-
Ninna naashrayisuvenu
Composer : Shri Purandara dasaru ನಿನ್ನನಾಶ್ರಯಿಸುವೆನು ನಿಗಮಗೋಚರನೆ ನಿತ್ಯಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ [ಪ] ಕುಂದಣದ ಆಶ್ರಯ ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಕೆ ||ಕಂದರ್ಪನಾಶ್ರಯ ವಸಂತ ಕಾಲಕ್ಕೆಗೋವಿಂದನಾಶ್ರಯವು ಮರಣಕಾಲದೊಳು [೧] ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯ ನದಿಗಳು ಋಷಿಗಳಾಶ್ರಯವು ||ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವುತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು [೨] ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗೆ ಶ್ರುತಿ ಪ್ರಣವದ ಆಶ್ರಯವು ||ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವುಹಿತವಾದ ಪುರಂದರವಿಠಲನಾಶ್ರಯವು [೩] ninnanASrayisuvenu nigamagOcarane nityabenna biDade kAyo manadiShTavIyO [pa] kuMdaNada ASraya navaratnagaLigellacaMdirana…
