೆ ಬಟ್ಟ ಮುತ್ತಿನ ಕುಪ್ಸವ
ಕೃಷ್ಣನ ತಾಯಿಗುಡುಗಿರೆಯ ಕೊಟ್ಟರು |೨೨೫|
ಸಾರಾವಳಿಯ ಸೀರೆ ಸರದ ಮುತ್ತಿನ ಕುಪ್ಸವ
ಬಲರಾಮನ ತಾಯಿಗುಡುಗಿರೆಯ ಕೊಟ್ಟರು |೨೨೬ |
ಅಂಗನೆಯರೆಲ್ಲರು ಅಂಗಿ ಟೋಪಿಯ ತಂದು
ಬಲರಾಮನ ತಾಯಿಗುಡಿಲ ತುಂಬುತ್ತಿದ್ದರು |೨೨೭ |
ಸಾರಾವಳಿಯ ಅಂಗಿ ಸರದ ಮುತ್ತಿನ ಟೋಪಿ
ಕೃಷ್ಣರಾಯನ ತಾಯಿಗುಡಿಲ ತಂಬುತ್ತಿದ್ದರು |೨೨೮ |
ಮಿತ್ರೆಯರಿಬ್ಬರು ಮುತ್ತಿನಾರತಿ ಪಿಡಿದು
ಕೃಷ್ಣರಾಮರಿಗೆ ಎತ್ತಿ ಬೆಳಗುತ್ತಿದ್ದರು |೨೨೯ |
ನಾರಿಯರಿಬ್ಬರು ನೀಲದಾರತಿಯ ಪಿಡಿದು
ಕೃಷ್ಣರಾಮರಿಗೆ ಎತ್ತಿ ಬೆಳಗುತ್ತಿದ್ದರು |೨೩೦ |
ಕಂದನ ಕಾಲ ದಿಶೆಯಲಿ ಕಡಲೆ ಗುಗ್ಗುರಿ ಇಟ್ಟು
ಅಂಗನೆಯರು ತಂದು ತೊಟ್ಟಿಲೊಳಗೆ ಇಟ್ಟರು |೨೩೧ |
ಅಡಿಗೆಯ ಮನೆಯೊಳಗೆ ಅರೆವ ಗುಂಡಪ್ಪನ
ಹರದಿಯರು ತಂದು ತೊಟ್ಟಿಲೊಳಗೆ ಇಟರು | ೨೩೨ |
ಕೇಶವಯ್ಯನ ಕೊಳ್ಳಿ ಮಾಧವಯ್ಯನ ತನ್ನಿರೆಂದು
ಕಾಂತೆಯರು ಕಂದನ ಆಡಿಸಿದರು | ೨೩೩ |
ಹೃಷಿಕೇಶನ ಕೊಳ್ಳಿ ಪದ್ಮನಾಭನ ತನ್ನಿರೆಂದು
ಪದ್ಮನಿಯರು ಕಂದನ ಆಡಿಸಿದರು |೨೩೪|
ಪ್ರಳಯ ಕಾಲದ ಜಲಧಿಯಲಿ ಆಲದೆಲೆಯಲಿ ಮಲಗಿದ್ದ
ಕಮಲನಾಭನ ತಂದು ತೊಟ್ಟಿಲೊಳಗೆ ಇಟ್ಟರು | ೨೩೫ |
ಕ್ಷೀರಸಾಗರದಲ್ಲಿ ಲಕ್ಷ್ಮೀಲೋಲನಾಗಿದ್ದ
ಶ್ರೀ ಹರಿಯ ತಂದು ತೊಟ್ಟಿಲೊಳಗೆ ಇಟ್ಟರು |೨೩೬ |
ಮುದ್ದು ರಾಮಕೃಷ್ಣರ ವೃದ್ಧ ಮುತ್ತೈದೆಯರು
ವಿಧ್ಯುಕ್ತದಿಂದ ತೊಟ್ಟಿಲೊಳಗೆ ಇಟ್ಟರು |೨೩೭|
ಶಶಿಮುಖಿಯರೆಲ್ಲರು ಮುಸಲಾಯುಧನ ತೊಟ್ಟಿಲೆಂದು
ಕುಶಲ ರಾಗಂಗಳಿಂದ ಪಾಡುತ್ತಿದ್ದರು |೨೩೮ |
ರೋಹಿಣಿ ಯಶೋದೆಯರು ಮಿಸುಣಿ ಸರಪಣಿಯ ಪಿಡಿದು
ದಶಾವತಾರಗಳಿಂದ ಪಾಡುತ್ತಿದ್ದರು |೨೩೯|
ಮತ್ಸ್ಯನಾಗಿ ಮುನ್ನ ಬಂದಿ ಕುಕ್ಷಿಚೋರನ ಕೊಂದಿ
ಪುತ್ರನಾದ ಅಜಗೆ ವೇದವಿತ್ತ ಹರಿಗೆ ಜೋ |೨೪೦ |
ಸುರರು ಅಸುರರು ಕೂಡಿ ಶರಧಿಯ ಮಥನ ಮಾಡೆ
ಇಳಿಬೆಟ್ಟ ಬೆನ್ನಿಲೆತ್ತಿದ ಕೂರ್ಮರೂಪ ಜೋ |೨೪೧ |
ಸುರುಳಿಯಾಗಿ ಸುತ್ತಿದ ಭೂಮಿ ಕೋರೆದಾಡೆಯಿಂದ ತಂದಿ
ಹರಿ ಹಿರಣ್ಯಾಕ್ಷನ ಕೊಂದಿ ವರಾಹರೂಪಗೆ ಜೋ |೨೪೨ |
ಮಗನ ಮುಂದೆ ಹಿರಣ್ಯಕನ ಕರುಳ ಬಗದು ಉಗುರಿನಿಂದ
ನರಮೃಗರೂಪನಾದ ನರಹರಿಯೆ ಜೋ |೨೪೩|
ಬಲಿಯ ಪಾತಾಳಕ್ಕೆ ಮೆಟ್ಟಿ ನೆಲನ ಈರಡಿಯ ಮಾಡಿದಿ
ಚೆಲುವ ವಾಮನನ ತ್ರಿವಿಕ್ರಮನೆ ಜೋ |೨೪೪|
ಎರಡು ಹತ್ತೊಂದು ಬಾರಿ ವೀರ ಕ್ಷತ್ರಿಯರ ಕೊಂದಿ
ಧಾರುಣಿಯ ವಿಪ್ರರಿಗಿತ್ತ ಪರಶುರಾಮ ಜೋ | ೨೪೫ |
ವಾರಿಧಿ ಕಟ್ಟಿ ದಶಗ್ರೀವನ ಶಿರವ ತರಿದಿ
ಜಾನಕಿಯತಂದಿ ದಶರಥ ರಾಮನೆ ಜೋ |೨೪೬ |
ನಂದಗೋಕುಲದಲ್ಲಿ ಪೂರ್ಣಚಂದ್ರನಾಗಿ ಜನಿಸಿದಿ
ಕಂದನಾಗಿ ಪೂತನಿಯ ಕೊಂದಿ ಕೃಷ್ಣ ಜೋ |೨೪೭ |
ಮುದ್ದು ಸ್ತ್ರೀಯರ ವ್ರತವನು ಬುದ್ಧರೂಪದಿಂದ ಅಳಿದಿ
ವೃದ್ಧ ವೇಷದಿಂದ ತ್ರಿಪುರರ ಗೆದ್ದ ಹರಿಯೆ ಜೋ |೨೪೮ |
ಹಯವನೇರಿ ದಾಳಿ ಮಾಡಿ ಸುಜನರಿಗೆ ಸುಖವನಿತ್ತಿ
ಹಿಡಿದ ಕತ್ತಿಯಾಯುಧವನು ಪಡೆದ ಕಲ್ಕಿ ಜೋ | ೨೪೯ |
ಜಗವನೆಲ್ಲ ಬಸುರೊಳಗೆ ಅಡಗಿಸಿದ ಶ್ರೀಹರಿಯ
ಮಗುವೆಂದು ತೂಗಿದರೆ ಕಮಲನಾಭನ |೨೫೦| ಜೊ ಜೊ
ಹತ್ತವತಾರದಿಂದ ವಿಸ್ತರಿಸಿ ಹರಿಯ ಗುಣವ
ಮುಕ್ತಳಾದೆನೆಂದು ಗೋಪಿ ನಗುತ್ತಲಿದ್ದಳು |೨೫೧ |
ಮುತ್ತೈದೆಯರು ಮುಂದೆ ಬಂದು ಮುತ್ತಿನ ಕದವ ಪಿಡಿದು
ಹೊಸ್ತಿಲೊಳಗೆ ಗಂಡನ್-ಹೆಸರ ಹೇಳು ಎಂದರು |೨೫೨|
ಅಕ್ಕ ಕೇಳೆ ನಮ್ಮ ಬಾಣಂತಿ ನಿಲ್ಲಲಾರಳು
ಹತ್ಯಾವು ಶೀತ ಅಂಗಾಲಿಗೆಂದರು |೨೫೩|
ತಾಯೆ ಕೇಳೆ ನಮ್ಮ ಬಾಣಂತಿ ನಿಲ್ಲಲಾರಳು
ಏರ್ಯಾವು ಶೀತ ಅಂಗಾಲಿಗೆಂದರು | ೨೫೪ |
ನಂದಗೋಪನ ರಾಣಿಯರು ನಿಂದು ಅರಸಿನವ ಪೂಸಿ
ನಂದಗೋಪನ ಕುಟುಂಬವಿದಕೆ ಬಂದಿತೆಂದರು | ೨೫೫ |
ಮಿತ್ರೆಯರಿಬ್ಬರು ಹೊಸ್ತಿಲ ಪಿಡಿದು ನಿಂತು
ಅರ್ತಿಯಿಂದ ಗಂಡನ್-ಹೆಸರ ಹೇಳುತ್ತಿದ್ದರು |೨೫೬ |
ನಾರಿಯರಿಬ್ಬರು ಬಾಗಿಲ ಹಿಡಿದು ನಿಂತು
ಬೇಗದಿಂದ ಗಂಡನ್-ಹೆಸರ ಹೇಳುತ್ತಿದ್ದರು |೨೫೭|
ತುಂಬಿದ ಕೊಡನ ತಂದು ಕಂದನ ಕಾಲ ದಿಶೆಯಲಿಟ್ಟು
ಅಂಗನೆಯರು ಕದವ ನಂಬಿ ನಿಂತರು | ೨೫೮ |
ಕಡಲೆ ಗುಗ್ಗುರಿ ಉಪ್ಪು ರೊಟ್ಟಿ ಒಡೆದಳೀಕೆ ಬಿಳಿಯಲೆ
ಕಡು ಬೇಗದಿಂದ ಬಾಗಿನವ ಕೊಟ್ಟರು |೨೫೯|
ಚಕ್ಕುಲಿ ಕರುಜೆಯಕಾಯಿ ಹಪ್ಪಳ ಸೆಂಡಿಗೆಯು
ಎಪ್ಪತ್ತು ಬಗೆಯ ಬಾಗಿನವ ಕೊಟ್ಟರು |೨೬೦|
ಬಾಲಕಿಯರೆಲ್ಲರು ಬಾಗಿನಗಳ ತೆಗೆದುಕೊಂಡು
ಬೇಗದಿಂದ ತಮ್ಮ ಮನೆಗೆ ಪೋಗುತ್ತಿದ್ದರು |೨೬೧ |
ಕರ್ಮಬಂಧನಿಲ್ಲದವಗೆ ಜನ್ಮನಕ್ಷತ್ರವೆಂದು
ತನ್ನ ಬಂಧುಗಳ ಕೂಡಿ ಉತ್ಸಾಹ ಮಾಡಿದರು |೨೬೨ |
ಆಗ ಕಂಸ ಶಕಟನ ಬೇಗದಿಂದ ಕರೆಯ ಗಳುಹಿ
ಬಂಡಿಯರೂಪವನೆ ಧರಿಸಿ ಬಾ ಎಂದನು |೨೬೩|
ಕೇಳಿದ ಶಕಟ ತಾನು ಬಹಳ ಕೋಪವನ್ನೆ ತಾಳಿ
ಬಂಡಿರೂಪವನ್ನೆ ಧರಿಸಿ ಬಂದು ನಿಂತನು |೨೬೪|
ಮಾವ ಕಳುಹಿಸಿದ ಒಂದುಚೂರ್ಣ ಕೆಲಸದ ಬಂಡಿ
ರಾಯ ರಾಮ ಕೃಷ್ಣರಿಗೆ ಆಡ ಕಳುಹಿದ |೨೬೫|
ಬಂಡಿಯ ಕೆಳಗೆ ಗೋಪಿ ಪುಂಡರೀಕಾಕ್ಷನಿಟ್ಟು
ಬ್ರಾಹ್ಮಣರ ಸಂತರ್ಪಣಯೆ ಮಾಡ ಹೋದಳು |೨೬೬ |
ಸ್ತನ್ಯಪಾನ ತಡೆಯಿತೆಂದು ತನ್ನ ಕೋಪದಲಿ ಬಂಡಿ
ಚುಮ್ಮಿವಡೆಯೆ ಹರಿಯು ಭಂಡಿ ಚೂರ್ಣವಾಯಿತು |೨೬೭ |
ಶಕಟದ ಒಳಗೆ ಒಬ್ಬ ವಿಕಟ ಅಸುರ ಕೆಳಗೆ ಬಿದ್ದ
ಅಕಟ ಶಿಶು ಅಂಜಿತೆಂದು ಅಪ್ಪಿಕೊಂಡಳು | ೨೬೮ |
ಬ್ರಾಹ್ಮಣರ ಕೈಯಿಂದ ವೇದ ಮಂತ್ರಗಳಿಂದ
ಬಾಲಕಗೆ ರಕ್ಷೆಯನ್ನೆ ಮಾಡಿಸಿದಳು |೨೬೯|
ಮೂರು ತಿಂಗಳಾಗುತ್ತಿರಲು ರೋಹಿಣಿ ಯಶೋದೆಯರು
ನೀರ ಹೊಳೆಯ ಮೆಟ್ಟಿ ಪೂಜೆ ಮಾಡುತ್ತಿದ್ದರು |೨೭೦|
ಕೃಷ್ಣರಾಮರಂಗಿಗಳ ರೋಹಿಣಿ ಯಶೋದೆಯರು
ಮುತ್ತಿನ ಕೊಡದೊಳದ್ದಿ ಒಗೆಯುತ್ತಿದ್ದರು |೨೭೧|
ರಾಮಕೃಷ್ಣರಂಗಿಗಳ ಯಶೋದೆ ರೋಹಿಣಿಯರು
ನೀರ ಕೊಡದೊಳಗೆ ಅದ್ದಿ ಒಗೆಯುತ್ತಿದ್ದರು |೨೭೨|
ಪ್ರಳಯ ಕಾಲದ ಜಲಧಿಯಲ್ಲಿ ಆಲದೆಲೆಯಲಿ ಮಲಗಿದ್ದ
ಕಮಲನಾಭನ ತೊಡೆಯಲಿಟ್ಟು ಮೊಲೆಯ ಕೊಟ್ಟಳು |೨೭೩|
ಕ್ಷೀರ ಸಾಗರದಲ್ಲಿ ಲಕ್ಷ್ಮೀಲೋಲನಾಗಿದ್ದ ಹರಿಯ
ಕಾಲ ಮೇಲೆ ಮಲಗಿಸಿ ಹಾಲ ಎರೆದಳು |೨೭೪|
ಮಂದಾಕಿನೀ ಜನಕಗೆ ಮೈಲಿ ಧೂಳಾಯಿತೆಂದು
ಒಂದು ಕೊಪ್ಪರಿಗೆ ನೀರ ತಂದು ಎರೆದಳು |೨೭೫|
ಕಂದರ್ಪಟೋಕಿ ಲಾವಣ್ಯವನ್ನು ಜರಿವವಗೆ
ಚೆಂದವಡಿಸಿದೆಂದು ಗೋಪಿ ಶೃಂಗರಿಸಿದಳು | ೨೭೬|
ಬೆನ್ನ ಹಿಂದೆ ನಿಂತುಕೊಂಡು ಕಣ್ಣು ಮುಚ್ಚಿ ತಿರುಗಿ ನೋಡಿ
ಚಿನ್ನ ನಿನ್ನ ಮುದ್ದು ತಾರೆಂದಳೆಶೋದೆ |೨೭೭ |
ಹಾಲು ಸುರಿವ ಗಲ್ಲದಲ್ಲಿ ನೀಲದ ಸರಪಣಿಯ ತುಂಬಿ
ಬಾಲ ನಿನ್ನ ಜೊಲ್ಲು ಎನ್ನ ಮೇಲೆ ಸುರಿಯಿತು |೨೭೮ |
ಅಂಗಳದೊಳಗೆಲ್ಲ ಅಂಬೆಗಾಲನಿಕ್ಕುತ
ರಂಗ ನಿನ್ನ ತೊಂಗಾಲ ತೋರಿಸೆಂದಳು |೨೭೯|
ಪಕ್ಷಿವಾಹನನಾಗಿ ಮುನ್ನ ಮತ್ತಗಜನ ತಾಪವಳಿದಿ
ಅಚ್ಯುತ ನೀ ಆನೆ ಆಡೆಂದಳೆಶೋದೆ |೨೮೦ |
ತಾರಕ ಬ್ರಹ್ಮನ ಪಡೆದ ಆದಿಮೂರ್ತಿ ನೀನು
ತಾರಮ್ಮಯ್ಯನಾಡೆಂದಳೆಶೋದೋ |೨೮೧ |
ಒಪ್ಪದಿಂದ ಸುರರಿಗೆ ಸುಧೆಯ ನೀಡಿದ ಕೈಯೊಳಗೆ
ಚಪ್ಪಳಿಕ್ಕೊ ರಂಗನೆಂದಾಡಿಸಿದಳೂ |೨೮೨|
ಪ್ರೇಮದಿಂದ ಶ್ರೀದೇವಿಯರ ಆಲಿಂಗನೆಯ ಮಾಳ್ಪ ಕೈಲಿ
ತೋಳನಾಡೋ ರಂಗನೆಂದಾಡಿಸಿದಳೂ |೨೮೩|
ಅಷ್ಟು ಹೇಳಲೆಶೋದೆ ಅಷ್ಟನೆಲ್ಲ ಆಡಿದ
ಕೃಷ್ಣನ ದಯವು ನಮಗೆ ಕೀರ್ತಿ ಸಲಹಲೀ |೨೮೪|
ಪುತ್ರನೆಂದು ಯಶೋದೆ ಎತ್ತಿ ತೊಡೆಯ ಮೇಲಿಡಲು
ಬೆಟ್ಟದಂತೆ ಜರಿಯೆ ಕೆಳಗೆ ಇಟ್ಟಳಾಗಲೆ |೨೮೫ |
ಅದ್ಭುತವಾದ ಶಿಶುವ ಕಂಡು ಆದಿಪುರುಷನೆಂದು ಮೈ
ಉಬ್ಬಿ ಸ್ತುತಿಯ ಮಾಡೆ ಕೃಷ್ಣ ಬಲೆಯ ಬೀಸಿದ | ೨೮೬ |
ನಿತ್ಯತೃಪ್ತ ವಾಸುದೇವ ಹಸಿದನೆಂದನ್ನವಾ
ತುತ್ತು ಮಾಡಿ ಉಣಿಸಿದಳು ಮೃಷ್ಟಾನ್ನವಾ |೨೮೭|
ತುತ್ತು ದೊಡ್ಡ ಮಾಡೆ ಅಮ್ಮ ಅಷ್ಟನೆಲ್ಲ ಉಂಬೆನೆನಲು
ಎನ್ನಪ್ಪ ನೀ ಉಣುವಿಯಾ ಎಂದಪ್ಪಿಕೊಂಡಳು ||೨೮೮ |
ಹಸಿದೆನೆಂದು ಶ್ರೀಕೃಷ್ಣ ಮುಸುಕ ಪಿಡಿದು ಎಳೆಯುತಿರಲು
ಹಸನಾದ ತನು ಮೇವುಗಳ ಕೊಟ್ಟಳು |೨೮೯|
ತನುವ ಒಲ್ಲೆನೆಂದು ಛಲವ ಮಾಡಿ ಅಳುತಿರಲು
ಬಾಲ ರಮಾರೂಪನಿಗಿನ್ನೆಂತು ಮಾಡಲೀ |೨೯೦ |
ಅಮ್ಮ ಹರಿದೆನೆಂಬನು ಅಮ್ಮಿಯಾ ಒಲ್ಲೆನೆಂಬ
ಸಮ್ಮನೆ ಹೊರ ಅಂಗಳಕೆ ತಂದಳೂ |೨೯೧ |
ಪೂರ್ಣಚಂದ್ರ ಉದಿಸಿರಲು ಮೇಲೆ ಇದ್ದ ಚಂದ್ರನನ್ನು
ತಾರೆ ಎನ್ನ ಕೈಯಲೆಂದು ತಾಯ ಕಾಡಿದಾ |೨೯೨ |
ಏನ ಹೇಳುವಿಯೊ ರಂಗ ಮೇಲೆ ಇದ್ದ ಚಂದ್ರನನ್ನು
ಹ್ಯಾಗೆ ತರಲಿ ಅಳವಲ್ಲ ಎಂದಳೆಶೋದೆ | ೨೯೩ |
ಶಂಬರಾರಿಪಿತನ ಗೋಪಿ ಅಂಬರಕ್ಕೆ ಪಿಡಿದೆತ್ತ
ಬಂದು ಇಳಿದ ಕರತಳದಿ ಚಂದ್ರನಾಗಲೆ |೨೯೪ |
ಬಂದು ಇಳಿದ ಚಂದ್ರನ ಇಂದಿರೇಶ ನೋಡಿ ನಕ್ಕು
ಕನ್ನಡಿಯಂತೆ ತಾಯ್ದೆ ತೋರಿ ಮೇಲಕ್ಕೆತ್ತಿದ |೨೯೫ |
ಕರದಲ್ಲಿದ್ದ ಚಂದ್ರನ ಕನ್ನಡಿಯಂತೆ ನೋಡಿ
ಪುರುಷೋತ್ತಮ ಮುಗುಳು ನಗೆಯ ನಗುತಲಿದ್ದನು |೨೯೬ |
ಹಸ್ತಗತನಾದ ಚಂದ್ರನ ಹಾರಿಸಿದನಂಬರಕ್ಕೆ
ಕೃಷ್ಣನ ನೋಡಿ ಗೋಪಿ ಬೆರಗು ಬಿದ್ದಳು |೨೯೭ |
ಪಟ್ಟೆ ಮಂಚದ ಮೇಲೆ ಪರಮಾತ್ಮ ಪವದಡಿಸೆಂದು
ಮುತ್ತಿನಾ ಲೋಡು ತಲೆದಿಂಬನಿಟ್ಟಳು |೨೯೮ |
ಪಟ್ಟೆಮಂಚ ಇಳಿದು ಕೃಷ್ಣ ಹೊಕ್ಕು ಊರು ಮನೆಗಳ
ಅಟ್ಟುಳಿಯ ಮಾಡುವನು ಸುತ್ತ ನರೆಗಳಾ |೨೯೯ |
ಹೆತ್ತ ತುಪ್ಪ ಹಾಲು ಬೆಣ್ಣೆ ಮತ್ತೆ ಕೆನೆಮೊಸರ ಗಿಣ್ಣ
ಕೃಷ್ಣರಾಮ ಮೆಲ್ಲಿರೆಂದು ಕೈಲಿ ಕೊಟ್ಟರು | ೩೦೦ |
ಕಾಲ ಅಂದುಗೆಯನಿಟ್ಟು ಕಮಲದ್-ಹೂವ ಕೈಲಿ ಕೊಟ್ಟು
ಬಾಲ ಎನ್ನ ಕಾಡದಿರೆಂದಳೆಶೋದೆ |೩೦೧ |
ರಂಗ ಎನ್ನ ಮಾತ ಕೇಳು ಹೆಂಗಳ ಕಾಡದಿರು
ಇಂತೆಂದು ಬುದ್ಧಿ ಹೇಳಿ ಮಂದಿರ ಪೊಕ್ಕಳು |೩೦೨ |
ಜನನಿ ಪೋಗುತಿರಲು ಕಂಡು ಮುಗುಳು ನಗೆಯ ನಗುತ
ತಿರುಗಿ ಬಾಹೆನೆಂದು ಬೀದಿ ಹೊರಗೆ ಬಂದನು | ೩೦೩ |
ರನ್ನದ ತಳಿಗೆಯ ಬಿಡಿಸಿಕೊಂಡು ಚೆನ್ನ ಕೃಷ್ಣ ಓಡಿ ಹೋದ
ಕನ್ನೆಯರ ಕೂಡೆ ಸರಸವಾಡುತ್ತಿದ್ದನು |೩೦೪|
ಅಂಗನೆಯರ ಮನೆಯ ಮುಂದೆ ಚೆಂದವಾದ ದ್ರಾಕ್ಷಿ ಬೀಳು
ಮುಂದೆ ಸೆರಗ ಪಿಡಿದು ಅವರ ಭಂಗಪಡಿಸಿದ |೩೦೫ |
ಅಂಗನೆಯರೆಲ್ಲರು ರಂಗನ್-ಹಾವಳಿಗಾರನೆಂದು
ನಂದಗೋಪನ ರಾಣಿ ಮುಂದೆ ಬಂದು ಹೇಳಲು | ೩೦೬ |
ಫುಲ್ಲನಾಭನ ಧಾಳಿಗಂಜಿಪಳ್ಳಿ ಬಿಟ್ಟು ಓಡಿ ಪೋಗಿ
ಗೊಲ್ಲನಿಲ್ಲದ ವೃಕ್ಷದಾ ವನವ ಸೇರುವಾ |೩೦೭ |
ಏನೆಂತ ತಾಳುವೆವು ನಾವು ಕೃಷ್ಣನ ಹಾವಳಿಯ
ನಂದಗೋಪನ ರಾಣಿ ಮುಂದೆ ಬಂದು ದೂರಲು | ೩೦೮ |
ಬಾಲಕಿಯರೆಲ್ಲರು ದೂರು ಹೇಳ ಬಂದಿರೀ
ಅದೇನು ಮಾಡಿದ ಕೃಷ್ಣನೆನಗೆ ಹೇಳಿರೆಂದಳು |೩೦೯ |
ದಟ್ಟಡಿ ಇಡುವ ಬಾಲ ಬಟ್ಟಲ ತಾಲಿಗೆ ಇಡುವ
ಅಟ್ಟುಳಿಯ ಮಾಡುವನು ಸುತ್ತ ನೆರೆಗಳ |೩೧೦ |
ಅರುಣ ಉದಯದಲ್ಲಿ ಎದ್ದು ಸಪ್ಪಳಿಲ್ಲದ್ದಾಂಗೆ
ಒಳಗೆ ಪೊಕ್ಕು ನಮ್ಮ ಬಡಿದು ಬವಣೆಬಡಿಸುವ |೩೧೧ |
ಕರಿಯದ ಮುನ್ನ ಬಂದು ಕರುಗಳ ಕಣ್ಣಿ ಬಿಡಿಸಿ
ತುರುಗಳ ಉಣಿಸಿ ಕೃಷ್ಣ ಹೋಗುತ್ತಿದ್ದನು |೩೧೨ |
ಹಾಲು ಕರಿವಲ್ಲಿಗೆ ನೀಲವರ್ಣ ಕೃಷ್ಣ ಬಂದು
ಹಾಲು ಕುಡಿದು ಗಡಿಗೆ ಒಡೆದು ಓಡಿ ಹೋದನು |೩೧೩|
ಮೊಸರ ಕಡೆಯುವಲ್ಲಿಗೆ ಕುಸುಮನಾಭ ಕೃಷ್ಣ ಬಂದು
ಮೊಸರ ಕುಡಿದು ಗಡಿಗೆ ಒಡೆದು ಓಡಿ ಹೋದನು |೩೧೪|
ಕಡೆಯುವಲ್ಲಿಗೆ ಬಂದು ಕಡಗೋಲ ಪಿಡಿದು ನಿಂತು
ಕಡಗೋಲ ಮುರಿದು ಗಡಿಗೆ ಒಡೆದು ಹೋದನು |೩೧೫|
ಏಸು ದೈವಕ್ಕೆ ನಾವು ಮೀಸಲೆಂದು ಮಾಡಿದೆವು
ವಾಸುದೇವ ಬಂದು ಮೀಸಲಳಿದು ಪೋದನು |೩೧೬|
ಗಂಡ ಹೆಂಡಿರು ಮಲಗಿರಲು ಭಂಡು ಮಾಡಿ ಪೋದನು
ಪುಂಡರೀಕಾಕ್ಷನ್-ಹಾವಳಿಯ ತಾಳಲಾರೆವು |೩೧೭|
ಕತ್ತಲೆ ಮನೆಯು ಎಂದು ಬಚ್ಚಿಟ್ಟು ಬರಲು ನಾವು
ಕೃಷ್ಣ ಒಳಗೆ ಹೊಕ್ಕು ಹಾಲು ಬೆಣ್ಣೆ ಕದ್ದನು |೩೧೮|
ಮಣಿಗಳ ಪ್ರಭೆಗಳಿಂದ ಒಳಗೆ ಹೊಕ್ಕು ಬೆಳಕು ಮಾಡಿ
ಮದನನಯ್ಯ ಹಾಲು ಮೊಸರ ಕುಡಿಯುತ್ತಿದ್ದನು |೩೧೯|
ಕೋಲು ಕೊಂಡು ಕೊಲ್ಲ ಪೋದರೆ ಬಾಲೆಯರ ಬಿಗಿದಪ್ಪಿ
ಮೇಲಿನ ಸೆರಗು ತೆಗೆದು ಒಡಿ ಹೋದನು |೩೨೦ |
ನೆಲುವು ನಿಲುಕದಿದ್ದರೆ ವರಳ ಮೇಲೆ ಏರಿಕೊಂಡು
ವರಳ ಮೆಟ್ಟಿ ಹಾಲು ಹರವಿಗೆ ಬಾಯನೊಡ್ಡಿದ |೩೨೧ |
ಸುದಾಮನ ಹೆಗಲ ಮೇಲೆ ಏರಿಕೊಂಡು ಶ್ರೀಕೃಷ್ಣ
ಚೋರನಂತೆ ಶಿಕ್ಕದಳಿಗೆಯ ಬೆಣ್ಣೆಯ ಕದ್ದ ೩೨೨ |
ಅಷ್ಟು ಎಂಜಲು ಮಾಡಿದ ಒಂದಿಷ್ಟು ಮೀಸಲಿಲ್ಲದ್ದಾಂಗೆ
ಅಷ್ಟಭಾಗದ ದೇವತೆಯೆ ನಮ್ಮ ಕೃಷ್ಣನೆ |೩೨೩ |
ವತ್ಸದ ಬಾಲಕ್ಕೂ ಮಕ್ಕಳ ಚಂಡಿಕೆಗೂ
ಹತ್ತ ಕಟ್ಟಿ ಹರಿಯು ಕುಣಿದು ನಗುತ ನಿಂತನು |೩೨೪|
ಹದ್ದನೇರಿ ತಿರುಗುವವಗೆ ಬುದ್ಧಿ ಹೇಳಬಾರದೆ
ಮುದ್ದು ಮಾಡಿ ಕೆಡಿಸಿ ಬಸವನ ಮುದ್ರೆ ಒತ್ತಿದಿ |೩೨೫|
ನಿಮ್ಮ ಕೂಡೆ ನಿಷ್ಠುರ ಇನ್ನ ಧರ್ಮವಲ್ಲ ನಮಗೆ
ಸುಮ್ಮನಿರಲು ನೆರೆಯ ರಂಗನಿನ್ನು ತಾಳಲಾರೆವು | ೩೨೬ |
ಗೊಲ್ಲತಿಯರ ಹೊಂತತನವ ಎಲ್ಲ ನಾನು ಬಲ್ಲೆನು
ಫುಲ್ಲನಾಭನ ದೂರು ನಿಮಗೆ ಸಲ್ಲದೆಂದಳು |೩೨೭ |
ಬಾಲಕಿಯರ ಮಾತುಗಳ ಕೇಳಿ ನಾನು ಬಲ್ಲೆನು
ಬಾಲಕೃಷ್ಣನ ದೂರು ನಿಮಗೆ ಸಲ್ಲದೆಂದಳು | ೩೨೮ |
ಕೊಳಿಕೆಯಲಿ ಎನ್ನ ಮನೆಲಿ ಹಾಲು ಕೊಸರು ಇಟ್ಟಿರಲು
ಕೂಡೆ ಹಾಕಿದುಳಿದ ಮೊಸರ ಕುಡಿದನೆಂಬಿರಿ |೩೨೯ |
ಕಳಸಿಗೆ ಬೆಣ್ಣೆ ಎನ್ನ ಮೆಲಿ ಕಂಡ ಕಡಯಲಿಟ್ಟು
ಕೂಡೆ ಹಾಕಿದ ಬೂದ ಬೆಣ್ಣೆಯ ಮೆದ್ದನೆಂಬಿರಿ |೩೩೦ |
ಇಕ್ಕಿದ ಹಾಲು ಮೊಸರು ಬೆಕ್ಕಿಗೆ ಇಕ್ಕಿ ಹೋದ
ಚಿಕ್ಕವನ ದೂರುವಿರಿ ಮಕ್ಕಳಲ್ಲವೆ |೩೩೧ |
ಅಂಗನೆಯರೆಲ್ಲರು ರಂಗನ ದೂರುವಿರಿ
ಬಾಲಕನ ದೂರುವಿರಿ ಕಂದರಿಲ್ಲವೆ |೩೩೨|
ಬಾಲಕಿಯರೆಲ್ಲರು ಬರಿದೆ ದೂರು ಮಾಡುವಿರಿ
ನೀವು ಕೃಷ್ಣನ ಹಿಡಿದುಕೊಂಡು ಬನ್ನಿರೆಂದಳು |೩೩೩ |
ಆಗಲೀ ಕೇರಿಯೊಳಗೆ ಬಾರದಿದ್ದಾನೊ ಕೃಷ್ಣ
ಬೇಗದಿಂದ ತಮ್ಮ ಮನೆಗೆ ಪೋಗುತ್ತಿದ್ದರು |೩೩೪ |
ಅವರು ಬರುವುದನು ಕಂಡು ಅವರ ಮನೆಗಳಿಗೆ ಹೊಕ್ಕು
ಕೊಡದ ಮೊಸರು ಹಾಲು ಬೆಣ್ಣೆ ಸವಿಯುತ್ತಿದ್ದನು |೩೩೫|
ಕೈಯಲಿ ಬೆಣ್ಣೆ ಬಾಯಲ್ಲಿ ಬೆಣ್ಣೆ ಮನೆಯೊಳಗೆ ಸುರಿದ ಹಾಲು
ನಿಮ್ಮಮ್ಮಗೆ ತೋರ್ಪೆವೆಂದು ಕೊಂಡು ಬಂದರು |೩೩೬ |
ಒಬ್ಬರರಿಯದ್-ಹಾಂಗೆ ಮತ್ತೊಬ್ಬಳು ಎತ್ತಿಕೊಂಡು
ಮಿತೆ ಗೋಪಿದೇವಿಯ ಮನೆಗೆ ಬಂದರು |೩೩೭ |
ಮಿತ್ರೆ ಗೋಪಿದೇವಿ ತನ್ನ ಕೃಷ್ಣನ ತೆಗೆದು ತೊಡೆಯಲ್ಲಿಟ್ಟು
ಮೊಲೆಯ ಕೊಟ್ಟು ಮುದ್ದಾಡಿ ನಗುತಲಿದ್ದಳು |೩೩೮ |
ಅವರ ಕೈಯಲಿಲ್ಲ ಕೃಷ್ಣ ಯಶೋದೆ ದೇವಿ ತೊಡೆಯಲಿರಲು
ಎಲ್ಲರೂ ಕಂಡು ಅಂದು ಆಶ್ಚರ್ಯ ಪಟ್ಟರು |೩೩೯|
ಬಾಲಕಿಯರೆಲ್ಲರೂ ಕೈಲಿ ಕೃಷ್ಣನಿಲ್ಲದೆ
ನಾಚಿ ನುಡಿಯಲಾರದೆ ಸುಮ್ಮನ್-ಹೋದರು | ೩೪೦ |
ಅವರ ಮನೆಗಳಿಗೆ ಕಳುಹಿ ದಧಿಮಥನವ ಮಾಡುತಿರಲು
ಜಗದಂತರ್ಯಾಮಿ ಸ್ವಾಮಿಯ ಪಾಡುತ್ತಿದ್ದಳು | ೩೪೧ |
ಹಾರ ಕುಚಗಳಲ್ಲಿ ಮುತ್ತಿನ ಮಾಲೆ ಅಲ್ಲಾಡುತ್ತಿರಲು
ನೀಲ ಮೇಘಶ್ಯಾಮನ ಪಾಡುತ್ತಿದ್ದಳು |೩೪೨|
ಕಡಗ ಕಂಕಣಗಳಿಗೆ ಮುಡಿದ ಮಲ್ಲಿಗೆ ಮಧುರೆ
ಧುಮ್ಮು ಧುಡುಕೆಂದು ಮೊಸರ ಕಟೆಯುತ್ತಿದ್ದಳು |೩೪೩ |
ಮೊಸರ ಕಡೆಯುವಲ್ಲಿಗೆ ಕುಸುಮನಾಭ ಕೃಷ್ಣ ಬಂದು
ಹಸಿದೆನೆಂದು ಅಮ್ಮಿಯ ಬೇಡುತಿದ್ದನು |೩೪೪ |
ನಂಬಿಸಿ ಕಣ್ಣೀರ ಒರಸಿ ನವನೀತವ ಕೈಲಿ ಕೊಟ್ಟು
ಮೊಲೆಯ ಕೊಟ್ಟಳೆ ಗೋಪಿ ಜಗದೊಡೆಯಗೆ | ೩೪೫ |
ಹಾಲು ಉಕ್ಕಿ ಬರಲು ಗೋಪಿ ನೀಲವರ್ಣನ ಕೆಳಗೆ ಇಟ್ಟು
ನೀರ ತೊಡೆದು ಬರುವೆನೆಂದು ಒಳಗೆ ಹೋದಳು |೩೪೬ |
ಹಾಲು ಹರವಿ ಕೆಳಗೆ ಇಡಲು ನೀಲವರ್ಣ ಕೃಷ್ಣ ಕಡ
ಗೋಲಮುರಿದು ಗಡಿಗೆ ಒಡೆದು ಒಡಿ ಹೋದನು | ೩೪೭ |
ಒಳಗೆ ಹೊಕ್ಕು ಬರಲು ಗೋಪಿ ಮುರಿದ ಕಡಗೋಲು ಕಂಡು
ಜಗದೊಡೆಯನ ಕೆಲಸವೆಂದು ತಿಳಿದಳಾಗಲೇ |೩೪೮ |
ಗೊಲ್ಲತಿಯರ ಮಾತ ನಾನು ಎಲ್ಲ ಹುಸಿ ಮಾಡಿದೆ
ಫುಲ್ಲನಾಭನ ಮುದ್ದಿಸುವುದು ಸಲ್ಲದೆಂದಳು |೩೪೯ |
ಬಾಲಕಿಯರ ಮಾತ ನಾನು ಬಹಳ ಹುಸಿ ಮಾಡಿದೆ
ಬಾಲಕೃಷ್ಣನ ಮುದ್ದಿಸುವುದು ಸಲ್ಲದೆಂದಳು |೩೫೦ |
ಎಷ್ಟಂತ ತಾಳ್ವೆ ನಾನು ಕೃಷ್ಣನ ಹಾವಳಿಯ
ಕಷ್ಟದಿಂದ ಹಿಡಿದಳೆ ಕಟ್ಟುವೆನೆಂದು |೩೫೧ |
ಊರ ಕಣ್ಣಿಯ ತಂದು ವಾರಿಜನಾಭನ ಕಟ್ಟಿ
ಸಾಲದಿರಲು ರಟೆ ನೊಂದು ಸರಿದಳ್-ಹಿಂದಕೆ |೩೫೨ |
ಆಕಳ ಕಣ್ಣಿಯ ತಂದು ಗೋಪಾಲಕೃಷ್ಣನ ಕಟ್ಟಿ
ನಾಕು ಬೆರಳಿಗೆ ಸಾಲದೆನುತ ನಗುತ ಓಡಿದ |೩೫೩ |
ಓಡಿ ಓಡಿ ಹೋಗುತಿರಲು ಸಾರೆ ಸಾರೆ ನಿಲ್ಲುತಿರಲು
ವಾರೆ ವಾರೆ ನೋಟದಿಂದ ನೋಡುತಿರುವನು | ೩೫೪ |
ಮುಂದೆ ಗೋವಿಂದನ ಪಾದ ಹಿಂದೆ ಯಶೋದೆಯ ಪಾದ
ಮುಂಗೈ ಮುರಾರಿ ನೇತ್ರಗಳೊ ರಸುತಿದ್ದಳು |೩೫೫|
ನೇತ್ರದಲ್ಲಿ ಜಲವ ತುಂಬಿ ಪ್ರೀತಿ ವಚನ ಕುರಿತು ಹರಿಯ
ಈ ಮಾತನಾಡಿದಳೆ ಮುಕ್ತಿಖ್ಯಾತಳದಿಂದ |೩೫೬|
ಜನನಿ ಅರಸಿದಳೆಂದು ಕರುವು ಕಣ್ಣೆ ಆಳವಾಗಿ
ಕೃಷ್ಣ ಭಕ್ತವತ್ಸಲ ತಾನಾದ |೩೫೭ |
ಯೋಗಿಗಳ ಮನಸಿನ ಜ್ಞಾನಕೆ ಸಿಕ್ಕದವನ
ಶ್ರೀಹರಿಯ ಕಟ್ಟಿದಳೆ ಗೇಣು ಹಗ್ಗದಿ |೩೫೮ |
ಒರಳಿಗೆ ಕೃಷ್ಣನ ಕಟ್ಟಿ ಒಳಗೆ ಬಂದಳು ಗೋಪಿ
ಸುಳಿದು ಬಾಹೆನೆಂದು ಬೀದಿ ಹೊರಗೆ ಬಂದನು | ೩೫೯ |
ನಳಕೂಬ್ರ ಮಣಿಗ್ರೀವರು ನಾರದರ ಶಾಪದಿಂದ
ವೃಕ್ಷ ರೂಪದಿ ಜನಿಸಿದರು ಧರಣಿಯ ಮೇಲೆ | ೩೬೦ |
ಯಮಳಾರ್ಜುನರ ಶಾಪವ ಇಂದು ಬಿಡಿಸುವೆನೆಂದು
ಬಂದ ಕೃಷ್ಣ ಮತ್ತಿಯಾ ಮರಗಳಲ್ಲಿಗೆ |೩೬೧ |
ಮತ್ತಿಯಾ ಮರಗಳಲ್ಲಿ ಸಿಕ್ಕಿ ಬಿದ್ದಿತು ಉಳುಪು
ಕಿತ್ತು ಧರೆಗೆ ಕೆಡಹೆ ಕೃಷ್ಣ ಅತ್ತಸಾರಿದಾ |೩೬೨ |
ಬಿದ್ದ ಮರನ ನಡುವೆ ಮತ್ತಿಬ್ಬರ್ಪುರುಷರೆದ್ದು ಬರಲು
ಕಂಡು ಜನಗಳೆಲ್ಲ ಬಹು ಚೋದ್ಯಪಟ್ಟರು |೩೫೩ |
ಮದ್ಯಪಾನವನ್ನು ಮಾಡಿ ಉನ್ಮತ್ತರಾಗಿರುತಿರಲು
ನಾರದರು ಬಂದು ನಮ್ಮ ಕಡೆಗ ಹಾಕಲು | ೩೫೪ |
ಅರ್ಕಪತಿಯ ಸೇವೆ ಮಾಡಿ ವ್ಯರ್ಥವಾಗಿ ಕೆಡಲು ಬೇಡಿ
ಲಕ್ಷ್ಮೀಪತಿಯ ಪೂಜೆಗಳ ಮಾಡಿರೆಂದನು | ೩೬೫ |
ನಮೋಸ್ತು ಕಲ್ಯಾಣರೂಪ ನಮೋ ವಿಶ್ವಭಾವನ
ನಮೋ ಭಾರ್ಗವ ವೇದವ್ಯಾಸ ಯಾದವ ನಂದನಾ | ೩೬೬ |
ಲಕ್ಷುಮೀಶ ನಮ್ಮಪರಾಧವ ಕ್ಷಮಿಪುದೆಂದು
ಕರವ ಮುಗಿದು ಸುತಿಯ ಮಾಡಿ ಬೇಡಿಕೊಂಡರು | ೩೬೭ |
ಕರವ ಮುಗಿದು ಸ್ತುತಿಯ ಮಾಡಿ ನಮಸ್ಕರಿಸಕೊಂಡು
ನಿಂತು ಬೆಳಗುವ ವಿಮಾನವೇರಿ ತೆರಳಿ ಹೋದರು | ೩೬೮ |
ಇಂದಿನ ವ್ಯಾಪಾರವನ್ನು ಬಂದ ಜನರೆಲ್ಲ ನೋಡಿ
ಸಂದೇಹವಿಲ್ಲನೀತ ಕೊಂದನೆಂದರೂ |೩೬೯ |
ಪೂತನಿ ಶಕಟ ತೃಣಾವರ್ತ ಕೇಶಿಯನ್ನೆ ಕೊಲ್ಲುವ
ಅಚರಿತ್ರೆ ಪಾಡಿದರು ಅಮರ ವಂದ್ಯನ |೩೭೦|
ಇಂದಿರಾರಮಣನ ಮೇಲೆ ಇಂದ್ರಾದಿ ದೇವತೆಗಳು
ಮಂದಾರ ಪುಷ್ಪದ ಮಳೆಯ ಕರೆದರು |೩೭೧ |
ಕೃಷ್ಣ ಚರಿತೆಯನ್ನು ಕೇಳಿದಾ ಕಂಸನು
ಕೊಂದು ನಿದ್ರೆಗೈವುದು ಎಂದಿಗೆಂದನು |೩೭೨|
ನಂದಗೋಕುಲದ ಒಳಗೆ ಬಂದಿತು ಉತ್ಪಾತವೆಂದು
ವೃಂದಾವನಕೆ ತೆರಳಿ ಪೋದ ಇಂದಿರೇಶನು |೩೭೩|
ವೃಂದಾವನದ ಒಳಗೆ ಗೋವಿಂದನಾಡುತಿರಲು ಮಣ್ಣ
ತಿಂದನೆಂದು ಹೇಳಿದರೆ ನಂದಗೋಪಿಗೆ | ೩೭೪ |
ಕೋಲು ತೆಗೆದುಕೊಂಡು ಗೋಪಿ ಬಾಲಕನ ಬಡಿವೆನೆನಲು
ಬಾಯ ತೆರೆಯದಿದ್ದರೆ ಬಡಿವೆನೆಂದಳು |೩೭೫|
ಮಣ್ಣ ತಿನ್ನಲಿಲ್ಲ ನಮ್ಮಣ್ಣ ರಾಮರನೆ ಕೇಳು
ಸಣ್ಣವರ ಮಾತಿದೆಲ್ಲ ಸಟೆ ಎಂದನು |೩೭೬|
ಚಿಕ್ಕವರ ಮಾತ ಕೇಳಿ ಶಿಕ್ಷೆ ಮಾಡಿ ಕೊಲ್ಲ ಬಂದಿ
ಮೃತ್ತಿಕೆಯ ತಿನ್ನಲಿಲ್ಲ ಬಾಯ ನೋಡೆಂದ |೩೭೭|
ಶ್ರೀಕೃಷ್ಣನ ಬಾಯೊಳಗೆ ಹದಿನಾಲ್ಕು ಲೋಕವ ಕಂಡು
ಪ್ರಾದುರ್ಭೂತನಾದ ಪರಮಾತ್ಮನೆಂದಳು |೩೭೮|
ಸಪ್ತದ್ವೀಪಗಳ ಸುತ್ತೇಳು ಸಮುದ್ರವಿರುವ ಪೃಥ್ವಿ|
ಆಕಾಶ ಮೇರು ಪರ್ವತವನು ಕಂಡಳು |೩೭೯|
ಧನ್ಯವಾದ ವೈಕುಂಠವ ಚೆನ್ನವಾಗಿ ಕಂಡಳು
ತನ್ನ ಕಂಡು ಯಶೋದೆ ತವಕಿಸಿದಳು |೩೮೦ |
ಮುದ್ದು ಕೃಷ್ಣನ ಬಾಯೊಳಗೆ ಬಿದ್ದೆನು ತಾನೆನುತ
ಇದ್ದ ಸ್ಥಳವ ಕಾಣದೆ ಶ್ರಮವ ಪಟ್ಟಳು |೩೮೧|
ದೇವಾದಿದೇವನೆಂದು ದೇವಿ ಯಶೋದೆ ಸ್ತುತಿಸೆ
ದೇವಕಿಸುತನು ತನ್ನ ಬಲೆಯ ಬೀಸಿದ |೩೮೨
ಬಲರಾಮ ಶ್ರೀಕೃಷ್ಣ ಸಹ ತುರುಗಳನ್ನು ಕಾಯುತ್ತಿರಲು
ಕರುವಿನಂತೆ ಬಂದ ಒಬ್ಬ ಕಳ್ಳ ಅಸುರನು |೩೮೩|
ಆಕಳ ಕಾಯುತಿದ್ದ ಶ್ರೀಕೃಷ್ಣನ ಕೊಲ್ಲುವೆನೆಂದು
ಪಾಪಿ ಅಸುರ ಗೋರೂಪವನ್ನು ಧರಿಸಿದ |೩೮೪ |
ಧೇನುಕಾಸುರನು ಬಂದು ದೇವಕಿಯ ಸುತನ ಹಿಡಿದು
ಭೂಮಿಯ ಮೇಲೆ ಅಪ್ಪಳಿಸುತ್ತಿದ್ದನು |೩೮೫|
ಅಂಬುಜಾಕ್ಷ ಅಸುರನಂಗೈಯಿಂದಲಪ್ಪಳಿಸಿ
ಮುಂದಿನ ರತ್ನವ ಪಹರಿಸಿಕೊಂಡನಸುರನ |೩೮೬|
ಪಕ್ಷಿರೂಪವನ್ನು ಧರಿಸಿ ಕುಕ್ಷಿಯೊಳಸುರ ಒಬ್ಬ
ಭಕ್ಷಿಸುವೆನೆಂದು ಮೂತಿಯಿಂದ ಕಡಿದನು |೩೮೭ |
ಕಮಲನಾಭನು ಬಕಾಸುರನ ಎರಡು ತುಟಿಗಳನ್ನೆ ಹಿಡಿದು
ಕಡಿದು ತುಂಡು ಚೂರ್ಣ ಮಾಡಿ ಕಡೆಗೆ ಹಾಗಿದ | ೩೮೮ |
ಶಂಕರನ ಕುರಿತು ಪಾವಿತ್ರಚೂಡನೆಂಬ ದೈತ್ಯ
ಪಂಕಜಾಕ್ಷನ ಕೊಲುವೆನೆಂದು ಪರಿಯತಂದನು |೩೮೯ |
ಗೋವಳನೆಲ್ಲ ಕಾವಡಿಗಳನೆ ಕಟ್ಟಿ
ಗೋಪಾಲರ ಹೆಗಲಲಿಟ್ಟು ಮನೆಗೆ ಕಳುಹಿದ | ೩೯೦ |
ಹಸಿದೆನೆಂದು ಶ್ರೀಕೃಷ್ಣ ಯಶೋದೆಗೆ ಹೇಳಲು ಮೊಸರು
ಅನ್ನವನ್ನು ಕೊಟ್ಟು ಕಳುಹಿಸಿದಳು | ೩೯೧ |
ಅಸುಳಿಯೊಳಗೆ ಮಂಡಿಸಿ ವಸುಧೆಯೊಳಗೆ ಕೆಲಕೆಲರು
ವೃಷಭದಂತೆ ಹೋರಿ ಹೋರಿ ಉಣ್ಣುತ್ತಿದ್ದರು | ೩೯೨ |
ಅಳ್ಳ ಮಾಗಾಯಿ ಬೇರು ಗುಳ್ಳ ಸುಂಡಿಯ ಕಾಯಿ
ಕೊಳಲ ಕಂಕುಳಲಿರಿಸಿ ಕೃಷ್ಣ ಉಣುತಲಿದ್ದನು |೩೯೩|
ಒಂದು ಕೈಯಲಿ ಉಪ್ಪಿನಕಾಯಿ ಮತ್ತೊಂದು ಕೈಲಿ ಮೊಸರು ಬುತ್ತಿ
ಕೊಳಲ ಕಂಕುಳಲಿಟ್ಟು ಕೃಷ್ಣ ಉಣುತಲಿದ್ದನು |೩೯೪|
ಕಳ್ಳಿ ಅನ್ನವನ್ನೆ ಉಂಡು ಗೊಲ್ಲರ ಕೂಡಿಕೊಂಡು
ಫುಲ್ಲನಾಭ ಭೋಜನ ಮಾಡುತ್ತಿದ್ದನು |೩೯೫|
ಬಲರಾಮ ಶ್ರೀಕೃಷ್ಣ ಕರುಗಳನ್ನೆ ಕಾಯುತಿರಲು
ರವಿಯು ಮಧ್ಯಾಹ್ನಕೆ ಬಂದನಾಗಲೇ |೩೯೬|
ಕರುಗಳಿಗೆ ನೀರು ಕುಡಿಸಿ ಕಾಲು ಮುಖಗಳನ್ನೆ ತೊಳೆದು
ಕರುಗಳನ್ನು ನೆರಳಿನಲ್ಲಿ ನಿಲಿಸುತ್ತಿದ್ದರು |೩೯೭|
ನಕ್ಷತ್ರದಂತೆ ಸುತ್ತ ಗೋಪಾಲರೊಡನೆ ಒಪ್ಪಿದನೆ
ಚಂದ್ರನಂತೆ ನಡುವೆ ಕೃಷ್ಣನು |೩೯೮|
ಚಂದ್ರ ಗುಡಿ ಕಟ್ಟಿದಂತೆ ಹಿಂಡು ಗೋಪಾಲರೊಡನೆ
ಇಂದಿರೇಶ ಹರಿಸ್ಮರಣೆಯಿಂದ ಕೂತನು |೩೯೯|
ತುತ್ತು ಕೊಟ್ಟು ತುದಿಯದೆಂದು ಭಕ್ತಿಯಿಂದ ತೆಗೆದುಕೊಂಬ
ಕೃಷ್ಣನ ಕೂಡೆ ಉಂಡು ಸುಖದಲಿದ್ದರು |೪೦೦ |
ಅನಂತ ವೇದಗಳ ಬಿಟ್ಟು ಅಚ್ಯುತನ ಕೂಡೆ ಉಂಡು
ಭೋಜನದ ಸುಕೃತ ಸವಿಯವೆಲ್ಲ ಪಡೆದರು |೪೦೧ |
ಬಾಲಕರ ಕೂಡಿಕೊಂಡು ರಾಮಕೃಷ್ಣರಾಡುತಿರಲು
ಆಗ ಅಜನು ಬಂದು ಕರುವ ಮರೆಯ ಮಾಡಿದ ೪೦೨ |
ಕರುವು ದೂರ ಹೋಯಿತೆಂದು ಹರಿಯ ಕೂಡೆ ಕೇಳಲು
ಅರಸಿ ತಾಹೆನೆಂದು ನೀವು ಉಣ್ಣಿರೆಂದನು |೪೦೩ |
ಇತ್ತ ಗೋಪಾಲರಿಲ್ಲ ಅತ್ತ ಕರು ಕಾಣಲಿಲ್ಲ
ವತ್ಸ ಒಂದು ಉಳಿಯಿತೆಂಬ ತೆರದಲ್ಲಿದ್ದರು |೪೦೪ |
ಅರಸಿ ತುರುವ ಕಾಣದೆ ಅಜನ ಮಾಯವೆಂದರಿತು
ಕರುವು ಕೊಂಬ ಕೊಳಲ ಗೋಪಾಲರಾದರು |೪೦೫|
ಗೋವಿನ ಹಿಂಡುಗಳು ಗೋಪಾಲರ ತಂಡಗಳು,
ಮಾಧವನ ಕೂಡಿಕೊಂಡು ಮನೆಗೆ ಬಂದರು |೪೦೬|
ಕಸ್ತೂರಿ ತಿಲಕವನಿಟ್ಟು ಕಂಗಳಿಗಂಜನವ ಹಚ್ಚಿ
ಮಕ್ಕಳೆಂದು ಗೋಪಿಯರು ಮೊಲೆಯ ಕೊಟ್ಟರು |೪೦೭|
ಇತ್ತ ಇವರಿಗೊರುಷವಾಗಿ ಅತ್ತವರಿಗೆ ನಿಮಿಷವಾಗಿ
ಸಿಕ್ಕಿಸಿದ ಮಾಯವಿ ಎಂದ ರಾಮನು |೪೦೮|
ಅಣ್ಣ ಕೇಳು ಅವರ ಮನೆಯಲಿ ಅಲೆದು ಬೆಣ್ಣೆ ತಿಂದುದಕ್ಕೆ,
ಕರುವು ಕೊಂಬ ಕೊಳಲ ಗೋಪಾಲರಾದೆವು |೪೦೯|
ಹರಿಯ ಮಾಯಗಳನೆ ಕೇಳಿ ಹಲಧರನು ತಲೆಯ ತೂಗಿ
ಅರಿವರ್ಯಾರು ನಿನ್ನ ಮಹಿಮೆ ಎಂದ ರಾಮನು |೪೧೦|
ಅಚ್ಯುತ ನಿನ್ನ ಮಹಿಮೆ ಎಷ್ಟು ಪೊಗಳಲಳವಲ್ಲ
ಭಕ್ತರಾದ ಸುಜನರಿಗೆ ರೂಪನಾದಿಯ |೪೧೧|
ನರಹರಿ ನಿನ್ನ ಮಹಿಮೆ ವರ್ಣಿಸಲಳವಲ್ಲ
ಸುಲಭದಿಂದ ಸುಜನರಿಗೆ ರೂಪನಾದಿಯ |೪೧೨|
ಮಾಧವ ನಿನ್ನ ಮಹಿಮೆ ಏನು ಪೊಗಳಲಳವಲ್ಲ
ಭಾವದಿಂದ ಸುಜನರಿಗೆ ರೂಪನಾದಿಯ |೪೧೩|
ಬಾಲಕರ ಕೂಡಿಕೊಂಡು ರಾಮಕೃಷ್ಣರಾಡುತಿರಲು
ಆಗ ಅಜನು ಬಂದು ಸ್ತುತಿಯ ಮಾಡಿ ಹೋದನು |೪೧೪|
ಭಕ್ತರ ತಂಡವಿದೆ ಬಚ್ಚಿಟ್ಟ ತಂಡವಿದೆ
ಈ ತಂಡ ಯಾವುದೆಂದು ಅಜನು ಚಿಂತಿಸೆ |೪೧೫|
ಒಪ್ಪಿಸಿ ಕೊಟ್ಟರೆ ತಪ್ಪದೀಗ ನಾನಾದೆ
ಇಪ್ಪಡಿಯಿಂದ ಅಜನು ಸ್ತುತಿಯನೊತ್ತಿದ |೪೧೬|
ಶಂಖ ಚಕ್ರಧಾರಿ ಅನಂತ ವಿಶ್ವರೂಪನಾದ
ಶಂಕಿಸುವ ಅಜಗೆ ತನ್ನ ನಿಜವ ತೋರಿದ |೪೧೭|
ಅಕ್ಷಯ ಜಯ ಜಯ ಪಕ್ಷಯ ಜಯ ಜಯ
ರಕ್ಷಿಸೆನ್ನ ಹರಿಯೆ ಎಂದು ಪಾದಕೆರಗಿದ |೪೧೮|
ಬ್ರಹ್ಮನೆಂಬ ಹಮ್ಮಿನಿಂದ ನಿನ್ನ ಮರೆದಿದ್ದೆ ಸ್ವಾಮಿ,
ಚಿಣ್ಣನೆಂದು ಮೋಹದಿಂದ ನಿಜವ ತೋರಿದಿ |೪೧೯|
ತಾಳ ಮೇಳದ ಸುಖವ ಗೋವಳಿರಿಗಿತ್ತ ದೇವ
ಊಳಿಗದ ಬಂಧನದೊಳೆನ್ನ ಇರಿಸಿದಿ |೪೨೦|
ಆಧಿಪತ್ಯವನ್ನು ಒಲ್ಲೆ ಅಜನೆಂಬ ಹೆಸರು ಒಲ್ಲೆ
ಗೊವಳರಂದದಿ ಎನ್ನ ಪಾಲಿಸೆಂದನು |೪೨೧|
ಮಂದಮತಿಯ ಮಗನು ಮಾತೊಂದನರಿಯನೆಂದು
ಇಂದಿರೇಶ ಪಾಲಿಸಿ ಮನೆಗೆ ಕಳುಹಿದ |೪೨೨|
ತಂದ ಮೊಸರ ಬುತ್ತಿಯನ್ನೆ ಇಂದಿರೇಶ ಕೈಗೊಂಡು
ಅಂದು ಉಂಡ ಕೃಷ್ಣ ಗೋಪಾಲರೊಡಗೂಡಿ |೪೨೩|
ಗೋವಿಂದ ನೀನೆಲ್ಲಿಗ್ ಹೋಗಿ ತಂದಿ ಹೇಳು ಕರುವ
ಸಂಗಾತ ಉಣ್ಣಬಾರೆಂದು ಕರೆದರು |೪೨೪|
ಸಣ್ಣವರು ಮಕ್ಕಳು ತನ್ನ ತಾಯ ಮೊಲೆಯನುಂಡು
ಅಮ್ಮ ಕೇಳೆ ಅಜನು ನಮ್ಮ ಮರೆಯ ಮಾಡಿದ |೪೨೫|
ಪ್ರಲಂಬ ದೈತ್ಯನು ಬಲರಾಮದೇವನ ಹೆಗಲನೇರಿಸಿ,
ಆಕಾಶಕೊಯ್ದನು ಆ ಕ್ಷಣದಲಿ |೪೨೬|
ಮಾಯಾಸುರನೆಂಬ ದೈತ್ಯ ಮಕ್ಕಳಾಟಿಕೆಯಲಿ ಬಂದು
ಗುಹೆಯೊಳಗೆ ಹೊಗ್ಗಿಸಿ ಗೋಪಾಲರನೆಲ್ಲ |೪೨೭|
ಗುಹೆಯೊಳಗೆ ಹೊಗ್ಗಿಸಿದ ಗೋಪಾಲಕರ ಕಡೆಗೆ ತೆಗೆದು
ಮಡುಹಿದನೆ ಮಾಯಾಸುರನ ಮಧುಸೂದನ |೪೨೮|
ಕಟ್ಟಿ ಅಸುರ ಒಯ್ದಿರಲು ಕೃಷ್ಣಗೆ ಮೊರೆಯಿಡಲು
ಮತ್ತೆ ನಿನ್ನ ಮೂಲರೂಪ ಧರಿಸು ಎಂದನು |೪೨೯|
ಕುಶಲ ವಿಧದಿಂದ ತನ್ನ ಮೂಲರೂಪವನ್ನು ಧರಿಸಿ
ಅಸುರನ ಕೊಂದನು ಆಕ್ಷಣದಿಂದಲಿ |೪೩೦|
ಉಷಃಕಾಲದಲ್ಲಿ ಗೋಪ ನೀರೊಳಗೆ ಮುಣುಗುತಿರಲು
ನಿಶಾಚರರು ಒಯ್ದು ವರುಣನ ಮುಂದೆ ಇಟ್ಟರು |೪೩೧|
ನಂದ ನೀರೊಳಗೆ ಮುಳುಗೆ ಅಂದು ದೇಹ ಕಾಣದಿರಲು
ಮುಂದೆ ಕೃಷ್ಣ ವರುಣನಾಲಯಕೆ ಬಂದನು |೪೩೨|
ಕರವ ಮುಗಿದು ಸ್ತುತಿಯ ಮಾಡಿ ನಮಸ್ಕರಿಸಿಕೊಂಡು
ನಂದನ ತಂದು ಕೃಷ್ಣನ ಮುಂದೆ ಇಟ್ಟರು |೪೩೩|
ನೀರೊಳಗೆ ಹೋದ ತಂದೆಯ ನೀಲವರ್ಣ ಕರೆದು ತಂದ
ಮಾಧವನ ಮಹಿಮೆ ಎಂದು ಚೋದ್ಯಪಟ್ಟರು |೪೩೪|
ಬಾಲಕರು ಕೂಡಿಕೂಂಡು ತೋಳು ದಂಡಿಗೆಯ ಮಾಡಿ
ದೇವಾದಿದೇವನ ಏರಿಸಿದರು |೪೩೫|
ಹೀಲಿಯ ಚಾಮರವ ಬೀಸಿ ತಾವರೆಯ ಕೊಡೆಯ ಪಿಡಿದು,
ಸಾಯುಜ್ಯ ಮುಕ್ತಿಗೆ ಸಂದರೆಲ್ಲರು |೪೩೬|
ಆಕಳ ಕಾಯುತ್ತಿದ್ದ ಗೋಪಾಲಕರೆಲ್ಲರು
ಕಾಗೆ ಹಣ್ಣ ಮೆಲ್ಲಬೇಕು ಕೃಷ್ಣನೆಂದರು |೪೩೭|
ತುರುಗಳ ಕಾಯುತಿದ್ದ ಗೋಪಾಲಕರೆಲ್ಲರು
ತಾಳಿಹಣ್ಣ ಮೆಲ್ಲಬೇಕು ಕೃಷ್ಣ ಎಂದರು |೪೩೮|
ಮೆಲ್ಲಿರೆಂದಪ್ಪಣೆಯ ಫುಲ್ಲನಾಭ ಕೊಡುತಿರಲು
ಅಲ್ಲಿ ಕಲಹ ಮಾಡಿದರು ವನಗಳಲೆಲ್ಲ |೪೩೯|
ಕದಳಿ ಕಂಬದಲ್ಲಿದ್ದ ಖರಾಸುರನೆಂಬ ದೈತ್ಯ
ಎರಡು ಕಾಲ ಕೆರೆಯುತ ಬಂದ ಕೊಲುವೆನೆನುತಲಿ |೪೪೦|
ಖರಾಸುರನ ಬಲರಾಮ ಎರಡು ಕಾಲುಗಳನೆ ಹಿಡಿದು
ಖರಖರನೆ ತಿರುಗಿಸಿ ವನದ ಮೇಲೆ ಬಿಟ್ಟನು |೪೪೧|
ಖರಾಸುರನು ಬಿದ್ದ ನೆವದಿ ವನಗಳೆಲ್ಲ ಒಂದಾಗಿ
ಧರೆಯ ಮೇಲೆ ಬೀಳೆ ಹಣ್ಣು ದಣಿಯ ಮೆದ್ದರು |೪೪೨|
ಹಣ್ಣು ಮೆದ್ದ ಬಳಿಕ ನಮ್ಮಣ್ಣ ರಾಮರಿಗೆ ಕಳುಹಿ
ಸಣ್ಣವರು ಕೂಡಿಕೂಂಡಾಡುತಿದ್ದರು |೪೪೩|
ತಾಳಿ ಹಣ್ಣಗಳನೆ ಮೆದ್ದು ಗೋವು ಗೋಪರೆಲ್ಲರು
ಕಾಳಿ ಮಡುವಿಗೆ ಕರೆದು ತಂದ ಕೃಷ್ಣನಲ್ಲಿಗೆ |೪೪೪|
ಧಟ್ಟಿ ಪೀತಾಂಬರವನುಟ್ಟು ಶ್ರೀಕೃಷ್ಣ
ಮುತ್ತಿನ ಕೊಳಲು ಪಿಡಿದು ಊದುತಿದ್ದನು |೪೪೫|
ಆಲೈಸಿ ಕೇಳಿದುವು ಗೋವು ಗೋಪರೆಲ್ಲರು
ಬೇಗದಿಂದ ಕೃಷ್ಣನ ಬಳಿಗೆ ಬರುತಲಿದ್ದರು |೪೪೬|
ತೃಷೆಯಿಂದ ಗೋವು ಗೋಪರು ವಿಷಪಾನ ಮಾಡುತಿರಲು
ವಿಷ ತಲೆಗೇರಿ ಪರವಶರಾದರು |೪೪೭|
ಮುರಿಯ ಮೇಲೆ ಬೀಳೆ ಪುರುಷೋತ್ತಮ ದಯದಿಂದ
ಕಡೆಗಣ್ಣಿಲಿ ನೋಡೆ ಮೈಮುರಿದೆದ್ದರು |೪೪೮|
ಪುಂಡರೀಕಾಕ್ಷ ಹರಿಯ ಚಂಡನ್ಹೊಯ್ದಾಡುತಿರಲು
ಅಂಬರಕ್ಕೆ ತಿರುವಿ ಯಮುನೆಯೊಳಗೆ ಬಿದ್ದಿತು |೪೪೯|
ಪಕ್ಷಿವಾಹನ ಸ್ವಾಮಿ ಕಡಹದ ಮರವನೇರಿ
ಮಡುವ ಧುಮುಕಿ ಜಲವ ಕದುಕಿ ವಿಷವಾಯಿತು |೪೫೦|
ಕೃಷ್ಣ ನೀರೊಳಗೆ ಬೀಳೆ ಗೋಪಾಲಕರೆಲ್ಲರು
ಮತ್ತೆ ನಂದಗೋಪಗೆಶೋದೆಗೆ ಹೇಳಲು |೪೫೧|
ಮಡುವಿಗೆ ಬಿದ್ದ ಕೃಷ್ಣನ ಮರಳಿ ನಾವು ಕಾಣೆವೆಂದು
ಕಡು ದುಃಖದಿಂದ ಹೋಗಿ ಹೇಳುತ್ತಿದ್ದರು |೪೫೨|
ಅರ್ತಿಯಿಂದ ನಂದಗೋಪಿ ತುಪ್ಪವನ್ನು ಕಾಸುತಿರಲು,
ಕೃಷ್ಣ ಮಡುವಿಗೆ ಬಿದ್ದನೆಂದು ಹೇಳುತ್ತಿದ್ದರು |೪೫೩|
ಹರುಷದಿಂದ ನಂದಗೋಪಿ ಮೊಸರ ಕಡೆವ ಸಮಯದಲ್ಲಿ
ವಿಷದ ಮಡುವಿಗೆ ಬಿದ್ದನೆಂದು ಹೇಳುತ್ತಿದ್ದರು |೪೫೪|
ಬೆಳೆದ ಕುಚದ ನಾರಿಯರು ಬಳಬಳನೆ ಬಳುಕುತ
ಮುಡಿಗಳ್ಳ ಕೃಷ್ಣನ ಕರೆಯುತ್ತಿದ್ದರು |೪೫೫|
ಕುಂಬಕುಚದ ನಾರಿಯರು ತುಂಬಿಗುರುಳ ಸಂತೈಸುತ್ತ
ಗೋವಿಂದನ ನೋಡಬೇಕೆನುತ್ತ ಬಂದರು |೪೫೬|
ತಿಂಗಳ ಬಾಣಂತಿಯರು ಆರು ತಿಂಗಳ ಗರ್ಭಿಣಿಯರು
ರಂಗನ ನೋಡಬೇಕೆನುತ ಬಂದರು |೪೫೭|
ಹತ್ತು ಎಂಟು ಸಾವಿರ ವರುಷ ಕಷ್ಟಪಟ್ಟು ತಪವಮಾಡಿ,
ಸರ್ಪಗಿಂದಿತ್ತೆನು ಮಗನ ಎಂದಳು |೪೫೮|
ಆರು ಏಳು ಸಾವಿರ ವರುಷ ಕಷ್ಟಪಟ್ಟು ತಪವ ಮಾಡಿ,
ನೀರಿಗಿಂದಿತ್ತೆನು ಮಗನ ಎಂದಳು |೪೫೯|
ಸಾವಿರ್ವರುಷ ಮಾಡಿದ ತಪವು ಇಷ್ಟಾಯಿತೆಂದು
ಬಾಯ ಬಡಿದು ಬಡಿದು ಗೋಪಿ ಅಳುತಲಿದ್ದಳು |೪೬೦|
ಹೆತ್ತವಳು ಎಂದು ಎನ್ನ ಹತ್ತಿರಕ್ಕೆ ಬಾರದೆ
ಸರ್ಪನ ತುಳಿವರೇನಪ್ಪ ಎಂದಳು |೪೬೧|
ಪಡೆದವಳೆಂದೆನ್ನ ಒಡನೆ ಮಾತಾಡದೆ
ಮಡುವಿಗೆ ಧುಮುಕುವರೆ ಮಗನೆ ಎಂದಳು |೪೬೨|
ಪಟ್ಟಾವಳಿಯುಟ್ಟುಕೊಂಡು ಬಟ್ಟ ಮುತ್ತ ಕಟ್ಟಿಕೊಂಡು,
ಕೃಷ್ಣ ಎನ್ನಪ್ಪ ಬಾರೆಂದಲೆಶೋದೆ |೪೬೩|
ಬಲರಾಮನ ಕೂಡೆ ಹೋದರೆ ಬಾರವು ವಿಪತ್ತುಗಳು
ಮಗನೆ ನೀನೊಬ್ಬನ್ನೋಗಿ ಮಡಿದಿ ಎಂದರು |೪೬೪|
ತಾಯ ಹಂಬಲಿಕೆಯನ್ನೆ ಕೇಳಿದ ಬಲರಾಮನು
ಬಾಲಕೃಷ್ಣಗೆ ದಾವ ಭಯವು ಬಾರದೆಂದನು |೪೬೫|
ಕುಂಡಲದ ಕಿವಿಯವನು ನಂದಗೋಪ ಬಂದು ತನ್ನ |
ಕಂದನ ಕಾಣದೆ ಕರೆಯುತ್ತಿದ್ದನು |೪೬೬|
ಹತ್ತೆಂಟು ಕಾಲಕೆ ಕೃಷ್ಣ ನಿನ್ನ ಪಡೆದೆನು,
ಕೃಷ್ಣ ಬಾರೊ ಮಗನೆ ಎಂದು ಕರೆಯುತ್ತಿದ್ದನು |೪೬೭|
ಆರೇಳು ಕಾಲಕೆ ಬಾಲ ನಿನ್ನ ಪಡೆದನು |
ಬಾಲ ಬಾರೊ ಮಗನೆ ಎಂದು ಕರೆಯುತ್ತಿದ್ದನು |೪೬೮|
ತೊಟ್ಟಿಳೊಳಗೆ ಆಡುವಾಗ ಅಷ್ಟು ದೈತ್ಯರನ್ನೆ ಕೊಂದಿ,
ಕಂದ ಬಾರೊ ಮಗನೆ ಎಂದು ಕರೆಯುತ್ತಿದ್ದನು |೪೬೯|
ಚಂಡು ಬುಗುರಿಯಾಡುವಾಗ ಹಿಂಡು ದೈತ್ಯರನ್ನೆ ಕೊಂದಿ |
ಕಂದ ಬಾರೊ ಮಗನೆ ಎಂದು ಕರೆಯುತ್ತಿದ್ದನು |೪೭೦|
ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತು ನೀನೆಂಬರೊ ,
ಎನ್ನಪ್ಪಗೊಂದಿಷ್ಟು ಶಕ್ತಿ ಪುಟ್ಟದ್ ಹೋಯಿತೊ |೪೭೧|
ವಿಷದ ಮಡುವಿನೊಳಗೆ ಬಿದ್ದು ಕುಸುಮನಾಭ ಮಡಿದರೆ
ಹಸಗೆಟ್ಟ ನಮಗ್ಯಾರು ಪೋಷಕರಿಲ್ಲವಲ್ಲೋ |೪೭೨|
ತಾಯ ಹಂಬಲಿಕೆಯನು ಕೇಳಿದನು ಕೃಷ್ಣನು
ನಾಗನ ಹೆಡೆಯ ಮೇಲೆ ನಾಟ್ಯವಾಡಿದ |೪೭೩|
ತನ್ನ ಮಡು ಕಳಕಿತೆಂದು ಪನ್ನಂಗ ಕೋಪದಿಂದ
ಚೆನ್ನಾಗಿ ಕೃಷ್ಣನ ಕಟ್ಟಿ ಬಿಗಿದು ಸುತ್ತಿದ |೪೭೪|
ಬಿಗಿದು ಸುತ್ತಿದ ಸರ್ಪವನ್ನೆ ಬಿಡಿಸಿಕೊಂಡು ಶ್ರೀಕೃಷ್ಣ,
ಹೆಡೆಗಳ ಮೇಲೆ ನಿಂತು ನಾಟ್ಯವಾಡಿದ |೪೭೫|
ಆ ಕಾಲನೂರುತ್ತ ಈ ಕಾಲನೆತ್ತುತ್ತ,
ಪಾತ್ರದಿಂದ ಕುಣಿದ ನಮ್ಮ ಪರಮಾತ್ಮನು |೪೭೬|
ಒಂದು ಕಾಲನೂರುತ ಮತ್ತೊಂದು ಕಾಲನೆತ್ತುತ
ಚೆಂದದಿಂದ ಕುಣಿದ ನಮ್ಮ ನಂದಕಂದನು |೪೭೭|
ನಾಗನ ಹೆಡೆಯ ಮೇಲೆ ನಾಟ್ಯವಾಡುತ್ತಿರಲು ಕಂಡು,
ತಾಳ ಮದ್ದಳೆಗಳು ಧಿಮಿ ಧಿಮಿಕೆಂದವು |೪೭೮|
ಸರ್ಪನ ಹೆಡೆಯ ಮೇಲೆ ನಾಟ್ಯವಾಡುತ್ತಿರಲು ಕಂಡು,
ಪುಷ್ಪವೃಷ್ಟಿ ಕರೆದರೆಲ್ಲ ದೇವತೆಗಳು |೪೭೯|
ಧರೆಯ ಭಾರವ ತಾಳಿದ ಶೇಷ ಹರಿಯ ಭಾರವ ತಾಳಲಾರದೆ,
ಹೊರಳಿ ಆಚೆ ಈಚೆಗೆ ಕಂಗೆಡುತಲಿದ್ದನು |೪೮೦|
ಕಾಳಿಂಗನು ವಿಷವ ಕಾರಿ ಕಂಗೆಟ್ಟು ಒರಲುತ್ತಿರರು |
ನಾಗಪತ್ನಿಯರು ತುತಿಸಿದರು ನಾರದವರದನ |೪೮೧|
ಉನ್ನತದ ಕಾಳಿಂಗನ ರಕ್ಷಿಸಯ್ಯ ನೀನೆಮಗೆ
ಮುತ್ತೈದೆ ತನವ ಕೊಡು ಭಕ್ತವತ್ಸಲ |೪೮೨|
ಕಂದ ಕಷ್ಟದಿಂದ ಕರೆಯೆ ಕಂಭದಿಂದುದಿಸಿ ಬಂದ |
ಕಂದ ನೀ ಕಾಯೊ ನಮ್ಮ ವಾಲೆ ಭಾಗ್ಯವ |೪೮೩|
ಎಲ್ಲ ತಲ್ಲಣಿಸಿ ಲಕ್ಷ್ಮೀ ಗೊಲ್ಲರ ಕೂಡಿಕೊಂಡು
ವಲ್ಲಭ ನೀ ಕಾಯೊ ನಮ್ಮ ವಾಲೆ ಭಾಗ್ಯವ |೪೮೪|
ಅಂದು ನಾಗಪತ್ನಿಯರು ಗೋವಿಂದನ ಸ್ತುತಿಸುತಿರಲು
ಕಾಳಿಂಗನ ಹೆಡೆಯ ಬಿಟ್ಟು ತಡಿಗೆ ಬಂದನು |೪೮೫|
ಕಾಳಿಂಗ ಕಮಲನಾಭನ ಪಾದಕೆರಗಿ ಸ್ತುತಿಯ ಮಾಡಿ,
ಬಹಳ ಅಪರಾಧವನ್ನು ಕ್ಷಮಿಸಬೇಕೆಂದ |೪೮೬|
ಅಸುರ ರೂಪಿನಿಂದ ನಾನು ಅರಿಯದೆ ಕಟ್ಟಿದೆನು
ಕುಸುಮನಾಭ ಕಾಯೊ ಈ ವಿಷದ ಹುಳವನು |೪೮೭|
ತನ್ನ ಪಾದ ಶಿರದಲ್ಲಿಟ್ಟು ಇನ್ನು ಗರುಡನ ಭಯವೇನಿಲ್ಲ
ಪನ್ನಂಗ ಸೇರು ನಿನ್ನ ರಮಣ ದ್ವೀಪವ |೪೮೮|
ಕಾಳಿಯ ಅರಮನೆಗೆ ಕಳುಹಿ ನೀರ ನಿರ್ಮಲ ಮಾಡಿ
ಕಾಳಿಂದಿಯ ದಡದಿ ಬಂದು ನಿಂದನಾಗಲೇ |೪೮೯|
ವಾರಿಧಿಯಲಿ ಆಡಿದವಗೆ ನೀರಗಂಡ ತಪ್ಪಿತೆಂದು
ಆರತಿಯ ತಂದು ನಿವಾಳಿಸಿದರು |೪೯೦|
ಸರ್ಪನ ಕೈಯೊಳಗೆ ತಪ್ಪಿ ಬಂದ್ಯೊ ಮಗನೆ ಎಂದು
ಎನ್ನಪ್ಪ ಬಾರೆಂದು ಗೋಪಿ ಅಪ್ಪಿಕೊಂಡಳು |೪೯೧|
ಕಿಚ್ಚಿನ ರೂಪಿನಿಂದ ಬಂದು ಸುತ್ತ ಪರಿಸ್ತರಣೆ ಹಾಕಿ
ಹತ್ತಿರಲಗ್ನಿ ಸುಡುತ್ತಿರಲು ಕಂಡನು |೪೯೨|
ಎಲ್ಲರೂ ತಲ್ಲಣಿಸಿ ಗೊಲ್ಲರ ಕೂಡಿಕೊಂಡು
ವಲ್ಲಭ ನೀ ಕಾಯೊ ಎಂದು ಮೊರೆಯ ಹೊಕ್ಕರು |೪೯೩|
ಬೆದರಿದ ಗೋಪಾಲಕರಿಗೆ ಮುಚ್ಚಿ ನಿಮ್ಮ ಕಂಗಳೆಂದು,
ಖಿಚ್ಚನೆಲ್ಲ ನುಂಗಿದನು ಅಚ್ಯುತನಾಗ |೪೯೪|
ಅಂಗಿರಸನ ಶಾಪದಿಂದ ಗಂಧರ್ವ ಅಜಗರನಾಗಿ
ನಂದಗೋಪನ ವನದೊಳಗೆ ಬಂದು ಬೀಳಲು |೪೯೫|
ಮುದ್ದು ಕೃಷ್ಣನ ಪಾದಗಳಿಗೆ ಬಿದ್ದ ಭಕ್ತರೂಪಿನಿಂದ
ಅಲ್ಲಿದ್ದನೆ ದುಷ್ಟನೆಂದು ನೋಡುತ್ತಿದ್ದರು |೪೯೬|
ತುಪ್ಪ ಅನ್ನವನ್ನೆ ಉಂಡು ಮಕ್ಕಳೊಡನೆ ಆಡದೆ
ಸರ್ಪನ ತುಳಿವರೆನ್ನಪ್ಪನೆಂದಳು |೪೯೭|
ಹಾಲು ಅನ್ನವನುಂಡು ಬಾಲರೊಡನೆ ಆಡದೆ
ಕಾಡಗಿಚ್ಚ ನುಂಗುವರೆ ಮಗನೆ ಎಂದಳು |೪೯೮|
ಅತ್ತ ಇತ್ತಲ್ಲೋಗದೆ ಎನ್ನತ್ತಿರ ಇರು ನೀನೆಂದೆ
ಕತ್ತಲಾಗದ ಮುನ್ನ ಮನೆಗೆ ಬರುವುದೆಂದಳು |೪೯೯|
ನಂದಗೋಪ ಕೃಷ್ಣನಿಗೆ ಅಂದು ಬುದ್ಧಿ ಹೇಳುತಿರಲು,
ಸಂದೇಹ ಬಿಡಿಸುವೆನೆಂದು ಬಂದ ನಾರದ |೫೦೦|
ಬಂದ ಮುನಿಗೆ ಷೋಡಶೋಪಚಾರವೆಲ್ಲವನ್ನು ಮಾಡಿ,
ಕುಶಲ ಪ್ರಶ್ನೆ ಕೇಳಿದನೆ ನಂದಗೋಪನು |೫೦೧|
ಭೂಮಿಭಾರ ಇಳುಹಲೆಂದು ರಾಮಕೃಷ್ಣರವತರಿಸೆ
ನಾನು ಅವರ ದರ್ಶನವ ಮಾಡಬಂದೆನು |೫೦೨|
ವಸುಧೆ ಭಾರ ಇಳುಹಲೆಂದು ವಸುದೇವನ ಮನೆಯೊಳಗೆ,
ಶಿಶುರೂಪ ಧರಿಸಿದ ಶ್ರೀಕೃಷ್ಣನಾಗಲೆ |೫೦೩|
ಕಂದನ ರೂಪು ಧರಿಸಿದ ಗೋವಿಂದನ ಎತ್ತಿಕೊಂಡು
ಬಂಧನವ ಕಾಳಿಂದಿ ದಾಟಿ ಇಲ್ಲಿಗೆ |೫೦೪|
ನಿನ್ನ ಸ್ತ್ರೀ ಯಶೋದೆ ಕನ್ನಿಕೆಯ ಪಡೆದಿರಲು
ಪನ್ನಂಗಶಯನನಲ್ಲಿ ಇಟ್ಟು ಹೆಣ್ಣನೊಯ್ದನು |೫೦೫|
ಪನ್ನಂಗ ಪರಮಾತ್ಮ ಬಲರಾಮ ಶ್ರೀಕೃಷ್ಣ
ನಿನ್ನ ಸುತರು ಎಂದು ಬುದ್ಧಿ ಮನದಿ ಮಾಡದೆ |೫೦೬|
ಆದ್ಯಂತ ಜ್ಞಾನ ಸಾಮೀಪ್ಯ ಆಗಬಾರದೆಂದು
ಪುತ್ರಭಾವ ವಹಿಸಿ ಬಂದು ಪಾದಕೆರಗಿದ |೫೦೭|
ಬಂದ ಮಧುರೆಗಾಗ ನಾರದ ಮುನಿಯ ಕಂಡು ಕಂಸ,
ವಂದಿಸಿ ಕಾರ್ಯವೇನೆಂದು ಕೇಳಿದ|೫೦೮|
ಮಂದಮತಿಯು ಕಂಸ ನೀನು ಓಂದು ವ್ಯಾಪಾರವರಿಯೆ,
ಹಿಂದಕೆ ವಸುದೇವ ಮಾಡಿದ ಮಾಟಂಗಳ |೫೦೯|
ಎಂಟನೆಯ ಮಗನು ನಿನಗೆ ಕಂಟಕನು ಹುಟ್ಟುತ್ತಿರಲು,
ನಿನ್ನ ವಂಚಿಸಿ ಒಯ್ದು ಗೋಕುಲದಲ್ಲಿಟ್ಟನು |೫೧೦|
ಅವನು ಬೆಳೆದು ಮಧುರೆಯಲ್ಲಿ ನಿನ್ನ ಕೊಲ್ಲುವೆನೆಂದು,
ಇದನರಿತುಕೊಂಡಿರೆಂದು ಮುನಿಯು ಪೇಳ್ದನು |೫೧೧|
ಉಗ್ರಸೇನನಲ್ಲಿ ನಿನಗೆ ಉತ್ಪತ್ತಿಯೇ ಇಲ್ಲ ಕೇಳು,
ಆದ್ಯಂತವೆಲ್ಲವ ಮುನಿಯು ಪೇಳುತ್ತಿದ್ದನು |೫೧೨|
ಜನನಿ ಋತು ಸ್ನಾನವ ಮಾಡಿ ವನದೊಳಗೆ ಬರುತಿರಲು
ನೆರೆ ಮೊಸದಿಂದ ಗಂಧರ್ವ ಬಂದನು |೫೧೩|
ರಾಯನ ರೂಪು ಧರಿಸಿಕೊಂಡು ತಾಯ ಮುಂದೆ ನಿಂದಿರಲು
ಕ್ರೋಧದಿಂದ ಶಾಪವನ್ನು ಕೊಡಲು ಹೋದಳು |೫೧೪|
ಶಾಪವನ್ನು ಕೊಡಲು ಬೇಡ ಶೌರ್ಯವುಳ್ಳ ಮಗನು ನಿನಗೆ,
ಜನಿಸುವನು ಕ್ಷಮಿಸೆಂದು ಹೇಳಿ ಹೋದನು |೫೧೫|
ಮಾತೃ ಅಲ್ಲ ದೇವಕಿಗೆ ಮಾತುಳನಲ್ಲ ಕಂಸ
ಮಾತೆ ಅನ್ಯತ್ರದಿಂದ ಪಡೆದಳೆಂದನು |೫೧೬|
ವನಗಳ ಮಧ್ಯದಲ್ಲಿ ತುರುಗಳ ರಕ್ಷಿಸುತ್ತ
ಮದನಗೋಪಾಲ ಕೊಳಲನೂದುತಿದ್ದನು |೫೧೭|
ಕೊಳಳ ಧ್ವನಿಗೆ ಪಕ್ಷಿ ಜಾತಿಗಳೆಲ್ಲ ಮುಚ್ಚಿ ಕಣ್ಣ,
ಮುನಿಗಳಂತೆ ತಾವು ಕುಳಿತು ಕೋಳುತಿದ್ದವ್ |೫೧೮|
ರಂಗನ ಕೊಳಲ ಧ್ವನಿಗೆ ಸಾರಂಗ ಎರಳೆ ಹುಲ್ಲೆ,
ದೇಶಂಗಳ ಬಿಟ್ಟು ಭ್ರಮಿತವಾಗುತಿದ್ದುವು |೫೧೯|
ಗೋವಿಂದನ ಕೊಳಲ ಧ್ವನಿಗೆ ಗೋವಿನ ಹಿಂಡುಗಳು
ಮೇವು ನೀರು ಬಿಟ್ಟು ಕಿವಿಯ ಮ್ಯಾಲೈಸಿದವು |೫೨೦|
ಹರಿಯ ಕೊಳಲ ಧ್ವನಿಯ ಕೇಳಿ ಹರಿಯುತ್ತಿದ್ದ ಯಮುನಾದೇವಿ,
ಸುಳಿಗಳ ನೆವದಿ ನಿಂತು ಕೇಳುತ್ತಿದ್ದಳು |೫೨೧|
ಕೌಸ್ತುಭದಾ ಬೆಳಕಿಗೆ ಸೂರ್ಯ ಉದಿಸಿದನೆಂದು,
ತಾವರೆಗಳು ಅರಳಿದುವು ಚಕೋರಗಳು ನಲಿದುವು |೫೨೨|
ಹರಿಯ ನಖದ ಬೆಳಕಿಗೆ ಬೆಳದಿಂಗಳು ಬಂದಿತೆಂದು,
ಭ್ರಮಿಸುತಿದ್ದವೆ ಚಂದ್ರಕಾಂತಿ ಪ್ರಭೆಗಳು |೫೨೩|
ಸಿರಿದೇವಿ ತಾನು ಒಂದು ಬಿದುರು ರೂಪಿನಿಂದ ಬಂದು,
ಹರಿಯ ವದನ ಶ್ರುತಿಯ ಪಾನ ಮಾಡುತಿದ್ದಳು |೫೨೪|
ಶ್ರೀ ಹರಿಯ ವದನಾಮೃತ ಪಾನವನ್ನು ಮಾಡುವುದಕೆ
ಏನೇನು ಸುಕೃತಗಳ ಮಾಡಿತೆಂದರು |೫೨೫|
ಕೇರಿಗಳ ಬಳಿದು ಪನ್ನೀರುಗಳನ್ನೆ ತಳಿದು,
ಸಾಲು ದೀವಿಗಿಟ್ಟ ಸಂಭ್ರಮವ ಕಂಡರು |೫೨೬|
ರಂಗ ಬೀದಿಯಲ್ಲಿ ಬರೆ ಮಂಗಳಾರತಿಗಳು
ಕಂಗಳ್ ಹಬ್ಬವಾಯಿತು ಅಂಗನೆಯರಿಗೆ |೫೨೭|
ರಂಗನ ಮುಖಾಂಬುಜವ ಕಂಗಳೆಂಬ ಭೃಂಗಗಳಿಂದ,
ಅಂಗನೆಯರು ಪಾನ ಮಾಡಿ ಧನ್ಯರಾದರು |೫೨೮|
ಪಶುಗಳ ಮಧ್ಯದಲ್ಲಿ ವೃಷಭಗಳು ಓಡುತಿರಲು
ಹಸುಳೆ ಕರುವು ಹಾಲು ಕಾರಿ ಚಿಮ್ಮುತ್ತಿದ್ದುವು |೫೨೯|
ಪಶುಗಳ ಪಾಲಿಸಿಕೊಂಡು ಬಿಸಜಾಕ್ಷ ಮನೆಗೆ ಬರಲು
ಯಶೋದೆ ಉದ್ದು ಬೇವು ಹಾಕಿ ಎತ್ತಿಕೊಂಡಳು |೫೩೦|
ಏಳು ಗೂಳಿಯ ಕಟ್ಟಿ ಸೋದರತ್ತೆಯ ಮಗಳು
ನೀಳಾದೇವಿ ಮದುವೆಯಾದ ಬಾಲಕೃಷ್ಣನು |೫೩೧|
ಮುಂಜಿಯ ಪೂರ್ವದೊಳ್ ಹರಿಯ ಸಂಗಮವಾಗಲೆಂದು,
ಇಂದಿರೇಶನ ತಪಿಸೆ ಕಾಳಿಂದಿ ರಮಣಿಯು |೫೩೨|
ಹೇಮಂತ ಋತುವಿನಲ್ಲಿ ಕಾಂತೆಯರೆಲ್ಲರು,
ಕಾಂತ ಕೃಷ್ಣನ ಕಂಡು ವಿನಯ ಮಾಡುತಿದ್ದರು |೫೩೩|
ನಂದಗೋಪ ಕೃಷ್ಣ ತಮ್ಮ ಗಂಡನಾಗಬೇಕೆನುತ,
ಅಂಗನೆಯರು ಗೌರಿದೇವಿಯ ಪೂಜಿಸಿದರು |೫೩೪|
ಸೀರೆಗಳ ಬಿಚ್ಚಿ ನೀರದಡದಲಿಟ್ಟು ಅವರು,
ಮಾಧವನ ಮನದೊಳಗೆ ನೆನೆವುತಿದ್ದರು |೫೩೫|
ಮೌನಗೌರಿ ಪೂಜೆಗಳ ಮಾಡಬೇಕೆಂದೆನುತ,
ನೀರೊಳಗೆ ಇಳಿದರು ನಾರಿಯರೆಲ್ಲರು |೫೩೬|
ಅಷ್ಟರೊಳಗೆ ಕೃಷ್ಣನವರು ಬಿಚ್ಚಿಟ್ಟ ಉಟ್ಟ ಸೀರೆ
ಕಟ್ಟಿ ಸೆಳೆದು ಮೆಲ್ಲನೊಂದು ತರುವನೇರಿದ |೫೩೭|
ಮಿತ್ರೆಯರ ಸೀರೆಗಳ ಕೃಷ್ಣ ಮೊಟ್ಟೆಕಟ್ಟಿಕೊಂಡು
ಕಷ್ಟಗೊಳಿಸಬೇಕೆಂದು ತರುವನೇರಿದ |೫೩೮|
ಅಂಗನೆಯರ ಸೀರೆಗಳ ರಂಗ ಮೊಟ್ಟೆಕಟ್ಟಿಕೊಂಡು
ಭಂಗಪಡಿಸುವೆನೆಂದು ತರುವ ಏರಿ ಕುಳಿತನು |೫೩೯|
ಅಂಬರದಿ ಸುರರು ಎಲ್ಲ ಅಂಜಿ ಓಡಿ ಹೊಗುತಿರಲು
ಕಂಜಾಕ್ಷಿ ನಕ್ಕು ಕೈಯಂ ಹೊಯ್ದು ನಿಂತಳು |೫೪೦|
ಉಡುವ ಸೀರೆಗಳನೊಯ್ದು ತರುವನೇರಿಕೊಂಡರೆ,
ಒಡೆಯರಿಲ್ಲವೊ ಜಗಕೆ ರಂಗನೆಂದು ಕೇಳಲು |೫೪೧|
ಏನನೆಂದರು ನಿಮ್ಮ ಮಾನಭಂಗ ಮಾಡದೇ
ನಾನು ಬಿಡಲಾರೆನೆಂದು ಹೇಳುತಿದ್ದನು |೫೪೨|
ಪೋಕಾಟದ ನುಡಿಯ ಕೇಳಿ ಭೂಕಾಂತ ದೇವನೊಡನೆ,
ನಾಚಿ ನುಡಿಯಲರಿಯದೆ ಸುಮ್ಮನಿದ್ದರು |೫೪೩|
ಕುತ್ತಿಗುದ್ದ ನೀರೊಳಗೆ ಮಡದಿಯರು ನಿಂತುಕೊಂಡು
ಕೃಷ್ಣ ಸೀರೆಗಳ ಕೊಡು ಎನುತಲಿದ್ದರು |೫೪೪|
ಉಡಿಯುದ್ದ ನೀರೊಳಗೆ ಮಡದಿಯರು ನಿಂತುಕೊಂಡು
ನಡುಗುತೇವೆ ಸೀರೆಗಳ ಕರುಣಿಸೆಂದರು |೫೪೫|
ಪಟ್ಟಾವಳಿ ಸೀರೆಗಳು ಉಂಟು ನಿಮ್ಮ ಮನೆಗಳಲ್ಲಿ
ಮಿತ್ರೆಯರು ಹೋಗಿ ಉಟ್ಟುಕೊಳ್ಳಿರೆಂದನು |೫೪೬|
ಮಿತ್ರೆಯರೆಲ್ಲರು ಮುತ್ತುಕದಲೆಯನುಟ್ಟು
ಕೃಷ್ಣನ ಕೂಡೆ ಸೀರೆ ಕೇಳುತಿದ್ದರು |೫೪೭|
ತಾವರೆಯ ಎಲೆಗಳಿಂದ ಭಾಮಿನಿಯರು ಉಟ್ಟುಕೊಂಡು
ವಾರಿಜಾಕ್ಷನ ಕೂಡೆ ಸೀರೆ ಕೇಳುತಿದ್ದರು |೫೪೮|
ಅಂಗನೆಯರೆಲ್ಲ ತಮ್ಮ ತಮ್ಮಂಗಗಳನೆಲ್ಲವ,
ಅಂಗೈಯಿಂದಲಾಚ್ಛಾದಿಸಿ ಬಂದು ನಿಂತರು |೫೪೯|
ಕೇಶಂಗಳ ಬಿಚ್ಚಿ ತಮ್ಮಂಗಗಳ ಮರೆಯ ಮಾಡಿ,
ವಾಸುದೇವನ ಕೂಡೆ ಸೀರೆ ಕೇಳುತಿದ್ದರು |೫೫೦|
ಒಬ್ಬಳಾ ಹೆಗಲಮೇಲೆ ಮತ್ತೊಬ್ಬಳು ಏರಿಕೊಂಡು,
ಅಬ್ಜಾಕ್ಷನ ಕಡಹದ ಮರವನೇರಿ ಬಂದರು |೫೫೧|
ಏರಿ ಬರುವುದನು ಕಂಡು ವಾರಿಜನಾಭನು ನಕ್ಕು,
ಏರಿ ಬಾ ನಿನ್ನ ಧೈರ್ಯ ನೋಡುವೆ ಎಂದನು |೫೫೨|
ಅರಸನ ಮಗನು ಎಂದು ಕ್ಷಮಿಸಿಕೊಂಡಿದ್ದೆವು,
ಸರಸಿಜಾಕ್ಷನ ವೃಕ್ಷಕ್ಕೆ ಮೊರೆಯನಿಟ್ಟರು |೫೫೩|
ಹೆಂಗಳ ಭಂಗಪಡಿಸೋದು ರಂಗ ನಿನಗೆ ಉಚಿತವೇನೊ,
ನಂದಗೋಪನ ಮುಂದೆ ಹೇಳಿ ಕೂಳಿಸುವೆವೆಂದರು |೫೫೪|
ಬತ್ತಲೆ ನೀರಿಗಿಳಿದ ತಪ್ಪು ಕಾಯಬೇಕೆನುತ
ಎತ್ತಿ ಎರಡು ಕೈಗಳನ್ನು ಮುಗಿಯಿರೆಂದನು |೫೫೫|
ಅಂಗನೆಯರೆಲ್ಲ ಕಾಳಿಂದಿಯ ದಡದಲ್ಲಿ ನಿಂತು,
ಬಂದು ಕೈ ಎತ್ತಿ ಕರವ ಮುಗಿಯುತ್ತಿದ್ದರು |೫೫೬|
ಒಂದು ಕೈಯ ಮುಗಿದರೆ ಇಂದ್ರಾದಿಗಳೊಪ್ಪರು,
ಚೆಂದಂದಿಂದ ಎರಡು ಕೈಯ ಮುಗಿಯಿರೆಂದನು |೫೫೭|
ಕಮಲ ಮುಖಿಯರೆಲ್ಲರು ಯಮುನೆಯ ದಡದಲ್ಲಿ ನಿಂತು,
ಎರಡು ಕೈ ಎತ್ತಿ ಕರವ ಮುಗಿಯುತ್ತಿದ್ದರು |೫೫೮|
ರಂಗನಂಗ ನೋಡಿ ನಗುತ ಒಂದೊಂದೆ ಸೀರೆಗಳು,
ಅಂಗನೆಯರ ಮುಖವ ನೋಡಿ ಕೊಡುತಲಿದ್ದನು |೫೫೯|
ಪಟ್ಟೆ ಸೀರೆ ನಿಮ್ಮದೇ ಪೈಟ್ನಿ ಸೀರೆ ನಿಮ್ಮದೇನು,
ಪಪ್ಪಳಿ ಸೀರೆ ಇದ್ಯಾರದೆನುತ ಕೇಳಿದ |೫೬೦|
ಶಾಲಿ ಸೀರೆ ನಿಮ್ಮದೇ ಸಣ್ಣ ಸೀರೆ ನಿಮ್ಮದೇ,
ಗೋವಳನು ಸೀರೆ ಯಾರದೆನುತಲಿದ್ದನು |೫೬೧|
ದೇವಗಿರಪಟ್ಟೆ ಸೀರಯಾಳಿ ಮೊದಲಾದ ಸೀರೆ,
ಚಿನ್ನದ ಕಂಬಿಯ ಸೀರೆ ಸೆರಗು ಬರೆದಿದೆ |೫೬೨|
ಕೊಟ್ಟ ಸೀರೆಗಳನೆಲ್ಲ ಉಟ್ಟುಕೊಂಡು ನಾರಿಯರು
ಕೃಷ್ಣನ ಕಂಡು ಮೋಹಿಸುತಲಿದ್ದರು |೫೬೩|
ರಾತ್ರಿ ವೇಳ್ಯದಲ್ಲಿ ನಮ್ಮ ಪ್ರೀತಿಪಡಿಸದಿದ್ದರೆ,
ಮೋಹಿಸಿದ ಫಲವು ಸಿದ್ಧಿಯಾಗದೆಂದರು |೫೬೪|
ರಾತ್ರಿ ವೇಳ್ಯದಲ್ಲಿ ಬಂದು ಪ್ರೀತಿ ಪಡಿಸುವೆನೆಂದು,
ಮೋಹಿಸಿದ ಫಲವು ಸಿದ್ಧಿ ಆಗುವುದೆಂದನು |೫೬೫|
ವೃಂದಾವನದಿಂದ ಉದ್ಯಾನವನಕೆ ಬಾಹೆನೆಂದು ಕೃಷ್ಣ,
ಅಂದು ಸ್ಮರಿಸೆ ಗೋಪಾಲಕರು ಬಂದರಲ್ಲಿಗೆ |೫೬೬|
ನಿತ್ಯ ತೃಪ್ತ ವಾಸುದೇವ ಹಸಿದೆನೆಂದು ಅನ್ನಕೆ
ಸಪ್ತಯಾಗ ಋಷಿಗಳಿಗೆ ಹೇಳಿ ಕಳುಹಿದ |೫೬೭|
ಬಂದು ಗೋಪಾಲಕರು ನಿಂದು ಕರಗಳನ್ನೆ ಮುಗಿದು
ಗೋವಿಂದ ರಾಮರು ಅನ್ನ ಬೇಡಿದರೆಂದರು |೫೬೮|
ಸ್ನಾನ ಜಪವ ಮಾಡಲಿಲ್ಲ ಹೋಮ ನಿತ್ಯವಾಗಲಿಲ್ಲ
ವೇಳ್ಯವಲ್ಲ ಅನ್ನಕೆಂದು ಹೇಳುತಿದ್ದರು |೫೬೯|
ಬಂದು ಗೋಪಾಲಕರು ನಿಂದು ಕರಗಳನ್ನೆ ಮುಗಿದು
ಗೋವಿಂದ ರಾಮರ ಕೂಡೆ ಹೇಳುತಿದ್ದರು |೫೭೦|
ಸ್ನಾನ ಜಪವ ಮಾಡಲಿಲ್ಲ ಹೋಮ ನಿತ್ಯವಾಗಲಿಲ್ಲ
ವೇಳ್ಯವಲ್ಲ ಅನ್ನಕೆಂದು ಹೇಳುತಿದ್ದರೂ |೫೭೧|
ಪತ್ನಿಶಾಲೆಗ್ ಹೋಗಿ ಯಜ್ಞಪತ್ನಿಯರ ಕುರಿತು ಕೇಳಿ
ಕೃಷ್ಣರಾಮರನ್ನವ ಬೇಡಿದರೆನ್ನಿ |೫೭೨|
ಬಂದು ಗೋಪಾಲಕರು ನಿಂದು ಕರಗಳನ್ನೆ ಮುಗಿದು,
ಕೃಷ್ಣ ರಾಮರನ್ನಗಳ ಬೇಡಿದರೆಂದರು |೫೭೩|
ಅಂಗನೆಯರು ತಾವು ಎಲ್ಲ ಧನ್ಯರಾದೆವು ಎಂದು,
ಪನ್ನಂಗ ನರಹರಿಗೆ ಅನ್ನವನಿತ್ತರು |೫೭೪|
ಶಾಲಾನ್ನ ಸೂಪ ಭಕ್ಷ ಪಾಯಸ ದಧಿ ಘೃತವು
ಭಾಮೆಯರು ಉದ್ಯಾನವನಕೆ ಕೊಂಡುಬಂದರು |೫೭೫|
ಆಗ ಒಬ್ಬ ಮುನಿಯು ಬಂದು ಹೋಗಬೇಡವೆಂದು ತಡೆಯೆ
ದೇಹ ನಿನ್ನದೆಂದು ಬಿಟ್ಟು ದೇವರ ಕಂಡಳು |೫೭೬|
ಹಾರ ಮುಕುಟ ಪೀತಾಂಬರಧಾರ ನೀಲವರ್ಣನ,
ಕೂಡೆ ಬಲರಾಮನಿರುತಿರಲು ಕಂಡಳು |೫೭೭|
ತಂದ ಷಡ್ರಸಾನ್ನವ ಗೋವಿಂದಗರ್ಪಿಸಿ,
ಸಂದರೆಲ್ಲ ಮುಕ್ತಿಗೆ ಸತಿಯರೆಲ್ಲರು |೫೭೮|
ಅಂದು ಸತಿಯರನ್ನವನ್ನು ತಂದು ಕೊಟ್ಟರೆಂದು ಕೇಳಿ
ಮಂದಮತಿಗಳು ನಾವಾದೆವೆಂದರು |೫೭೯|
ಪ್ರತ್ಯಕ್ಷದಿಂದ ಪರಮಾತ್ಮ ಬೇಡಲು ಅನ್ನವ
ಕೊಟ್ಟುದಿಲ್ಲ ನಮ್ಮಷ್ಟು ಭ್ರಷ್ಟರಿಲ್ಲವು |೫೮೦|
ಕೊಡುವಲ್ಲಿ ಶ್ರೀಕೃಷ್ಣಾರ್ಪಣವೆಂತೆಂದರು,
ಅನೇಕ ಜನ್ಮದ ಫಲವು ಸಿದ್ಧಿಯಾಯಿತು |೫೮೧|
ಕಷ್ಟಪಟ್ಟು ಜಪತಪವ ಎಷ್ಟು ಮಾಡಿದರೂ ಶ್ರೀ
ವಿಷ್ಣು ಸರ್ವೋತ್ತಮನೆಂಬ ಜ್ಞಾನ ಹುಟ್ಟದ್ ಹೋಯಿತು |೫೮೨|
ಸ್ನಾನ ಜಪವ ತಿಳಿಯಲಿಲ್ಲ ಹೋಮ ನಿತ್ಯವರಿಯಲಿಲ್ಲ
ಏನೂ ಅರಿಯದ ಸ್ತ್ರೀಯರಿಗೆ ಜ್ಞಾನ ಬಂದಿತು |೫೮೩|
ಇಂದ್ರಪರ್ವ ಮಾಡುವೆನೆಂದು ನಂದಗೋಪ ವನಕೆ ತೆರಳೆ,
ವಂದಿಸಿ ಕಾರ್ಯವೇನೆಂದು ಕೇಳಿದ |೫೮೪|
ಗೋವುಗಳಿಗೂ ನಿಮಗೂ ಕ್ಷೇಮವಾಗಬೇಕೆಂದೆನುತ,
ನಾನು ಪುರಂದರನ ಪೂಜಿಸುವೆನು |೫೮೫|
ಇಂದ್ರನಿಂದ ನಿನಗೆ ಕ್ಷೇಮ ಎಂದಿಗೂ ತಿಳಿಯಬೇಡ
ತಂದ ಅನ್ನ ಪರ್ವತಕಿಕ್ಕಿ ವಂದಿಸೆಂದನು |೫೮೬|
ಅಂದ ಮಾತ ಕೇಳಿ ಬೇಗ ನಂದಗೋಪ ಅನ್ನವ
ತಂದು ಗೋವರ್ಧನದ ಮುಂದೆ ಸುರಿದನು |೫೮೭|
ಗೋವರ್ಧನ ಗಿರಿಯ ಮುಂದೆ ಗೋವು ಗೋಪರೆಲ್ಲ ನಿಂತು,
ತಾವು ಒಂದು ರೂಪಿನಿಂದ ಉಣುತಲಿದ್ದರು |೫೮೮|
ಕೃಷ್ಣ ಬೆಟ್ಟದ ರೂಪಿನಿಂದ ಅಷ್ಟು ಅನ್ನಗಳ ಉಂಡು,
ಒಂದಿಷ್ಟು ಭಯಪಟ್ಟುದಿಲ್ಲ ಇಂದ್ರನಿಗಾಗಿ |೫೮೯|
ಇಂದ್ರನ ದೂತರು ಬಂದು ಆ ಕ್ಷಣದ ನಂದಸುತರು
ಎಂಜಲು ಮಾಡಿದರೆಂದು ಹೇಳಲು |೫೯೦|
ಯಾಕೆ ಇನ್ನು ಅವಗೆ ಅಷ್ಟು ಗೋಕುಲವ ಕರಗಿಸುವೆನೆಂದು,
ಕೋಪದಿಂದ ಕಾರ್ಮೋಡಗಳ ಕರೆದನು |೫೯೧|
ಸುರಪತಿಯು ಕೋಪಿಸಿ ಸುರಿದನಾಗ ಏಳು ದಿನ
ಹಗಲು ಇರುಳು ಸುರಿಮಳೆಗಳನು |೫೯೨|
ಬಂದಿತು ಸಿಡಿಲು ಮಿಂಚು ಅಂಧಕಾರವಾಯಿತು,
ಅಂಬುಧಿ ಕಾಣದೆ ಅಂಬು ತುಂಬಿತು |೫೯೩|
ಸಿಡಿಲು ಮಿಂಚು ಭೋರಿಡುತ ಗುಡುಗು ಮಿಂಚು ಎರಗಲು
ದೆಸೆಗೆಟ್ಟ ಗೋಪಾಲಕರ್ ಹರಿಯ ಮೊರೆಯ ಹೊಕ್ಕರು |೫೯೪|
ಮೊರೆ ಹೊಕ್ಕ ಗೋಪಾಲಕರಿಗೆ ಅಭಯವಿತ್ತು ಶ್ರೀಕೃಷ್ಣ
ಕಿರುಬೆರಳಿಂದ ಗೋವರ್ಧನ ಗಿರಿಯನೆತ್ತಿದ |೫೯೫|
ಗೋವರ್ಧನಗಿರಿಯ ಮುಂದೆ ಗೋವು ಗೋಪರೆಲ್ಲ ನಿಂತು,
ಯಾವ ಕಡೆ ಹೋಯ್ತು ಮಳೆ ಎನುತಲಿದ್ದರು |೫೯೬|
ಕಾರ್ಮೇಘ ಮಳೆಯ ಕರೆಯೆ ಕಂಗೆಡದೆ ಇರಲು ಕಂಡು
ಶ್ರೀದೇವನೆಂದು ತಿಳಿದು ದೇವೇಂದ್ರ ಬಂದನು |೫೯೭|
ಇಂದಿರಾರಮಣನೆಂದು ಒಂದಿಷ್ಟು ಅರಿಯದೆ,
ಮಂದಮತಿಯು ನಾನಾದೆನೆಂದು ನುಡಿದನು |೫೯೮|
ಇಂದ್ರ ನಿನಗೆ ಅಸುರಾವೇಶ ಬಂದದ್ ಹೋಗಬೇಕೆಂದು
ಇಂದು ಹೀಗೆ ಮಾಡಿದೆ ನಾನೆಂದ ರಂಗನು |೫೯೯|
ಇಂದಿರಾ ರಮಣನ ಮೇಲೆ ಇಂದ್ರಾದಿ ದೇವತೆಗಳು,
ಮಂದಾರದ್ ಹೂವಿನ ಮಳೆಯ ಕರೆದರು |೬೦೦|
ಮೈಯ ತೊಳೆದು ಮಡಿಯನುಟ್ಟು ಮಾಲಿಕೆಗಳನ್ನು ಧರಿಸಿ,
ಸುರಭಿ ಬಂದಳೆ ಸ್ವರ್ಗ ಲೋಕದಿಂದಲಿ |೬೦೧|
ಬಂಗಾರದ ಕೊಡದೊಳಗೆ ತಂದು ಕ್ಷೀರಾಬ್ಧಿಯ
ಇಂದಿರಾರಮಣಗಭಿಷೇಕ ಮಾಡಿದ |೬೦೨|
ಪೂತನಿ ತೃಣಾವರ್ತ ಕೇಶಿ ಧೇನು ಬಕನ ಕೊಂದ
ಆ ಚರಿತ್ರ ಪಾಡಿದರೆ ಅಮರವಂದ್ಯನ |೬೦೩|
ಕೃಷ್ಣನ ಚರಿತ್ರೆಯನ್ನು ಕೇಳಿದ ಕಂಸ ತನಗೆ,
ಮೃತ್ಯುವಾಗಿ ಬೆಳೆದ ಸಂದೇಹವಿಲ್ಲವು |೬೦೪|
ರಂಗನ ಚರಿತ್ರೆಯನ್ನು ಕೇಳಿದನೆ ಕಂಸನು,
ಕೊಂದು ನಿದ್ರೆಗೈವುದು ಎಂದಿಗೆಂದನು |೬೦೫|
ಹುಣ್ಣಿಮೆ ಬೆಳದಿಂಗಳಲ್ಲಿ ಕಾಳಿಂದಿಯ ತೀರದಲ್ಲಿ
ಕ್ರೀಡಿಸಬೇಕೆನುತ ಕೃಷ್ಣ ವನಕೆ ತೆರಳಿದ |೬೦೬|
ರಂಗ ಬೇರಂಗಿ ಕೂಡೆ ಪೊಂಗೊಳನೂದುತ್ತ
ಅಂಗನೆಯರ ಚಿತ್ತಗಳ ಭ್ರಮಿಸುತ್ತಿದ್ದನು |೬೦೭|
ಕರಿಯುತಿದ್ದ ಪಶುಗಳ ಕಡೆಗೆ ಬಿಟ್ಟು ಮಕ್ಕಳ,
ಮೃಡನ ಪ್ರಿಯನಿದ್ದೆಡೆಗೆ ಬರುತಲಿದ್ದರು |೬೦೮|
SrI kRuShNabAlalIle
pUrvArdha
kamalanABana pAdakamalagaLige namO eMbe
amalamatiya koDuvudeMdu kamalegeraguve |1|
vAyu hanuma BIma SrImadAnaMdatIrthara
pAdapadmagaLigeraguve parama haruShadiMdalI |2|
sakala vidvat prauDharAda suKatIrthara matava
prakaTisida vyAsamuniya caraNakeraguve |3|
nyAya sudheya vyAKyAna mADi mAyavAdigaLa gelida
rAya rAmacaMdrara caraNakeraguve |4|
prANanAtha viriMcarige rANivAsavAgiralu vEda
vartamAnigaLige vaMdipe nAnu |5|
mukkaNNa haranu jagakke guru eMdenisi
Sakra surABIShTarige SaraNeMdenU |6|
madhvamatAbdhi pUrNacaMdranAda jayamuniya
pAdagaLigeraguvE parama haruShadi |7|
hiriyarige gurugaLige munigaLige RuShigaLige
eragi pELve rAmakRuShNara bAlalIleya|8 |
cittadollaBana pAdacittadalli iTTu nAnu
BaktiyiMda pELve rAmakRuShNa cariteya |9 |
GaTTa beTTa sAgara suttalidda asurara
hottiralAreneMdu pRuthvi attaLu |10|
rAja daityarannu tALalArade BUmidEvi
pOgi moreyiTTaLu dEvategaLige | 11|
dEvategaLellaru BUmidEviyoDagoMDu –
kShIrasAgara Sayananeduru baMdarAgale | 12|
gOvurUpa dharisi BUmidEvi ajana baLige baralu
dEvAdidEvana stutisuttiddaru | 13|
aMbudhiSayananAgi aMbujAkSha malagiralu
baMdu dEvategaLella stutiya mADalu | 14|
vAridhiSayananAgi aMbujAkSha malagiralu
baMdu dEvategaLella stutiya mADalu |15|
dEvategaLa mAta dEva cittadalliTTu baMdu
dEvakiyallavatarisuveneMdanu |16|
vasudEvanalli huTTi asurara kolluveneMdu
vasudheBAra iLuhuveneMda vAsudEvanu | 17|
hAsigeyAgiruva SEShadEvaranne karedu
jaiShThanAgi muMcyavatarisu eMdanu |18|
aditi kASyaparu maruta gaMdharvarU
sanakAdi yOgigaLu janisireMdanU | 19|
munigaLella taru pakShi mRugagaLAgi janisidaru
animiSharella gOpAlarAdaru |20|
sanakAdi yOgigaLu paSugaLAgi janisidaru
turuva kAyva gollanAda paramAtmanu |21|
dEvara bAlalIle nODabEkeMdenuta
drONaneMba vasu naMdagopanAdanu |22|
kRuShNana bAlalIle nODabEkeMdenuta
Aga dharAdEvi yaSOdeyAdaLu |23|
SUranalli kASyapa vasudEvanAgi janisidanu
dEvakanalli aditidEvi dEvakiyAdaLu |24 |
dEvaki vasudEvarige vivAhadutsavava mADe
dEvaduMduBigaLAvAgaleseduvu | 25 |
nAku bIdiyalli kaMsa anEka saMBramava merasi
AkASavANi avana kuritu nuDiyitu |26|
taMgiyA maduve eMdu saMBramagoLalu bEDa
kolluvanu Akeya kaMda ninnanU |27|
aShTamiya rOhiNiyalli huTTidA maganu ninage
mRutyuvAhaneMdu AvirBUta nuDiyitu |28|
AkASavANi nuDiye AkeyA koluveneMdu
vyAkuladiMda kaMsa naDedu baMdanu | 29 |
Baginiya kolluveneMdu bahaLa kOpadiMda baMda
Ayudhavanne hiDidu kaMsa kaDivenenutali |30|
kUDe huTTidavaLa koMdu duShkarmavanu mADuvare
bEDa kaMsa strI hatya bEga bAhudu |31 |
enna prANake munida taMgi iddu prayOjanavEnu
kaNNu hOda hubbu tanage bEDaveMdanu |32|
AnakaduMduBi kaMsagAnEka vidhavAgi tiLuhi
Ada sutaranella ninage IveneMdanu |33|
eMda mAta kELi tAnu naMbalAreneMda kaMsa
AyudhavaniTTu aDDa dATu eMdanu |34|
hELidA mAtu kELi tAnu tALalAreneMda kaMsa
gAMDIva iTTu aDDa dATu eMdanu | 35 |
Ane iLidu vasudEva rANiyA kaiyA hiDidu
Ayudhava dATi aramanege naDedanu | 36 |
aMdaNavaniLidu vasudEva haMDati kaiya hiDidu
gAMDIvava dATi aramanege naDedanu |37|
Aga aramaneyoLage BAme dEvakidEvi
bEgadiMda RutumatiyAguttiddaLu |38|
kELi ugrasEnarAya bahaLa saMtOShadiMda
SOBanava mADisida aShTu haruShadi |39|
aShTa RuShigaLanne karesi aShTa PalagaLanne tarisi
putriya kaiyalli PaladAnava koDisida |40 |
Aga aramaneyoLage BAme dEvaki dEvige
bEgadiMda prathama garBavAgutidditu |41 |
kELi ugrasEna rAya bahaLa saMtOShadiMda
sImaMtava mADisida aShTu haruShadi |42|
bAlakanu huTTuttiralu bEgadiMda vasudEva
kaMsana muMde iTTu karava mugidu niMtanU |43|
bAlakana nODuta bahaLa saMtOShadiMda
nInu ninna manege bEga hOgu eMdanU |44 |
aMda mAtu kELi tAnu baMdanAga vasudEva –
heMDatiya kaili SiSuva taMdu koTTanU |45|
hELida mAtu kELi tAnu hOda vasudEva
rANiya kaili SiSuva taMdu koTTanU |46|
aMbaradiMdali baMdarIga nAradaru
iMdirApati Ita saMdEhavillavU |47|
dEvaki vasudEvarige sereya saMkOle hAksi
bAgila muMde BaTara taMdu kAvaliTTanu |48|
nAradana mAta kELi bahaLa kOpavanne tALi
Ayudhavannu hiDidu aramanege baMdanu |49|
Aru maMdi putrara dEvakiyu paDediralu
Aga kaMsa SileyoLappaLisi koMdanU | 50 |
ELaneya garBa dEvakige mUru tiMgaLAgutiralu
mAye seLedukoMDu rOhiNiyalliTTitU |51|
seLeyapaTTu SEShanAgi saMkarShaNaneMdenisi
janisidane rOhiNiya gRuhadoLAgalE |52 |
dEvakigELaneya garBa SuruvAdaveMdu
bahaLa vAkyadiMda janaru ADikoMbaru |53|
dEvakiya garBadoLage dEva SrIhariyu janise
bahaLa vAkyadiMda janaru ADikoMbaru |54 |
akaLaMkacarita dEvakiya basuroLage baMdiralu
vikasitavAdudu avaLa muKa kamalavu | 55 |
mUru lOkava tirugi nArada muniyu baralu
buddhi kShameyiMda mAtanADutiddanu |56 |
pUrvakAladalli kAlanEmi viShNu kaili maraNa ninage
I janmadali hariya kaiyali maraNaveMdanu |57|
oMdu divasa dEvakiya maMdirakke baMda kaMsa
taMgiya muKada kAMtiya nODi beragu biddanu |58 |
eMdinaMtalla garBa ceMdavAgi tOrutide
koMdItu enna saMdEhavillavu |59|
dEvakigeMTaneya garBa bahaLa eccarike eMdu
hELidane kaMsa tanna ALu maMdige |60|
dEvaki vasudEvarige sereya saMkOle hAksi
bAgila muMde BaTara taMdu kAvaliTTanu |61|
purada bAgilugaLikki janaru ella nidregaiva
samayadali dEvaki dEviya naDu noMduvu |62 |
aShTamI rOhiNiyalli ardharAtri vELyadalli
acyutana caritavAvirBUtavAyitu |63|
SrAvaNa bahuLa aShTamiyalli caMdra udaya kAladalli
BUmiya mEle kRuShNanavatarisidanu |64|
Sukla SONita saMbaMdha prasakti tanagillaveMdu
SaMKa cakra caturBujadalavatarisidanu |65|
jagadoDeya dEvakiya gRuhadoLage janisiralu
dharaNidEvi tanna BAraviLuhiteMdaLu |66 |
paTTaNada kEriyoLage suttELu gRuhadoLage
pakShivAhana kRuShNana beLaku tuMbitu |67|
rAja bIdiyoLage nAlkeLu gRuhadoLage
vArijanABana beLaku tuMbitu |68 |
paTTaNada beLaku kaMDu duShTa kaMgeTTu aMji
mRutyu baMditu saMdEhavillavu |69|
dEvakiya gRuhadoLage dEva SrIhariyu janisi
Aga ajanu baMdu tutiya mADi hOdanu | 70 |
dEvAdidEvanE vEdapAlakanE
mAvamardananeMdu brahma tutisida |71 |
asura saMhAra nIne SiSupAla vairi nIne
kaMsa mardananeMdu brahma tutisida |72|
SaMKa cakra gadA padma aMkita pItAMbara uTTa
paMkajAkShana kaMDu avaru SaMkisidaru |73|
pItAMbara uTTukoMDu lakShmIdEviyaru sahita
SaMKa cakra caturBujadalavatarisida |74|
SaMKa cakra gadA paduma mukuTa kaustuBahAra
SrIvatsa kuMDalavu nosala tilakavu |75|
uTTa poMbaTTeyu hodda pItAMbaravu
hoLeye kattalegaLella haridavAgalE |76|
hRudayadi tulasiya sara vaijayaMti mAlegaLu
asura mardananati muddu muKava kaMDaru |77|
esaLu kaMgaLu tudinOTada karuNa rasavu
suriye halavu kuruLu celuva muddu kRuShNa janisida |78|
caturBujadiMda vyaktanAda SaMKa cakra gadA dharisi
prAkRutaBAvanAgi muMde baMdu niMtanu |79|
niMtiruva hariya kaMDu aMji dEvakidEvi
baMdu vasudEvana appikoMDaLu |80 |
aMjabEDa tAye eMdu raMga aBayavannu koTTa
hiMdinA tapake mecci baMdeneMdanu |81 |
hedarabEDa tAye eMdu hariyu aBayavannu koTTa
halavu kAlada tapake mecci baMdeneMdanu |82|
hiMdake varavanittu baMde ninna garBadalli
naMdagOpa gOpiyararti salisa baMdenu | 83 |
adButavAda SiSuva kaMDu AdipuruShaneMdu
mai ubbi vasudEva stutiya mADida |84|
kESava nArAyaNa mAdhava gOviMda
vAsudEva karuNiseMdu stutisutiddanu | 85 |
stutigaLE bahaLa bEDa kaMsana Bayavu nimage
SiSuvAgi nimmanu saluhuveneMda |86|
maguvAgi moradoLage malagi nimma saluhuve
balarAmana kUDe hOgi beLeveneMdanu |87|
pRuSnijanmadalli nimma udaradalli puTTide
aditi kASyaparalli vAmananAgi puTTide |88|
mUru janmadalli nimma udaradalli puTTide
muktige yOgyaLAde dEvaki eMdanu |89 |
mUru janmadalli tapasu mADidella gaLisitu
muktige aidu dEvaki eMdanu |90|
Aga seremaneyoLage BAme dEvakidEvi
sOdarAge aMji mAtanADuttiddaLu |91 |
maMdiya oLage enna kaMdaneMdu tiLisabEDa
oMdu mADiseMdu raMgage bEDikoMDaLu |92 |
mAteya stOtravanne kELi dEva prItanAgi nuDida
sOdarana Bayavu nimage bEDaveMdanu |93|
putra huTTidaneMdu artiyiMda vasudEva
hattu sAvira gOvudAna saMkalpa mADida |94|
bAla huTTidaneMdu haruShadiMdali vasudEva
nUru lakSha gOvudAna saMkalpa mADida |95 |
vasudEvana stutiya kELi asuramardana kRuShNa
SiSurUpava dharisidanAkShaNadalli |96|
kALiMdiya tIradalli naMdagOpana paLLi
maMdiradoLiTTu heNNu magaLa taMdukO |97|
dEvanADida mAta kELi vasudEvanetti naDeyutiralu
bIga mudregaLu saDili dvAra tereduvu |98 |
gastu eccaritu kUge Aga vasudEvanu
kavaLava koTTu bEga bEDikoMDanu |99|
haniya maLege SESha tanna heDeya koDeya mADida
yamune IrBAgavAgi dAri koTTaLu |100|
durge janisi naMdagOkuladi idda janarigella
nidreyannesedaLaj~jAna vaSadi | 101 |
vAsudEvana vasudEva yaSOde hAsigeyaliTTu
SiSurUpu dharisidi heNNu taMdanu | 102|
tirugi baMdu vasudEva sereya saMkOleyalliralu
tAvAgi muccidAve tereda bAgilu | 103|
heNNu taMdu vasudEva heMDatiya kaili koDalu
kaNNu teredu kAvukAveMdattittAgalE |104 |
dEvaki prasavavAdaLeMdu Aga eccaritu janaru
bEgadiMdali kaMsage hOgi hELalu | 105 |
hAsike biTTiddu kaMsa kESa kedari hasana uguLi
A kShaNadi SiSuva seLedukoMDanAgalE | 106 |
ciNNanalla heNNidu aNNa ninna kolluvude
kaNNinoLLODikoMbe karuNiseMdaLu | 107 |
heNNeniMdalavu uMTu heNNiniMdalE layavu uMTu
heNNu sIte huTTi laMke hALu Ayitu | 108 |
sIte huTTida kAraNadiMda laMkege aLitavAytu
ninna kAraNadiMda enna koMditeMdanu | 109 |
rOShadiMda SiSuva seLedu hAsida kallina mEle
bIsi appaLisalaMbaradaliddaLU | 110|
aMtarikShadoLu durge Ayudhava dharisikoMDu
aShTa BujagaLannu tOri niMtaLAgalE | 111|
bILaliddi elavU kaMsa ALigAra ninna vairi
bAlakRuShNa naMdana manEli beLevutiddane | 112|
ninna kolluva vairi anyatra beLeyutAne
unmattanAgi nInu enna kolluviyo |113|
durgeyADida mAta kELi kaDunoMdu manadalli
kaMsanaMdu biDisida dEvakiya baMdhanaMgaLa | 114 |
mAyada sIteyalli sAyalikke aMjuvare tAye
nammanyAru muMde rakShisuvaru |115|
itta gOkuladoLage eccaritu janaru ella
putrana paDedaLe yaSOde eMdarU | 116|
gaMDu magana paDedaLeMdu naMdagOpag-hELalu
kALiMdiyalli snAna mADi baMdanu avanu |117|
hELida paricArakarige bahaLa uDugareya koTTu
brAhmaNarige dakShiNe tAMbUlavittanu |118|
putra huTTidaneMba artiyiMdali naMdagOpa
hattu sAvira gOvu dAna koTTanu |119|
bAla huTTidaneMdu bahaLa haruShadiMdali gOpa
hattu sAvira gOvu dAna koTTanu |120|
vatsapairu sahitalAgi coccalu sAdhu maNakavannu
ratna hEma cinnadiMda alaMkarisida |121 |
madhu eMba daityana sadebaDida SrIharige
madhuva taMdu vadanadalli toDedarAgalE | 122 |
bAyige madhuvaniTTu nABiya CEdisidaru
BAgIrathi janakage majjanakeredaru |123 |
toDeya toLedu muDiya kaTTi naDuve suttikkidaru
Baradi gUDAragaLa kaTTutiddaru | 124 |
acyutAnaMtage hattavatArage anaMtage
baccaMbaleya taMdu bisi mADi eredaru | 125 |
matsyage kUrmage varAhage naraharige
vAmana BArgavage nIra eredAru |126 |
rAmage kRuShNage bauddhage kalkige
baccaMbaleya taMdu bisi mADi eredaru | 127 |
SaMbarAri pitanu hariyu janisadanu sakkare
taMdu bIrireMdu naMdagOpa hELanu | 128 |
celuva cIni sakkare BEri BaMDiyali tuMbi
bIridaru yamune gOkulada kErige |129 |
putra huTTidaneMdu artiyiMda naMdagOpage
muttinArati ettidare muttaideyaru |130 |
gOkulada nAriyaru OkuLiyanADidaru
anEka hAlu mosaru beNNe hainagaLiMda | 131|
jAta SrIharige gOpa jAtakarmavane mADi
anEka BUShaNaMgaLa dvijarigittanu |132|
haruShadiMda naMdagOpa karesida jOyisara bEga
tarisi uDugire koTTu jAtaka baresu nIneMda | 133 |
jyOtiSyAstrigaLu baMdu jAtakavanu hELidaru
anEka strIyarige patiyAguvanItanu | 134 |
huTTida vELyadi bahu duShTara saMharisuva
sRuShTi pAlisuvaMtha diTTanItanu | 135 |
daSarAtriyoLagobbaLasureyA saMharisuva
kela SUrarartiyali koluva asurara | 136 |
atteyA makkaLigatyaMta priyanAguva
pArthana rathake sArathiyanAguva |137 |
rOhiNi nakShatradali jananavAda kAraNadi
sOdaramAvage gaMDAMtara saMdEhavillavu |138 |
jAtakava kELida naMgOpa haruShadiMda
paTTAvaLiya uDugireya koTTu kaLuhida | 139 |
raMganudisi koMgoLise hiMgitu pApaMgaLella
tiMgaLudisidaMte namma janma saPalavAyitu | 140 |
rAmage jAtakava hELi hOdaru jOyisaru
kAmitavAytu janma saPalaveMdaru |141 |
mUru dinada koylugaLa nODabEkeMdenuta
bIridaru yamune gOkulada kErili | 142|
kEriya muttedeyaru bAgila tegedukoMDu
dEvara koylu nODabaMdaru aMdu |143 |
SaSimuKiyarellaru SrIkRuShNana koylu eMdu
hosa muttinABaraNaviTTu muMjuDigeyuTTaru |144|
kusuru kaDegOlu bEvu yaSOde rOhiNi kaiya
SaSimuKiyaru koylugaLa pUjisidaru | 145 |
geddu viLyavane koMDu padmanABa hariyu enalu eddu
stutiya mADi karava mugidu niMtaru | 146 |
eMTu dinagaLAduvu ciMtisi avana yaMtradiMda
koluva hadana enage tiLiyadeMdanu | 147 |
bEgadiMdali tanna maMtrigaLa karekaLuhi
AlOcaneya mADi hELireMdanu | 148 |
Atana maMtrigaLu pUtaniya kareya kaLuhi
daSarAtriyoLage SiSuva kollu eMdaru | 149 |
asure pUtaniyu tAnu Atmadali viShava dharasi
SiSugaLArisutta gOkulake baMdaLu | 150 |
sArAvaLiyanuTTu sarada muttugaLa toTTu
putrarasutta gOkulake asure baMdaLu | 151 |
yaSOde kaiyalettutidda SiSuva seLedukoMDu
viShada moleya koTTaLe asuravairige | 152 |
asurAri pUtaniya asu sahitale hIre
vasudheyoLage biddaLe asura rUpili | 153 |
asura rUpavane kaMDu aMji kaMgeTTu janaru
SiSuvu badukiddudu AScaryaveMdaru |154|
pUtaniya viShavanuMDa BUtanAthayyage
BItipaTTaneMdu viBUti iTTaru |155|
aMda mAta kELi bEga baMdanAga naMdagOpa
baMdu kOredADeya asureya kaMDanavanu | 156 |
vasudEvana mAtu husiyAdudillavu
trikAla j~jAniye tiLidu hELida |157 |
gOmaya paMcagavyadiMda bAlakage rakShe kaTTi
gOdhULi aBiShEkavareredaru | 158 |
aMdu kaMsage kappava naMdagOpa salisutiralu
baMdu SUrarAyana sutanu kaMDanu | 159 |
gOkuladoLagutpAtavanEkavAgi tOrutive
I kShaNadiMdillirade pOgu eMdanu | 160 |
pUtaniya suDutiralu jAti parimaLave baMtu
vAsudEvana stutisalu sadgatiyAyitu | 161 |
kavaDe bajjara dAragaLa honna kaMkaNada naDuve
kamalanABana tOLu toDeyaloppu tidditu |162|
haMci kaDubu pAyasa honna harivANada pUje
keMceyaru mADidaru saMtOShagaLiMda |163 |
sArisi muttina kAraNegaLanne racisi
tOraNava kaTTidare SiKara makarake | 164 |
j~jAtigaLella daSarAtrigaLAgutiralu
sUtakaMgaLane kaLedu suKadaliddaru |165 |
cinnada kopparigeyeLage kanneyaru nIru berasi
pannaMgaSayanage yaSOdege modale eredaru | 166 |
havaLadA kopparigeyoLage haradiyaru nIru berasi
balarAmagU rOhiNigU munna eredaru | 167 |
haruShadiMda naMdagOpa maMgaLa snAnava mADi
iMdramANikada maNeya mEle baMdu kuLitanu | 168 |
maMgaLa snAnava mADi naMdagOpa kuLLiralu
kaMdaravetti yaSOde rOhiNi baMdu kuLitaru | 169 |
gArgyarE modalAda allidda brAhmaNara karesi
puNyAhava mADidare vidhyuktadi |170|
misuNiya harivANadalli hosa muttu dANi tuMbi
yaSOdeya sutana nAmAMkitava baredanu | 171 |
cinnadA harivANadalli muttu ratna dANi tuMbi
rOhiNiya sutana nAmAMkitava baredanu | 172|
bala j~jAnadiMda AdityanAda kAraNadiMda
halAyudhake balarAmaneMdu karedaru |173|
mRutyu j~jAna AnaMda guNapUrNanAda kAraNadiMda
kRuShNaneMdu karedare saMtuShTa hariya | 174|
gOvugaLu nammanu rakShisuvanItanu
gOviMdaneMdaru avaru sadAnaMdana |175|
vAsudEva jagatinalli oLage horage vyAptanAda
vAsudEvaneMdaru dOSharahitana | 176|
vAsudEvana mAsanAma janmanAma viSvarUpa
naDeva nAmadiMda kRuShNaneMdu karedaru | 177 |
nAmakaraNa mADida naMdagOpa haruShadiMda
brAhmaNarige dakShiNe tAMbUlavanittanu |178|
SAlyAnna sUpa BakShya pAyasa dadhi dhRutavu
BAmeyaru mADidare saMtOShagaLiMda | 179|
mRuShTAnna BOjana neMTarige iShTarige
viprarige mADisi kRutakRutyanAdanu | 180|
naMdagOpa kRuShNa ninna kaMdaneMdu tiLiyabEDa
iMdirApatiye avanu saMdEhavillavu | 181 |
hatteMTu varuSha nInu kaShTapaTTu tapaviralu
matte ninna manege puruShOttamane baMdanu | 182 |
hanneraDu varuSha nInu artiyiMda tapaviralu
ninna bayake salisaleMdu pannaMga baMdanu | 183 |
narane balarAmanAda nArAyaNane kRuShNanAda
BUmiBAra iLuhaleMdu avatarisidaru |184 |
pannaMga balarAma paramAtma SrIkRuShNa
ninna putrareMba buddhi manadalli mUDade |185|
AcAryara mAtu viSvAsadiMda tiLidu gOpa
ItanIga muktige praKyAtaneMdanu |186 |
rAmakRuShNaribbarigU rOhiNi yaSOdeyaru
mANikada muttinABaraNaviTTaru |187|
KaLajanara tuLidu saMharisuva pAdagaLige
kirugejje kAlaheMDa vaniTaru |188 |
sarpana heDeya mEle nATyavADida harige
nUpuravaniTTare jAtiratunada |189|
jAnUru jaMGayalli mEle kaTi madhyadalli
mANikada maNiyanuDudAraviTTaru |190|
uDige gaMTe kirugejje jaDiva kAMcidAma
baDanaDuvigiTTaru mRuDana priyege |191 |
malaku ratna mANikada haraLu keMpu kettisida
haMsa mATadaraLOle SrIharige iTTaru | 192 |
Aru muttina bAvali aNimuttina caukuLi
rAmana kivige jariva kuMDalavaniTTaru |193|
eMTu muttina bAvali eMTu muttina caukuLi
kRuShNana kivige jariva kuMDalavaniTTaru 194|
bAlakiyarellaru mOhisabEkenuta
mUgutiyaniTTaru muddu kRuShNage |195 |
kusumanABage bAlakiyaru hasuraMgiya toDisidaru
balarAmage toDisidaru kariya aMgiya | 196 |
mitreyaru rAmakRuShNarige toTTilikkabEkenuta
eccarisidare bEga aMdu viSvakarmana |197 |
eMdina puNyavO eMdina sukRutavO
gOviMdana sEve tanage baMditeMdanu | 198 |
dEvara sEve eMdu bahaLa saMtOShadiMda
vILyava piDidanu aMdu viSvakarmanu |199|
prEmada pratimeyiMda cIni kelasadiMda
mANikada miLitAda haligegaLiMda |200 |
viSvakarma tAnu kalita hastakelasavanella hAki
vicitradiMda toTTila racisidanAga |201|
taMdu toTTila viSvakarmaniMdu karagaLa mugidu
naMdagOpa yaSOdeya muMde iLuhida |202 |
toTTila nODi gOpa mecci saMtOShadiMda
paTTAvALi uDugireya koTTu kaLuhida |203 |
Aru KaMDugada akki nUru KaMDugada bELe
artiyiMda hAkidAre viSvakarmage |204 |
muttina toTTilige ratnada kIlu bigidu
mitreyaru toTTila kaTTuttiddaru |205|
toTTila manege mElkaTTugaLa kaTTidaru
muttina caMDu taMdu naDuve kaTTalu |206 |
kRuShNara toTTilige paTTe muMjuDige hAsi
muttina lODu talegiMbaniTTaru |207|
rAmara toTTilige SAlu maiduDuge hAsi
nIlada lODu talegiMbaniTTaru |208 |
dIpagaLane hacci dhUpada hogeyan-hAki
nAku kaDe sikkisidare naMdanaMbuva |209 |
maMdarOddhara hariya iMdirESana toTTileMdu
naMdagOpi hELidaLe baMdhugaLige |210|
kEriya muttaideyaru bAgila tegedukoMDu
dEvara toTTileMdu nODabaMdaru |211|
naMdagOpana rANiyaru miMdu arisina pUsi
caMdragAviyanuTTu ravake toTTarU |212|
kESagaLan-hikki kaTTi sUsuva moggegaLiMda
jAti mallige saMpigeya muDidarU |213|
kaMgaLigaMjana hacci kastUriya tiddidAru
muttina boTTu mUgutiyaniTTarU |214|
ciMtAku malaku peMDyaveMba ratnada saravu
keMpina havaLada saravaniTTarU |215|
hAra saragaLane hAki tOLu boTTugaLane kaTTi
dhOravAda muMgaiya murArigiTTaru |216|
kaDaga kaMkaNagaLu raveya uMgurugaLu
naDavinoDyANa jalakamalaviTTaru |217|
aMduge pAy-boTTu kAluMgura vIramudrike
ceMdavAda miMcu miMTigeyaniTTaru |218|
kRuShNarAmara toTTilige rOhiNi yaSOdeyaru
muttinABaraNaviTTu SRuMgAravAdaru |219|
rAmakRuShNaranettikoMDu rOhiNi yaSOdeyaru
nIra hoLeya meTTi pUje mADuttiddaru |220|
aMgaLava sArisi raMgavilliyanikki
raMBeyaru koDana pUje mADuttiddaru |221 |
hostila sArisi sutta kAleLeya tegedu
mitreyaru koDana pUje mADuttiddaru |222|
nAriyarellaru lAliya pUje mADi
mIradiru mUru varuShakeMdu nuDidaru | 223 |
mitreyarellaru toTTila pUje mADi
tappadiru mUru varuShakeMdu nuDidaru | 224 |
paTTAvaLiya sIre baTTa muttina kupsava
kRuShNana tAyiguDugireya koTTaru |225|
sArAvaLiya sIre sarada muttina kupsava
balarAmana tAyiguDugireya koTTaru |226 |
aMganeyarellaru aMgi TOpiya taMdu
balarAmana tAyiguDila tuMbuttiddaru |227 |
sArAvaLiya aMgi sarada muttina TOpi
kRuShNarAyana tAyiguDila taMbuttiddaru |228 |
mitreyaribbaru muttinArati piDidu
kRuShNarAmarige etti beLaguttiddaru |229 |
nAriyaribbaru nIladAratiya piDidu
kRuShNarAmarige etti beLaguttiddaru |230 |
kaMdana kAla diSeyali kaDale gugguri iTTu
aMganeyaru taMdu toTTiloLage iTTaru |231 |
aDigeya maneyoLage areva guMDappana
haradiyaru taMdu toTTiloLage iTaru | 232 |
kESavayyana koLLi mAdhavayyana tannireMdu
kAMteyaru kaMdana ADisidaru | 233 |
hRuShikESana koLLi padmanABana tannireMdu
padmaniyaru kaMdana ADisidaru |234|
praLaya kAlada jaladhiyali Aladeleyali malagidda
kamalanABana taMdu toTTiloLage iTTaru | 235 |
kShIrasAgaradalli lakShmIlOlanAgidda
SrI hariya taMdu toTTiloLage iTTaru |236 |
muddu rAmakRuShNara vRuddha muttaideyaru
vidhyuktadiMda toTTiloLage iTTaru |237|
SaSimuKiyarellaru musalAyudhana toTTileMdu
kuSala rAgaMgaLiMda pADuttiddaru |238 |
rOhiNi yaSOdeyaru misuNi sarapaNiya piDidu
daSAvatAragaLiMda pADuttiddaru |239|
matsyanAgi munna baMdi kukShicOrana koMdi
putranAda ajage vEdavitta harige jO |240 |
suraru asuraru kUDi Saradhiya mathana mADe
iLibeTTa bennilettida kUrmarUpa jO |241 |
suruLiyAgi suttida BUmi kOredADeyiMda taMdi
hari hiraNyAkShana koMdi varAharUpage jO |242 |
magana muMde hiraNyakana karuLa bagadu uguriniMda
naramRugarUpanAda narahariye jO |243|
baliya pAtALakke meTTi nelana IraDiya mADidi
celuva vAmanana trivikramane jO |244|
eraDu hattoMdu bAri vIra kShatriyara koMdi
dhAruNiya viprarigitta paraSurAma jO | 245 |
vAridhi kaTTi daSagrIvana Sirava taridi
jAnakiyataMdi daSaratha rAmane jO |246 |
naMdagOkuladalli pUrNacaMdranAgi janisidi
kaMdanAgi pUtaniya koMdi kRuShNa jO |247 |
muddu strIyara vratavanu buddharUpadiMda aLidi
vRuddha vEShadiMda tripurara gedda hariye jO |248 |
hayavanEri dALi mADi sujanarige suKavanitti
hiDida kattiyAyudhavanu paDeda kalki jO | 249 |
jagavanella basuroLage aDagisida SrIhariya
maguveMdu tUgidare kamalanABana |250| jo jo
hattavatAradiMda vistarisi hariya guNava
muktaLAdeneMdu gOpi naguttaliddaLu |251 |
muttaideyaru muMde baMdu muttina kadava piDidu
hostiloLage gaMDan-hesara hELu eMdaru |252|
akka kELe namma bANaMti nillalAraLu
hatyAvu SIta aMgAligeMdaru |253|
tAye kELe namma bANaMti nillalAraLu
EryAvu SIta aMgAligeMdaru | 254 |
naMdagOpana rANiyaru niMdu arasinava pUsi
naMdagOpana kuTuMbavidake baMditeMdaru | 255 |
mitreyaribbaru hostila piDidu niMtu
artiyiMda gaMDan-hesara hELuttiddaru |256 |
nAriyaribbaru bAgila hiDidu niMtu
bEgadiMda gaMDan-hesara hELuttiddaru |257|
tuMbida koDana taMdu kaMdana kAla diSeyaliTTu
aMganeyaru kadava naMbi niMtaru | 258 |
kaDale gugguri uppu roTTi oDedaLIke biLiyale
kaDu bEgadiMda bAginava koTTaru |259|
cakkuli karujeyakAyi happaLa seMDigeyu
eppattu bageya bAginava koTTaru |260|
bAlakiyarellaru bAginagaLa tegedukoMDu
bEgadiMda tamma manege pOguttiddaru |261 |
karmabaMdhanilladavage janmanakShatraveMdu
tanna baMdhugaLa kUDi utsAha mADidaru |262 |
Aga kaMsa SakaTana bEgadiMda kareya gaLuhi
baMDiyarUpavane dharisi bA eMdanu |263|
kELida SakaTa tAnu bahaLa kOpavanne tALi
baMDirUpavanne dharisi baMdu niMtanu |264|
mAva kaLuhisida oMducUrNa kelasada baMDi
rAya rAma kRuShNarige ADa kaLuhida |265|
baMDiya keLage gOpi puMDarIkAkShaniTTu
brAhmaNara saMtarpaNaye mADa hOdaLu |266 |
stanyapAna taDeyiteMdu tanna kOpadali baMDi
cummivaDeye hariyu BaMDi cUrNavAyitu |267 |
SakaTada oLage obba vikaTa asura keLage bidda
akaTa SiSu aMjiteMdu appikoMDaLu | 268 |
brAhmaNara kaiyiMda vEda maMtragaLiMda
bAlakage rakSheyanne mADisidaLu |269|
mUru tiMgaLAguttiralu rOhiNi yaSOdeyaru
nIra hoLeya meTTi pUje mADuttiddaru |270|
kRuShNarAmaraMgigaLa rOhiNi yaSOdeyaru
muttina koDadoLaddi ogeyuttiddaru |271|
rAmakRuShNaraMgigaLa yaSOde rOhiNiyaru
nIra koDadoLage addi ogeyuttiddaru |272|
praLaya kAlada jaladhiyalli Aladeleyali malagidda
kamalanABana toDeyaliTTu moleya koTTaLu |273|
kShIra sAgaradalli lakShmIlOlanAgidda hariya
kAla mEle malagisi hAla eredaLu |274|
maMdAkinI janakage maili dhULAyiteMdu
oMdu kopparige nIra taMdu eredaLu |275|
kaMdarpaTOki lAvaNyavannu jarivavage
ceMdavaDisideMdu gOpi SRuMgarisidaLu | 276|
benna hiMde niMtukoMDu kaNNu mucci tirugi nODi
cinna ninna muddu tAreMdaLeSOde |277 |
hAlu suriva galladalli nIlada sarapaNiya tuMbi
bAla ninna jollu enna mEle suriyitu |278 |
aMgaLadoLagella aMbegAlanikkuta
raMga ninna toMgAla tOriseMdaLu |279|
pakShivAhananAgi munna mattagajana tApavaLidi
acyuta nI Ane ADeMdaLeSOde |280 |
tAraka brahmana paDeda AdimUrti nInu
tArammayyanADeMdaLeSOdO |281 |
oppadiMda surarige sudheya nIDida kaiyoLage
cappaLikko raMganeMdADisidaLU |282|
prEmadiMda SrIdEviyara AliMganeya mALpa kaili
tOLanADO raMganeMdADisidaLU |283|
aShTu hELaleSOde aShTanella ADida
kRuShNana dayavu namage kIrti salahalI |284|
putraneMdu yaSOde etti toDeya mEliDalu
beTTadaMte jariye keLage iTTaLAgale |285 |
adButavAda SiSuva kaMDu AdipuruShaneMdu mai
ubbi stutiya mADe kRuShNa baleya bIsida | 286 |
nityatRupta vAsudEva hasidaneMdannavA
tuttu mADi uNisidaLu mRuShTAnnavA |287|
tuttu doDDa mADe amma aShTanella uMbenenalu
ennappa nI uNuviyA eMdappikoMDaLu ||288 |
hasideneMdu SrIkRuShNa musuka piDidu
eLeyutiralu hasanAda tanu mEvugaLa koTTaLu |289|
tanuva olleneMdu Calava mADi aLutiralu
bAla ramArUpaniginneMtu mADalI |290 |
amma harideneMbanu ammiyA olleneMba
sammane hora aMgaLake taMdaLU |291 |
pUrNacaMdra udisiralu mEle idda caMdranannu
tAre enna kaiyaleMdu tAya kADidA |292 |
Ena hELuviyo raMga mEle idda caMdranannu
hyAge tarali aLavalla eMdaLeSOde | 293 |
SaMbarAripitana gOpi aMbarakke piDidetta
baMdu iLida karataLadi caMdranAgale |294 |
baMdu iLida caMdrana iMdirESa nODi nakku
kannaDiyaMte tAyde tOri mElakkettida |295 |
karadallidda caMdrana kannaDiyaMte nODi
puruShOttama muguLu nageya nagutaliddanu |296 |
hastagatanAda caMdrana hArisidanaMbarakke
kRuShNana nODi gOpi beragu biddaLu |297 |
paTTe maMcada mEle paramAtma pavadaDiseMdu
muttinA lODu talediMbaniTTaLu |298 |
paTTemaMca iLidu kRuShNa hokku Uru manegaLa
aTTuLiya mADuvanu sutta naregaLA |299 |
hetta tuppa hAlu beNNe matte kenemosara giNNa
kRuShNarAma mellireMdu kaili koTTaru | 300 |
kAla aMdugeyaniTTu kamalad-hUva kaili koTTu
bAla enna kADadireMdaLeSOde |301 |
raMga enna mAta kELu heMgaLa kADadiru
iMteMdu buddhi hELi maMdira pokkaLu |302 |
janani pOgutiralu kaMDu muguLu nageya naguta
tirugi bAheneMdu bIdi horage baMdanu | 303 |
rannada taLigeya biDisikoMDu cenna kRuShNa ODi hOda
kanneyara kUDe sarasavADuttiddanu |304|
aMganeyara maneya muMde ceMdavAda drAkShi bILu
muMde seraga piDidu avara BaMgapaDisida |305 |
aMganeyarellaru raMgan-hAvaLigAraneMdu
naMdagOpana rANi muMde baMdu hELalu | 306 |
PullanABana dhALigaMjipaLLi biTTu ODi pOgi
gollanillada vRukShadA vanava sEruvA |307 |
EneMta tALuvevu nAvu kRuShNana hAvaLiya
naMdagOpana rANi muMde baMdu dUralu | 308 |
bAlakiyarellaru dUru hELa baMdirI
adEnu mADida kRuShNanenage hELireMdaLu |309 |
daTTaDi iDuva bAla baTTala tAlige iDuva
aTTuLiya mADuvanu sutta neregaLa |310 |
aruNa udayadalli eddu sappaLilladdAMge
oLage pokku namma baDidu bavaNebaDisuva |311 |
kariyada munna baMdu karugaLa kaNNi biDisi
turugaLa uNisi kRuShNa hOguttiddanu |312 |
hAlu karivallige nIlavarNa kRuShNa baMdu
hAlu kuDidu gaDige oDedu ODi hOdanu |313|
mosara kaDeyuvallige kusumanABa kRuShNa baMdu
mosara kuDidu gaDige oDedu ODi hOdanu |314|
kaDeyuvallige baMdu kaDagOla piDidu niMtu
kaDagOla muridu gaDige oDedu hOdanu |315|
Esu daivakke nAvu mIsaleMdu mADidevu
vAsudEva baMdu mIsalaLidu pOdanu |316|
gaMDa heMDiru malagiralu BaMDu mADi pOdanu
puMDarIkAkShan-hAvaLiya tALalArevu |317|
kattale maneyu eMdu bacciTTu baralu nAvu
kRuShNa oLage hokku hAlu beNNe kaddanu |318|
maNigaLa praBegaLiMda oLage hokku beLaku mADi
madananayya hAlu mosara kuDiyuttiddanu |319|
kOlu koMDu kolla pOdare bAleyara bigidappi
mElina seragu tegedu oDi hOdanu |320 |
neluvu nilukadiddare varaLa mEle ErikoMDu
varaLa meTTi hAlu haravige bAyanoDDida |321 |
sudAmana hegala mEle ErikoMDu SrIkRuShNa
cOranaMte SikkadaLigeya beNNeya kadda 322 |
aShTu eMjalu mADida oMdiShTu mIsalilladdAMge
aShTaBAgada dEvateye namma kRuShNane |323 |
vatsada bAlakkU makkaLa caMDikegU
hatta kaTTi hariyu kuNidu naguta niMtanu |324|
haddanEri tiruguvavage buddhi hELabArade
muddu mADi keDisi basavana mudre ottidi |325|
nimma kUDe niShThura inna dharmavalla namage
summaniralu nereya raMganinnu tALalArevu | 326 |
gollatiyara hoMtatanava ella nAnu ballenu
PullanABana dUru nimage salladeMdaLu |327 |
bAlakiyara mAtugaLa kELi nAnu ballenu
bAlakRuShNana dUru nimage salladeMdaLu | 328 |
koLikeyali enna maneli hAlu kosaru iTTiralu
kUDe hAkiduLida mosara kuDidaneMbiri |329 |
kaLasige beNNe enna meli kaMDa kaDayaliTTu
kUDe hAkida bUda beNNeya meddaneMbiri |330 |
ikkida hAlu mosaru bekkige ikki hOda
cikkavana dUruviri makkaLallave |331 |
aMganeyarellaru raMgana dUruviri
bAlakana dUruviri kaMdarillave |332|
bAlakiyarellaru baride dUru mADuviri
nIvu kRuShNana hiDidukoMDu bannireMdaLu |333 |
AgalI kEriyoLage bAradiddAno kRuShNa
bEgadiMda tamma manege pOguttiddaru |334 |
avaru baruvudanu kaMDu avara manegaLige hokku
koDada mosaru hAlu beNNe saviyuttiddanu |335|
kaiyali beNNe bAyalli beNNe maneyoLage surida hAlu
nimmammage tOrpeveMdu koMDu baMdaru |336 |
obbarariyad-hAMge mattobbaLu ettikoMDu
mite gOpidEviya manege baMdaru |337 |
mitre gOpidEvi tanna kRuShNana tegedu toDeyalliTTu
moleya koTTu muddADi nagutaliddaLu |338 |
avara kaiyalilla kRuShNa yaSOde dEvi toDeyaliralu
ellarU kaMDu aMdu AScarya paTTaru |339|
bAlakiyarellarU kaili kRuShNanillade
nAci nuDiyalArade summan-hOdaru | 340 |
avara manegaLige kaLuhi dadhimathanava mADutiralu
jagadaMtaryAmi svAmiya pADuttiddaLu | 341 |
hAra kucagaLalli muttina mAle allADuttiralu
nIla mEGaSyAmana pADuttiddaLu |342|
kaDaga kaMkaNagaLige muDida mallige madhure
dhummu dhuDukeMdu mosara kaTeyuttiddaLu |343 |
mosara kaDeyuvallige kusumanABa kRuShNa baMdu
hasideneMdu ammiya bEDutiddanu |344 |
naMbisi kaNNIra orasi navanItava kaili koTTu
moleya koTTaLe gOpi jagadoDeyage | 345 |
hAlu ukki baralu gOpi nIlavarNana keLage iTTu
nIra toDedu baruveneMdu oLage hOdaLu |346 |
hAlu haravi keLage iDalu nIlavarNa kRuShNa kaDa
gOlamuridu gaDige oDedu oDi hOdanu | 347 |
oLage hokku baralu gOpi murida kaDagOlu kaMDu
jagadoDeyana kelasaveMdu tiLidaLAgalE |348 |
gollatiyara mAta nAnu ella husi mADide
PullanABana muddisuvudu salladeMdaLu |349 |
bAlakiyara mAta nAnu bahaLa husi mADide
bAlakRuShNana muddisuvudu salladeMdaLu |350 |
eShTaMta tALve nAnu kRuShNana hAvaLiya
kaShTadiMda hiDidaLe kaTTuveneMdu |351 |
Ura kaNNiya taMdu vArijanABana kaTTi
sAladiralu raTe noMdu saridaL-hiMdake |352 |
AkaLa kaNNiya taMdu gOpAlakRuShNana kaTTi
nAku beraLige sAladenuta naguta ODida |353 |
ODi ODi hOgutiralu sAre sAre nillutiralu
vAre vAre nOTadiMda nODutiruvanu | 354 |
muMde gOviMdana pAda hiMde yaSOdeya pAda
muMgai murAri nEtragaLo rasutiddaLu |355|
nEtradalli jalava tuMbi prIti vacana kuritu hariya
I mAtanADidaLe muktiKyAtaLadiMda |356|
janani arasidaLeMdu karuvu kaNNe ALavAgi
kRuShNa Baktavatsala tAnAda |357 |
yOgigaLa manasina j~jAnake sikkadavana
SrIhariya kaTTidaLe gENu haggadi |358 |
oraLige kRuShNana kaTTi oLage baMdaLu gOpi
suLidu bAheneMdu bIdi horage baMdanu | 359 |
naLakUbra maNigrIvaru nAradara SApadiMda
vRukSha rUpadi janisidaru dharaNiya mEle | 360 |
yamaLArjunara SApava iMdu biDisuveneMdu
baMda kRuShNa mattiyA maragaLallige |361 |
mattiyA maragaLalli sikki bidditu uLupu
kittu dharege keDahe kRuShNa attasAridA |362 |
bidda marana naDuve mattibbarpuruShareddu baralu
kaMDu janagaLella bahu cOdyapaTTaru |353 |
madyapAnavannu mADi unmattarAgirutiralu
nAradaru baMdu namma kaDega hAkalu | 354 |
arkapatiya sEve mADi vyarthavAgi keDalu bEDi
lakShmIpatiya pUjegaLa mADireMdanu | 365 |
namOstu kalyANarUpa namO viSvaBAvana
namO BArgava vEdavyAsa yAdava naMdanA | 366 |
lakShumISa nammaparAdhava kShamipudeMdu
karava mugidu sutiya mADi bEDikoMDaru | 367 |
karava mugidu stutiya mADi namaskarisakoMDu
niMtu beLaguva vimAnavEri teraLi hOdaru | 368 |
iMdina vyApAravannu baMda janarella nODi
saMdEhavillanIta koMdaneMdarU |369 |
pUtani SakaTa tRuNAvarta kESiyanne kolluva
acaritre pADidaru amara vaMdyana |370|
iMdirAramaNana mEle iMdrAdi dEvategaLu
maMdAra puShpada maLeya karedaru |371 |
kRuShNa cariteyannu kELidA kaMsanu
koMdu nidregaivudu eMdigeMdanu |372|
naMdagOkulada oLage baMditu utpAtaveMdu
vRuMdAvanake teraLi pOda iMdirESanu |373|
vRuMdAvanada oLage gOviMdanADutiralu maNNa
tiMdaneMdu hELidare naMdagOpige | 374 |
kOlu tegedukoMDu gOpi bAlakana baDivenenalu
bAya tereyadiddare baDiveneMdaLu |375|
maNNa tinnalilla nammaNNa rAmarane kELu
saNNavara mAtidella saTe eMdanu |376|
cikkavara mAta kELi SikShe mADi kolla baMdi
mRuttikeya tinnalilla bAya nODeMda |377|
SrIkRuShNana bAyoLage hadinAlku lOkava kaMDu
prAdurBUtanAda paramAtmaneMdaLu |378|
saptadvIpagaLa suttELu samudraviruva pRuthvi|
AkASa mEru parvatavanu kaMDaLu |379|
dhanyavAda vaikuMThava cennavAgi kaMDaLu
tanna kaMDu yaSOde tavakisidaLu |380 |
muddu kRuShNana bAyoLage biddenu tAnenuta
idda sthaLava kANade Sramava paTTaLu |381|
dEvAdidEvaneMdu dEvi yaSOde stutise
dEvakisutanu tanna baleya bIsida |382
balarAma SrIkRuShNa saha turugaLannu kAyuttiralu
karuvinaMte baMda obba kaLLa asuranu |383|
AkaLa kAyutidda SrIkRuShNana kolluveneMdu
pApi asura gOrUpavannu dharisida |384 |
dhEnukAsuranu baMdu dEvakiya sutana hiDidu
BUmiya mEle appaLisuttiddanu |385|
aMbujAkSha asuranaMgaiyiMdalappaLisi
muMdina ratnava paharisikoMDanasurana |386|
pakShirUpavannu dharisi kukShiyoLasura obba
BakShisuveneMdu mUtiyiMda kaDidanu |387 |
kamalanABanu bakAsurana eraDu tuTigaLanne hiDidu
kaDidu tuMDu cUrNa mADi kaDege hAgida | 388 |
SaMkarana kuritu pAvitracUDaneMba daitya
paMkajAkShana koluveneMdu pariyataMdanu |389 |
gOvaLanella kAvaDigaLane kaTTi
gOpAlara hegalaliTTu manege kaLuhida | 390 |
hasideneMdu SrIkRuShNa yaSOdege hELalu mosaru
annavannu koTTu kaLuhisidaLu | 391 |
asuLiyoLage maMDisi vasudheyoLage kelakelaru
vRuShaBadaMte hOri hOri uNNuttiddaru | 392 |
aLLa mAgAyi bEru guLLa suMDiya kAyi
koLala kaMkuLalirisi kRuShNa uNutaliddanu |393|
oMdu kaiyali uppinakAyi mattoMdu kaili mosaru butti
koLala kaMkuLaliTTu kRuShNa uNutaliddanu |394|
kaLLi annavanne uMDu gollara kUDikoMDu
PullanABa BOjana mADuttiddanu |395|
balarAma SrIkRuShNa karugaLanne kAyutiralu
raviyu madhyAhnake baMdanAgalE |396|
karugaLige nIru kuDisi kAlu muKagaLanne toLedu
karugaLannu neraLinalli nilisuttiddaru |397|
nakShatradaMte sutta gOpAlaroDane oppidane
caMdranaMte naDuve kRuShNanu |398|
caMdra guDi kaTTidaMte hiMDu gOpAlaroDane
iMdirESa harismaraNeyiMda kUtanu |399|
tuttu koTTu tudiyadeMdu BaktiyiMda tegedukoMba
kRuShNana kUDe uMDu suKadaliddaru |400 |
anaMta vEdagaLa biTTu acyutana kUDe uMDu
BOjanada sukRuta saviyavella paDedaru |401 |
bAlakara kUDikoMDu rAmakRuShNarADutiralu
Aga ajanu baMdu karuva mareya mADida 402 |
karuvu dUra hOyiteMdu hariya kUDe kELalu
arasi tAheneMdu nIvu uNNireMdanu |403 |
itta gOpAlarilla atta karu kANalilla
vatsa oMdu uLiyiteMba teradalliddaru |404 |
arasi turuva kANade ajana mAyaveMdaritu
karuvu koMba koLala gOpAlarAdaru |405|
gOvina hiMDugaLu gOpAlara taMDagaLu,
mAdhavana kUDikoMDu manege baMdaru |406|
kastUri tilakavaniTTu kaMgaLigaMjanava hacci
makkaLeMdu gOpiyaru moleya koTTaru |407|
itta ivarigoruShavAgi attavarige nimiShavAgi
sikkisida mAyavi eMda rAmanu |408|
aNNa kELu avara maneyali aledu beNNe tiMdudakke,
karuvu koMba koLala gOpAlarAdevu |409|
hariya mAyagaLane kELi haladharanu taleya tUgi
arivaryAru ninna mahime eMda rAmanu |410|
acyuta ninna mahime eShTu pogaLalaLavalla
BaktarAda sujanarige rUpanAdiya |411|
narahari ninna mahime varNisalaLavalla
sulaBadiMda sujanarige rUpanAdiya |412|
mAdhava ninna mahime Enu pogaLalaLavalla
BAvadiMda sujanarige rUpanAdiya |413|
bAlakara kUDikoMDu rAmakRuShNarADutiralu
Aga ajanu baMdu stutiya mADi hOdanu |414|
Baktara taMDavide bacciTTa taMDavide
I taMDa yAvudeMdu ajanu ciMtise |415|
oppisi koTTare tappadIga nAnAde
ippaDiyiMda ajanu stutiyanottida |416|
SaMKa cakradhAri anaMta viSvarUpanAda
SaMkisuva ajage tanna nijava tOrida |417|
akShaya jaya jaya pakShaya jaya jaya
rakShisenna hariye eMdu pAdakeragida |418|
brahmaneMba hamminiMda ninna maredidde svAmi,
ciNNaneMdu mOhadiMda nijava tOridi |419|
tALa mELada suKava gOvaLirigitta dEva
ULigada baMdhanadoLenna irisidi |420|
Adhipatyavannu olle ajaneMba hesaru olle
govaLaraMdadi enna pAliseMdanu |421|
maMdamatiya maganu mAtoMdanariyaneMdu
iMdirESa pAlisi manege kaLuhida |422|
taMda mosara buttiyanne iMdirESa kaigoMDu
aMdu uMDa kRuShNa gOpAlaroDagUDi |423|
gOviMda nInellig hOgi taMdi hELu karuva
saMgAta uNNabAreMdu karedaru |424|
saNNavaru makkaLu tanna tAya moleyanuMDu
amma kELe ajanu namma mareya mADida |425|
pralaMba daityanu balarAmadEvana hegalanErisi,
AkASakoydanu A kShaNadali |426|
mAyAsuraneMba daitya makkaLATikeyali baMdu
guheyoLage hoggisi gOpAlaranella |427|
guheyoLage hoggisida gOpAlakara kaDege tegedu
maDuhidane mAyAsurana madhusUdana |428|
kaTTi asura oydiralu kRuShNage moreyiDalu
matte ninna mUlarUpa dharisu eMdanu |429|
kuSala vidhadiMda tanna mUlarUpavannu dharisi
asurana koMdanu AkShaNadiMdali |430|
uShaHkAladalli gOpa nIroLage muNugutiralu
niSAcararu oydu varuNana muMde iTTaru |431|
naMda nIroLage muLuge aMdu dEha kANadiralu
muMde kRuShNa varuNanAlayake baMdanu |432|
karava mugidu stutiya mADi namaskarisikoMDu
naMdana taMdu kRuShNana muMde iTTaru |433|
nIroLage hOda taMdeya nIlavarNa karedu taMda
mAdhavana mahime eMdu cOdyapaTTaru |434|
bAlakaru kUDikUMDu tOLu daMDigeya mADi
dEvAdidEvana Erisidaru |435|
hIliya cAmarava bIsi tAvareya koDeya piDidu,
sAyujya muktige saMdarellaru |436|
AkaLa kAyuttidda gOpAlakarellaru
kAge haNNa mellabEku kRuShNaneMdaru |437|
turugaLa kAyutidda gOpAlakarellaru
tALihaNNa mellabEku kRuShNa eMdaru |438|
mellireMdappaNeya PullanABa koDutiralu
alli kalaha mADidaru vanagaLalella |439|
kadaLi kaMbadallidda KarAsuraneMba daitya
eraDu kAla kereyuta baMda koluvenenutali |440|
KarAsurana balarAma eraDu kAlugaLane hiDidu
KaraKarane tirugisi vanada mEle biTTanu |441|
KarAsuranu bidda nevadi vanagaLella oMdAgi
dhareya mEle bILe haNNu daNiya meddaru |442|
haNNu medda baLika nammaNNa rAmarige kaLuhi
saNNavaru kUDikUMDADutiddaru |443|
tALi haNNagaLane meddu gOvu gOparellaru
kALi maDuvige karedu taMda kRuShNanallige |444|
dhaTTi pItAMbaravanuTTu SrIkRuShNa
muttina koLalu piDidu Udutiddanu |445|
Alaisi kELiduvu gOvu gOparellaru
bEgadiMda kRuShNana baLige barutaliddaru |446|
tRuSheyiMda gOvu gOparu viShapAna mADutiralu
viSha talegEri paravaSarAdaru |447|
muriya mEle bILe puruShOttama dayadiMda
kaDegaNNili nODe maimurideddaru |448|
puMDarIkAkSha hariya caMDanhoydADutiralu
aMbarakke tiruvi yamuneyoLage bidditu |449|
pakShivAhana svAmi kaDahada maravanEri
maDuva dhumuki jalava kaduki viShavAyitu |450|
kRuShNa nIroLage bILe gOpAlakarellaru
matte naMdagOpageSOdege hELalu |451|
maDuvige bidda kRuShNana maraLi nAvu kANeveMdu
kaDu duHKadiMda hOgi hELuttiddaru |452|
artiyiMda naMdagOpi tuppavannu kAsutiralu,
kRuShNa maDuvige biddaneMdu hELuttiddaru |453|
haruShadiMda naMdagOpi mosara kaDeva samayadalli
viShada maDuvige biddaneMdu hELuttiddaru |454|
beLeda kucada nAriyaru baLabaLane baLukuta
muDigaLLa kRuShNana kareyuttiddaru |455|
kuMbakucada nAriyaru tuMbiguruLa saMtaisutta
gOviMdana nODabEkenutta baMdaru |456|
tiMgaLa bANaMtiyaru Aru tiMgaLa garBiNiyaru
raMgana nODabEkenuta baMdaru |457|
hattu eMTu sAvira varuSha kaShTapaTTu tapavamADi,
sarpagiMdittenu magana eMdaLu |458|
Aru ELu sAvira varuSha kaShTapaTTu tapava mADi,
nIrigiMdittenu magana eMdaLu |459|
sAvirvaruSha mADida tapavu iShTAyiteMdu
bAya baDidu baDidu gOpi aLutaliddaLu |460|
hettavaLu eMdu enna hattirakke bArade
sarpana tuLivarEnappa eMdaLu |461|
paDedavaLeMdenna oDane mAtADade
maDuvige dhumukuvare magane eMdaLu |462|
paTTAvaLiyuTTukoMDu baTTa mutta kaTTikoMDu,
kRuShNa ennappa bAreMdaleSOde |463|
balarAmana kUDe hOdare bAravu vipattugaLu
magane nInobbannOgi maDidi eMdaru |464|
tAya haMbalikeyanne kELida balarAmanu
bAlakRuShNage dAva Bayavu bAradeMdanu |465|
kuMDalada kiviyavanu naMdagOpa baMdu tanna |
kaMdana kANade kareyuttiddanu |466|
hatteMTu kAlake kRuShNa ninna paDedenu,
kRuShNa bAro magane eMdu kareyuttiddanu |467|
ArELu kAlake bAla ninna paDedanu |
bAla bAro magane eMdu kareyuttiddanu |468|
toTTiLoLage ADuvAga aShTu daityaranne koMdi,
kaMda bAro magane eMdu kareyuttiddanu |469|
caMDu buguriyADuvAga hiMDu daityaranne koMdi |
kaMda bAro magane eMdu kareyuttiddanu |470|
sRuShTi sthiti layagaLige kartu nIneMbaro ,
ennappagoMdiShTu Sakti puTTad hOyito |471|
viShada maDuvinoLage biddu kusumanABa maDidare
hasageTTa namagyAru pOShakarillavallO |472|
tAya haMbalikeyanu kELidanu kRuShNanu
nAgana heDeya mEle nATyavADida |473|
tanna maDu kaLakiteMdu pannaMga kOpadiMda
cennAgi kRuShNana kaTTi bigidu suttida |474|
bigidu suttida sarpavanne biDisikoMDu SrIkRuShNa,
heDegaLa mEle niMtu nATyavADida |475|
A kAlanUrutta I kAlanettutta,
pAtradiMda kuNida namma paramAtmanu |476|
oMdu kAlanUruta mattoMdu kAlanettuta
ceMdadiMda kuNida namma naMdakaMdanu |477|
nAgana heDeya mEle nATyavADuttiralu kaMDu,
tALa maddaLegaLu dhimi dhimikeMdavu |478|
sarpana heDeya mEle nATyavADuttiralu kaMDu,
puShpavRuShTi karedarella dEvategaLu |479|
dhareya BArava tALida SESha hariya BArava tALalArade,
horaLi Ace Icege kaMgeDutaliddanu |480|
kALiMganu viShava kAri kaMgeTTu oraluttiraru |
nAgapatniyaru tutisidaru nAradavaradana |481|
unnatada kALiMgana rakShisayya nInemage
muttaide tanava koDu Baktavatsala |482|
kaMda kaShTadiMda kareye kaMBadiMdudisi baMda |
kaMda nI kAyo namma vAle BAgyava |483|
ella tallaNisi lakShmI gollara kUDikoMDu
vallaBa nI kAyo namma vAle BAgyava |484|
aMdu nAgapatniyaru gOviMdana stutisutiralu
kALiMgana heDeya biTTu taDige baMdanu |485|
kALiMga kamalanAbhana pAdakeragi stutiya mADi,
bahaLa aparAdhavannu kShamisabEkeMda |486|
asura rUpiniMda nAnu ariyade kaTTidenu
kusumanABa kAyo I viShada huLavanu |487|
tanna pAda SiradalliTTu innu garuDana BayavEnilla
pannaMga sEru ninna ramaNa dvIpava |488|
kALiya aramanege kaLuhi nIra nirmala mADi
kALiMdiya daDadi baMdu niMdanAgalE |489|
vAridhiyali ADidavage nIragaMDa tappiteMdu
Aratiya taMdu nivALisidaru |490|
sarpana kaiyoLage tappi baMdyo magane eMdu
ennappa bAreMdu gOpi appikoMDaLu |491|
kiccina rUpiniMda baMdu sutta paristaraNe hAki
hattiralagni suDuttiralu kaMDanu |492|
ellarU tallaNisi gollara kUDikoMDu
vallaBa nI kAyo eMdu moreya hokkaru |493|
bedarida gOpAlakarige mucci nimma kaMgaLeMdu,
Kiccanella nuMgidanu acyutanAga |494|
aMgirasana SApadiMda gaMdharva ajagaranAgi
naMdagOpana vanadoLage baMdu bILalu |495|
muddu kRuShNana pAdagaLige bidda BaktarUpiniMda
alliddane duShTaneMdu nODuttiddaru |496|
tuppa annavanne uMDu makkaLoDane ADade
sarpana tuLivarennappaneMdaLu |497|
hAlu annavanuMDu bAlaroDane ADade
kADagicca nuMguvare magane eMdaLu |498|
atta ittallOgade ennattira iru nIneMde
kattalAgada munna manege baruvudeMdaLu |499|
naMdagOpa kRuShNanige aMdu buddhi hELutiralu,
saMdEha biDisuveneMdu baMda nArada |500|
baMda munige ShODaSOpacAravellavannu mADi,
kuSala praSne kELidane naMdagOpanu |501|
BUmiBAra iLuhaleMdu rAmakRuShNaravatarise
nAnu avara darSanava mADabaMdenu |502|
vasudhe BAra iLuhaleMdu vasudEvana maneyoLage,
SiSurUpa dharisida SrIkRuShNanAgale |503|
kaMdana rUpu dharisida gOviMdana ettikoMDu
baMdhanava kALiMdi dATi illige |504|
ninna strI yaSOde kannikeya paDediralu
pannaMgaSayananalli iTTu heNNanoydanu |505|
pannaMga paramAtma balarAma SrIkRuShNa
ninna sutaru eMdu buddhi manadi mADade |506|
AdyaMta j~jAna sAmIpya AgabAradeMdu
putraBAva vahisi baMdu pAdakeragida |507|
baMda madhuregAga nArada muniya kaMDu kaMsa,
vaMdisi kAryavEneMdu kELida|508|
maMdamatiyu kaMsa nInu OMdu vyApAravariye,
hiMdake vasudEva mADida mATaMgaLa |509|
eMTaneya maganu ninage kaMTakanu huTTuttiralu,
ninna vaMcisi oydu gOkuladalliTTanu |510|
avanu beLedu madhureyalli ninna kolluveneMdu,
idanaritukoMDireMdu muniyu pELdanu |511|
ugrasEnanalli ninage utpattiyE illa kELu,
AdyaMtavellava muniyu pELuttiddanu |512|
janani Rutu snAnava mADi vanadoLage barutiralu
nere mosadiMda gaMdharva baMdanu |513|
rAyana rUpu dharisikoMDu tAya muMde niMdiralu
krOdhadiMda SApavannu koDalu hOdaLu |514|
SApavannu koDalu bEDa SauryavuLLa maganu ninage,
janisuvanu kShamiseMdu hELi hOdanu |515|
mAtRu alla dEvakige mAtuLanalla kaMsa
mAte anyatradiMda paDedaLeMdanu |516|
vanagaLa madhyadalli turugaLa rakShisutta
madanagOpAla koLalanUdutiddanu |517|
koLaLa dhvanige pakShi jAtigaLella mucci kaNNa,
munigaLaMte tAvu kuLitu kOLutiddav |518|
raMgana koLala dhvanige sAraMga eraLe hulle,
dESaMgaLa biTTu BramitavAgutidduvu |519|
gOviMdana koLala dhvanige gOvina hiMDugaLu
mEvu nIru biTTu kiviya myAlaisidavu |520|
hariya koLala dhvaniya kELi hariyuttidda yamunAdEvi,
suLigaLa nevadi niMtu kELuttiddaLu |521|
kaustuBadA beLakige sUrya udisidaneMdu,
tAvaregaLu araLiduvu cakOragaLu naliduvu |522|
hariya naKada beLakige beLadiMgaLu baMditeMdu,
Bramisutiddave caMdrakAMti praBegaLu |523|
siridEvi tAnu oMdu biduru rUpiniMda baMdu,
hariya vadana Srutiya pAna mADutiddaLu |524|
SrI hariya vadanAmRuta pAnavannu mADuvudake
EnEnu sukRutagaLa mADiteMdaru |525|
kErigaLa baLidu pannIrugaLanne taLidu,
sAlu dIvigiTTa saMBramava kaMDaru |526|
raMga bIdiyalli bare maMgaLAratigaLu
kaMgaL habbavAyitu aMganeyarige |527|
raMgana muKAMbujava kaMgaLeMba BRuMgagaLiMda,
aMganeyaru pAna mADi dhanyarAdaru |528|
paSugaLa madhyadalli vRuShaBagaLu ODutiralu
hasuLe karuvu hAlu kAri cimmuttidduvu |529|
paSugaLa pAlisikoMDu bisajAkSha manege baralu
yaSOde uddu bEvu hAki ettikoMDaLu |530|
ELu gULiya kaTTi sOdaratteya magaLu
nILAdEvi maduveyAda bAlakRuShNanu |531|
muMjiya pUrvadoL hariya saMgamavAgaleMdu,
iMdirESana tapise kALiMdi ramaNiyu |532|
hEmaMta Rutuvinalli kAMteyarellaru,
kAMta kRuShNana kaMDu vinaya mADutiddaru |533|
naMdagOpa kRuShNa tamma gaMDanAgabEkenuta,
aMganeyaru gauridEviya pUjisidaru |534|
seeregaLa bicchi nIradaDadaliTTu avaru,
mAdhavana manadoLage nenevutiddaru |535|
maunagauri pUjegaLa mADabEkeMdenuta,
nIroLage iLidaru nAriyarellaru |536|
aShTaroLage kRuShNanavaru bicciTTa uTTa sIre
kaTTi seLedu mellanoMdu taruvanErida |537|
mitreyara sIregaLa kRuShNa moTTekaTTikoMDu
kaShTagoLisabEkeMdu taruvanErida |538|
aMganeyara sIregaLa raMga moTTekaTTikoMDu
BaMgapaDisuveneMdu taruva Eri kuLitanu |539|
aMbaradi suraru ella aMji ODi hogutiralu
kaMjAkShi nakku kaiyaM hoydu niMtaLu |540|
uDuva sIregaLanoydu taruvanErikoMDare,
oDeyarillavo jagake raMganeMdu kELalu |541|
EnaneMdaru nimma mAnaBaMga mADadE
nAnu biDalAreneMdu hELutiddanu |542|
pOkATada nuDiya kELi BUkAMta dEvanoDane,
nAci nuDiyalariyade summaniddaru |543|
kuttigudda nIroLage maDadiyaru niMtukoMDu
kRuShNa sIregaLa koDu enutaliddaru |544|
uDiyudda nIroLage maDadiyaru niMtukoMDu
naDugutEve sIregaLa karuNiseMdaru |545|
paTTAvaLi sIregaLu uMTu nimma manegaLalli
mitreyaru hOgi uTTukoLLireMdanu |546|
mitreyarellaru muttukadaleyanuTTu
kRuShNana kUDe sIre kELutiddaru |547|
tAvareya elegaLiMda BAminiyaru uTTukoMDu
vArijAkShana kUDe sIre kELutiddaru |548|
aMganeyarella tamma tammaMgagaLanellava,
aMgaiyiMdalAcCAdisi baMdu niMtaru |549|
kESaMgaLa bicci tammaMgagaLa mareya mADi,
vAsudEvana kUDe sIre kELutiddaru |550|
obbaLA hegalamEle mattobbaLu ErikoMDu,
abjAkShana kaDahada maravanEri baMdaru |551|
Eri baruvudanu kaMDu vArijanABanu nakku,
Eri bA ninna dhairya nODuve eMdanu |552|
arasana maganu eMdu kShamisikoMDiddevu,
sarasijAkShana vRukShakke moreyaniTTaru |553|
heMgaLa BaMgapaDisOdu raMga ninage ucitavEno,
naMdagOpana muMde hELi kULisuveveMdaru |554|
battale nIrigiLida tappu kAyabEkenuta
etti eraDu kaigaLannu mugiyireMdanu |555|
aMganeyarella kALiMdiya daDadalli niMtu,
baMdu kai etti karava mugiyuttiddaru |556|
oMdu kaiya mugidare iMdrAdigaLopparu,
ceMdaMdiMda eraDu kaiya mugiyireMdanu |557|
kamala muKiyarellaru yamuneya daDadalli niMtu,
eraDu kai etti karava mugiyuttiddaru |558|
raMganaMga nODi naguta oMdoMde sIregaLu,
aMganeyara muKava nODi koDutaliddanu |559|
paTTe sIre nimmadE paiTni sIre nimmadEnu,
pappaLi sIre idyAradenuta kELida |560|
SAli sIre nimmadE saNNa sIre nimmadE,
gOvaLanu sIre yAradenutaliddanu |561|
dEvagirapaTTe sIrayALi modalAda sIre,
cinnada kaMbiya sIre seragu baredide |562|
koTTa sIregaLanella uTTukoMDu nAriyaru
kRuShNana kaMDu mOhisutaliddaru |563|
rAtri vELyadalli namma prItipaDisadiddare,
mOhisida Palavu siddhiyAgadeMdaru |564|
rAtri vELyadalli baMdu prIti paDisuveneMdu,
mOhisida Palavu siddhi AguvudeMdanu |565|
vRuMdAvanadiMda udyAnavanake bAheneMdu kRuShNa,
aMdu smarise gOpAlakaru baMdarallige |566|
nitya tRupta vAsudEva hasideneMdu annake
saptayAga RuShigaLige hELi kaLuhida |567|
baMdu gOpAlakaru niMdu karagaLanne mugidu
gOviMda rAmaru anna bEDidareMdaru |568|
snAna japava mADalilla hOma nityavAgalilla
vELyavalla annakeMdu hELutiddaru |569|
baMdu gOpAlakaru niMdu karagaLanne mugidu
gOviMda rAmara kUDe hELutiddaru |570|
snAna japava mADalilla hOma nityavAgalilla
vELyavalla annakeMdu hELutiddarU |571|
patniSAleg hOgi yaj~japatniyara kuritu kELi
kRuShNarAmarannava bEDidarenni |572|
baMdu gOpAlakaru niMdu karagaLanne mugidu,
kRuShNa rAmarannagaLa bEDidareMdaru |573|
aMganeyaru tAvu ella dhanyarAdevu eMdu,
pannaMga naraharige annavanittaru |574|
SAlAnna sUpa BakSha pAyasa dadhi GRutavu
BAmeyaru udyAnavanake koMDubaMdaru |575|
Aga obba muniyu baMdu hOgabEDaveMdu taDeye
dEha ninnadeMdu biTTu dEvara kaMDaLu |576|
hAra mukuTa pItAMbaradhAra nIlavarNana,
kUDe balarAmanirutiralu kaMDaLu |577|
taMda ShaDrasAnnava gOviMdagarpisi,
saMdarella muktige satiyarellaru |578|
aMdu satiyarannavannu taMdu koTTareMdu kELi
maMdamatigaLu nAvAdeveMdaru |579|
pratyakShadiMda paramAtma bEDalu annava
koTTudilla nammaShTu BraShTarillavu |580|
koDuvalli SrIkRuShNArpaNaveMteMdaru,
anEka janmada Palavu siddhiyAyitu |581|
kaShTapaTTu japatapava eShTu mADidarU SrI
viShNu sarvOttamaneMba j~jAna huTTad hOyitu |582|
snAna japava tiLiyalilla hOma nityavariyalilla
EnU ariyada strIyarige j~jAna baMditu |583|
iMdraparva mADuveneMdu naMdagOpa vanake teraLe,
vaMdisi kAryavEneMdu kELida |584|
gOvugaLigU nimagU kShEmavAgabEkeMdenuta,
nAnu puraMdarana pUjisuvenu |585|
iMdraniMda ninage kShEma eMdigU tiLiyabEDa
taMda anna parvatakikki vaMdiseMdanu |586|
aMda mAta kELi bEga naMdagOpa annava
taMdu gOvardhanada muMde suridanu |587|
gOvardhana giriya muMde gOvu gOparella niMtu,
tAvu oMdu rUpiniMda uNutaliddaru |588|
kRuShNa beTTada rUpiniMda aShTu annagaLa uMDu,
oMdiShTu BayapaTTudilla iMdranigAgi |589|
iMdrana dUtaru baMdu A kShaNada naMdasutaru
eMjalu mADidareMdu hELalu |590|
yAke innu avage aShTu gOkulava karagisuveneMdu,
kOpadiMda kArmODagaLa karedanu |591|
surapatiyu kOpisi suridanAga ELu dina
hagalu iruLu surimaLegaLanu |592|
baMditu siDilu miMcu aMdhakAravAyitu,
aMbudhi kANade aMbu tuMbitu |593|
siDilu miMcu BOriDuta guDugu miMcu eragalu
desegeTTa gOpAlakar hariya moreya hokkaru |594|
more hokka gOpAlakarige aBayavittu SrIkRuShNa
kiruberaLiMda gOvardhana giriyanettida |595|
gOvardhanagiriya muMde gOvu gOparella niMtu,
yAva kaDe hOytu maLe enutaliddaru |596|
kArmEGa maLeya kareye kaMgeDade iralu kaMDu
SrIdEvaneMdu tiLidu dEvEMdra baMdanu |597|
iMdirAramaNaneMdu oMdiShTu ariyade,
maMdamatiyu nAnAdeneMdu nuDidanu |598|
iMdra ninage asurAvESa baMdad hOgabEkeMdu
iMdu hIge mADide nAneMda raMganu |599|
iMdirA ramaNana mEle iMdrAdi dEvategaLu,
maMdArad hUvina maLeya karedaru |600|
maiya toLedu maDiyanuTTu mAlikegaLannu dharisi,
suraBi baMdaLe svarga lOkadiMdali |601|
baMgArada koDadoLage taMdu kShIrAbdhiya
iMdirAramaNagaBiShEka mADida |602|
pUtani tRuNAvarta kESi dhEnu bakana koMda
A caritra pADidare amaravaMdyana |603|
kRuShNana caritreyannu kELida kaMsa tanage,
mRutyuvAgi beLeda saMdEhavillavu |604|
raMgana caritreyannu kELidane kaMsanu,
koMdu nidregaivudu eMdigeMdanu |605|
huNNime beLadiMgaLalli kALiMdiya tIradalli
krIDisabEkenuta kRuShNa vanake teraLida |606|
raMga bEraMgi kUDe poMgoLanUdutta
aMganeyara cittagaLa Bramisuttiddanu |607|
kariyutidda paSugaLa kaDege biTTu makkaLa,
mRuDana priyaniddeDege barutaliddaru |608|

Leave a Reply
You must be logged in to post a comment.