Haridasa seva

  • Entu ninna pooje

    Composer : Shri Purandara dasaru ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ [ಪ]ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ [ಅ.ಪ] ಪವಿತ್ರೋದಕದಿ ಪಾದ ತೊಳೆವೆನೆಂಬೆನೆ |ಪಾವನಳಾದ ಗಂಗೆ ಪಾದೋದ್ಭವೆ ||ನವ ಕುಸುಮವ ಸಮರ್ಪಿಸುವೆನೆಂದರೆ ಉದುಭವಿಸಿದನು ಅಜ ನಿನ್ನ ಪೊಕ್ಕಳ ಪೂವಿನಲ್ಲಿ [೧] ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತದ್ವೀಪಂಗಳೆಲ್ಲವನು ಬೆಳೆಗುತಿಹವು ||ಆಪೋಶನವನಾದರೀ-ವೆನೆಂಬೆನೆಆಪೋಶನವಾಯಿತೇಳು ಅಂಬುಧಿಯು [೨] ಕಾಣಿಕೆಯಿತ್ತಾದರೂ ಕೈ ಮುಗಿವೆನೆಂಬೆನೆರಾಣಿವಾಸವು ಸಿರಿದೇವಿ ನಿನಗೆ ||ಮಾಣದೆ ಮನದೊಳು ನಿನ್ನ ನಾಮ ಸ್ಮರಣೆಧ್ಯಾನವನು ದಯ ಮಾಡು ಪುರಂದರವಿಠಲ [೩] eMtu…

    ,
  • Chinteyatako bayala

    Composer : Shri Purandara dasaru ಚಿಂತೆ ಯಾತಕೋ ಬಯಲಭ್ರಾಂತಿ ಯಾತಕೋ, ಮನುಜಾ ||ಪ||ಕಂತು ಪಿತನ ದಿವ್ಯ ನಾಮಮಂತ್ರವಿರಲು ಜಪಿಸದೆ || ಅ.ಪ|| ಏಳುತುದಯ ಕಾಲದಲ್ಲಿವೇಳೆಯರಿತು ಕೂಗುವಂಥಕೋಳಿ ತನ್ನ ಮರಿಗೆ ಮೊಲೆಯಹಾಲ ಕೊಟ್ಟು ಸಲಹಿತೆ ? [೧] ಸಡಗರದಲಿ ನಾರಿಜನರುಹಡೆಯುವಾಗ ಸೂಲಗಿತ್ತಿಅಡವಿಯೊಳಗೆ ಹೆರುವ ಮೃಗವಪಿಡಿದು ರಕ್ಷಣೆ ಮಾಳ್ಪರಾರೊ ? [೨] ಹೆತ್ತ ತಾಯಿ ಸತ್ತ ಶಿಶುವುಮತ್ತೆ ಕೆಟ್ಟಿತೆಂಬರು ಜನರುಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯನಿತ್ತು ರಕ್ಷಣೆ ಮಾಡುವರಾರು ? [೩] ಗಟ್ಟಿ ಮಣ್ಣಿನ ಶಿಶುವ ಮಾಡಿಹೊಟ್ಟೆಯೊಳಗೆ ಇರಿಸುವಂಥಕೊಟ್ಟ ದೈವಕೊಂಡೋಯ್ದರೆಕುಟ್ಟಿಕೊಂಡು…

    ,
  • Enu karana krishna

    Composer : Shri Indiresha Ankita ಏನು ಕಾರಣ ಕೃಷ್ಣಾ ಏನು ಕಾರಣ [ಪ] ಏನು ಕಾರಣ ಎನ್ನ ಕಣ್ಣಿಗೆ ನೀನುತೋರದಿರುವುದಿದು [ಅ.ಪ] ಖಗ ಮೃಗಾದಿಗಳಿಗೆ ನೀನುರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು (೧) ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಿಮೆ ನೋವಾ (೨) ಮುರಲಿನೂದಿ ವನದಿ ಹರಿಯುತರುಲ ತಾದಿಗಳಿಗೆದರ್ಶನವಿತ್ತು ಕಾಯ್ದು ಅದಕುಪರಮ ಪುರುಷ ಕಡಿಮೆ ನೋವಾ (೩) ಹಾದಿಲ್-ಹೋಗೋ ಕೀಟನಿಗೆವೇದನಾಥ ದರುಶನಿತ್ತುಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ (೪)…

    ,

error: Content is protected !!