-
Taaye Ninna Pada
Composer : Shri Pranesha dasaru ತಾಯೆ ನಿನ್ನ ಪದ ತೋಯಜಕೆರಗುವೆ ಕಾಯೆ|ಮಾಯದೇವಿ ಹರಿ ಕಾಯ ನಿವಾಸಿನಿ ತಾಯೇ | ಪ| ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ |ಕರ್ದಮಜಾಲಯ | ಭದ್ರ ಶರೀರೆ ||೧|| ಇಂಗಡಲಾತ್ಮಜೆ | ಅಂಗನಾಕುಲ ಮಣಿ |ರಂಗನ ಪದಕಂಜ | ಭೃಂಗೆ ಶಿರೋಮಣಿ ||೨|| ಪ್ರಾಣೇಶ ವಿಠಲನ | ಮಾನಿನೀ ಯೆನ್ನಯ ||ಹೀನತೆಯೆಣಿಸದೆ | ಪೋಷಿಸುವದು ಮತಿ ||೩|| tAye ninna pada tOyajakeraguve kAye|mAyadEvi hari kAya nivAsini tAyE…
-
Tatva suvvali – Shri Bhu Durga Stuti
Composer : Shri Jagannatha dasaru ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಭೂ – ದುರ್ಗಾ ಸ್ತುತಿ ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ –ರ್ಣಾಭಗಾತ್ರೇ ಸುಚರಿತ್ರೆ | ಸುಚರಿತ್ರೆ ಶ್ರೀಪದ್ಮ-ನಾಭನ್ನ ಜಾಯೆ ವರವೀಯೆ || ೧ || ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳಬಗೆಯದಲೆ ಕಾಯೆ ವರವೀಯೆ | ವರವೀಯೆ ನಿನ್ನ ಪದ-ಯುಗಳಕ್ಕೆ ನಮಿಪೆ ಜಗದಂಬೆ || ೨ || ದರಹಸಿತವದನಸುಂದರಿ ಕಮಲಸದನೆ ನಿ-ರ್ಜರಸಿದ್ಧಗೀತೇ ವಿಧಿಮಾತೇ | ವಿಧಿಮಾತೆ ಲೋಕಸುಂ-ದರಿಯೆ ನೀ ನೋಡೇ ದಯಮಾಡೇ || ೩ || ಪ್ರಳಯಕಾಲದಿ ಪತಿಯು…
-
Devi nee karunisamma
Composer : Shri Henne ranga dasaru ದೇವಿ ನೀ ಕರುಣಿಸಮ್ಮಾ ಶಿರಿ ಲಕುಮಿದೇವಿ ನೀ ಕರುಣಿಸಮ್ಮಾ |ಪ| ದೇವಿ ನೀ ಕರುಣಿಸು ದೀನನ ಮರಿಯದೇ ಭಾವದಿಮನದಲಿ ಭಜಿಸುವೆ ತಾಯಿ [ಅ.ಪ] ವಾರಿಜಮುಖಿ ನಿನ್ನ ವಂದಿಸುವೆ ನಾನುದಾರಿದ್ರ್ಯ ಪರಿಹರಿಸಿ, ದಯಮಾಡಿ ಸಲಹಮ್ಮಾ [೧] ಸಾಗರನ ಸುತೆ ಸಕಲ ಲೋಕ ಮಾತೆನಾಗ ಶಯನನ, ಉರದಲಿ ನಲಿದಾಡುವಿ [೨] ಮದಗಜ ಗಾಮಿನಿ ಮಹಿಮಾ ಪ್ರಕಾಶಿನಿಪದುಮನಾಭನ ಪಟ್ಟದ ರಾಣಿ [೩] ಚಂದಿರಮುಖಿ ಚಲುವ ಕಾಂತೆ ಸೀತೇಇಂದ್ರಾದಿಗಳಿಗೆ ಒಲಿದಿಷ್ಟಾರ್ಥ ವೀಯುವಿ [೪] ಅರವಿಂದಾಲಯರನ್ನೆ…
