-
Madhwacharya Suladi – Purandaradasaru
ಶ್ರೀ ಪುರಂದರದಾಸಾರ್ಯ ವಿರಚಿತಶ್ರೀ ಮಧ್ವಾಚಾರ್ಯರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಒಬ್ಬ ಆಚಾರಿಯೆನೆ ದೈವವೇ ಇಲ್ಲವೆಂದ |ಒಬ್ಬ ಆಚಾರಿಯೆನೆ ದೈವಕೆ ಎಂಟು ಗುಣವೆಂದ |ಒಬ್ಬ ಆಚಾರಿಯೆನೆ ನಿರ್ಗುಣ ನಿರಾಕಾರ |ನಿರವಯವನೆಂದ ಕಡೆಯಲಿ ತಾನೇ ದೈವವೆಂದ |ಅವರೊಬ್ಬರೂ ವೇದಾರ್ಥವರಿತೂ ಅರಿಯರು |ಇವರೊಬ್ಬರು ಶಾಸ್ತ್ರಾರ್ಥವರಿತೂ ಅರಿಯರು |ಒಬ್ಬ ಮಧ್ವಾಚಾರಿಯನೆ ಪುರಂದರವಿಠಲನ |ಒಬ್ಬನೇ ದೈವವೆಂದು ತೋರಿಕೊಟ್ಟರಾಗಿ || ೧ || ಮಟ್ಟತಾಳಹರಿ ಪರದೇವತೆ ಎಂಬ ಜ್ಞಾನವೇ ಜ್ಞಾನ |ಹರಿ ಅಡಿಗಳನೈದುವ ಮುಕುತಿಯೇ ಮುಕುತಿ |ಹರಿ ವಿರಹಿತ ಜ್ಞಾನ ಮಿಥ್ಯಾಜ್ಞಾನ |ಹರಿ ವಿರಹಿತ ಭಕುತಿ ಮಾತಿನ…
-
Pranadevara Hasta Mahima Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಪ್ರಾಣದೇವರ ಹಸ್ತ ಮಹಿಮಾ ಸುಳಾದಿರಾಗ: ಭೌಳಿಧ್ರುವತಾಳ( ಹನುಮದವತಾರ ಮಹಿಮೆ )ಕಡಗ ಕಂಕಣದಿಂದ ಶೋಭಿತವಾದ ಹಸ್ತಾಪೊಡವಿಪತಿ ರಘುನಾಥಗೆ ಎರಗಿ ಮುಗಿದ ಹಸ್ತಾಒಡನೆ ಕುರುಹುಗೊಂಡು ಸೀತೆಗಿತ್ತ ಹಸ್ತಾಗಿಡಗಳ ಮುರಿದು ತರಿದಂಥದೀ ಹಸ್ತಾಘುಡಿಘುಡಿಸುತ ಅಕ್ಷನ ಸದೆಬಡೆದ ಹಸ್ತಾಜಡ ರಾವಣನ ಎದೆಯಲ್ಲಿ ಗುದ್ದಿದ ಹಸ್ತಾತಡೆಯದೆ ಚೂಡಾಮಣಿಯ ಒಡೆಯಗಿತ್ತ ಹಸ್ತಾಕಡು ಪರಾಕ್ರಮದ ಹಸ್ತಾಕಡಲ ಬಂಧಿಸಲು ಗಿರಿಗಳ ತಂದ ಹಸ್ತಾಬಿಡದೆ ಪೂಜಿಪರಿಗೆ ಅಭಯ ಕೊಡುವ ಹಸ್ತಾಸಡಗರದ ದೈವ ಸಿರಿ ವಿಜಯವಿಠ್ಠಲ ರಾಮನಅಡಿಗಳಲ್ಲಿ ಅನುಗಾಲ ಇಟ್ಟ ಹಸ್ತಾ || ೧ || ಮಟ್ಟತಾಳ…
-
Nanda Teeratha Raya
Composer : Shri Gurujagannatha dasaru ನಂದ ತೀರಥರಾಯ ಅಸ್ಮದ್ಗುರೋರ್ಗುರುನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ [ಪ] ನಂದನಂದನ ಪಾದ ಕಮಲಕೆನಂದ ಮಧುಕರ ನಂದದಲಿ ನಿಜಮಂದ ಜನರಿಗೆ ನಂದ ಕೊಡುವಾನಂದ ಮೂರ್ತಿ ಆನಂದಕಾರಿಯೆ [ಅ.ಪ] ಮಧ್ಯಮನಿ ದ್ವಿಜನಲ್ಲಿ, ಉದ್ಭವಿಸಿ ನೀನೂಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ –ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ |ಶುದ್ಧ ಹರಿಮತದ ಶುಭಸಿದ್ಧಾಂತ ಸ್ಥಾಪಿಸಿ ಜಗದಿ ಜೀವರಸಿದ್ಧಗಣಕಧಿನಾಥನೆಂದೂ ಪ್ರ –ಸಿದ್ಧಗೈಸಿದಿ ಶುದ್ಧ ಮೂರುತಿ [೧] ಬದರಿಕಾಶ್ರಮವನ್ನು, ಐದಿದ್ಯೊ ಮುದದಿಪದುಮನಾಭನನ್ನು, ಜಲಗೈಸಿ ನಿನ್ನಬದಿಗ ಜನರಿಗಿನ್ನೂ,…