Tag: bhakutiya palisu jeeya

  • Bhakutiya palisu jeeya

    Composer : Shri Vijayadasaru ಭಕುತಿಯ ಪಾಲಿಸು ಜೀಯಾ ಮುಂದೆಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ [ಪ] ತನುವೆ ನಿನ್ನಾಧೀನವೆನಿಸು ಇದುಅನುದಿನ ಕೊಡು ಏಕಪ್ರಕಾರ ಮನಸುಧನ ವಡವೆಯ ಕಂಡ ಕನಸು ಎಂದುಎನಗೆ ತೋರಲಿ ನಿತ್ಯ ನಿನ್ನಂಘ್ರಿ ನೆನಸು [೧] ತತ್ವದ ಮತದೊಳಗಿರುಸು ಪುಶಿಉತ್ತರ ಮತವೆಂಬ ಮಾರ್ಗವ ಮರೆಸುಉತ್ತಮರೊಳಗೆನ್ನನಿರಿಸು ಭವವತ್ತುವ ನಿನ್ನ ನಾಮಮೃತ ಸುರಿಸು [೨] ಶ್ರವಣ ಮನನ ಧ್ಯಾನವೀಯೋ ಎನ್ನಅವಗುಣವೆಣಿಸದೆ ಕರುಣಾಳು ಕಾಯೊಅವಸಾನದಲಿ ನೀನೆ ಗತಿಯೊ ತ್ರೈಭುವನೇಶ ವಿಜಯವಿಟ್ಠಲ ನೀ ದೊರೆಯೋ [೩] Bakutiya pAlisu jIyA muMdemukutigoDave…

error: Content is protected !!