Tag: Hottege hittilla

  • Hottege hittilla

    Composer : Shri Vidyaprasanna Tirtharu ಹೊಟ್ಟೆಗೆ ಹಿಟ್ಟಿಲ್ಲ ನಿನ್ನಯಜುಟ್ಟಿಗೆ ಮಲ್ಲಿಗೆಯು [ಪ] ಉಟ್ಟಿರುವುದು ಶತಛಿದ್ರದ ವಸ್ತ್ರವುತೊಟ್ಟಿರುವುದು ಜರತಾರಿಯ ಅಂಗಿಯು [ಅ.ಪ] ಮಾತೆಯ ಗರ್ಭದಲಿ ವಿಧ ವಿಧಯಾತನೆಯನನು ಭವಿಸಿಭೂತಲದಲಿ ಮದಮತ್ಸರ ಲೋಭಕೆಸೋತು ಮನವ ನಿರ್ಭೀತಿಯಿಂದಿರುವೆಯೊ [೧] ದಿನಗಳು ಕಳೆಯುತಿರೆ ಲೋಕದಪ್ರಣಯವು ಹೆಚ್ಚುತಿದೆತನಯ ತರುಣಿ ಮನೆ ಕನಕಗಳೆಲ್ಲವುಕನಸಿನ ತೆರದಲಿ ಕ್ಷಣಿಕವೆಂದರಿಯದೆ [೨] ಇದು ನನ್ನದೆಂಬ ಅನುಭವಮಂಗನ ಹಿಗ್ಗಟೆಯುಇಂದಿರೆಯರಸನ ಪರಮ ಪ್ರಸನ್ನತೆಪೊಂದಿದ ಪುರುಷನೆ ಜೀವನ್ಮುಕ್ತನು [೩] hoTTege hiTTilla ninnayajuTTige malligeyu [pa] uTTiruvudu SataCidrada vastravutoTTiruvudu jaratAriya aMgiyu…

error: Content is protected !!