-
Barayya Bhagannane
Composer : Shri Gurugovinda dasaru ಬಾರಯ್ಯ ಭಾಗಣ್ಣನೇ |ಯನ್ನಯ ಮನಕೆ ಬಾರಯ್ಯ ಭಾಗಣ್ಣನೆಕರೆ ಕರೆ ಮನದ ವಿಷಾದವ ಕಳೆದುಶ್ರೀ ಹರಿಯಲಿ ಮನವಿತ್ತು ಕರುಣಿಪುದಯ್ಯ [ಅ.ಪ] ಗೋಪಾಲ ವಿಠಲನ ಭಜಕನೇ |ಹೇ ಉಮಾಪತಿಸುತ ಬಲುತ್ಯಾಗ ಶೀಲನೆ |ಶಾಪದಿ ನೊಂದ ಶ್ರೀನಿವಾಸಪ್ಪಗೆಆಪಾರಾಯುಷ್ಯವಿತ್ತು ಸಲಹೀದ [೧] ತಡವು ಇನ್ಯಾತಕಯ್ಯಾ |ಗುರುಮಡದಿಯ ಸಲಹಿದ ಪರಿಯಾ |ಒಡಲೊಳು ತೋರಿಸಿ ಸಲಹೆಂದು ಬೇಡುವೆಕಡು ದಯಾನಿಧೆ ಅಡಿಗೆರುಗುವೆನಯ್ಯಾ [೨] ಸಕಲ ಶಾಸ್ತ್ರದಿ ಬಲು ನಿಪುಣಾ |ಮಂತ್ರ ಸಕಲವ ಚಿತ್ರದಿ ರಚಿಸಿದ ಧಿಷಣಾ |ಲಕುಮಿಯರಸ ಗುರು ಗೋವಿಂದ…
