-
Kande kendagannina
Composer : Shri Prasannavenkata dasaru ಕಂಡೆ ಕೆಂಡಗಣ್ಣಿನ ಖಂಡೇಶ್ವರನಾ [ಪ]ರುಂಡಮಾಲಧರನಾ ಪ್ರಚಂಡಲಿಂಗನಾ [ಅ.ಪ] ಗಂಗ ಮಾರಂಗ ಶ್ರೀಕರ್ಪುರಾಂಗನ |ರಂಗ ಸಖನಾಯೆನ್ನಂತರಂಗ ಲಿಂಗನ ||ಭಂಗಗೊಳಿಸಿ ಭವದಘಂಗಳನುನರ |ಸಿಂಗನಂಫ್ರಿಯ ತೋರ್ಪಲಿಂಗನ [೧] ಶಶಿಶೇಖರ ಶಶಿಮುಖಿಯಶಿಖರನವಿಷಕಾರಿಗಳ ವಿಶೇಷ ಭೂಷಿತನ ||ಭಸುಮಭಸಿತದನೊಸಲಿನ ಶಿವನ |ವಸುಮತಿಗಧಿಕ ಕೈಲಾಸ ವಾಸನ [೨] ಕೆಂಜೆಡೆಯೊಳ್ನಂದಿನಿಯನಿಟ್ಟು ಸಲೆ |ಗುಂಜರ ಚರ್ಮಾಂಬರವನುಟ್ಟಿಹನ ||ನಂಜನುಂಡು ಜಗದಂಜಿಕೆ ಕಳೆದನ |ಕಂಜನಾಭ ಪ್ರಸನ್ವೆಂಕಟಪ್ರೀಯನ [೩] kaMDe keMDagaNNina KaMDESvaranA [pa]ruMDamAladharanA pracaMDaliMganA [a.pa] gaMga mAraMga SrIkarpurAMgana |raMga saKanAyennaMtaraMga liMgana ||BaMgagoLisi…
-
Jogi bandano
Composer : Shri Kakhandaki Krishnadasaru ಜೋಗಿ ಬಂದನೋ ಗೋವಿಂದಾ | ನಮ್ಮ |ಬಾಗಿಲಿಗೆ ನಡೆತಂದಾ |ಪ.|ಬೇಗನೇ ಪವಡಿಸು ಕಂದಾ | ನಾ |ಜೋಗುಳಪಾಡುವೆ ಛಂದಾ |ಅ.ಪ| ಜಟೆಯಲಿ ಗಂಗೆಯ ಧರಿಸಿ ಧರಿಸಿ ಮುಂ |ಮುಡಿಯಲಿ ಚಂದ್ರನ ನಿಲಿಸಿ |ಪಿಡಿಗಣ್ಣ ಮಾರನೆಂದೆನಿಸಿಮಣಿವಿಡಿಗಳ ಕುಂಡಲ ವಿರಿಸಿ |ಬಿಡದೆ ವಿಷವನುಂಡು ಕಡುಗಪ್ಪುಗೋರಳೊಲು |ಒಡನೆರುಂಡಮಾಲೆಯ ದಡಬಡಿಸುವ [೧] ಇಟ್ಟವಿಭೂತಿಯತನುವಾ ತನುವಾ | ಶಿವ |ಕೊಟ್ಟ ರುದ್ರಾಕ್ಷಿಲಿ ಮೆರೆವಾ |ನೆಟ್ಟನೆ ಡಮರುಗ | ಮುಟ್ಟಿ | ನುಡಿಸುತಲಿ |ಛಟ ಫಟ ಧ್ವನಿಯಾರ್ಭಟದ ವೈರಾಗಿ…
-
Shiva shiva shivaraya
Composer : Shri Gurugovinda vittala ಶಿವ ಶಿವ ಶಿವ ಶಿವ – ಶಿವರಾಯ |ನಮ್ಮ ಭವ ಭಯ ಪರಿಹರ ಮಹರಾಯ [ಪ] ಮಂಗಳರೂಪಿ ಗೌ | ರಾಂಗನೆ ದೂರ್ವಾಸತಿಂಗಳ ಧರಿಸಿಹ | ಅಂಗಜ ಮದಹಾ |ಭಂಗ ಬಡಿಪ ಭವ |ಭಂಗಿಸಿ ಸುಜನರ ಸಂಗವ ಕೊಡಿಸೊ ನೀ |ಲಾಂಗನ ಪ್ರಿಯ ಸಖ [೧] ಪರಿಸರ ಸಂಸ್ಕೃತ | ಗರಳವ ಭುಂಜಿಸಿಸುರರನು ಪೊರೆಯುವೆ | ಕರಿಗೊರಳಾ |ಮುರಳಿಯ ಧರ ಸಿರಿ |ಕರಿವರದನ ದಯ ನಿರುತ ನಿನ್ನೊಳಗುಂಟು |ಪೊರೆಯೊ ಮೃತ್ಯುಂಜಯ…
