-
Govinda ennalu
Composer : Shri Vidyaprasanna Tirtharu ಗೋವಿಂದ ಗೋವಿಂದ ಗೋವಿಂದನೆನ್ನಲು ||ಪ|| ಏನೆಂದು ಪೇಳಲಿ ಆನಂದವನು ನಾ ||ಅ.ಪ|| ಹಸಿವು ತೋರದೆನಗೆ ತೃಷೆಯು ತೋರದೆನಗೆಹೊಸ ಹೊಸ ಪರಿ ನಾಮ ರಸವ ಸೇವಿಸುತಿರೆ [೧] ದ್ವೇಷವು ತೋರದು ರೋಷವು ತೋರದುಶೇಷಶಯನ ನಿನ್ನ ಹರುಷದಿ ಪೊಗಳಲು [೨] ಭಯವು ತೊಲಗುವುದು ಜಯವು ತೋರುವುದುನಯನಗಳಲಿ ಸುಖ ಜಲವು ಸುರಿಯುವುದು [೩] ಎಂದಿನ ಪುಣ್ಯವೊ ಇಂದರಿತೆನು, ಗೋ-ವಿಂದನಾಮ ಮಕರಂದದ ಸವಿಯನು [೪] ನಿನ್ನ ಸುಕರುಣದ ಚಿನ್ಹೆ ಕಾಣಿಸಿತು, ಪ್ರಸನ್ನನಾಗುವಿಯೆಂದು ಚೆನ್ನಾಗಿ ಅರಿತೆನು [೫]…
-
Besaya madabeku
Composer : Shri Vidyaprasanna Tirtharu ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ||ಪ||ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ||ಅ.ಪ|| ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದುಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕುಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕುಮುದ್ದೆಯಾದ ನೆಲ ಮೃದುವಾಗುವ ಪರಿ ನೆಲವನುಳಲಿಬೇಕು [೧] ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕುಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕುಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕುಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು [೨] ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕುಕೊಳೆವೆಯ…
-
Bhiksham dehime swamin
Composer : Shri Vidyaprasanna Tirtharu ಭಿಕ್ಷಾಂ ದೇಹಿಮೇ ಸ್ವಾಮಿನ್ಕುಕ್ಷಿಯು ತುಂಬುವ ತೆರದಲಿ ಭಕ್ತಿಯ [ಪ] ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊಕುಕ್ಷಿಯು ಬರಿದಾಗಿರುವುದು ಭಕ್ತಿಯ [ಅ.ಪ] ಆರುಮಂದಿ ಶತ್ರುಗಳಿರುವರು ಬಲುಕ್ರೂರರಿವರು ಎನ್ನನು ಬಿಡರೊದೂರ ಕಳುಹಲು ಆಹಾರವು ಸಾಲದುಚೂರು ಮಾಡುವೆನು ಕರುಣದಿ ಶಮ ದಮ [೧] ನಮ್ಮವರಿರುವರು ಹತ್ತುಮಂದಿಗಳುಸುಮ್ಮನಿರರು ಒಂದರಘಳಿಗೆಸಮ್ಮತಿಗೊಡದಿರೆ ಬಳಲಿಸುವರು ಇವರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ [೨] ಕತ್ತಲೆಯಲಿ ಬಂದಿರುವೆನು ಹೊಟ್ಟೆಯುಹತ್ತಿ ಹೋಯಿತೊ ಹಸಿವಿನಲಿಎತ್ತ ಸುತ್ತಿದರೂ ತುತ್ತನು ಕಾಣೆನೊಭಕ್ತ ಪ್ರಸನ್ನ ದಯಾ ಜಲನಿಧೇ ಜ್ಞಾನ [೩] BikShAM dEhimE…