Sharanu Sakaloddhara

Composer : Shri Vadirajaru

By Smt.Nandini Sripad

ರಾಗ: ಯದುಕುಲಕಾಂಬೋಧಿ , ಖಂಡಛಾಪುತಾಳ
ಶರಣು ಸಕಲೋದ್ಧಾರ ಅಸುರಕುಲ ಸಂಹಾರ ।
ಅರಸು ದಶರಥಬಾಲ ಜಾನಕಿ ಲೋಲ ॥ ಪ ॥
ವಾಲಿಯ ಸಂಹಾರ ವಾರಿಧಿಗೆ ನಟುಗಾರ ।
ಏಕಪತ್ನಿಯಶೀಲ ತುಲಸಿವನಮಾಲ ॥ ಅ.ಪ ॥

ಈ ಮುದ್ದು ಈ ಮುಖವು ಈ ತನುವಿನ ಕಾಂತಿ ।
ಈ ಬಿಲ್ಲು ಈ ಬಾಣ ಈ ನಿಂತ ಭಾಮ ॥
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಇ – ।
ನ್ಯಾವ ದೇವರಿಗುಂಟು ಮೂರ್ಲೋಕದೊಳಗೆ ॥ 1 ॥

ಉಟ್ಟಪೀತಾಂಬರವು ಉಡಿಗಂಟೆವೊಡ್ಯಾಣ ।
ತೊಟ್ಟ ನವರತ್ನದಾಭರಣ ರಸಕರುಣ ॥
ಕೊಟ್ಟ ನಂಬಿಕೆ ತಪ್ಪ ತನ್ನ ಭಕುತರ ಪೊರೆವ ।
ಸೃಷ್ಟಿಯೊಳಗೆಣೆಗಾಣೆ ಕೌಸಲ್ಯರಾಮ ॥ 2 ॥

ಭಾವಿಸಲು ಅಯೋಧ್ಯಪಟ್ಟಣದ ಪುರವಾಸ ।
ಬೇಡಿದವರಿಗೆ ವರವ ನೀಡುವೆನೆಂದು ॥
ರೂಢಿಯೊಳಧಿಕ ಚುಂಚನಕಟ್ಟೆಯಲಿ ನೆಲೆಸಿದ ।
ಸ್ವಾಮಿ ಶ್ರೀ ಹಯವದನ ಪಾಲಿಸೊ ನಿಸ್ಸೀಮ ॥ 3 ॥


SaraNu sakalOddhAra asurakula saMhAra |
arasu daSarathabAla jAnaki lOla || pa ||
vAliya saMhAra vAridhige naTugAra |
EkapatniyaSIla tulasivanamAla || a.pa ||

I muddu I muKavu I tanuvina kAMti |
I billu I bANa I niMta BAma ||
I tamma I sIte I baMTa I BAgya i – |
nyAva dEvariguMTu mUrlOkadoLage || 1 ||

uTTapItAMbaravu uDigaMTevoDyANa |
toTTa navaratnadABaraNa rasakaruNa ||
koTTa naMbike tappa tanna Bakutara poreva |
sRuShTiyoLageNegANe kausalyarAma || 2 ||

BAvisalu ayOdhyapaTTaNada puravAsa |
bEDidavarige varava nIDuveneMdu ||
rUDhiyoLadhika cuMcanakaTTeyali nelesida |
svAmi SrI hayavadana pAliso nissIma || 3 ||

Leave a Reply

Your email address will not be published. Required fields are marked *

You might also like

error: Content is protected !!