Haridasa seva

  • Kalingana Metti Natyava

    Composer : Shri Vyasarajaru ರಾಗ: ಹಂಸಾನಂದಿ ಆದಿತಾಳ ಕಾಳಿಂಗನ ಮೆಟ್ಟಿ ನಾಟ್ಯವ ಆಡಿದಕಂಜನಾಭ ಕೃಷ್ಣನು || ಪ || ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ |ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ |ತರಳತನದಲ್ಲಿ ಯಮುನೆಯ ಮಡುವಲ್ಲಿಆಡುತ್ತ ಪಾಡುತ್ತ || ಅ ಪ || ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು |ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ |ಕರ್ಣಕುಂಡಲವು ಥಳು ಥಳು ಥಳುಕೆಂದು ||ಲಲಿತ ಮಣಿಮಯೋಜ್ವಲಿತ ಪದಕಹಾರ |ಜ್ವಲಿತಕಾಂತಿ ಬೆಳಗುತ ದಿಕ್ಕುಗಳಲ್ಲಿ || ೧ || ಸುರರು ದುಂದುಭಿಯ…

    , ,
  • Karthika masadalli

    Composer : Shri Vadirajaru ಕಾರ್ತೀಕ ಮಾಸದಲಿ ಕಾಮನ ಪಿತನ ಪೂಜಿಸೇ ||ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ || ದೇವಕಿ ಸುತನ ಪೂಜಿಸಿ ಮಾಸಾಭಿಮಾನಿದಾಮೋದರನ ಭಜಿಸಿಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿಮಹಾ ಪುಣ್ಯ ಪುರುಷೋತ್ತಮನ ಕೊಂಡಾಡುತಎಣ್ಣೆ ಶಾಸ್ತ್ರವನು ರಚಿಸಿರಿ ಬೇಗನೇ ||೧|| ಪುಣ್ಯ ಸಾಧನದ ಜನರೆಲ್ಲ ಭ್ರಾಹ್ಮೀಸುಮುಹೂರ್ತದಲ್ಲಿ ತಾವೆದ್ದುಕುಂಭಿಣಿ ಕಸ್ತೂರಿ ಕರ್ಪೂರದ ವೀಳ್ಯ ಪಿಡಿದುಮಹಾ ಪುಣ್ಯ ಪುರುಷೋತ್ತಮನ ಎಣ್ಣೆಶಾಸ್ತ್ರವನೆ ರಚಿಸಿರಿ ಬೇಗನೇ ||೨|| ಶೃಷ್ಟಿ ಕರ್ತ ಶ್ರೀ ಹರಿಯು ಶೃಷ್ಟಿಸಿದನುದೀಪಾವಳಿಯ ಉತ್ತಮ ಚತುರ್ದಶಿ ದಿನದಂದುಮತ್ತೆ ನರಕಾಸುರನ ವಧೆಯನು…

    , ,
  • Jaganmohanane Krishna

    Composer : Shri Purandara dasaru ಜಗನ್ಮೋಹನನೇ ಕೃಷ್ಣ ಜಗವನೆ ಪಾಲಿಪನೆ ||ಪ|| ಲೋಕದೊಳಗೆ ನೀ ಶಿಶುವಾಗಿ ಮೂರ್ಲೋಕವನೆಲ್ಲ ಬಾಯಲಿ ತೋರಿದೆಆಕಳ ಕಾಯುವ ಚಿಣ್ಣನೆಂದೆನಿಸಿದೆಈ ಕುಟಿಲವನೆಲ್ಲ ಎಲ್ಲಿ ಕಲಿತೆಯೊ ರಂಗ ||೧|| ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿಮೃಡಸುರಪಾದ್ಯರು ಪೊಗಳುತಿರೆಹೆಡೆಯ ಮೇಲೆ ಕುಣಿದಾಡುತ ಆಡುತಕಡೆ ಸಾರೆಂಬುದನೆಲ್ಲೆಲ್ಲಿ ಕಲಿತೆಯೊ ರಂಗ ||೨|| ಎಂದೆಂದಿಗು ನಿನ್ನ ಗುಣಗಳ ಪೊಗಳಲುಇಂದ್ರಾದಿಗಳಿಗೆ ಅಳವಲ್ಲಮಂದರಧರ ಶ್ರೀ ಪುರಂದರವಿಠಲನೆಒಂದೊಂದಾಟವನೆಲ್ಲಿ ಕಲಿತೆಯೋ ರಂಗ ||೩|| jaganmOhananE kRuShNa jagavane pAlipane ||pa|| lOkadoLage nI SiSuvAgi mUrlOkavanella bAyali…

    , ,

error: Content is protected !!