Tag: shubha rao

  • Ava Kulavadarenu

    Composer: Shri Purandara dasaru ಆವ ಕುಲವಾದರೇನು ಆವನಾದರೇನುಆತ್ಮ ಭಾವವರಿತ ಮೇಲೆ || ಪ|| ಹಸಿ ಕಬ್ಬು ಡೊಂಕಿರಲು ಅದರರಸ ತಾನು ಡೊಂಕೇನೊವಿಷಯಾಸೆಗಳನೆ ಬಿಟ್ಟುಹಸನಾದ ಗುರುಭಕ್ತಿ ಮಾಡೋ || ೧ || ನಾನಾ ವರ್ಣದ ಆಕಳು ಅದುನಾನಾ ವರ್ಣದ ಕ್ಷೀರವೇನೋಹೀನ ಕರ್ಮಗಳನು ಬಿಟ್ಟುಹಿಗ್ಗಿ ಜ್ಞಾನ ಒಲಿಸಿರೋ || ೨ || ಕುಲದ ಮೇಲೆ ಹೋಗ ಬೇಡ ಮನುಜಾಕುಲವಿಲ್ಲ ಜ್ಞಾನಿಗಳಿಗೆವರದ ಪುರಂದರವಿಠಲನ ಪಾದವಸೇರಿ ಮುಕ್ತನಾಗೋ || ೩ || Ava kulavAdarEnu AvanAdarEnuAtma BAvavarita mEle || pa||…

  • Aru Badukidarayya

    Composer: Shri Purandara dasaru ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||ತೋರು ಈ ಜಗದೊಳಗೆ ಒಬ್ಬರನು ನಾ ಕಾಣೆ ||ಅ|| ಕರ ಪತ್ರದಿಂದ ತಾಮ್ರ ಧ್ವಜನ ತಂದೆಯಕೊರಳ ಕೊಯಿಸಿದೆ ನೀನು ಕುಂದಿಲ್ಲದೆಮರುಳನಂದದಿ ಪೋಗಿ ಭೃಗು ಮುನಿಯ ಕಣ್ಣೊಡೆದೆಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ [೧] ಕಲಹ ಬಾರದ ಮುನ್ನ ಕರ್ಣನನು ಕೊಲಿಸಿದೆಸುಲಭದಲಿ ಕೌರವರ ಮನೆಯ ಮುರಿದೆನೆಲವ ಬೇಡುತ ಪೋಗಿ ಬಲಿಯ ಶಿರವನು ತುಳಿದೆಮೊಲೆಯನುಣಿಸಲು ಬಂದ ಪೂತನಿಯ ಕೊಂದೆ [೨] ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆತಿರುಮಲೇಶ ನಿನ್ನ…

  • Ambiga Naa Ninna

    Composer: Shri Purandara dasaru ಅಂಬಿಗ ನಾ ನಿನ್ನ ನಂಬಿದೆಜಗದಂಬಾರಮಣ ನಿನ್ನ ನಂಬಿದೆ [ಪ] ತುಂಬಿದ ಹರಿಗೋಲಂಬಿಗಅದಕೊಂಬತ್ತು ಛಿದ್ರ ನೋಡಂಬಿಗಸಂಬ್ರಮದಿಂದ ನೀನಂಬಿಗಅದರಿಂಬು ನೋಡಿ ನಡೆಸಂಬಿಗ [೧] ಹೊಳೇಯ ಭರವ ನೋಡಂಬಿಗಅದಕೆ ಸೆಳೆವು ಘನವಯ್ಯ ಅಂಬಿಗಸುಳಿಯೊಳು ಮುಳುಗಿದೆ ಅಂಬಿಗಎನ್ನ ಸೆಳೆದು ಕೊಂಡೊಯ್ಯೋ ನೀನಂಬಿಗ [೨] ಆರು ತೆರೆಯ ನೋಡಂಬಿಗಅದುಮೀರಿ ಬರುತಲಿದೆ ಅಂಬಿಗಯಾರಿಂದ ಲಾಗದು ಅಂಬಿಗಅದ ನಿವಾರಿಸಿ ಧಾಟಿಸೋ ಅಂಬಿಗ [೩] ಸತ್ಯ ವೆಂಬುದೆ ಹುಟ್ಟಂಬಿಗಸದಾ ಭಕ್ತಿ ಎಂಬುದೆ ಪಥವಂಬಿಗಯುಕ್ತಿದಾಯಕ ನಮ್ಮ ಪುರಂದರ ವಿಠಲ,ಮುಕ್ತಿ ಮಂಟಪಕೊಯ್ಯೋ ಅಂಬಿಗ [೪] aMbiga…

error: Content is protected !!