Haridasa seva

  • Nee dayaparano

    Composer: Shri Purandara dasaru ನೀ ದಯಾಪರನೊ ನಿನ್ನವರ ಸಾಧನವೊ || ಪ ||ಮುದ್ದು ಹಯವದನ ಸುಖಸದನ ಪೇಳಿದನ || ಅ ಪ|| ಮದಕರಿಯು ಸರಸಿಯೊಳು ಮಕರಿ ಬಾಧೆಗೆ ಸಿಲುಕಿ |ಪದುಮಾಕ್ಷ ಪದುಮೇಶ ಪದುಮನಾಭನೆನಲು ||ಪದುಮ ಸಂಭವನಯ್ಯ ಪಾಹಿಪಾಹಿ ಎನಲು |ಒದಗಿ ಪಾಲಿಸಿದೆ ತವ ದಯವೋ ಸಾಧನವೊ || ೧ || ಅಂತ್ಯಜಳ ಸಹವಾಸ-ದಲಿ ವಿಪ್ರವರನೊಬ್ಬ |ಸಂತೋಷದಿಂದಲಿ ಬಹುಕಾಲ ಕಳೆದು ||ಪ್ರಾಂತ್ಯ ಸಮಯಕೆ ತನ್ನ ಮಗನ ಕರೆಯಲು ಕಾಯ್ದೆ |ಕಂತುಪಿತನೆ ನಿನ್ನ ದಯವೋ ಸಾಧನವೊ || ೨…

    , ,
  • HeLabedamma neenu

    Composer: Shri Gurupurandara dasaru [Son of Shri Purandara dasaru] ಹೇಳಬ್ಯಾಡಮ್ಮ ನೀನು ದಾಸರ ಕೂಡ |ಹೇಳಬ್ಯಾಡ ವ್ಯಾಸರಾಯ ಬಂದಿದ್ದನೆಂದು |ಕಾಲಿಗೆ ಬೀಳುವೆ ಕರುಣಿಸಿ ದಯಮಾಡೆ || ಪ || ಹೀಗೆಂದು ಕೈಮುಗಿದು ಬ್ಯಾಗ ಭಕ್ತಿಯಿಂದ |ಆಗ ಪ್ರದಕ್ಷಿಣೆ ಮಾಡುತಲಿ |ಯೋಗಿ ಅವರ ಕಣ್ಣಿಲಿ ನೋಡಿ ಧೇನಿಸಿ |ಹೀಗೆ ಅನುದಿನ ಮಾಡುತಲಿಪ್ಪನು || ೧ || ಒಂದು ದಿನದಲ್ಲಿ ಪುರಂದರದಾಸರು |ಛಂದುಳ್ಳ ಕೆಸರ ಚಿನ್-ಹಿತ ಪಾದಾರ |ವಿಂದಗಳನು ಕಂಡು ತಮ್ಮ ಸತಿಯ ಕೇಳಿ |ವಂದಿಸಿದರು ಗುರುಪಾದಗಳಿಗೆ…

  • Harismarana suladi – Purandara dasaru

    ಶ್ರೀಪುರಂದರದಾಸಾರ್ಯ ವಿರಚಿತಹರಿಸ್ಮರಣ ಸುಳಾದಿರಾಗ: ಕಾನಡ ಧ್ರುವತಾಳ ಎನ್ನ ಹೃದಯದಲ್ಲಿ ಎಲ್ಲೆಲ್ಲಿ ಅನುಪಮ ಮಹಿಮನೆನಿನಗೀಯಲೊ ಹರಿಯೆಎನ್ನ ಭಾವದಲ್ಲಿ ಬರಿದೆ ಸುಕೃತ ದುಷ್ಕೃತದಿಬನ್ನ ಬಡಿಸಿ ನೀ ನೋಡುತಿಹರೆಎನ್ನ ಅವಗುಣಗಳೆಣಿಸುವರೇ ಕಡೆ ಉಂಟೆನಿನ್ನ ಘನ್ನತೆ ನೋಡಿ ಪಾಲಿಸೆಲೊ ಹರಿಯೆಎನ್ನ ಹೃದಯದಲ್ಲಿ ನಿನ್ನಾಧೀನದ ಮನೋಜನನಎನಗನ್ಯಥಾ ಗತಿಯಿಲ್ಲ ಅನಾಥ ನಾನೈಯ್ಯಅನಾಥಬಂಧು ಪುರಂದರವಿಟ್ಠಲರೇಯಾನಿನ್ನ ಡಿಂಗರಿಗನೆನಸಲೊ ಕೃಪಾಂಬುಧಿಯೇ || ೧ || ಮಟ್ಟತಾಳ ಮನವೇ ಕೇಳು ಮಾಮನೋಹರನಮನಸಿಜಪಿತನ ನಿತ್ಯನಾ ಅನುದಿನದಲಿಅಗಲದಿಪ್ಪ ಘನಮಹಿಮ ದೇವ ಪರಿಯನನೆನೆವದೇನು ನೇಹ ಮಾಡಿದವನಮನವನೀಯ ತನ್ನನೀವನಾ –ದನುಜ ಮನುಜ ದಿವಿಜರೊಡೆಯಗೆತನವು ಪ್ರಾಣ ವೊಪ್ಪಿಸುವನಿಗೆಅನುದಿನದಲಿ ಪೊರೆವನು…

error: Content is protected !!