-
Tatva suvvali – Shri Krishna stuti
Composer : Shri Jagannatha dasaru ಶ್ರೀ ಕೃಷ್ಣ ಸ್ತುತಿ ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯಮಾಣವಕರೂಪ ವಸುದೇವ | ವಸುದೇವತನಯ ಸು –ಜ್ಞಾನವನು ಕೊಟ್ಟು ಕರುಣಿಸೊ || ೧ || || ೧೩೭ || ಆದಿನಾರಾಯಣನು ಭೂದೇವಿ ಮೊರೆ ಕೇಳಿಯಾದವರ ಕುಲದಲ್ಲಿ ಜನಿಸಿದ | ಜನಿಸಿದ ಶ್ರೀಕೃಷ್ಣಪಾದಕ್ಕೆ ಶರಣೆಂಬೆ ದಯವಾಗೊ || ೨ || || ೧೩೮ || ವಸುದೇವನಂದನನ ಹಸುಗೂಸು ಎನಬೇಡಿಶಿಶುವಾಗಿ ಕೊಂದ ಶಕಟನ್ನ | ಶಕಟವತ್ಸಾಸುರರಅಸುವಳಿದು ಪೊರೆದ ಜಗವನ್ನ || ೩ || || ೧೩೯ || ವಾತರೂಪಿಲಿ…
-
Tatva suvvali – Rukmini vilasa
ಶ್ರೀ ರುಕ್ಮಿಣೀ ವಿಲಾಸ ಫಣಿರಾಜಶಯನ ರುಕ್ಮಿಣಿದೇವಿಯೊಡಗೂಡಿಮಣಿಮಂಚದ ಮೇಲೆ ಕುಳಿತಿರ್ದು | ಕುಳಿತಿರ್ದು ಸತಿಯೊಡನೆಅಣಕವಾಡಿದನು ಇನಿತಿಂದು || ೧ || || ೧೧೮ || ಹೇ ರಾಜಕನ್ನಿಕೆ ! ಭೂರಮಣ ನಾನಲ್ಲವಾರಿಧಿಯೊಳಗಿದ್ದು ಬದುಕುವ | ಬದುಕುವಗೆ ಮರುಳಾದೆನಾರದನ ನುಡಿಗೆ ನಳಿನಾಕ್ಷಿ || ೨ || || ೧೧೯ || ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟುಪಶುಪಾಲಗೊಲಿದೆ ಸುಕುಮಾರಿ | ಸುಕುಮಾರಿ ಎನಲು ಪರ –ವಶಳಾದಳಾಗ ಮಹಾಲಕ್ಷ್ಮಿ || ೩ || || ೧೨೦ || ಈ ಮಾತ ಕೇಳಿ ಕೈ…
-
Tatva suvvali – Brahma devara stuti
Composer : Shri Jagannatha dasaru ಶ್ರೀ ಬ್ರಹ್ಮದೇವರ ಸ್ತುತಿ ಸತ್ಯಲೋಕವೆ ಸದನ ತತ್ವಾಭಿಮಾನಿಗಳು ಭೃತ್ಯರೆನಿಸುವರು ಮಹಲಕ್ಷ್ಮೀ |ಮಹಲಕ್ಷ್ಮಿ ಜನನಿ ಪುರುಷೋತ್ತಮನೆ ಜನಕನೆನಿಸುವ || ೯೮ || ಚತುರದಶ ಲೋಕಾಧಿ ಪತಿಯೆನಿಪ ನಿನಗೆ ಸರಸ್ವತಿಯು ನಿಜರಾಣಿ ವಿಹಗೇಂದ್ರ |ವಿಹಗೇಂದ್ರ ಶೇಷ ಪಾರ್ವತಿ ಪರಾತ್ಮಜರು ಎನಿಸೋರು || ೯೯ || ದ್ವಿಶತ ಕಲ್ಪದಿ ತಪವೆಸಗಿ ಅಸುದೇವ ಪೊಂಬ ಸಿರಪದ ಪಡೆದೆ ಹರಿಯಿಂದ |ಹರಿಯಿಂದ ಮಿಕ್ಕ ಸುಮನಸರಿಗುಂಟೇ ಈ ಭಾಗ್ಯ || ೧೦೦ || ಋಜುಗಣಾಧೀಶ್ವರನೆ ಅಜಪದವಿಗೋಸುಗದಿ ಭಜಿಸಿದವನಲ್ಲ ಹರಿಪಾದ…