Haridasa seva

  • Ramaa Suladi – Gopala dasaru

    Composer : Shri Gopala dasaru ಶ್ರೀ ಗೋಪಾಲದಾಸರ ಕೃತಿ – ರಮಾಸುಳಾದಿರಾಗ: ಆರಭಿ ಧ್ರುವತಾಳಇಂದಿರಾದೇವಿ ಮಾತೆ ತಂದೆ ವಿಠಲನರ-ವಿಂದ ಚರಣಕಿನ್ನು ಅಂದಿಗೆ ಗೆಜ್ಜೆಯಾದೆಹೊಂದಿಕೆಯಾದ ಊರು ಜಾನು ಕೈಯ ಮೇಲೆಚೆಂದದ ಸ್ವರೂಪ ಪೀತಾಂಬರೊಡ್ಯಾಣಾದೆಮಂದರಧರನೊಕ್ಷ ಸ್ಥಳದಲಿ ನೀ ನಿಂದೆಕಂದರದಲಿ ಚಿತ್ರವೈಚಿತ್ರ್ಯ ಪರಿಗಂಧವುಪದಕ ಹಾರಂಗಳು ಪುಷ್ಪ ತುಲಸಿ –ಯಿಂದೊಪ್ಪುವ ಅಲಂಕಾರ ನಂದ ಶೋಭಿತಳಾದೆಒಂದೊಂದು ಹಸ್ತದಲ್ಲಿ ಆಯುಧಗಳಾದೆಚೆಂದುಳ್ಳ ಕಡೆಯ ತೋಳ್ಬಂದಿ ಭುಜಕೀರ್ತಿಕುಂದು ಇಲ್ಲದೆ ಕರ್ಣಕುಂಡಲ ನಾನಾಪರಿಅಂದವಾದರಳೆಲೆ ಸುಂದರ ಕಿರೀಟವುಸಂದಿಸಂದಿಗೆ ನಾನಾಭರಣಾಲಂಕಾರಳಾದೆಇಂದಿರೇಶನ ಪ್ರತಿ ಅವಯವಗಳಲಿನ್ನುಇಂದಿರೆ ಪ್ರತಿ ಪ್ರತಿ ವಸ್ತುವಾದೆಕಂದರ್ಪನಯ್ಯನ ಆನಂದ ಬೆರೆದು ಸುಖಸುರಿದೆ…

    ,
  • Potana paliso pavamana

    Composer : Shri Shyamasundara dasaru ಪೋತನ ಪಾಲಿಸೋ ಪವಮಾನಾ | ಈಭೂತಳದೊಳು ನಿನ್ನ ಖ್ಯಾತಿ ಘನಾ [ಪ] ಒದಗಿದ ವ್ಯಾಧಿಯ ಪರಿಹರಿಸೊ ನಿನ್ನಪದರಿಗೆ ಬಿದ್ದವನೆಂದು ಗ್ರಹಿಸೋ (೧) ತಾಯಿಯು ಇಲ್ಲದ ಬಾಲಕನು | ಇವನಕಾಯಲು ನೀ ದಯಾ ಸಾಗರನು (೨) ಶ್ವಾಸದೊಡಿಯ ನೀನೆಂತೆಂದು | ಶೃತಿಘೋಷಿಸುವದು ಆನತ ಬಂಧು (೩) ಶಿಶುವಿಗೊಲಿದು ನೀ ಸಲಹಿದರೆ | ದೇವಅಸುನಾಯಕನೆಂಬ ಬಿರುದು ಖರೆ (೪) ಗ್ರಾಮ ಬಲ್ಲಿಟಗಿ ಕೃತವಾಸ |ಶಿರಿಶಾಮಸುಂದರನ ಪ್ರಿಯದಾಸ (೫) pOtana pAlisO pavamAnA |…

    ,
  • Neene parama pavani

    Composer : Shri Mahipati dasaru ನೀನೆ ಪರಮ ಪಾವನಿ ನಿರಂಜನಿ |ಪ| ಆದಿ ನಾರಾಯಣಿ ಸಾಧು ಜನ ವಂದಿನಿಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ |೧| ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿರಕ್ಷ ರಕ್ಷಾತ್ಮಿಣಿ ಅಕ್ಷಯ ಫಲ ಪ್ರದಾಯಿನಿ |೨| ಅನಾಥ ರಕ್ಷಿಣಿ ದೀನೋದ್ಧಾರಿಣಿಅನಂತಾನಂತ ಗುಣಿ ಮುನಿಜನ ಭೂಷಿಣಿ |೩| ದಾರಿದ್ರ್ಯ ಭಂಜನಿ ದುರಿತ ವಿಧ್ವಂಸಿನಿಪರಮ ಸಂಜೀವಿನಿ ಸಾರ ಮುನಿ ರಂಜಿನಿ |೪| ಸ್ವಾಮಿ ಶ್ರೀ ಗುರುವಿಣಿ ಬ್ರಹ್ಮಾನಂದ ರೂಪಿಣಿಮಹಿಪತಿ ಕುಲ ಸ್ವಾಮಿನಿ ನೀನೆ ಪರಮ ಪಾವನಿ |೫|…

    ,

error: Content is protected !!